ರಮೇಶ್ ಸೋಗೆಮನೆ ಕಾಲವನ್ನು ಮೀರುವ ‘ಅಕಾಲ’ ಕಥೆಗಳನ್ನು ಬರೆದಿದ್ದಾನೆ. ಇದೆಲ್ಲಾ ಆತನಿಗೆ ಸಾಧ್ಯವಾದದ್ದು ಆತನ ಸದಾ ಮೌನ ಹಾಗೂ ಅಪಾರ ಓದಿನಿಂದ ಎನ್ನುತ್ತಾರೆ ಆತನ ಗೆಳೆಯರು. ಚಿಕ್ಕ ವಯಸ್ಸಿಗೆ ತಲ್ಲಣಗೊಳಿಸುವ ನೋಟ ನೀಡುತ್ತಿರುವ ಈತನ ಕಥೆಗಳ ಮತ್ತಷ್ಟು ಸ್ಯಾಂಪಲ್ ಇಲ್ಲಿದೆ.
ಜನ ಹೇಳಿದ್ದು
ಬಹಳ ವರ್ಷಗಳ ಕಾಲ ಸುಖಿಸಿ ಸಂಭೋಗಿಸಿ ಧ್ಯಾನಿಸಿದ ದೇಹ ತುಸು ವಿಶ್ರಾಂತಿ ಬೇಡಿತು. ಜನ ಅದನ್ನು ಸಾವು ಅಂದರು.
ನಟ
ಪ್ರೇಯಸಿ ಸತ್ತಿದ್ದಾಳೆ. ಅವನು ಅಳುತ್ತಿದ್ದಾನೆ. ಕೈಯಲ್ಲಿರುವುದು ಗ್ಲಿಸರಿನ್.
ಕಥೆ ಅರ್ಥವಾಗದಿದ್ದರೆ…
ಅಪ್ಪ ಬಹಳ ಹಿಂದೆ ಮಗನಿಗೆ ಹೇಳಿದ ಕಥೆ ಇದು. ಊರಿಗೆ ತೋಳ ಕತ್ತೆಕಿರುಬ ಬಾರದೆ ಇರಲಿ ಅಂತ ಒಂದ್ಸಲ ಆಡಿಗೆ ಹುಲಿ ಮುಖವಾಡ ಹಾಕಿದ್ರು. ಆಡು ಬಹಳ ಪೋಸು ಕೊಟ್ಟುಕೊಂಡು ಊರಲ್ಲಿ ಎಲ್ಲಾರನ್ನೂ ಹೆದರಿಸ್ತಾ ಇತ್ತು. ಆದ್ರೆ ಒಂದಿನ ನಿಜವಾದ ಹುಲಿ ಬಂದು ಆಡನ್ನ ತಿಂದು ಹಾಕಿ ಸತ್ಯ ಏನು ಅಂತ ಜನರಿಗೆ ತಿಳಿಸ್ತು. ಇದರಿಂದ ತೃಪ್ತಿಯಾದ ಜನ ಹುಲಿಗೆ ಆಡಿನ ವೇಷ ಹಾಕಿದ್ರು. ಮೊದಲೇ ಹೊಟ್ಟೆ ಹಸಿದ ಹುಲಿ ಆಡುಗಳನ್ನ ಮುಗಿಸಿದ ಮೇಲೆ ಊರಿನ ದನ ಕರುಗಳನ್ನೆಲ್ಲ ಗುಳುಂ ಮಾಡ್ತು.
ಅಪ್ಪ ಹೇಳಿದ ಕಥೆ ಎಷ್ಟೋ ವರ್ಷಗಳವರೆಗೆ ಮಗನಿಗೆ ಅರ್ಥವಾಗಿರಲಿಲ್ಲ. ಅರಿವಾಗುವ ಹೊತ್ತಿಗೆ ಅವನ ಮನೆಯಲ್ಲಿ ಊರಲ್ಲಿ ಯಾರೂ ಉಳಿದಿರಲಿಲ್ಲ.
ಕನ್ನಡಕ
ತನ್ನ ಗೆಳೆಯನ ಬಗ್ಗೆ ಒಬ್ಬನಿಗೆ ಅಪಾರ ಕುತೂಹಲ. ಒಂದು ದಿನ ಅವನ ಕನ್ನಡಕದ ಬಗ್ಗೆ ಮಾತು ಸರಿಯಿತು.
ಇವನ ಪ್ರಶ್ನೆ – ಹೊಸ ಕನ್ನಡಕ ಇದ್ರೂ ಈ ಒಡೆದುಹೋದ ಹಳೆ ಕನ್ನಡಕವನ್ನೇ ಯಾಕೆ ಮತ್ತೆ ಮತ್ತೆ ಬಳಸುತ್ತೀ?
ಅದಕ್ಕೆ ಸಿಕ್ಕ ಉತ್ತರ – ಕನ್ನಡಕ ಒಡದ್ರೆ ನೋ ಪ್ರಾಬ್ಲಂ. ಅದ್ರೆ ಕಣ್ಣೇ ಒಡೆದಿದ್ರೆ?







ತತ್ವಜ್ಞಾನವನ್ನು ಮೀರುವ ತವಕದಲ್ಲಿರುವಂತೆ ಕಾಣುವ ರಮೇಶನ ಕಥೆಗಳು ಅವಿರ್ಭವಿಸಿರುವ ರೀತಿ ನಿಜಕ್ಕು ಅಧ್ಭತ, ಅವನು ಈ ಕತೆಗಳನ್ನು ಮೌನದಲ್ಲಿ ಬರೆದನೋ ಇಲ್ಲ ನೆಕ್ಲೆಸ್ ರಸ್ತೆಯಲ್ಲಿ ಗೆಳತಿಯೊಂದಿಗೆ ಅಲೆಯುವಾಗ ಬರೆದನೋ ಗೊತ್ತಿಲ್ಲ. ಒಟ್ಟಿನಲ್ಲಿ ಅವನ ಸೃಷ್ಠಿಶೀಲತೆ ಮುಂದುವರೆಯಲಿ.. ಅವಧಿ ಅವನ ಕತೆಗಳನ್ನು ನಿತ್ಯ ಪ್ರಕಟಿಸಲಿ.
sogemane kategalu odugarannu kalakuva guna hondive.
kelave padagalalli adbhuta srushtisibiduttare..
avru yara jote iddaga kate baredaro emba samshaya
srinivasa gowda vyaktapadisirodu sahajave. aadare,
sanmanya gowdaru maharaja hostel motu gode mele
kutu darigunta haadu hoguva hudugiyarige shille
hodedu, regisi…. heege eneno madta
kelavu kavana baredaddu nenapu. aa kavanagalu
‘bahirangavagali’
ರಮೇಶನ ಕಥೆಗಳು ಹೈದ್ರಾಬಾದ್ ಹೈಕೋರ್ಟ್ ಕಾಲೋನಿಯ ಅವನ ಆನೆ ಮನೆಯ ತಾರಿಸಿ .ಮೇಲೆ
ಮೇಲೆ ನನಗಾಗಿ ವಾಚಿಸುತ್ತಿದ್ದ ಕವಿತೆಗಳಷ್ಟೇ ಮೌನವಾಗಿ ಆವರಿಸುತ್ತದೆ.