ಸೈಂಟಿಸ್ಟ್ ಗಳು- ಆದ ಮೇಲೆ ಏನಾಯ್ತೂಂತ ಹೇಳ್ತಾರೆ.. ಬೊಮ್ಮ- ಆಗೋಕ್ಮುಂಚೇನೆ ಹೇಳ್ತಾನೆ..!!

ಕಾಡಿನ್ ಕತೆ ಹೇಳಿದ್ರು ಕೃಪಾಕರ ಸೇನಾನಿ..

– ಗಿರಿಧರ ಕಾರ್ಕಳ

 

ಸೈಂಟಿಸ್ಟ್ ಗಳು- ಎಲ್ಲ ಆದ ಮೇಲೆ,ಏನಾಯ್ತೂಂತ ಹೇಳ್ತಾರೆ. ಬೊಮ್ಮ ಅದು ಆಗೋಕ್ಮುಂಚೇನೆ ಹೇಳ್ತಾನೆ..!!

“ಕಾಡಿನಲ್ಲೇ ವಾಸವಿರುವ ಬುಡಕಟ್ಟು  ಜನರು ಅನಕ್ಷರಸ್ತರಿರಬಹುದು,ಆದರೆ ಕಾಡಿನ ನೆಲದ ಸದ್ದು, ಪ್ರಾಣಿ ಪಕ್ಷಿಗಳ ಎದೆ ಮಿಡಿತ –ಅವರಿಗೆ ತಿಳಿದಷ್ಟು ನಮ್ಮ ವಿಜ್ಞಾನಿಗಳಿಗೂ ತಿಳಿದಿರುವುದಿಲ್ಲ” – ಇದು ಬುಡಕಟ್ಟು ಜನರ ಜೊತೆಗೇ ಕಳೆದ 25-30 ವರ್ಷಗಳಿಂದ ಒಡನಾಟವಿಟ್ಟುಕೊಂಡು,  ವನ್ಯ ಜೀವಿ ಸಂಶೋಧನೆ,ಸಾಕ್ಷ್ಯಚಿತ್ರ,ಛಾಯಾಗ್ರಹಣಕ್ಕಾಗಿ ಅಂತಾರಾಷ್ಟ್ರೀಯ ಮಾನ್ಯತೆ ಪಡೆದ ಕೃಪಾಕರ ಸೇನಾನಿ ಜೋಡಿ ಹೇಳುವ  ಮಾತು. ಸಂದರ್ಭ: ಒಮ್ಮೆ ವಿದೇಶೀ ಪ್ರಾಣಿ ವಿಜ್ಞಾನಿಗಳ ತಂಡವೊಂದು ಆನೆಗಳ ಬಗ್ಗೆ  ಚಿತ್ರ ಶೂಟಿಂಗಿಗೆ ಬಂದಾಗ,ಆನೆಗಳ ಚಲನ ವಲನ ವೀಕ್ಷಿಸುತ್ತಿದ್ದ ನಿರ್ದೇಶಕರ ಜೊತೆಗಿದ್ದ

 ಸೇನಾನಿ ಸಹಾಯಕ ಬೊಮ್ಮ- ಆನೆಗಳು ಮುಂದೆ ಏನೇನು ಮಾಡುತ್ತವೆ ಅಂತ  ಹೇಳಿದ್ರೂ ಅವರಿಗದು ಅರ್ಥವೇ ಆಗಿರಲಿಲ್ಲ. ಬೊಮ್ಮ ಹೇಳಿದಂತೇ ಅಕ್ಷರಶ: ನಡೆದು ಹೋಯಿತು!!.ಅದನ್ನೇ ಸೇನಾನಿ ಹೇಳಿದ್ದು- ವಿಜ್ಞಾನಿಗಳು ಘಟನೆ ನಡೆದ ನಂತರ ಏನಾಯಿತೆಂದು ಹೇಳ್ತಾರೆ. ಬೊಮ್ಮನಂತವರು ಘಟನೆಗೆ ಮೊದಲೇ ಹೀಗೇ ನಡೆಯುತ್ತೆ ಅಂತ ಕರಾರುವಾಕ್ಕಾಗಿ ಹೇಳ್ತಾರೆ.ಹಾಗಂತ ಬೊಮ್ಮನಂತವರು ಮಹಾಜ್ಞಾನಿಗಳೆಂದೇನಲ್ಲ. ಮೂಢನಂಬಿಕೆಗಳ ಮಹಾ ಬೆಟ್ಟ ಅವರುಗಳು. ಅವರಿಂದ ನಮಗೆ ಬೇಕಾದ್ದನ್ನು  ಪಡೆದುಕೊಳ್ಳುವ ಜಾಣ್ಮೆ ನಮಗಿರಬೇಕು ಅಷ್ಟೇ.!!

 

ಆದರೆ, ಈ ಬುಡಕಟ್ಟು ಜನರ ಬದುಕು ಸರಕಾರದ ವಿಚಿತ್ರ ನಿಲುವುಗಳಿಂದ ನಲುಗಿ ಮೂರಾಬಟ್ಟೆಯಾಗುತ್ತಿರುವುದಕ್ಕೆ ಸೇನಾನಿ ಕಳವಳ ವ್ಯಕ್ತಪಡಿಸುತ್ತಾರೆ. ಪೂರ್ವ ಭಾರತದ ಕಾಡಂಚಿನಲ್ಲಿದ್ದ ಬುಡಕಟ್ಟು ಜನರನ್ನು ಹುಲಿಯೋಜನೆಯ ನೆಪದಲ್ಲಿ  ಒಕ್ಕಲೆಬ್ಬಿಸಿ,ದೂರದಲ್ಲಿ ಪರ್ಯಾಯ ಜಾಗ ತೋರಿಸಿದರು. ವಿಷಾದದ ಸಂಗತಿಯೆಂದರೆ ಅವರ ಮೂಲ ವಾಸಸ್ಥಾನವನ್ನು ನಂತರ ಸರಕಾರ ಅದಾನಿ ಕಂಪೆನಿಗೆ ಬರೆದುಕೊಟ್ಟಿತು..!! ಇದು ನಮ್ಮ ಸರಕಾರಗಳು ಪರಿಸರ ಸಂರಕ್ಷಿಸುವ ರೀತಿ.

 

ಕೃಪಾಕರ ಸೇನಾನಿ ನಿರರ್ಗಳವಾಗಿ ಎರಡು ಗಂಟೆಗಳ ಕಾಲ ತಾವು ಕಂಡ ಕಾಡಿನ ವಿಶಿಷ್ಟ ನೋಟಗಳನ್ನು ರೋಚಕವಾಗಿ ಕಾಣಿಸುತ್ತಲೇ ಹೋದರು.ಹುಲಿ ಸಂರಕ್ಷಣೆ,ಆನೆ ಸಂರಕ್ಷಣೆ..ಹೀಗೇ  ಕೆಲವೇ ಪ್ರಾಣಿಗಳನ್ನುಳಿಸುವ ಪ್ರತ್ಯೇಕ ಯೋಜನೆ ಜಾರಿಗೋಳಿಸುವುದಕ್ಕೆ ಅವರ ವಿರೋಧವಿದೆ. ಕಾಡಿನ ಇಕೋ ಸಿಸ್ಟಮ್ ಉಳೀಬೇಕಂದ್ರೆ ಅಲ್ಲಿರುವ ಎಲ್ಲ ಜೀವ ಜಂತುಗಳೂ ಉಳೀಬೇಕು.ಹಾಗಾದಾಗ ಮಾತ್ರ ಪರಿಸರ,ಕಾಡು ಉಳಿಯುತ್ತೆ ಅನ್ನುವುದು ಅವರ ಖಚಿತ ನಿಲುವು.ಹಾಗೇನೇ, ಯಾವುದೇ ಪ್ರಾಣಿ ಸಂತತಿಯ ಉಳಿವಿಗೆ ಕೃತಕ ಗರ್ಭಧಾರಣೆ ಪ್ರಯೋಗವನ್ನೂ ಅವರು ವಿರೋಧಿಸುತ್ತಾರೆ. ಹುಲಿ,ಯೋಜನೆ,ಆನೆ ಕಾರಿಡಾರು ಅಂತೆಲ್ಲ ಮಾಡ್ತಾರೆ. ಆದರೆ ಅದಕ್ಕೆ ಬೇಕಾದಷ್ಟು ಜಾಗ ಮಾತ್ರ ಮೀಸಲಿಡುತ್ತಿಲ್ಲ ದು ವಿಷಾದಿಸುತ್ತಾರೆ.

 ಮಾತು ಕಾಡ್ಗಿಚ್ಚಿನ ಬಗೆಗೆ ಬಂದಾಗ – ಶೇಕಡಾ ನೂರರಷ್ಟು ಕಾಡ್ಗಿಚ್ಚು ದುರಾಸೆಯ ಮಾನವರದೇ ಸೃಷ್ಟಿ ಎಂದು ಇಬ್ಬರೂ ಖಡಾಖಂಡಿತವಾಗಿ ಹೇಳ್ತಾರೆ. ನದೀ ನೀರಿ ತಿರುವಿನ ಬಗೆಗೂ ಅವರಿಗೆ ವಿರೋಧವಿದೆ.ನಾವು ನೀರನ್ನು ಟಿಎಂಸಿ ಲೆಕ್ಕದಲ್ಲಷ್ಟೇ ನೋಡ್ತೇವೆ. ನದೀಮೂಲ,ನದೀಪಾತ್ರ, ನದಿಗಳು ಸಮುದ್ರ ಸೇರುವಂತಹ ಅತ್ಯಂತ ಜೀವ ವೈವಿಧ್ಯದ ಸೂಕ್ಷ್ಮ ಜಾಗಗಳ ಬಗೆಗೆ ನಮಗೆ ಗೌರವವಿರಬೇಕು.ಅಂತಹ ಜೀವಜಾಲಗಳ ಸಂಪದ್ಭರಿತ ಜಾಗಗಳನ್ನು

ರಕ್ಷಿಸಬೇಕಾದ್ದು ನಮ್ಮ ಹೊಣೆ ಎನ್ನುವುದು ಈ ಜೋಡಿಯ ಅಭಿಪ್ರಾಯ. ಇಂತಹ ವಿಚಾರದಲ್ಲಿ ಸರಕಾರಗಳಿಗೆ ಬದ್ಧತೆಯಿರಬೇಕು,ಜನರಿಗೆ ಕಾಳಜಿ ಹೊಣೆಗಾರಿಕೆ ಇರಬೇಕು ಎಂದು ಅವರು ಹೇಳುತ್ತಾರೆ.

 

ಹೀಗೇ..ಮನೆಯಂಗಳದ ಮಾತುಕತೆಯಲ್ಲಿ ಕೃಪಾಕರ ಸೇನಾನಿ ಎಂಬ ಕಿಂದರ ಜೋಗಿಗಳು, ತಮ್ಮ ಕಾಡಿನ ಬದುಕನ್ನು,ಗ್ರೀನ್ ಆಸ್ಕರ್ ಪ್ರಶಸ್ತಿ ಪಡೆದ ಕ್ಷಣಗಳನ್ನು,”ನಮ್ಮ ಸಂಘ”ದ ಮೂಲಕ ನಲುವತ್ತು ಸಾವಿರ ಬುಡಕಟ್ಟು ಕುಟುಂಬಗಳಿಗೆ ಗ್ಯಾಸ್ ಒಲೆ ವಿತರಿಸಿದ ಕೃತಾರ್ಥ ಕ್ಷಣಗಳನ್ನು, ಸಹಾಯಕರಾಗಿರುವ ಬೊಮ್ಮ ಕೃಷ್ಣರಂತಹ ಬುಡಕಟ್ಟು ವ್ಯಕ್ತಿಗಳ ಅನನ್ಯ ವ್ಯಕ್ತಿ ವಿಶೇಷಗಳನ್ನು, ವಿಶೇಷಣಗಳನ್ನು..

 

ಹೇಳುತ್ತಾ ಹೋದಂತೆ, ಇಡೀ ನಯನ ಸಭಾಂಗಣವೇ ತಲೆದೂಗುತ್ತಾ ಈ ಕಿಂದರ ಜೋಗಿಗಳ ಹಿಂದೆಯೇ ನಡೆಯುತ್ತಾ ಹೋಯಿತು.. !!

 

 

 

 

‍ಲೇಖಕರು Avadhi GK

January 22, 2018

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. lakshmikanth itnal

    Nanna nechchina nadu-kadugala hrudayavanta jodi. ivara shramakke, vanya kalajige, sati illa. nimmibbarige nanndondu tumbu manada namaskara sweekatrisi pl.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: