ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸೆಲ್ಫಿ

lakshman-370x315ಲಕ್ಷ್ಮಣ್

ಕವಿತೆಯೊಂದರ ಹಿಂಬದಿಯ ಪುಟ
ಖಾಲಿಯಿದೆ
ಯಾರದರೂ ಬರೆಯಬಹುದು
ಏನಾದರೂ ಬರೆಯಬಹುದು
ಶಿಲೆಯ ಬೆನ್ನು ಪುಟದ ಮೇಲೆ

ಯಾವ ಶಾಸನವೂ ಮೂಡುವುದಿಲ್ಲ
ಶಿಲೆಯ ಮೇಲೆ
ಎದೆಯೊಳಗೆ ಬರೆಯದ ಹೊರತು

ಡಾಬು, ದಾಗಿನ,
ತೋಳುಬಂಧಿ, ತೊಡೆಯ ಸಂಧಿ
ಎಲ್ಲ ಬರೆದವರಿದ್ದಾರೆ ದೇಹವೇ ದೇಗುಲವೆಂದು
ನನ್ನ ಬಹಿರಂಗದ ಕುರಿತು
ಅಂತರಂಗ ಬಗೆಯುವ ಉಳಿಯೊಂದ
ತುರ್ತಾಗಿ ತರಬೇಕಿದೆ

click kavite shilabalikeತಲೆಬಾಗಿ ನಡೆದವರಿಗೆ
ಮಾತ್ರ
ಒಳಬಾಗಿಲ ಪ್ರವೇಶವಿದೆ

ಏಳು ಹೆಡೆಯ
ಜಡೆ ನಾಗರವೊಂದು ಅನವರತ
ಕಾಯುತಿದೆ
ಒಳಮನೆಯ ನಿಗೂಢ ನಿಧಿಯ

ಜೈಲು ಸರಳುಗಳಿಂತಿರುವ
ನನ್ನೆದುರಿಗಿನ
ಸಾಲು ಕಂಬಗಳಲಿ
ಸಾವಿರದ ಕತೆಯಿದೆ ಪುರುಸೊತ್ತಿದ್ದರೆ
ಕೇಳಿಸಿಕೊ
ನನ್ನ ಹಸಿವು ನಿದ್ದೆ ನೀರಡಿಕೆ
ಒಂಟಿತನ
ನೀರವ ರಾತ್ರಿಯ ನಿಡುಸುಯ್ಯುವಿಕೆ
ಕತ್ತಲ ರಾತ್ರಿಯ ಬಿಕ್ಕಳಿಕೆ
ತುಟಿಯಂಚಿನಲಿಯ ವಿಷಾದ
ಉಳಿಯಾಡುವಾಗಿನ
ಒಡಲ ನೋವು
ಬೆನ್ನ ಮೇಲಿನ ಬೆವರು ಸಾಲಿನ
ಮುತ್ತ ಹನಿಯ ಹತಾಶೆ
ನಿನಗೊಂಚೂರು ಅರ್ಥವಾದರೆ
ಬರೆ
ಇಲ್ಲವೇ  ಸುಮ್ಮನೆ
ಸೆಲ್ಪೀ ತೆಗೆದು ಸಂಭ್ರಮಿಸು

ಅಕ್ಕ
ಬಿಗ್ ಬ್ಯಾಂಗ್ ಥಿಯರಿಯ
ಉಲ್ಕಾಪಾತದಿಂದ ಸಿಡಿದ ಯಃಕಶ್ಚಿತ್
ಶಿಲೆಯೊಂದು ಇಲ್ಲಿ
ಹೀಗೆ
ಚಿತ್ತವೇ ಕೆತ್ತಿದಂತ ಚಿತ್ರವಾಗಿರಲು
ಇದು
ಚೆನ್ನಮಲ್ಲಿಕಾರ್ಜುನನ ಪವಾಡವಲ್ಲದೆ
ಇನ್ನೇನು?

ಆದಿಮದ ಹೊತ್ತಿಗೆಯಲ್ಲಿ
ಗೀತೆ, ಕುರಾನ, ಬೈಬಲ್ಲಿನಲ್ಲಿ
ಈ ಇಂತಹ ಅನೇಕ ಕವಿತೆಗಳ
ಮುಟ್ಟಲಾರದ ಶಿಲೆಗಳ
ಹಿಂಬದಿಯ ಪುಟ ಇನ್ನೂ ಖಾಲಿಯಿದೆ
ಕೆಲವರು ಕಲ್ಲಿನಲಿ
ಬರೆದರು ಕೆಲವರು ಬಂಗಾರದಲಿ
ತಾಳೆ, ಹಿತ್ತಾಳೆ, ತಾಮ್ರಗಳಲಿ ಬರೆದ
ನಾಗರಿಕತೆಗಳು

ಹೇಳ ಹೆಸರಿಲ್ಲದೆ
ಬೆಳಕು ಹರಿಯುವುದರೊಳಗೆ
ಮಣ್ಣುಪಾಲಾಗಿವೆ
ಎದೆಯ ಮೇಲೆ ಶಾಶ್ವತವಾಗಿ
ಉಳಿಯುವ ಶಾಸನ ಬರೆಯಬಹುದಾದರೆ
ನೀನು
ಸದ್ಯಕ್ಕೆ ನನ್ನ ಬೆನ್ನ ಪುಟ
ಖಾಲಿಯಿದೆ  ಏನು ಬೇಕಾದರೂ
ಬರೆದುಕೊ

‍ಲೇಖಕರು admin

25 August, 2016

4 Comments

  1. abhishek.v.s

    ಕುಟಿಲ ಕಷ್ಟದೊಳು
    ಕೆತ್ತಿದ ಶಿಲ್ಪಿ.
    ದಂಡಿಸಿ ಉಳಿಯ
    ಖಂಡಿಸಿ ಗೊರ್ಗಲ್ಲ.

    ತಿಂದ ಏಟಿಗೆ ಗೊರ್ಗಲ್ಲು ನಗಲಿಲ್ಲ
    ಶಿಲ್ಪಿ ಹೃದಯ ಕರಗಲಿಲ್ಲ
    ಎದೆಯ ಒಳಗೆ ಮೆರೆಯುತ್ತಿತ್ತು
    ಪ್ರೇಮದ ಮೂರುತಿ.
    ಜನ್ಮವ ತಳೆದು ನಿಂತಿತ್ತು
    ನೋವುಗಳ ಮರೆಸಿ.

    ಭಾವನೆಗಳ ಭಾವೈಕ್ಯ
    ಬೆರೆತು ಹೋಗಿದ್ದೊ.
    ಪ್ರೇಮ ಮೂರುತಿಯ ಸೃಷ್ಟಿಗೆ
    ಕನಸ ಹೆಣೆದಿದ್ದೊ.
    ಬೇಲೂರು ಐಹೊಳೆಯ
    ಶಿಲ್ಪಗಳೆ ನಾಚಿದವು.

    ನೋಡಿ ನಡೆದ ಬಳುಕುವ
    ನಡುವಿನ ಮಾಯೆಗೆ.
    ಬಂಧಿಯಾದವು ಶಿಲ್ಪಿಯ
    ಕನಸು ಜಡೆಯೊಳಗಿನ ತೆಕ್ಕೆಗೆ.
    ಹಿಂಬಾಲಿಸುತ್ತಿದ್ದೊ ಕನಸುಗಳು
    ಅವಳ ಕೊರಳ ನಾದದ
    ಕರೆಗೆ.

  2. ಮಮತಾ ಅರಸೀಕೆರೆ

    Bahala olle saalugalu

  3. ಲಕ್ಷ್ಮಣ್ ವಿ ಎ

    ಧನ್ಯವಾದಗಳು ಮಮತಾ ಮೇಡಂ
    ಅಭಿಷೇಕ ಸರ ನಿಮ್ಮ ಕವಿತೆ ಚೆನ್ನಾಗಿದೆ

  4. kusuma patel

    Very nice.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading