ಜೈಲಿನಿಂದ ಹೊರಬಂದ 'ಚ೦ದಿರ'..

8ನೇ ಥಿಯೇಟರ್ ಒಲಂಪಿಕ್ಸ್ ನಲ್ಲಿ
ಜತೆಗಿರುವನು ಚ೦ದಿರ

ನಮ್ಮ ಸೆರೆಮನೆಯ ಕಲಾವಿದರು ಮುಖಕ್ಕೆ ಬಣ್ಣ ಹಚ್ಚದೇ ಎರಡು ವರ್ಷಗಳೇ ಆದವು.
2016ರ ಭಾರತ್ ರಂಗ್ ಮಹೋತ್ಸವದಲ್ಲಿ ಇವರಾಡಿದ ‘ಮಾರನಾಯಕ’ ನಾಟಕ ಪ್ರದರ್ಶನವೇ ಕೊನೆಯಾಗಿತ್ತು. ಇತ್ತ ರಂಗಾಯಣದಲ್ಲಿ ಬಿಡುವಿಲ್ಲದ ಚಟುವಟಿಕೆ. ಯಶವಂತ ಚಿತ್ತಾಲರ ಶಿಕಾರಿಯ ‘ನಾಗಪ್ಪ’ ನಾನು ಏನೂ ಮಾಡದಂತೆ ಆವರಿಸಿ ಬಿಟ್ಟ. ಈ ಒಂದೂ ಮಗನನ್ನು ಬದಿಗಿರಿಸಿ ‘ಈಗ…ಬಂದೆ’ ಎಂದು ಜೈಲೊಳಗೆ ನುಸುಳಿದ್ದೇನೆ, ಕಾರಾಗೃಹದ ಪರವಾನಿಗೆ ಚೀಟಿಯೊಂದಿಗೆ.
2016ರಲ್ಲಿ ಮಾರನಾಯಕ, ಜತೆಗಿರುವನು ಚಂದಿರ, ಸೂಳೆಸನ್ಯಾಸಿ, ಹುಲಿಯ ನೆರಳು ನಾಟಕಗಳನ್ನು ‘ಜೈಲಿನಿಂದ-ಬಯಲಿಗೆ’ ನಾಟಕೋತ್ಸವದಲ್ಲಿ ಸುಮಾರು 10 ಜಿಲ್ಲೆಗಳಲ್ಲಿ ಪ್ರದರ್ಶನಗೊಂಡಿದ್ದವು. ಬಹುರೂಪಿ-2016, ಕೇಂದ್ರ ಸಾಹಿತ್ಯ ಅಕಾಡೆಮಿಯ ರಾಷ್ಟ್ರೀಯ ಉತ್ಸವ, ಭಾರತ್ ರಂಗ್ ಮಹೋತ್ಸವದಲ್ಲೂ ಪ್ರದರ್ಶನಗೊಂಡಿದ್ದವು.
ಈಗ ಮತ್ತೆ 8th Olympic theatre ನಲ್ಲಿ ಭಾಗವಹಿಸಲು ರಾಷ್ಟ್ರೀಯ ನಾಟಕ ಶಾಲೆ, ನವದೆಹಲಿಯಿಂದ ಆಹ್ವಾನ ಬಂದಿದೆ. ಇದೇ Feb 25ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ‘ಜತೆಗಿರುವನು ಚಂದಿರ’ ಪ್ರದರ್ಶನವಿದೆ. N.S.D ಯಿಂದ ಬಂದ ಮೊದಲ ಪತ್ರದಲ್ಲಿ ಮಾರ್ಚ್ 24ರಂದು ತ್ರಿಪುರದ ಅಗರ್ತಲದಲ್ಲಿ ಪ್ರದರ್ಶಿಸುವುದು ಎಂದಿತ್ತು. ” ಬಂದಿಕಲಾವಿದರನ್ನು ಅಷ್ಟೊಂದು ದೂರ ಇರಲಿ, ಇಲ್ಲಿ ಹತ್ತಿದರೇ ಅಲ್ಲಿ ಇಳಿಯುವಂತಿರಬೇಕು.” ಎಂದಿದ್ದಕ್ಕೇ, ಹಾಗಾದರೇ “ನಿಮ್ಮ ಹಣೇಬರಹ, ಬೆಂಗ್ಳೂರಿನಲ್ಲೇ ಮಾಡಿ” ಎಂದು ಜಾಗ ಬದಲಾಯಿಸಿದರು.
ಈ ನಾಟಕವನ್ನು ಬೆಲ್ಲ ತಿಂದು ಮಾತನಾಡುವ ‘ ಜಯಂತ್ ಕಾಯ್ಕಿಣಿ’ಯವರು ಬರೆದದ್ದು. ಅಥವಾ ಇವರು ತಮ್ಮ ಲೇಖನಿಯನ್ನು ನೊರೆಬೆಲ್ಲದಲ್ಲಿ ಅದ್ದಿ ಈ ನಾಟಕವನ್ನು ಬರೆದಿರಬೇಕು.
ಹೊರತುಪಡಿಸಿ ಈ ಕಡೆ…. 2016ರಲ್ಲಿ ಈ ನಾಟಕದಲ್ಲಿ ಭಾಗವಹಿಸಿದ 8 ಜನ ಹೊರತುಪಡಿಸಿ ಸುಮಾರು 20 ಜನ ಬಿಡುಗಡೆಯಾಗಿದ್ದಾರೆ. ಹಾಗಾಗಿ ಸಂಕಲ್ಪದ ಅಧ್ಯಕ್ಷರಾದ ಶ್ರಿ ಗೋಪಾಲ್ ಹೊಸೂರ್ IPS ಅವರ ಅಪೇಕ್ಷೆಯ ಮೇರೆಗೆ ಶ್ರೀ ಮೇಘರಿಕ್ IPS (ಕಾರಾಗೃಹಗಳ ಮಹಾನಿರೀಕ್ಷಕರು) ಹಲವು ಕರಾರುಗಳೊಂದಿಗೆ ಈ ಬಿಡುಗಡೆಯಾದವರನ್ನು ನಾಟಕಕ್ಕಾಗಿ ಕೆಲವು ದಿನಗಳ ಕಾಲ ಕೆಲವರನ್ನು ಮತ್ತೆ ಒಳ ಸೇರಿಸಲು ಅವಕಾಶವಿತ್ತಿದ್ದಾರೆ.
ದಯವಿಟ್ಟು ಎಲ್ಲರೂ ಬಂದು ಈ ಕಲಾವಿದರನ್ನು ಪ್ರೋತ್ಸಾಹಿಸಿ.
ದಿ: 25-02-2018, ಭಾನುವಾರ
ಸಮಯ: ಸಂಜೆ 7ಕ್ಕೆ
ಸ್ಥಳ: ರವೀಂದ್ರ ಕಲಾಕ್ಷೇತ್ರ, ಬೆಂಗಳೂರು.
ನಿಮ್ಮ ನಿರೀಕ್ಷೆಯಲ್ಲಿ..

ಹುಲುಗಪ್ಪ ಕಟ್ಟೀಮನಿ

‍ಲೇಖಕರು Avadhi GK

February 25, 2018

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: