ತೆಲುಗಿನ ಖ್ಯಾತ ವಿಪ್ಲವ ಕವಿ ಮತ್ತು ಕಥೆಗಾರ ಶ್ರೀ ಶ್ರೀ ಯವರ ಕಥೆಯನ್ನು ಕಲಾವಿದ ಸೃಜನ್ ಅನುವಾದಿಸಿದ್ದಾರೆ
– ಸೃಜನ್
ಒಂದು ಜನನ ಒಂದು ಮರಣ
ಅಲ್ಲೊಂದು ಊರು.ಆ ಊರಲ್ಲೊಂದು ಆಸ್ಪತ್ರೆ.
ಇಲ್ಲೊಂದು ಊರು.ಈ ಊರಲ್ಲೊಂದು ಪೋಲಿಸ್ ಸ್ಟೇಷನ್.
ಆ ಊರಲ್ಲಿ ಈ ಊರಲ್ಲಿ ಇಡೀ ಜಗತ್ತಿನ ತುಂಬ ರಾತ್ರಿಯಾಗಿತ್ತು.
ಆಸ್ಪತ್ರೆಗೆ ಹೆರಿಗೆ ನೋವೆಂದು ಬಸುರಿಹೆಂಗಸೊಬ್ಬಳನ್ನುಕರೆತರಲಾಯ್ತು.ಆಕೆಯ ವಯಸ್ಸು ೪೦.
ಪೋಲಿಸ್ ಸ್ಟೇಷನ್ ಗೆ ಕೈಗೆ ಬೇಡಿ ಹಾಕಿದ್ದ ಹುಡುಗನೊಬ್ಬನನ್ನು ಕರೆತರಲಾಯ್ತು .ಅವನ ವಯಸ್ಸು ೨೦.
ಆ ಹೆಂಗಸು ನೋವಿನಿಂದ ಅಳುತ್ತಿದ್ದಳು.
ಹುಡುಗ ನೋವಿನಿಂದ ನಗುತ್ತಿದ್ದ.
ಆಸ್ಪತ್ರೆಯಲ್ಲಿ ವೈದ್ಯರು ತುಂಬು ಭರವಸೆಯಿಂದ ಮಾತನಾಡಿದರು.
ಸ್ಟೇಷನ್ ನಲ್ಲಿ ಬಾಯಿಗೆ ಬಂದಂತೆ ಅಸಹ್ಯವಾಗಿ ಬೈಯುತ್ತಿದ್ದರು.
“ನಿಂಗೇನು ಭಯವಿಲ್ಲ ,ಕೇಸು ಕಷ್ಟಕರವಾಗಿದೆ,ಆದರೆ ಜೀವಕ್ಕೇನು ಅಪಾಯವಿಲ್ಲ”
“ಸೂಳೆಮಗನೆ ಮಾವೋ ಪುಸ್ತಕ ಓದ್ತಿಯಾ?ಜಗತ್ತನ್ನೇ ರಿಪೇರಿ ಮಾಡ್ತಿಯಾ?ಮೊದಲು ನಿನ್ನನ್ನು ರಿಪೇರಿ ಮಾಡ್ತಿವಿ ಹುಷಾರ್ !”
ವೈದ್ಯರು ಶಸ್ತ್ರಚಿಕಿತ್ಸೆಗೆ ಸಿದ್ಧವಾದರು.ಪೊಲೀಸರು ಕತ್ತಿ,ಲಾಠಿಗಳನ್ನೂ ಹೊರತೆಗೆದರು.
ಎರಡೂ ಕಡೆ ಹಿಂಸಾ ಪ್ರಯೋಗ ಆರಂಭವಾಯ್ತು.
ಅಲ್ಲಿ ಸೂರ್ಯೋದಯ ಸಮಯಕ್ಕೆ ಆಸ್ಪತ್ರೆಯಲ್ಲಿ ಒಂದು ಜನನ.
ಇಲ್ಲಿ ಬೆಳಗಾಗುತ್ತಿದ್ದಂತೆ ಪೋಲಿಸ್ ಸ್ಟೇಷನ್ ನಲ್ಲಿ ಒಂದು ಮರಣ.
]]>
ಸೃಜನ್, ಕಥೆ ತುಂಬಾ ತುಬಾ ಚೆನ್ನಾಗಿದೆ. ಶ್ರೀ ಶ್ರೀ ಬಹುದೊಡ್ಡ ಅಸ್ಟೆ ಘಮ್ಬೀರವಾದ ಲೇಖಕ, ಕಥೆ ಮನಮುಟ್ಟುವಂತಿದೆ ಅವರ ಬರಹಗಳು,ಕಾವ್ಯ ಕನ್ನಡಕ್ಕೆ ಅನುವಾದ ಆಗಬೇಕಿದೆ, ಅವರು “ಆಕಲಿ ರಾಜ್ಯಂ ” ಸಿನಿಮಾದ ಹಾಡುಗಳನ್ನು ನಾವು ಕಾಲೇಜು ದಿನಗಳಲ್ಲಿ ಹಾಡುತಿದ್ದೆವು ಮವರ ಈ ಕಿರುಕವನ ತುಂಬಾ ಕಾಡಿತ್ತು “ಮನದಿ ಒಕ ಬ್ರತುಕೆನ, KUKKALAVALE ,PANDULAVALE ಸಂದುಲಲೋ ಗೊಂದುಲಲೋ nakkalavale , ಪತಿತುಲಾರ, ಬ್ರಸ್ಟುಲಾರ ಧಗಾಬಡಿನ ತಮ್ಮುಲಾರ
ಎಡವಕಂಡಿ ಎಡವಕಂಡಿ ಎಡವಕಂಡಿ ” ಅದು ನಿರುದ್ಯೋಗ ಪರಾಕಸ್ಟೆಯ ದಿನಗಳವು , ಆಗ ಕೆ.ಬಾಲಚಂದ್ರ ನಿರ್ದೇಶಿಸಿದ “ಆಕಲಿರಾಜ್ಯಂ ” ಇಡೀ ಯುವಜನಾಂಗದ ಎದೆ ತಟ್ಟಿತ್ತು ಆ ಸಿನಿಮಾದಲ್ಲಿ ಶ್ರೀ ಶ್ರೀ ಕವನ,ಹಾಡುಗಳನ್ನು ತುಂಬಾ ತುಂಬಾ ಅರ್ಥಪೂರ್ಣವಾಗಿ ಬಳಸಿಕೊಂಡಿತ್ತು .ಬಹಳಷ್ಟು ದಿನದ ಮೇಲೆ ಒಂದು ಘಟ್ಟಿ ಕಥೆ ಓದಿಸಿದ್ದಕ್ಕೆ ನಿಮಗೂ, ಅವದಿಗು ವಂದನೆಗಳು
ರವಿ ವರ್ಮ ಹೊಸಪೇಟೆ
srujan super ya. sri sri na e kathe mulaka anuvaadisi kottiddakke thanku so much ya.
Loading...
sandhya
on 24 May, 2012 at 2:55 PM
ಶ್ರೀ ಶ್ರೀ ತೆಲುಗು ಕವಿತೆಗಳನ್ನು ತು೦ಬಾ ಆಸೆ ಪಟ್ಟು ಕೇಳುತ್ತಿದೆ… ’ನೇನು ಸೈತ೦…’ ನನ್ನ ಫ಼ೇವರೇಟ್. ಆದರೆ ಅದನ್ನು ಕನ್ನಡದಲ್ಲಿ ಅಥವ ಕನ್ನಡ ಲಿಪಿಯಲ್ಲಾದರೂ ಓದಲು ಸಾಧ್ಯವಿದ್ದಿದ್ದರೆ…