ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸೂರಿ Tips.. ನಕ್ಕುಬಿಡಿ

ಮಳೆಗಾಲದಲ್ಲಿ ಬೆಂಗಳೂರುವಾಸಿಗಳಿಗೆ ಒಂದಿಷ್ಟು ಸಲಹೆಗಳು.

ಬೆಂಗಳೂರಿನ ಮಳೆಯ ಅಬ್ಬರ ಕಳೆದ ಐದಾರು ವರ್ಷಗಳಿಂದ ಬೆಂಗಳೂರಿನಲ್ಲಿ ಬದುಕುತ್ತಿರುವ ಎಲ್ಲರಿಗೂ ಪರಿಚಯ. ನರಕಕ್ಕಿಂತ ಒಂದಿಷ್ಟು ಆಚೆಯ ಅನುಭವ. ಈ ಮಳೆಗಾಲ ಕೂಡ ಅದಕ್ಕಿಂತ ಬೇರೆಯಾಗುವ ಲಕ್ಷಣಗಳು ತೋರುತ್ತಿಲ್ಲ. ಹಾಗಾಗಿ ಬೆಂಗಳೂರು ಮಹಾನಗರ ಪಾಲಿಕೆ ಈ ಕೆಳಗಿನ ಮುನ್ನೆಚ್ಚರಿಕೆಯನ್ನು ನೀಡಿದೆ.

೧. ಸಾಧ್ಯವಾದಷ್ಟೂ ಹಿರಿ ಜೀವಗಳನ್ನು ಮತ್ತು ಮಕ್ಕಳನ್ನು ಮೋರಿಯ ಬಳಿ ಬಿಡಬೇಡಿ.

೨. ಕಾರುಗಳನ್ನು ಮರದ ಕೆಳಗಾಗಲೀ ಮರದ ಆಸುಪಾಸಿನಾಲ್ಲಗಲೀ ನಿಲ್ಲಿಸ ಬೇಡಿ.

೩. ಕಾರುಗಳನ್ನಾಗಲೀ, ನೀವಾಗಲೀ ಮೇಲೆ ಬಂದಾಗ ಸರಕಾರ ಅಥವಾ ಮಹಾ ನಗರ ಪಾಲಿಕೆ ಕಟ್ಟಿಸಿದ ಯಾವುದೇ ಗೋಡೆ, ಕಾಂಪೌಂಡುಗಳ ಬಳಿ ನಿಲ್ಲಿಸಬೇಡಿ ಅಥವಾ ನಿಲ್ಲಬೇಡಿ.

೪. ಮಳೆ ಬರುವ ಸೂಚನೆ ಕಂಡ ಕೂಡಲೇ ನೀವು ಇದ್ದ ಸ್ಥಳದಲ್ಲಿಯೇ ಮುಂದಿನ ನಾಲ್ಕು ಅಥವಾ ಆರು ಗಂಟೆಗಳ ವಾಸ್ತವ್ಯಕ್ಕೆ ಅಣಿ ಮಾಡಿಕೊಳ್ಳಿ.

೫. ಸಾಧ್ಯವಾದಷ್ಟೂ ನಿಮ್ಮ ಕೆಲಸಗಳನ್ನು ಮಧ್ಯಾಹ್ನ ಮೂರು ಗಂಟೆಯ ಒಳಗೆ ಮುಗಿಸಿ ನಾಲ್ಕರ ಒಳಗೆ ಮನೆ ಸೇರುವ ವ್ಯವಸ್ಥೆ ಮಾಡಿಕೊಳ್ಳಿ.

೬. ಇಂದಿನಿಂದಲೇ ನಾಲ್ಕಡಿ ಆಳದ ನೀರಿನಲ್ಲಿ ಕಾರು/ಸ್ಕೂಟರ್ ಓಡಿಸುವ ಅಭ್ಯಾಸ ಮಾಡಿಕೊಳ್ಳಿ.

೭. ಬಹಳ ಉತ್ತಮವೆಂದರೆ ಬರುವ ನಾಲ್ಕು ಐದು ತಿಂಗಳ ಮಟ್ಟಿಗೆ ಬೆಂಗಳೂರಿನ ನಿಮ್ಮ ಮನೆಗೆ ಬೀಗ ಹಾಕಿ ಬೇರೆ ಊರು ಸೇರಿಕೊಳ್ಳಿ.

ಮತ್ತಷ್ಟು ಸಲಹೆಗಳನ್ನು ಬೆಂಗಳೂರು ಮಹಾ ನಗರ ಪಾಲಿಕೆ ನಿಮ್ಮಿಂದ ಬಯಸುತ್ತಿದೆ. ಕೂಡಲೇ ನಿಮ್ಮ ಸಲಹೆಗಳನ್ನು ಆಯುಕ್ತರು, ಬೆಂಗಳೂರು ಮಹಾನಗರ ಪಾಲಿಕೆ ಇವರಿಗೆ ಬರೆದು ತಿಳಿಸಿ.

ಅವಧಿಗೆ ತಿಳಿಸಿದರೂ ನಾವು ಅದನ್ನು ಬೆಂಗಳೂರಿನ ಮಹಾನಗರ ಪಾಲಿಕೆ ಆಯುಕ್ತರಿಗೆ ತಲುಪಿಸುವ ವ್ಯವಸ್ಥೆಯನ್ನು ಮಾಡುತ್ತೇವೆ.

 

 

‍ಲೇಖಕರು G

26 April, 2011

1 Comment

  1. Ranganath S

    ಮಳೆ ಬರುವಾಗ ಯಾವುದೇ ಕಾರಣಕ್ಕೂ ಮರಗಳ ಕೆಳಗೆ ನಡೆದುಕೊಂಡು ಹೋಗಬೇಡಿ., ಮರದ ರೆಂಬೆಗಳು ನಿಮ್ಮ ಮೇಲೆ ಬಿದ್ದರು ಬೀಳಬಹುದು.

    ಈಗಾಗಲೆ ಮಳೆ ಬಂದು ಎಲ್ಲ ಬಿ.ಬಿ.ಎಮ್.ಪಿ ಗೋಡೆಗಳು ನೆಂದಿರುವದರಿಂದ, ಯಾವುದೇ ಕಾರಣಕ್ಕೂ ಗೋಡೆಗಳ ಮೇಲೆ ಸೂ ಸೂ ಮಾಡಬೇಡಿ, ನಿಮ್ಮ ಮೇಲೆಯೇ ಗೋಡೆ . ಬೀಳಬಹುದು.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading