ಸೂರಿ
ಪೀಟ್ ಸೀಗರ್ ಹಾಡಿದ ಇನ್ನೊಂದು ಪದ್ಯ where have all the flowers gone ಇಲ್ಲಿದೆ
ಜೊತೆಯಲ್ಲಿ ಸರಳ ಅನುವಾದ ಕೂಡಾ ಇದೆ
ಹೂಗಳೆಲ್ಲಾ ಹೋದವೆಲ್ಲಿಗೆ, ಬಹಳ ದಿನಗಳಾದವು?
ಹೂಗಳೆಲ್ಲಾ ಹೋದವೆಲ್ಲಿಗೆ, ಬಹಳ ದಿನಗಳ ಹಿಂದೆ
ಹೂಗಳೆಲ್ಲಾ ಹೋದವೆಲ್ಲಿಗೆ?
ಹುಡುಗಿಯರ ಮುಡಿಗೆ.
ಓಹ್, ಎಂದಿಗೆ ತಿಳಿಯಬೇಕು ಅವಕ್ಕೆ
ಎಂದಿಗೆ ತಿಳಿಯಬೇಕು?
ಹುಡುಗಿಯರೆಲ್ಲಾ ಹೋದರೆಲ್ಲಿಗೆ, ಬಹಳ ದಿನಗಳಾದವು?
ಹುಡುಗಿಯರೆಲ್ಲಾ ಹೋದರೆಲ್ಲಿಗೆ, ಬಹಳ ದಿನಗಳ ಹಿಂದೆ
ಹುಡುಗಿಯರೆಲ್ಲಾ ಹೋದರೆಲ್ಲಿಗೆ?
ಗಂಡಂದಿರ ಜೊತೆಗೆ.
ಓಹ್, ಎಂದಿಗೆ ತಿಳಿಯಬೇಕು ಅವರಿಗೆ
ಎಂದಿಗೆ ತಿಳಿಯಬೇಕು?
ಗಂಡಂದಿರೆಲ್ಲಾ ಹೋದರೆಲ್ಲಿಗೆ, ಬಹಳ ದಿನಗಳಾದವು?
ಗಂಡಂದಿರೆಲ್ಲಾ ಹೋದರೆಲ್ಲಿಗೆ, ಬಹಳ ದಿನಗಳ ಹಿಂದೆ
ಗಂಡಂದಿರೆಲ್ಲಾ ಹೋದರೆಲ್ಲಿಗೆ?
ಸೈನ್ಯದ ಜೊತೆಗೆ.
ಓಹ್, ಎಂದಿಗೆ ತಿಳಿಯಬೇಕು ಅವರಿಗೆ
ಎಂದಿಗೆ ತಿಳಿಯಬೇಕು?
ಸೈನಿಕರೆಲ್ಲಾ ಹೋದರೆಲ್ಲಿಗೆ, ಬಹಳ ದಿನಗಳಾದವು?
ಸೈನಿಕರೆಲ್ಲಾ ಹೋದರೆಲ್ಲಿಗೆ, ಬಹಳ ದಿನಗಳ ಹಿಂದೆ
ಸೈನಿಕರೆಲ್ಲಾ ಹೋದರೆಲ್ಲಿಗೆ?
ಸಮಾಧಿಯ ಒಳಗೆ.
ಓಹ್, ಎಂದಿಗೆ ತಿಳಿಯಬೇಕು ಅವರಿಗೆ
ಎಂದಿಗೆ ತಿಳಿಯಬೇಕು?
ಸಮಾಧಿಗಳು ಹೋದವೆಲ್ಲಿಗೆ, ಬಹಳ ದಿನಗಳಾದವು?
ಸಮಾಧಿಗಳು ಹೋದವೆಲ್ಲಿಗೆ, ಬಹಳ ದಿನಗಳ ಹಿಂದೆ
ಸಮಾಧಿಗಳು ಹೋದವೆಲ್ಲಿಗೆ?
ಹೂಗಳಾಗಲಿಕ್ಕೆ.
ಓಹ್, ಎಂದಿಗೆ ತಿಳಿಯಬೇಕು ಅವಕ್ಕೆ
ಎಂದಿಗೆ ತಿಳಿಯಬೇಕು?
ಹೂಗಳೆಲ್ಲಾ ಹೋದವೆಲ್ಲಿಗೆ, ಬಹಳ ದಿನಗಳಾದವು?
ಹೂಗಳೆಲ್ಲಾ ಹೋದವೆಲ್ಲಿಗೆ, ಬಹಳ ದಿನಗಳ ಹಿಂದೆ?
ಹೂಗಳೆಲ್ಲಾ ಹೋದವೆಲ್ಲಿಗೆ?
ಹುಡುಗಿಯರ ಮುಡಿಗೆ.
ಓಹ್, ಎಂದಿಗೆ ತಿಳಿಯಬೇಕು ಅವಕ್ಕೆ
ಎಂದಿಗೆ ತಿಳಿಯಬೇಕು?







– ಪೀಟರ್ ಸೀಗರ್ ಕವನ ಸೊಗಸಾಗಿದೆ, ಹೂಗಳು ಹುಡುಗಿಯರ ಮುಡಿಗೆ, ಹುಡುಗಿಯರು ಹುರುಗರನ್ನು ಮದುವೆಯಾಗಿ ಗಂಡನ ಮನೆಗೆ ಹೊಗುವುದು, ಗಂಡಸರು ಸೈನ್ಯಕ್ಕೆ ಸೇರುವುದು, ಸೈನಿಕರು ಯುದ್ಧದಲಿ ಅಸುನೀಗಿ ಸಮಾಧಿಸ್ಥರಾಗುವುದು, ಸಮಾಧಿಗಳು ಮತ್ತೆ ಹೂವುಗಳಾಗುವುದು, ಮತ್ತೆ ಹೂವುಗಳು ಹುಡುಗಿಯರ ಮುಡಿಗೆ ಹೋಗುವುದು ಸೀಗರ್ ನ ಸೊಗಸಾದ ಪರಿಕಲ್ಪನೆ. ಹೂವು ಪ್ರೇಮ ಯುದ್ಧ ಸಮಾಧಿ ಒಳ್ಳೆಯ ಜೊತೆಗೆ ಸುಂದರಭಾವವನ್ನು ಹೊರ ಹೊಮ್ಮಸಿಉವ ಕವನ.
The rich and deep voice of Pete Sieger is fantastic and heart touching. Thanks a lot for letting us hear him!