ಸೂತ್ರಧಾರ ರಾಮಯ್ಯ
ಒನ್ ದೆರಡು ಸಾಲು.
ನಿಧಿ ಅದರ ಸಾಹೆಬನಾದ ಮೇಲೆ, ಬದುಕೇ ಕಚಡಾ ಬಂದಿ!
ಬರುವಾಗ ಯಾರಿಗೂ ಮಾತಿರುವುದಿಲ್ಲ- ಹೋಗುವಾಗ ಬಹುಮಂದಿಗೆ ಮತಿ ಇರುವುದಿಲ್ಲಾ?
ವರದಕ್ಷಿಣೆ, ವರೋಪಚಾರಗಳು, ವೈಭವೋಪ್ರೇತ ಕಲ್ಯಾಣಮಂಡಿ ರಗಳೇ ಹೆಣ್ಣು ಭ್ರೂಣಗಳ ಕರುಳ ಬಳ್ಳಿಯ ಕತ್ತರಿಸುವ ಮಸೆದ ಮಚ್ಚುಗಳು!
ಫೋನ್ ಮಾಡಿ ಕರೆವ ಬೆಲೆವೆಣ್ಣನ್ನು ‘ಕಾಲ್ ಗರ್ಲ್’ ಅಂದಮೇಲೆ, ಹಾಗೆ ಕರೆವ ಪುರುಷನನ್ನು ‘ಕಾಲ್ ಪುರುಷ್’ ಅನ್ನಬಹುದೇ?
ಸದಾ ಸಮಾಜ ಸೇವೆ, ಪರೋಪಕಾರ ಅಂತಾ ‘ಸಂತ’ ಇದ್ದಹಾಗಿದ್ದ ವ್ಯಕ್ತಿ, ಮದುವೆಯಾದ ಮೇಲೆ ಈಗ ಎಲ್ಲವೂ ‘ಸ್ವಂತ’ ಅನ್ತಿದ್ದಾನಲ್ಲಾ -ನಲ್ಲೆಯ ಮಾತು ಕೇಳಿ!
‘ಜನ ರಲ್ಲಾಗಿ’ ಇರೋದು ಎರಡೇ ಪೈಕಿ. ‘ಅರಿವು’ ನೋಡಿ ಮನುಷ್ಯರ ಯೋಗ್ಯತೇನ ನಿರ್ಧರಿಸಿದರೆ ಒಂದು ಪೈಕಿ, ಕೇವಲ ವ್ಯಕ್ತಿಗಳು ಹಾಕಿಕೊಂಡಿರೋ ‘ಅರಿವೇ’ ನೋಡಿ ಮಣೆ ಹಾಕುತ್ತೆ ಇನ್ನೊಂದು ಪೈ(ಸೆ)ಕಿ. ಎಂಥಾ ‘ಮೇಜರ್’ ಮಿಸ್ಟೇಕ್ ಅಲ್ವೇ?
ಸಮಾಜ ಅನ್ನೋ ಸಾಮಜಕ್ಕೆ( ಆನೆಗೆ) ಹಾಸ್ಯ ವಿಡಂಬನೆಗಳು ಅಂಕುಶ ಇದ್ದಹಾಗೆ.
ಕಾರಣ, ಯಾರ ಮನಸ್ಸಿಗೂ ನೋವಾಗದಿರಲಿ ಅನ್ನುವಂತಾ “ಅಹಿಂಸಾತ್ಮಕ ಹಾಸ್ಯ’ ಎಂಬುದಿಲ್ಲ. ಔಷಧಿ ಕಹಿಯೇ. ದಡ್ಡನಿಗೆ ದೊಣ್ಣೆ ಪೆಟ್ಟು- ಜಾಣನಿಗೆ ಮಾತಿನ ಪೆಟ್ಟು
ಅನ್ನೋದನ್ನ ಜಾನ್ donne ನಮಗೆ ಹೇಳಿಕೊಟ್ಟಿದ್ದಲ್ಲ – ಬದಲಿಗೆ ಕನ್ನಡದ ಗಾದೆ ಹೇಳಿಕೊಟ್ಟದ್ದು.
ನಿ ಎತ್ತಾಗಿ ದುಡಿವವನು ಸಿಕ್ಕರೆ, ಸಕ್ಕರೆ ಮಾತುಗಳ ಬಾಯಿಂದ ಉದುರಿಸುತ್ತಾ ದುಡಿಸಿಕೊಳ್ಳುತ್ತದೆ ಸಮಾಜ , ‘ಗುಡ್ ಬಾಯ್’ ಎನ್ನುತ್ತಾ. ದುಡಿತ ನಿಲ್ಲಿಸಿದೆವೋ ‘ಗುಡ್ ಬೈ’ ಹೇಳುತ್ತದೆ ಉಪಕಾರ ಮರೆತು!
ಅರ ಮನೆ ತೋರದು ದಯಾನ!
ಅರಮನೆಯ ರೀತಿ ರಿವಾಜುಗಳೆಂಬ ಬಂಧನಾನ ಒಪ್ಪಿಕೊಂಡರಷ್ಟೇ ಕುದುರುವುದು ಸಂಭ್ರಮ ಸಾರೋಟು. ಹೆಜ್ಜೆ ಹೆಜ್ಜೆಗೂ ಸಲ್ಯೂಟು. ಸೆರೆಮೊನಿಯಸ್ ಡಿಲೈಟು! ತಪ್ಪಿದರೆ ಬದುಕೇ ಸಾರ್ರೋ ರೂಟು! ಕಲ್ಲಿನರಮನೆ ತೋರದು ದಯಾ ದಾಕ್ಷಿಣ್ಯಾನ
ಅನ್ನೋದೇ ಡಯಾನಳ ಫೇರಿಟೇಲ್ ಸಾರೋ ಅಂಶ!
ಅಯ್ಯಯ್ಯೋ ಭೂತ ಯ್ಯನ ಮೊಮ್ಮಗ?
ಬದುಕಿನಲ್ಲಿ ಏಕ್ಸ್ತ್ರಾರ್ಡಿ ನರಿಯಾಗಿ ಉಪಾಯದಿಂದ ಬದುಕುವುದನ್ನು ‘ಅಯ್ಯು’ಗೆ ಹೇಳಿ ಕೊಟ್ಟವನೇ ಭೂತಯ್ಯ. ಅಯ್ಯುಗೆ ಭೂತನಿರ್ದಯೆ ಹಿಡಿಸಿತೋ ಇಲ್ಲವೋ ಗೊತ್ತಿಲ್ಲಾ?
ಆದರೆ ಪ್ರಸ್ತುತ ಅಯ್ಯುನ ಮಗ ವರ್ತಮಾನಪ್ಪನಿಗೆ ಅಜ್ಜ ನೆಟ್ಟ ಆಲವೇ ಆಪ್ಯಾಯಮಾನ!
end ಗುಟುಕು
ಸುಮ್ ಮನೆ ಕೂರು – ಬೆಟರ್ ದ್ಯಾನ್ ಕ್ಯೂರು?
ಅಪ್ರಾಮಾಣಿಕ ವ್ಯಕ್ತಿಗಳಿಗೆ ಅಧಿಕಾರ, ಜವಾಬ್ದಾರಿ ಕೊಟ್ಟು, ಅವರು ಅದನ್ನ ದುರುಪಯೋಗ ಪಡಿಸಿಕೊಂಡು ಭ್ರಷ್ಟರಾದಾಗ ‘ದೆ ಆರ್ ಅರೆಸ್ಟೆಡ್’ ಅನ್ನುವ ಸನ್ನಿವೇಶ ಸೃಷ್ಟಿಸಿಕೊಳ್ಳುವುದಕ್ಕಿಂತಲೂ, ಮೊದಲೇ ಅಂತ ವ್ಯಕ್ತಿಗಳ ಇಂಟೆಗ್ರಿಟಿ, ಯೋಗ್ಯತೆಗಳನ್ನು ತಿಳಿದುಕೊಂಡು, ‘ದೆ ಆರ್ ರೆಸ್ಟೆಡ್’ ಅನ್ನೋ ಮಾನದಂಡವನ್ನು ಬಳಸಿದರೆ, ಹೀಗೆ ಧಂಡವಾಗುವ ಮಾನಗಳನ್ನು ಉಳಿಸಬಹುದಲ್ಲವೇ?








0 Comments