ಪನ್ ಟಾಸ್ stick- fun ಟಾಸ್ಸ್ಟಿಕ್
ಅತ್ತಕಡೆ ‘ಸ್ವಾಮಿದೇವನೆ ಲೋಕಪಾಲನೆ ಅಂತ ‘ ಅಣ್ಣಾ, ಹಜಾರ್ ಬಾರಿ ದೇನಿಸುತ್ತಿದ್ದರೂ, ಇತ್ತಕಡೆ, “ಈ ಲೋಕಪಾಲ್ ‘ಬಿಲ್ಲಿಂದ ‘
ಏನೂ ಆಗುವುದಿಲ್ಲ ,ಅಪಜಯ ಕಟ್ಟಿಟ್ಟ ಬುತ್ತಿ ” ಅಂತ ತಿರುಗು ಬಾಣ ಬಿಡ್ತಿರೋ digವಿಜಯಾದಿ ಸಿಬಲ್ ಗಳು ಒಳ್ಳೆ ಕಪಿಲ್ ಥರಾ ಆಡ್ತ್ಹಿದ್ದಾರಲ್ಲ? “ರಿಯಲಿ ಅಷ್ಟು ರೆಸ್ಪಾನ್-ಸಿಬಲ್ ಅಲ್ಲಾ ” ಅಂತಾರೆ ಸಿಬಿಲ್ ಸೊಸೈಟಿ ರೆಬೆಲ್ ಗಳು.
ಕಾಸ್ ಆಫ್ ವರಿ : ಕಾಸೇ ವರಿ!
ಹುಲು ಮಾನವರ ‘ಕಾಸ್ ಆಫ್ ವರಿ’ಗೆ ಅರ್ಥಾ ತ್, ಕಷ್ಟ ಕಾರ್ಪಣ್ಯಗಳಿಗೆ ಏನು ಕಾರಣ? ಅವಕ್ಕೆಲ್ಲ ಪರಿಹಾರವೇನು ? ಎಂಬಿತ್ಯಾದಿ ವಿಚಾರಗಳ ಬಗ್ಗೆ ಗಹನವಾಗಿ ಚಿಂತನೆ ನಡೆಸಿ, ಲಕ್ಷಾಂತರ ಭಕ್ತರಿಗೆ, ಕೋಟ್ಯಂತರ ಪಡೆದು ಉಪದೇಶ ನೀಡಿದ ಗುರು , ತನ್ನ ಕೊನೆಯ ದಿನಗಳಲ್ಲಿ ಚಿಂತಾಕ್ರಾಂತನಾಗಿ ವರ್ರಿ ಮಾಡೋದಕ್ಕೆ ಕಾರಣ : ಆ ಶ್ರಮದಲ್ಲೂ ಶ್ರಮ ಪಟ್ಟು, ಬರ್ರಿ ಮಾಡಿದ್ದ ಅಪಾರ ಮನಿ ಮತ್ತು ಮೆಟೀರಿಯಲ್ಲೇ ? ಎನ್ನುವುದು ವಿಚಿತ್ರವಾದರೂ ‘ಸತ್ಯ’
ಹ್ಯಾ(ಗ್)ಬಿಟ್ಟು ಬದುಕೋದು?
ವಿಚಿತ್ರ ಪರಿಪಾಟಗಳು, ಅಥವಾ ಹ್ಯಾಬಿಟ್ಟುಗಳು ಮನುಷ್ಯರ ಬದುಕಿಗೆ ‘ ನೇತು’ ಬಿದ್ದಿರುವ ಪರಿಯೇ ಬೇರೆ.”ಬ್ಯಾಡ್ ಬಿಡ್ರಿ ಆ ಹ್ಯಾಬಿಟ್ “ಅಂದ್ರೆ , ಹ್ಯಾಂಗ್ ಇರೋದ್ರಿ ಅದ ಬಿಟ್ಟು, ಹಿಂದಿನಿಂದ ಬಂದ ರೂಡಿ ” ಅನ್ನೋ ಉತ್ತರವೂ ಹ್ಯಾಬಿಚುಯಲ್. ಹೀಗಾಗಿ, ಜೀವ ನವೇ, ದೇಹವೇ, ಚಟ ವಟಿಕೆಗಳ ಮಹಾಪುರ. ಕೆಲವು ಚಟಗಳನ್ತೂ ಕೊನೆಗೊಳ್ಳುವುದು ಕೊನೆಗೇ: ಒತ್ತಿ ಹೇಳಲೇಬೇಕಾದ ‘ಚಟ’ದ ಜೊತೆಗೇ! ಕೆಲಸಮಯ ಚಟಗಳನ್ನು ಬಿಟ್ಟರೂ, ಅಂಕೆ ತಪ್ಪಿದಾಗ,ಬಾಲ ಡೊಂಕೆ ಅಂತ ನಾಯಾ ಕ ಹೇಳಲಿ ಬಿಡ್ರಿ. ಹ್ಯಾಬಿಟ್ ಬಗ್ಗೆ,” HABIT ABIT BITAND IT ರಿಮೈನ್ಸ್” ಅಂತ ಹೇಳಿದ ಹಾಗೆ ಚಟಗಳನ್ನು ಕಳೆದು ‘ಕೊಳ್ಳೋ’ದಿರಲಿ, ಕಳೆದರೂ ಕೊಳ್ಳೋದೇ ಅಧಿಕ.
ನನ್ನ ಒಬ್ಬರು ಗೆಳೆಯರಿದ್ದಾರೆ. ಅವರಲ್ಲಿ ಅಭ್ಯಾಸಗಳ ಪರ್ಯಾಯವೇ ನಡೆದಿರುತ್ತೆ.
ಬೀಡಿ ಸೇದುತ್ತಿರುತ್ತಾರೆ. “ಛೇ, ಇದು ನಿಮಗೆ ತರವಲ್ಲ ತಗೀರಿ” ಅಂದರೆ, ಬೀಡಿ ಬಿಟ್ಟು ಸಿಗರೇಟ್ಗೆ ಬೆಂಕಿ ಬೀಳಿಸುತ್ತಾರೆ. ಸರ್ ಕ್ಯಾನ್ಸರ್, ಹುಷಾರ್! ಅಂತ ಹೆದರಿಸಿದರೆ, ಅದನ್ನು ಬಿಟ್ಟು ಗುಂಡ್ ಗೆ ಬಲಿಯಾಗಲು ತೊಡಗುತ್ತಾರೆ. ನಮಗೆ ವಿಪರೀತ ಸಿಟ್ಟು ಬನ್ದು ಬಾಯಿಗೆ ಬಂದಂತೆ ಜರೆದೆವೋ ,ಅವರ ಬಾಯಿಗೆ ಬಂತು ಅಂತಲೇ ‘ಜರದಾ’ಬೀಡಾ!
ಹ್ಯಾಗಿದೆ ಅದನ್ನು ಬಿಟ್ಟು, ಇದನ್ನು ಬಿಟ್ಟು ,ಇನ್ಯಾವುದೋ ಹ್ಯಾಬಿಟ್ಗೆ ಶರೀರವನ್ನು habitat ಮಾಡಿ ಕೊಲ್ಲುವ ಪರಿ!
end ಗುಟುಕು
“ಕೋಗಿಲೆ, ನಿನ್ನ ಸುಮಧುರ ಧ್ವನಿ ನನಗೆ ಬಲು ಇಷ್ಟ. ಒಮ್ಮೆ ಕುಹುಗೆಲೇ” ಅಂದಾಕ್ಷಣ “ಚಿಕ್ಕವ್ವೋ…, ಚಿಕ್ಕವ್ವೋ” ಅಂದು ಬಿಡ್ತದಾ? ಅದಕ್ಕೆ, ಸಂತ ಬಂದು ಹೇಳಬೇಕು, ಪ್ರೀತಿಯಿಂದ: ‘ವ-ಸಂತ’







0 Comments