ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸುಮಾ ಸುಧಾಕಿರಣ್ ಬರಹ ಓದಿದ ಮೇಲೆ…

ಅಂಧ ವಿದ್ಯಾರ್ಥಿಗಳಿಗೆ ಬದಲಿ ಬರಹಗಾರರಾಗಿ ಹೋದಾಗಿನ ತಮ್ಮ ಅನುಭವಗಳನ್ನು ಸುಧಾ ಸುಮಾಕಿರಣ್ ಬರೆದಿದ್ದರು. (ಆ ಲೇಖನ ಇಲ್ಲಿದೆ.)

ಆ ಲೇಖನಕ್ಕೆ ತುಂಬಾ ಒಳ್ಳೆಯ ಸ್ಪಂದನ ಬಂತು. ಈ ಸಮಸ್ಯೆಯನ್ನು ಹೇಗೆ ಎದುರಿಸಬಹುದು ಎಂದು ಪಂಡಿತಾರಾಧ್ಯರು ಬರೆದರು.

ಆಮೇಲೆ ನಾಗರಾಜ್ ಎನ್ನುವವರು ತಮ್ಮ ಅಂಧತ್ವಕ್ಕೆ ಸಡ್ಡು ಹೊಡೆದು ನಿಂತ ಬಗೆಯನ್ನು ಬರೆದರು. ಅವರ ಮನೋಭಾವಕ್ಕೆ ನಮ್ಮ ಸಲಾಂ.

ಅವರು ಸಮಸ್ಯೆಯನ್ನು ಎದುರಿಸಿದ ರೀತಿ ಇನ್ನೂ ಹಲವು ಮನಗಳಲ್ಲಿ ಆ ಮನೋಭಾವವನ್ನು ಬಿತ್ತಬಹುದು ಎಂದು ಅದನ್ನು ಒಂದು ಪ್ರತಿಕ್ರಿಯೆಯಾಗಿ ಪ್ರಕಟಿಸದೆ, ಲೇಖನವಾಗಿ ಪ್ರಕಟಿಸುತ್ತಿದ್ದೇವೆ.

ನಿಮ್ಮ ಮೆಚ್ಚುನುಡಿ ಅವರ ಬೆನ್ನು ತಟ್ಟಲಿ.

***

ಇಂತಹ ಪ್ರೋತ್ಸಾಹದ ಮಾತುಗಳೇ ನಾನು ಸಕಾರಾತ್ಮಕವಾಗಿ ಚಿಂತಿಸಲು ಪ್ರೇರಣೆಯಾಗಿದೆ

ನಾಗರಾಜ ಪಿ ವಿ

ಮೊದಲ ಬಾರಿ  scribe ಆಗಿ ಹೋಗಿದ್ದೆ ಎಂಬ ತಲೆಬರಹದಲ್ಲಿ ಸುಮಾ ಸುಧಾಕಿರಣ್ ರವರ ಬರವಣಿಗೆಗೆ ನಾಗರಾಜ ಪಿ ವಿ ಧನ್ಯವಾದ ಸೂಚಿಸಿದ್ದಲ್ಲದೆ ಈಗ ಅವಧಿಯಲ್ಲಿ ತಮ್ಮ ಜೀವನದ ವೃತ್ತಾಂತವನ್ನು ಹೇಳಿಕೊಳ್ಳುತ್ತಾ ಸುಧಾಕಿರಣ್ ರವರಿಗೆ ಧನ್ಯವಾದವನ್ನೂ ಹೇಳಿದ್ದಾರೆ. ಇದರಲ್ಲಿ ಮೊದಲು ನಾಗರಾಜೆ ಪಿ ವಿ ಯವರ ಪ್ರತಿಕ್ರಿಯೆ ನಂತರ ಅವರ ಕೆಲವು ಕಳೆದ ಘಟನೆಗಳು ನೆನಪುಗಳಿವೆ ಅವಧಿ ಆಪ್ತರಿಗೆ
ಗೌರವಾನ್ವಿತ ಸುಮ ಸುಧಾಕಿರಣ್ರವರೆ ನಮಸ್ಕಾರ, ತಾವು ಅಂಧರಿಗೆ ಸಹಾಯಕ ಬರಹಗಾರರಾಗಿ ಹೋಗಿ ಅಲ್ಲಿ ತಮಗಾದ ಅನುಭವದ ಕುರಿತು ಅವಧಿಯಲ್ಲಿ ಹಂಚಿಕೊಂಡ ವಿಚಾರವನ್ನು ನನ್ನ ಪೂಜ್ಯನೀಯ ಗುರುವರ್ಯರಾದ ಪಂಡಿತಾರಾಧ್ಯರು ನಾನು ಮೈಸೂರಿಗೆ ಹೋಗಿದ್ದಾಗ ತಮ್ಮ ಬರವಣಿಗೆಯನ್ನು ಓದಿ ಹೇಳಿದರು. ಅದನ್ನು ಓದಿಸಿಕೊಂಡಾಗ ತಮ್ಮ ಮೇಲೆ ಅತೀವ ಗೌರವಯುತವಾದ ಭಾವನೆ ನನ್ನಲ್ಲಿ ಮೂಡಿದೆ, ಆ ಕಾರಣಕ್ಕಾಗಿ ತಮ್ಮನ್ನು ಗೌರವಾನ್ವಿತರೆಂದು ಸಂಭೋಧಿಸಿರುವೆ. ಹೀಗೆ ನಿಮ್ಮನ್ನು ಗೌರವಿಸಲು ಕಾರಣ ದೃಷ್ಟಿ ಚೇತನರ ಕುರಿತಾಗಿ ತಮಗಿರುವ ಕಾಳಜಿ ನಿಜಕ್ಕೂ ಸ್ತುತ್ಯಾರ್ಹ. ಬರೆಯುವ ಸಂದರ್ಭದಲ್ಲಿ ತಾವು ಎದುರಿಸಿದ ಸವಾಲುಗಳು, ಮಾನಸೀಕವೇದನೆಯನ್ನು ನಾನು ಅರ್ಥಮಾಡಿಕೊಳ್ಳಬಲ್ಲೆ. ನಾನು ತಮ್ಮ ಪ್ರಾಮಾಣಿಕತೆಯನ್ನು ತುಂಬು ಮನಸ್ಸಿನಿಂದ ಸ್ವಾಗತಿಸುತ್ತೇನೆ. ತಾವು ಓರ್ವ ಅಂಧನಿಗೆ ಸಹಾಯಕ ಬರಹಗಾರರಾಗಿ ಹೋಗುವುದು ಒಂದು ಸಾರ್ಥಕ ಕಾರ್ಯ ಎಂದು ಭಾವಿಸಿ ಹೋದರೆ ಅಲ್ಲಿ ತಮಗೆ ನಿರಾಶೆಯಾಗಿರುವುದಕ್ಕೆ ವಯಕ್ತಿಕವಾಗಿ ನಾನು ವಿಶಾಧಿಸುತ್ತೇನೆ. ತಮ್ಮ ಕಾರ್ಯಕ್ಕೆ ನ್ಯಾಯ ದೊರಕಿಸಿಕೊಡುವಲ್ಲಿ ವಿಫಲನಾದೆನಲ್ಲ ಎಂಬುವುದನ್ನು ಕೊನೆಗೆ ಕಣ್ಣೀರು ಹಾಕುವ ಮುಖೇನ ತಾವು ತೀವ್ರವಾದ ಭಾವುಕರೆಂದು ತಿಳಿಯಿತು.
ತಮಗೆ ಶ್ರೀನಿವಾಸ್ರವರು ಅಂದರು ಎದುರಿಸುವ ಸಮಸ್ಯೆ ಹಾಗು ಸವಾಲುಗಳ ಬಗ್ಗೆ ಈಗಾಗಲೇ ಅವರ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ನನ್ನ ಗುರುಗಳಾದ ಪಂಡಿತಾರಾಧ್ಯರು ಸವಾಲುಗಳನ್ನು ಹೇಗೆ ಮೆಟ್ಟಿ ನಿಲ್ಲಬಹುದೆಂಬ ದೃಷ್ಟಾಂತವನ್ನು ವಿವರಿಸಿದ್ದಾರೆ.
ಇಷ್ಟೆಲ್ಲ ತಿಳಿಸಿದರೂ ನಾನು ತಮ್ಮ ಮುಂದೆ ಕೆಲವು ವಿಚಾರಗಳನ್ನು ತಿಳಿಸಬಯಸುತ್ತೇನೆ.
1. ಇಂದಿನ ತಾಂತ್ರಿಕ ಯುಗವು ಅಂಧರು ಹೆಚ್ಚಿನ ಪ್ರಮಾಣದಲ್ಲಿ ಸ್ವಾವಲಂಬಿಯಾಗುವಂತೆ ಮಾಡಿದೆ. ಅದನ್ನು ಸದ್ಬಳಕೆ ಮಾಡಿಕೊಳ್ಳುವಲ್ಲಿ ಅಂಧರು ಮುಂದಾಗಬೇಕು.
2. ತೊಂದರೆ, ಸಮಸ್ಯೆ, ಹಾಗು ಸವಾಲುಗಳು ಯಾರನ್ನು ಬಿಟ್ಟಿವೆ. ಇವುಗಳಿಗೆ ಸಾಮಾನ್ಯರು ಹಾಗು ವಿಶೇಷ ಚೇತನರು ಎಂಬ ಭೇಧವಿಲ್ಲ. ನನಗೆ ಸಮಸ್ಯೆ ಇದೆ, ನಾನು ಅದನ್ನು ಎದುರಿಸಲಾರೆಎಂಬ ಅಸಹಾಯಕತೆಯನ್ನು ಬಿಟ್ಟು ಸಮಸ್ಯೆಯನ್ನು ಸವಾಲಾಗಿ ಸ್ವೀಕರಿಸಿ ಮೆಟ್ಟಿನಿಲ್ಲುವ ಧೈರ್ಯ ಮಾಡಬೇಕು.
3. ನಮ್ಮ ಸಮಸ್ಯೆಗಳಿಗೆ ಕೊರಗುವುದಾಗಲಿ, ವ್ಯವಸ್ಥೆಯನ್ನು ದೂರುವುದಾಗಲಿ ಮಾಡದೆ ವ್ಯವಸ್ಥೆಯನ್ನು ಸರಿಪಡಿಸುವುದರತ್ತ ಗಮನಹರಿಸಬೇಕು.
4. ಆ ಕಾರ್ಯವನ್ನು ನಿರ್ವಹಿಸಲು ನನಗೆ ಸಾಧ್ಯವಿಲ್ಲವೆಂದಮೇಲೆ ಅನವಷ್ಯಕವಾಗಿ ಆ ಕೆಲಸದತ್ತ ಪ್ರಯತ್ನ ಮಾಡುವುದರಲ್ಲಿ ಯಾವ ಅರ್ಥವಿದೆ. ಒಂದುವೇಳೆ ಅದೃಷ್ಟದಿಂದ ಅದು ಲಭಿಸಿದರೂ ಅದನ್ನು ನಾನು ಪ್ರಾಮಾಣಿಕವಾಗಿ ನಿರ್ವಹಿಸಲು ಸಾಧ್ಯವೇ?
5. ಸಮಾಜ, ಶಾಲಾ ಕಾಲೇಜು ಹಾಗು ವಿವಿಯ ಶಿಕ್ಷಕರು, ನಿಮ್ಮಂಥ ಸಹೃದಯಿಗಳು ವಿಶೇಷ ಚೇತನರನ್ನು ಸಮಾಜದ ಮುಖ್ಯವಾಹಿನಿಗೆ ತರಬೇಕು ಎಂದು ಚಿಂತಿಸಿ ಸಹಾಯ ಹಸ್ತವನ್ನು ಚಾಚಿದಾಗ ಅದನ್ನು ಅತ್ಯಂತ ಯಶಸ್ವಿಯಾಗಿ ಬಳಸಿಕೊಳ್ಳುವ ಕೌಶಲವನ್ನು ಬೆಳೆಸಿಕೊಳ್ಳಬೇಕು.
6. ನಾನು ತೆರದ ಮನಸ್ಸಿನಿಂದ ಹೇಳುವುದಾದರೆ ಸಾಮಾನ್ಯ ಮಕ್ಕಳಿಗಿಂತ ವಿಶೇಷ ಮಕ್ಕಳಿಗೆ ಹೆಚ್ಚಿನ ಸೌಲಭ್ಯ ಹಾಗು ಸಹಕಾರ ದೊರೆಯುತ್ತಿವೆ. ಆದರೆ ಅದನ್ನು ಅಂಧರು ಸಮರ್ಥವಾಗಿ ಬಳಸಿಕೊಳ್ಳುವಲ್ಲಿ ವಿಫಲರಾಗಿ ತಮ್ಮ ಅಸಹಾಯಕತೆಯೊಂದಿಗೆ ಉಡಾಫೆಯ ಸಬೂಬುಗಳನ್ನು ಕೊಟ್ಟು ನುಣಿಚಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ.
7. ಸುಮಾರವರೆ ತಾವು ನನ್ನ ಗುರುಗಳನ್ನು ಉದ್ದೇಶಿಸಿ ನಿಮ್ಮಂಥ ಗುರುಗಳಿದ್ದರೆ ಇವರ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಬಹುದು ಎಂಬರ್ಥದಲ್ಲಿ ಹೇಳಿರುವಿರಿ. ಇಂತಹ ಗುರುಗಳಾಗಲಿ, ನಿಮ್ಮಂಥ ಸಹೃದಯಿಗಳಾಗಲಿ ಎಲ್ಲೆಡೆಯೂ ಸಿಗುತ್ತಾರೆ. ಅಂತವರ ನೆರವನ್ನು ಸಮರ್ಥವಾಗಿ ಬಳಸಿಕೊಳ್ಳಬೇಕು. ಅದಕ್ಕೆ ನಾನೇ ಜ್ವಲಂತ ನಿದರ್ಶನ.
8.ಇದು ನನ್ನಉತ್ಪ್ರೇಕ್ಷೆಯ ಮಾತಲ್ಲ. ನಾನು K. P. S. C. ನಡೆಸಿದ S D A, F D A, ಹಾಗು K A S ನಂತಹ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ genral merit ನಲ್ಲಿ ಆಯ್ಕೆಯಾಗಲು ನನ್ನ ಗುರುಗಳ ಹಾಗು ವಸುಮಥಿ ಎಂಬ ನಿವೃತ್ತ ಬ್ಯಾಂಕ್ ಉದ್ಯೋಗಿಯವರು ನಿರಂತರವಾಗಿ ನನಗೆ ಓದಿಕೊಟ್ಟು ಸದಾ ನನ್ನನ್ನು ಪ್ರೋತ್ಸಾಹಿಸಿ ನನ್ನ ಅಭಿವೃದ್ಧಿಗೆ ಕಾರಣವಾದರು. ಇವರ ನೆರವಿನಿಂದಲೇ ನಾನು U G C ನಡೆಸುವ N E T ಪರೀಕ್ಷೆಯಲ್ಲಿ J R F ನೊಂದಿಗೆ ಉತ್ತೀರ್ಣನಾದೆ.
9. ನಾವು ಯಾವ ಕೆಲಸವನ್ನೇ ಮಾಡಲಿ ಮೊದಲು ಆಸಕ್ತಿ ಇರಬೇಕು, ಆ ನಿಟ್ಟಿನಲ್ಲಿ ಚಿಂತನೆ ಮಾಡಬೇಕು. ನನಗೆ ಶಿಕ್ಷಣ ರಂಗದಲ್ಲಿ ಆಸಕ್ತಿ ಇದ್ದರಿಂದ ಬರವಣಿಗೆಯನ್ನು ನಾನೇ ಬರೆಯುವಂತಾದರೆ ಹೇಗೆ ಎಂದು ಯೋಚಿಸಿ ಗಣಕದಲ್ಲಿ ಬರೆಯುವುದನ್ನು ರೂಢಿಸಿಕೊಂಡೆ.
10. ಹಾಗೆಂದು ನಾನೇ ಶ್ರೇಷ್ಟ ಎಂಬ ಬಿಗುಮಾನವಲ್ಲ, ನಮ್ಮಿಂದಾಗುವ ಕೆಲಸದ ಕಡೆಗೆ ಹೆಚ್ಚು ಶ್ರಮವಹಿಸಿ ದುಡಿದರೆ ಖಂಡಿತವಾಗಿಯೂ ಯಶಸ್ಸು ಗಳಿಸಬಲ್ಲೆವು ಎಂಬ ಆತ್ಮವಿಶ್ವಾಸ.
ಇದಕ್ಕೆ ತಮ್ಮ ಅಭಿಪ್ರಾಯ ತಿಳಿಸುವಿರ
ಇಂತಿ ತಮ್ಮ ವಿಶ್ವಾಸಿ
ನಾಗರಾಜ ಪಿ. ವಿ.
ಇನ್ನು ನನ್ನ ಬಗ್ಗೆ ಬರೆಯುವುದಾದರೆ.
My name is Nagraja P V. I was born on 10th October 1986 in a small town Siriguppa, Bellary District of Karnataka State. My father late V. Pampanna Gowda was a farmer working on five acres of land which he owned. My mother Sharadamma is a tailor, working for an N.G.O.
Of the five children we siblings are, my younger brother and I are visually impaired. My sisters however, fortunately have no problem with their vision. I was born partially blind with vision less than 50. My mother had me admitted to a regular school Vijay Mary School, Siriguppa , where I completed my Primary education. However by the age of ten I went completely blind. My mother admitted me to a special school, Government. Boys Blind School, Hubli, where I had to start all over again from the first standard.
I completed my seventh standard in 2003 from the same school and secured 89% in the public examination, standing first in my school. For my High School education I joined Arroda Education Society in Hubli, which is an institution run by an N.G.O. I completed my SSLC in 2006 , securing 86.24% and stood First in the division of Hubli, in the Special Schools Category.
As a student I took part in a drama “Manku Buddhigalu” for which I won the best actor award and I deem it an honour that I received the prize from none other than the late Gangu Bai Hangal.
I joined directly the II PUC course as an external student , as I had already lost four years in Primary School. I went on to secure 80%. It was during the same period that I did my bit of social work by helping admit some Blind students to school . This was spotted and highlighted by a local newspaper, which in turn was seen and read by the then Secretary to the Governor of Karnataka, His Excellency T.N. Chaturvedi, in 2007. He  recommended me for the Governor’s award for both my academic excellence as well as my mite to social work. When I received the award , I replied in a short speech which I believe was appreciated , because he came over and told me that if I wanted to shine I must pursue my higher education at Maharaja’s College, Mysore, of which he too was an alumnus.
Heeding his suggestion I joined Maharaja’s College, a constituent college of the University of Mysore. I opted for History, Kannada and Linguistics.
I had a fruitful and enriching experience and took part in extra curricular activities. I picked up many prizes in Kannada Debate Competitions as well as other competitions which were oral in nature. I completed my BA in 2010 securing an aggregate of 70.5% . I won the Javarae Gowda Gold Medal for securing the highest marks in Linguistics, securing 87%. The same year I joined the MA (Kannada) course in the University of Mysore, IKS , and passed with an aggregate of 88.24% . at the same year I got third rank of all the kannada deportments of Mysore university. I must mention that I am the first student in the history of the University of Mysore and in Karnataka State to write my examinations without the aid of a scribe.
Instead, I used technology like NVDA, e speak , JAWS and so on. This enabled my examiners to read what I wrote.
Having completed my Master’s I now started appearing for FDA ,SDA and KAS competitive examinations. I passed both FDA and SDA examinations and cleared the KAS mains too. Currently I am working as a First Division Assistant in Siriguppa Government Hospital.
I cleard for NET as well as J R F examinations to make me eligible to teach in a college. I also intend pursuing my Ph.D, shortly. Topic was “pampana kaavyagalalli prabhutvada parikalpane”
My contact number is 9620169867.
My e mail id is nagrajvarapet@gmail.com
Thank you.
Nagraja P V.
 
 

‍ಲೇಖಕರು avadhi

14 March, 2014

12 Comments

  1. ಸುಮ ಸುಧಾಕಿರಣ್

    ನಮಸ್ಕಾರ ನಾಗರಾಜ ಅವರೆ. ತಮ್ಮ ಪ್ರತಿಕ್ರಿಯೆಯನ್ನು ಓದಿ ತುಂಬ ಸಂತೋಷವಾಯಿತು . ಇಂತಹ ಆತ್ಮವಿಶ್ವಾಸ , ಛಲ , ಸ್ವಾಭಿಮಾನ ನಿಜಕ್ಕೂ ಮಾದರಿಯಾದುದು . ನಿಜ ನೀವೆಂದಂತೆ ತೊಂದರೆಗಳು ಯಾರನ್ನೂ ಬಿಟ್ಟಿಲ್ಲ , ಅದನ್ನೆಲ್ಲ ಮೀರಿ ನಿಲ್ಲುವ ವಿಶ್ವಾಸ ಇದ್ದಾಗ ಜಯ ಖಂಡಿತ. ಇದಕ್ಕೆ ನೀವೆ ಸಾಕ್ಷಿ . ನಿಮ್ಮ ಈ ಸಾಧನೆ ಇಂತಹ ಅನೇಕರಿಗೆ ಸ್ಫೂರ್ತಿಯಾಗಬಲ್ಲದು . ನೀವು ಆಧುನಿಕ ಸೌಲಭ್ಯಗಳನ್ನು ಬಳಸಿಕೊಂಡು ಸ್ವಂತ ಪರೀಕ್ಷೆ ಬರೆದದ್ದು ತುಂಬ ಒಳ್ಳೆಯ ಹೆಜ್ಜೆಯೆನ್ನಿಸಿತು. ಈ ವಿಧಾನವನ್ನು ಪ್ರತಿಯೊಬ್ಬ ದೃಷ್ಟಿಮಾಂದ್ಯ ಅಭ್ಯರ್ಥಿಯೂ ಉಪಯೋಗಿಸುವಂತಾದಾಗ ನಾನು ಹೇಳಿದ ಸಮಸ್ಯೆಗೆ ಪರಿಹಾರ ದೊರಕಬಹುದು.
    ಇನ್ನು ನೀವು ನನ್ನ ಬಗ್ಗೆ ಹೇಳಿರುವ ಒಳ್ಳೆಯ ನುಡಿಗಳಿಗೆ ಧನ್ಯವಾದ . ಏನೋ ನನ್ನ ಮಿತಿಯಲ್ಲಿ ಸಮಾಜದ ಋಣವನ್ನು ತೀರಿಸುವ ಪ್ರಯತ್ನವಷ್ಟೇ , ಆದರೆ ವ್ಯವಸ್ಥೆಯ ಲೋಪದೋಷಗಳನ್ನು ನೋಡಿ ಅಂದು ಒಂದು ರೀತಿಯಲ್ಲಿ ಭ್ರಮನಿರಸನವಾಗಿತ್ತು . ಆದರೆ ನಿಮ್ಮಂತವರ ಸಾಧನೆಯ ಬಗ್ಗೆ ತಿಳಿದಾಗ ಇನ್ನಷ್ಟು ಇಂತಹ ಕೆಲಸ ಮಾಡಲು ನನಗೂ ಸ್ಪೂರ್ತಿ ಸಿಕ್ಕಿದೆ . ಧನ್ಯವಾದಗಳು .
    Reply

    • Nagaraj P V

      ಸುಮ ಸುಧಾಕಿರಣ್ ಮೇಡಂರವರೆ ನನ್ನ ಅಭಿಪ್ರಾಯಕ್ಕೆ ತಾವು ಪ್ರತಿಕ್ರಿಯಿಸಿದ್ದನ್ನು ಓದಿ ತುಂಬಾ ಸಂತೋಷವಾಯಿತು. ಮೇಲಾಗಿ ತಾವು ಕರೆ ಮಾಡಿ ನನ್ನ ಅಲ್ಪ ಸಾಧನೆಯನ್ನು ಬೆಂಬಲಿಸಿದಾಗ ನನ್ನೊಳಗೆ ನಾನೇ ಪುಳಕಗೊಂಡೆ. ತಮ್ಮ ಬರವಣಿಗೆಯಲ್ಲಿ ಸಮಾಜಕ್ಕೆ ತಮ್ಮದೊಂದು ಸೇವೆ ಎಂಬ ವಿನೀತ ನುಡಿಗಳನ್ನು ಹೇಳಿರುವಿರಿ. ಸಮಾಜದ ಜನರು ನನಗಾಗಿ ಇಷ್ಟೆಲ್ಲ ಶ್ರಮಿಸುತ್ತಿರುವಾಗ ಸಮಾಜಕ್ಕಾಗಿ ನಾನೂ ಏನಾದರೂ ಕೊಡಬೇಕೆಂದು ಯೋಚಿಸಿ ನನ್ನ ಪದವಿ ಪೂರ್ವ ಹಂತದಿಂದಲೇ ಅವಷ್ಯಕತೆ ಇರುವವರಿಗೆ ಉಚಿತ ರಕ್ತ ಧನದಲ್ಲಿ ತೊಡಗಿಸಿಕೊಂಡಿರುವೆ. ಇಲ್ಲಿಯವರೆಗೂ ಸುಮಾರು 21 ಬಾರಿ ರಕ್ತಧನ ಮಾಡಿರುವೆ. ಅದರ ೃಣವನ್ನು ಅಲ್ಪಮಟ್ಟಿಗೆಯಾದರೂ ತೀರಿಸಬೇಕೆಂಬ ಾಸೆಯಿಂದ ಈ ಕಾರ್ಯದಲ್ಲಿ ತೊಡಗಿರುವೆ. ಇದಕ್ಕೆ ನನ್ನ ಗುರುಮಾತೆಯಾದ ವಸುಮಥಿ ಮೇಡಂ ಪ್ರೇರಣೆ. ವಾಸ್ತವವಾಗಿ ಅವರು ಆಸ್ತಮ ಕಾಯಿಲೆಯಿಂದ ಬಳಲುತ್ತಿದ್ದರೂ ಪ್ರತಿ ನಿತ್ಯ ದಿನದ ಮೂರು ಘಂಟೆ ನನಗೆ ನನ್ನ ಪಠ್ಯ ವಿಷಯವನ್ನು ಓದಿ ಹೇಳುತ್ತಿದ್ದರು. ಒಂದು ದಿನ ಅವರಿಗೆ ಮೇಡಂ ನೀವು ಯಾವುದನ್ನು ಅಪೇಕ್ಷಿಸದೇ ನಮ್ಮಂಥ ಸಾಕಷ್ಟು ಅಂಧರಿಗೆ ಉಚಿತವಾಗಿ ಓದುತ್ತಿರುವಿರಲ್ಲ ೆಂದು ಕೇಳಿದಾಗ ಅವರು ನಾಗರಾಜ ಾ ಭಗವಂತ ನಮ್ಮನ್ನು ಭೂಮಿಯ ಮೇಲೆ ಇರುವಂತೆ ಮಾಡಿರುವುದು ಯಾವುದೋ ರೀತಿಯಲ್ಲಿ ಸಮಾಜ ಸೇವೆ ಮಾಡಿ ನಿನ್ನ ಜೀವನ ಸಾರ್ಥಕಗೊಳಿಸಿಕೊ ಎಂದು ಹಾಗಾಗಿ ನಾನು ಈ ಕೆಲಸದಲ್ಲಿ ನಿರತಳಾಗಿದ್ದೇನೆ ಎಂದು ಹೇಳಿದರು. ಅವರ ೀ ಮಾತಿನಿಂದ ಪ್ರೇರೇಪಿತನಾದ ನಾನು ರಕ್ತಧಾನದಲ್ಲಿ ತೊಡಗಿಸಿಕೊಂಡಿರುವೆ. ಮತ್ತೊಬ್ಬ ಪೂಜ್ಯರಾದ ಪಂಡಿತರು ನಾನು ಸತ್ತ ಮೇಲೆ ಈ ದೇಹ ಮಣ್ಣಾಗುವುದಕ್ಕಿಂತ ಮತ್ತೊಬ್ಬರಿಗೆ ಪ್ರಯೋಜನವಾಗಲಿ ಎಂಬ ುದ್ದೇಶದಿಂದ ನಾನು ಸತ್ತ ಮೇಲೆ ನನ್ನ ದೇಹದ ಉಪಯೋಗಕ್ಕೆ ಬರುವ ಅಂಗಗಳನ್ನು ಧಾನವಾಗಿ ನೀಡಲು ಇಚ್ಚಿಸಿ ಸಹಿ ಮಾಡಿರುವೆ ಎಂದು ಒಂದು ಸಂದರ್ಭದಲ್ಲಿ ಹೇಳಿದ್ದರು. ಅವರ ಮಾತಿನಿಂದ ಸ್ಪೂರ್ತಿಗೊಂಡ ನಾನೂ ಕೂಡ ಅವರಂತೆ ನಡೆಯಲು ನಿರ್ಧರಿಸಿರುವೆ. ಇಷ್ಟೆಲ್ಲ ಹೇಳಲು ಕಾರಣವಾದದ್ದು ತಾವು ಬರವಣಿಗೆಯಲ್ಲಿ ಹಾಗು ನನಗೆ ಕರೆ ಮಾಡಿದಾಗಲೂ ಸಮಾಜದ ಕುರಿತು ತಮಗಿರುವ ಕಾಳಜಿಯನ್ನು ತಿಳಿಸಿದಾಗ ನನಗೂ ಇಂತಹ ಮಾತುಗಳೇ ಶಕ್ತಿ ತುಂಬಿದವು ಎಂದು ಹೇಳುವ ುದ್ದೇಶದಿಂದ ೀ ಮಾತುಗಳನ್ನು ಹೇಳಿರುವೆ. ನಿಮ್ಮಂಥ ಪ್ರೋತ್ಸಾಹಕರ ಮಾತುಗಳೇ ನನಗೆ ಪ್ರೇರಣೆ.
      ಧನ್ಯವಾದಗಳೊಂದಿಗೆ
      ನಿಮ್ಮ ನಾಗರಾಜ ಪಿ. ವಿ.

  2. Tejaswini Hegde

    ತುಂಬು ಹೃದಯದ ಅಭಿನಂದನೆಗಳು ನಾಗರಾಜ್ ಅವರೆ ನಿಮ್ಮ ಸಾಧನೆಗೆ, ಛಲಕ್ಕೆ, ಸ್ಥೈರ್ಯಕ್ಕೆ ಮತ್ತು ಆತ್ಮವಿಶ್ವಾಸಕ್ಕೆ. ನಿಮ್ಮ ಬದುಕು ಇತರರಿಗೆ ಮಾದರಿಯಾಗಿದೆ. ಈ ಧೈರ್ಯ ಸದಾ ಕಾಲ ಹೀಗೇ ಇರಲಿ ಎಂದು ಹಾರೈಸುವೆ.
    ಆದರಾಭಿಮಾನಗಳೊಂದಿಗೆ,
    ತೇಜಸ್ವಿನಿ.

    • Nagaraj P V

      ತೇಜಸ್ವಿನಿ ಹೆಗಡೆಯವರೆ ನಮಸ್ಕಾರ, ತಾವು ನನ್ನನ್ನು ಅಭಿಮಾನಿಸಲು ಕಾವ್ಯಾತ್ಮಕ ಭಾಷೆಯನ್ನು ಬಳಸಿದ್ದಕ್ಕೆ. ಮೂಲತಹ ಭಾಷಾ ವಿಜ್ಞಾನದ ವಿದ್ಯಾರ್ಥಿಯಾದ ನಾನು ಹೃದಯದ ಮಾತುಗಳು ಯಾವರೀತಿ ಇರುತ್ತವೆ ಎಂದು ತಮ್ಮ ಬರವಣಿಗೆಯಿಂದ ಗ್ರಹಿಸಿದೆ. ತಮ್ಮ ಅನಿಸಿಕೆಯನ್ನು ಓದಿದಾಗ ಖಂಡಿತವಾಗಿಯೂ ನನ್ನ ಹೃದಯತುಂಬಿ ಬಂತು. ಕಾರಣ ನನ್ನ ಅಲ್ಪ ಸಾಧನೆಗೆ ಇಂತಹ ಪ್ರತಿಕ್ರಿಯೆಗಳು ಬರುತ್ತವೆ ಎಂದು ನಾನು ನಿರೀಕ್ಷಿಸಿರಲಿಲ್ಲ. ನನ್ನ, ನಿಮ್ಮ ಹಾಗು ಅವಧಿಯವರ ಭಾವ ಮೈತ್ರಿ ಹೀಗೆಯೇ ಇರಲಿ ಎಂಬ
      ಸದಾಶಯದೊಂದಿಗೆ
      ನಿಮ್ಮ ನಾಗರಾಜ ಪಿ. ವಿ.

  3. Swarna

    ನಾಗರಾಜ್ ಅವರಿಗೆ ಅಭಿನಂದನೆಗಳು.

    • Nagaraj P V

      ಸ್ವರಣರವರೆ ತಮ್ಮ ಪ್ರತಿಕ್ರಿಯೆಗೆ ಧನ್ಯವಾದ. ತಮ್ಮ ಪ್ರೋತ್ಸಾಹ ಿತರರಿಗೂ ಪ್ರೇರಣೆಯಾಗಲಿ ಎಂಬ ಾಶಯ.

  4. bharathi b v

    ಕಣ್ಣಿರುವ ನಾವು ನಾಚುವಂತಿದೆ ನಿಮ್ಮ ಸಾಧನೆ … ತುಂಬ ಸಂತೋಷವಾಯ್ತು ನಿಮ್ಮ ಬಗ್ಗೆ ತಿಳಿದು…

    • Nagaraj P V

      ಭಾರತಿಯವರೆ ನಮಸ್ಕಾರ, ತಾವು ನನ್ನ ಲೇಖನವನ್ನು ಓದಿ ತಮ್ಮ ಪ್ರತಿಕ್ರಿಯೆಯನ್ನು ತಿಳಿಸಿದ್ದಕ್ಕೆ. ವಯಕ್ತಿಕವಾಗಿ ಹೇಳುವುದಾದರೆ ಪ್ರತಿಯೊಬ್ಬರೂ ಸಕಾರಾತ್ಮಕವಾಗಿ ಆಲೋಚಿಸಿದರೆ ಎಂತಹ ದುರ್ಘಮವಾದ ಸಮಸ್ಯೆಯನ್ನು ನೀಗಬಹುದು. ನಿಮ್ಮ ಅಭಿಮಾನಕ್ಕೆ ಧನ್ಯವಾದ.

  5. Anil Talikoti

    ಇದೊಂದು ಅತ್ಯುತ್ತಮವಾದ ಪ್ರಾಮಾಣಿಕ ಬರಹ. ಎಲ್ಲ ವ್ಯವಸ್ತೆಗಳ ಬಗ್ಗೆ ಒಂದು ತೆರನಾದ ಕಹಿ ಭಾವನೆ ಬರುವ ಸಂಭವಗಳೆ ಹೆಚ್ಚಿರುವಾಗ -ಒಬ್ಬ ವ್ಯಕ್ತಿಯ ಆತ್ಮವಿಶ್ವಾಸ ಹಾಗೂ ಅವಿರತ ಶ್ರಮದಿಂದ ಎಲ್ಲ ರಂಗಗಳಲ್ಲೂ ಜಯಶಾಲಿಯಾಗುವ ಸಂದೇಶ ಅಪ್ರತಿಮವಾದದ್ದು. ಸುಧಾ ಸುಮಾಕಿರಣ್ ರ ಬರಹ ಅದಕ್ಕೆ ಪ್ರತಿಯಾದ ಈ ಬರಹ ಒಂದು ಸುಂದರ ಕಾವ್ಯ ಓದಿದಂತಿದೆ. ನಾಗರಾಜ್ ಅವರಿಗೆ ನನ್ನ ಹೃದಯ ತುಂಬಿದ ಅಭಿನಂದನೆಗಳು.
    -Anil

    • Nagaraj P V

      ಅನಿಲ್ ತಾಳಿಕೋಟೆಯವರೆ ನನ್ನ ಬಗ್ಗೆ ತಮಗಿರುವ ಅಭಿಮಾನಕ್ಕೆ ಧನ್ಯವಾದ. ನನ್ನ ಪದವಿ ಪೂರ್ವ, ಪದವಿ, ಸ್ನಾತಕೋತ್ತರ ಹಂತದಲ್ಲಿ ನನ್ನ ವಿದ್ಯಾಭ್ಯಾಸವು ವಸತಿ ನಿಲಯಗಳಲ್ಲಿ ನಿಮ್ಮಂತ ಸ್ನೇಹಿತರೊಂದಿಗೆ ಸಾಗಿತ್ತು. ಆ ಸಂದರ್ಭಗಳಲ್ಲಿ ಪ್ರತಿಯೊಬ್ಬ ಸ್ನೇಹಿತರು ಪ್ರತಿ ಘಂಟೆಗೆ ಒಬ್ಬರಂತೆ ಪತ್ರಿಕೆ, ಸಾಮಾನ್ಯ ಜ್ಞಾನ ಹಾಗು ಪಠ್ಯದ ವಿಷಯಗಳನ್ನು ಓದಿ ಹೇಳಿ ನನ್ನ ಜ್ಞಾನಾಭಿವೃದ್ಧಿಗೆ ನೆರವಾದರು. ಅಂತಹ ಸ್ನೇಹಿತರು ಎಂದಿಗೂ ನನ್ನ ಹೃದಯದಲ್ಲಿ ಚಿರಸ್ಥಾಹಿಯಾಗಿ ನೆಲೆಗೊಂಡಿರುವರು. ನಿಮ್ಮ ಬರವಣಿಗೆಯನ್ನು ಓದಿದಾಗ ಾ ನನ್ನ ಗೆಳೆಯರು ನೆನಪಾದರು. ನನ್ನ ಗುರುವರ್ಯರು ನನಗೆ ಜೀವಮಾನದ ುದ್ದಕ್ಕೂ ಮರೆಯಲಾರದ ೊಂದು ಪಾಠವನ್ನು ಕಲಿಸಿರುವರು, ಅದೆನಂದರೆ ಯಾವಾಗಲೂ ಆಶಾವಾಧಿಯಾಗಿರು ಎಂಬ ಮಾತು ಸದಾ ಈ ಚಿಂತನೆಯಲ್ಲಿ ನಡೆದರೆ ನಮ್ಮ ವ್ಯವಸ್ಥೆಯನ್ನು ಸಂಪೂರ್ಣವಾಗಿ ಬದಲಾಯಿಸಲು ಸಾಧ್ಯವಿಲ್ಲದಿದ್ದರೂ ಅಲ್ಪಮಟ್ಟಿಗೆಯಾದರೂ ಸುಧಾರಿಸಬಹುದೆಂಬ ಭರವಸೆ.
      ಇದಕ್ಕೆ ತಾವೇನಂತಿರ?
      ಿಂತಿ ತಮ್ಮ ವಿಶ್ವಾಸಿ
      ನಾಗರಾಜ ಪಿ. ವಿ.

  6. shantha kumari

    ಅಭಿನಂದನೆಗಳು ನಾಗರಾಜ್ ರವರೆ ನಿಮ್ಮ ಜ್ಞಾನದ ಕಣ್ಣು ತೆರೆದಿದೆ ನೀವು ಅಂಧರಲ್ಲ. ಹೊರಗಿನ ಕಣ್ಣಿದ್ದೂ ಕುರುಡಾಗಿರುವ ಈ ಜಗತ್ತಿನಲ್ಲಿ ಎಷ್ಟೊಂದು ಸಕಾರಾತ್ಮಕ ಆಲೋಚನೆ ಹೊಂದಿರುವ ನೀವು ನಿಜಕ್ಕೂ ದಾರಿದೀಪವಾಗಿದ್ದೀರ. ನಿಮ್ಮ ಆತ್ಮವಿಶ್ವಾಸ ಸ್ವಾಭಿಮಾನ ಸ್ತುತ್ಯಾರ್ಹ. ನಿಮಗೆ ಶುಭವಾಗಲಿ

    • Nagaraj P V

      ಶಾಂತ ಕುಮಾರಿಯವರೆ ತಮ್ಮ ಅನಿಸಿಕೆಗೆ ಧನ್ಯವಾದ. ನಿಮ್ಮಂತವರ ಸಹಾಯ, ಸಹಕಾರ ಹಾಗು ಪ್ರೋತ್ಸಾಹದಿಂದಲೇ ಜ್ಞಾನವೆಂಬ ಸಾಗರದಲ್ಲಿ ಒಂದು ಹನಿ ನೀರನ್ನು ಮಾತ್ರ ಕುಡಿದಿರುವೆ ಎಂದು ಹೇಳಲು ಬಯಸುತ್ತೇನೆ. ಇನ್ನೇನು ಕೆಲವೇ ತಿಂಗಳಲ್ಲಿ ಶಿಕ್ಷಕನಾಗುವ ನಾನು ವಿದ್ಯಾರ್ಥಿಗಳಿಗೆ ನಾನು ಕಲಿತ ವಿದ್ಯೆಯನ್ನು ಧಾರೆ ಹೆರೆದು ಅವರನ್ನು ಸಕಾರಾತ್ಮಕವಾಗಿ ಯೋಚಿಸುವಂತೆ ಮಾಡಿ ದೇಶಕ್ಕಾಗಿ ಶ್ರಮಿಸುವಂತೆ ಉತ್ತೇಜಿಸುವೆ. ನಹಿ ಜ್ಞಾನೇನ ಸದೃಶಂ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading