ಇದು ಯಾರೋ ಬೇಕೆಂದಲೇ ಬರೆಸಿದ್ದು..

ಕೇಂದ್ರ ಸಾಹಿತ್ಯ ಅಕಾಡೆಮಿ ಇತ್ತೀಚೆಗೆ ಕಲಬುರ್ಗಿಯಲ್ಲಿ ‘ಸಮಕಾಲಿನ ಸಣ್ಣಕಥೆಗಳ ಓದು  ಮತ್ತು ಸಂವಾದ’ ಹಮ್ಮಿಕೊಂಡಿತ್ತು. ಬಸವರಾಜ ಡೋಣೂರು ಮತ್ತು ಮಹಾಂತೇಶ ನವಲಕಲ್ ಕಥೆಗಳನ್ನು ವಾಚಿಸಿದ್ದರು.

ಈ ಕುರಿತು ಕೆ ಎಂ ವಿಶ್ವನಾಥ ಮರತೂರ ಅವರು ಬರೆದ ಸಮೀಕ್ಷಾ ಬರಹ ‘ಅವಧಿ’ಯಲ್ಲಿ ಪ್ರಕಟವಾಗಿತ್ತು. ಅದು ಇಲ್ಲಿದೆ-

ಇದಕ್ಕೆ ಕಥೆಗಾರ ಮಹಾಂತೇಶ ನವಲಕಲ್ ಅವರು ಬರೆದ ಪ್ರತಿಕ್ರಿಯೆ ಇಲ್ಲಿದೆ-

ಸಣ್ಣ ಕಥೆಗಳ ಓದು ಒಂದು ಸ್ಪಷ್ಟನೆ

ಮಹಾಂತೇಶ ನವಲಕಲ್ 

ಬಾಳಾಸಾಹೇಬರು ನನ್ನನ್ನ ಈ ಕಮ್ಮಟಕ್ಕೆ ಆಯ್ಕೆ ಮಾಡಿಕೊಂಡಿರುವ ಬಗ್ಗೆ ಫೋನ್ ಮಾಡಿ ಅದರ ಆರ್ಗನೈಜರ್ ಬಗ್ಗೆ ನನಗೆ ತಿಳಿಸಿದಾಗ ನಾನು ಸ್ವಲ್ಪ ಹಿಂಜರಿದೆ. ಯಾಕೆಂದರೆ ಇವರೆಲ್ಲ ನನಗೆ ಬಹಳ ಆತ್ಮೀಯ ಗೆಳೆಯರು ಎಂದುಕೊಂಡರೂ ಅವರ ನಿಲವು ಮತ್ತು ನನ್ನ ನಿಲುವಿಗೆ ಸರಿಹೊಂದುವಂತಹದು ಆಗಿರಲಿಲ್ಲ. ನಾನು ಖಿನ್ನ ಮನಸ್ಸಿನಿಂದಲೇ ಭಾಗವಹಿಸಿದ್ದೆ.

ಡೋಣುರ್ ಅವರು ಕಥಾವಾಚನ ಮಾಡಿದ ನಂತರ ನಾನು ‘ಅಶ್ವಗಂಧದ ಹಾದಿ’ ಎನ್ನುವ ಕಥೆಯನ್ನು ಓದಿದೆ. ಅದು ಈ ದೇಶದಲಿ ವಿಸ್ತೃತವಾಗಿ 1960-1990 ರವರೆಗೆ ಬಹುವಾಗಿ ಆವರಿಸಿಕೊಂಡಿದ್ದ ಎಡ ಚಳುವಳಿಯನ್ನು ಪೋಸ್ಟಮಾರ್ಟಮ್ ಮಾಡುವ ಹಾಗು ಇಬ್ಬರು ಕಾಮ್ರೇಡುಗಳು ಕಲ್ಕತ್ತಾದ ಹೂಗ್ಲಿ ನದಿಯ ದಡದ ಮೇಲೆ ಕುಳಿತು ತಮ್ಮನ್ನು ತಾವು ಆತ್ಮ ವಿಮರ್ಶೆ ಮಾಡಿಕೊಳ್ಳುವ ಕತೆಯಾಗಿತ್ತು. ಅದರಲಿ ಬರುವ ಕನಸು ಒಂದು ರೂಪಕವಾಗಿ ಕಾರ್ಲ್ ಮಾರ್ಕ್ಸ್ ಕುದುರೆಯ ಮೇಲೆ ಬಂದು ಅಲ್ಲಿದ್ದ ಒಂದು ಜನಾಂಗವನ್ನು ಅಶ್ವಗಂಧದ ತೋಟಕೆ ಕರೆತರುವ ಪ್ರಯತ್ನದಲಿ ವಿಫಲನಾಗುವ ಕತೆ ಇದು.

ಕಥಾ ಓದು ಮುಗಿದ ನಂತರ ಅಲ್ಲಿದ್ದ ಖ್ಯಾತ ಕಥೆಗಾರ್ತಿ ಒಬ್ಬರು, ಮಹಾಂತೇಶ ಅವರು ಅರ್ಥವಾಗದ ರೀತಿಯಲಿ ಕಥೆ ಬರೆಯುತ್ತಾರೆ ನಿಮಗೆ ಅರ್ಥವಾಯಿತೆ ಎಂದು ಅಲ್ಲಿ ನೆರೆದಿದ್ದ ಸಭಿಕರನ್ನು ಮೊದಲೇ ಕಮಿಟ್ ಮಾಡಿಸಿದರು ಒಂದು ಸರಳ ಕತೆ ನೂರಾರು ಕತೆಬರೆದ ಅವರಿಗೆ ಅರ್ಥವಾಗದಿದ್ದುದು ನನಗೆ ಆಶ್ಚರ್ಯವಾಗಿತ್ತು.

ಆಮೇಲೆ ವಿಶ್ವನಾಥ ಮರತೂರು ಅವರು ‘ಮೊಸರಿನ ಮಂಗಮ್ಮ’ ಹಾಗು ‘ರೊಟ್ಟಿ’ ಕತೆಯಂತೆ ನೀವು ಏಕೆ ಕತೆ ಬರೆಯುವದಿಲ್ಲ ಎಂದು ನನ್ನನ್ನು ಕೇಳಿದಾಗ ಅದನ್ನು ಮರುಸೃಷ್ಟಿಸುವದು ಅವಶ್ಯವಿಲ್ಲ ಎಂದು ಹೇಳಿದೆ, ಇದರ ಜೊತೆಗೆ ಅವರು 70 ರ ದಶಕದಲಿ ಚಾಲ್ತಿಯಲ್ಲಿದ್ದ ಬಂಡಾಯ ಮಾದರಿಯ ಕತೆ ಬರೆಯಲು ಆಪೇಕ್ಷಿಸುತ್ತಾರೆ ಎಂದು ಆಮೇಲೆ ತಿಳಿಯಿತು. ಹಾಗು ಮೇಲಿನ ಎರಡು ಕತೆಗಳಾದ ಮೊಸರಿನ ಮಂಗಮ್ಮ ಹಾಗು ರೊಟ್ಟಿ ಕತೆಗಳನ್ನು ಪೇಟೆಂಟ್ ತೆಗೆದುಕೊಂಡವರಂತೆ ಎಲ್ಲಾ ಕಡೆಯೂ ಹೇಳುತ್ತಾರೆ ಎಂದು ಅವರ ವಯಸ್ಸಿನ ಹುಡುಗರು ಆಮೇಲೆ ಹೇಳಿದರು..

ನನಗಿರುವ ಪ್ರಶ್ನೆ ವಿಶ್ವನಾಥ ಅವರೆ, ನನ್ನ ಕತೆಯೊಳಗೆ ಗುಪ್ತಗಾಮಿನಿಯಾಗಿ ಬರುವವ ಬಸವನಲ್ಲ ಬದಲಾಗಿ ಮಾರ್ಕ್ಸ್, ಇದರಲ್ಲೆ ನಿಮ್ಮ ಎಡವುವಿಕೆ ಕಾಣುತ್ತದೆ . ಅದರಲಿ ನಿಚ್ಚಳವಾಗಿ ಉಲ್ಲೇಖಿಸಿರುವ ಎಲ್ಲಾ ಚಿಹ್ನೆಗಳು. ಅಲ್ಲಿ ನೇರವಾಗಿ ಮಾರ್ಕ್ಸ್ ನ ಬಗ್ಗೆಯೇ ಹೇಳುತ್ತವೆ. ಕೈಯ್ಯಲ್ಲಿ ಕೆಂಪು ಪುಸ್ತಕ, ದಾಸ್ ಕ್ಯಾಪಿಟಲ್ ಹಾಗು ಕಮ್ಯೂನಿಸ್ಟ್ ಮ್ಯಾನಿಫೆಸ್ಟೋ ಎಂದು ನಾನು ಹೇಳಿದ್ದು ನೀವು ಕೇಳಿಸಿಕೊಂಡಿರೋ ಇಲ್ಲವೋ? ಇದನು ಬರೆದವ ಬಸವಣ್ಣನಲ್ಲ. ಮಾರ್ಕ್ಸ್. ನೀವು ಅಬ್ಸೆಂಟ್ ಮೂಡ್ ನಲ್ಲಿ ಇದ್ದಂತೆ ಕಾಣುತ್ತದೆ ಅದಕ್ಕಾಗಿಯೇ ನಿಮ್ಮ ಆ ಲೇಖನ ವಿಮರ್ಶೆಯ ಜಾಡಿನಲ್ಲಿ ಇಲ್ಲ. ಅದು ಕಾಡಿನಲಿ ದಾರಿ ತಪ್ಪಿದ ಮಂಗನಂತೆ ಎತ್ತೆತ್ತಲೋ ಓಡುತ್ತದೆ.  ನಿಮ್ಮಅಬ್ಸರ್ವೇಶನ್ ಮೊದಲೇ ದಾರಿ ತಪ್ಪಿದಕ್ಕಾಗಿ ನನಗೆ ಖೇದವಿದೆ

ಯುವ ಕತೆಗಾರರು ಏನಾದರೂ ಬರೆಯುವಾಗ ಎಚ್ಚರದಿಂದ ಬರೆಯಬೇಕು ಉಡಾಫೆಯಲ್ಲಿ ಅಲ್ಲ, ಆಮೇಲೆ ಡೋಣುರ್ ಕತೆಯ ಬಗ್ಗೆ ಬರೆಯುವಾಗ ಮೇಲಿನ ಮೂರು ಸಾಲುಗಳೆ ಹೇಳುತ್ತವೆ ನೀವೆಷ್ಟು ಗೊಂದಲದಲ್ಲಿದ್ದೀರಿ ಎಂದು. ಅವರ ಕತೆಯ ಬಗ್ಗೆ ಒಮ್ಮೆ ಒಳ್ಳೆಯ ಕತೆ ಎನ್ನುತ್ತೀರಿ ಒಮ್ಮೆ ಕೆಟ್ಟ ಕತೆ ಎನ್ನುತ್ತೀರಿ, ಬಾಯಿಚಪ್ಪರಸಿ ಹೊಗಳುತ್ತೀರಿ ಮತ್ತೆ ತೆಗಳುತ್ತೀರಿ ನಿಮ್ಮ ನಿಲುವುಗಳಿಗೆ ನಿಮ್ಮಲ್ಲಿಯೇ ಸ್ಥಿರತೆ ಇಲ್ಲ

ನಾನು ಕತೆ ಓದಿ ಹೊರಬಂದ ಮೇಲೆ ಅಲ್ಲಿ ಸೇರಿದ್ದ ಯುವಜನಾಂಗ ಮುಖಾಮುಖಿಯಾಗಿ ಅನೇಕ ವಿಷಯದ ಬಗ್ಗೆ ಚರ್ಚಿಸಿತು. ಮತ್ತೆ ನನ್ನ ಕತೆ ಬಗ್ಗೆ ಮರುವಾರವೆ ಚರ್ಚೆ ಇಟ್ಟುಕೊಂಡಿತು. ಇದು ನನಗೆ ಆ ಕಾರ್ಯಕ್ರಮದಲಿ ಸಿಕ್ಕ ದೊಡ್ಡ ಯಶಸ್ಸು. ಇನ್ನೂ ಎರಡು ಕಡೆ ಇರುವ ಕಥಾ ಓದಿಗೆ ನಾನೆ ಇನ್ನೂ ಸಮಯ ಕೊಟ್ಟಿಲ್ಲ

ಕತೆಗಾರನನ್ನು ಸಾಹಿತಿಯನ್ನು ಷಡ್ಯಂತ್ರಕ್ಕೆ ಸಿಕ್ಕಿಸಲು ಸಾಧ್ಯವಿಲ್ಲ ಆತನ ಲೋಕ ಅನಂತವಾದುದ್ದು ಎಂದು ಬರಹಗಾರರದ ವಿಶ್ವನಾಥ ಅವರಿಗೆ ತಿಳಿದರೆ ಒಳ್ಳೆಯದು. ನನಗೆ ಇದು ವಿಶ್ವನಾಥ ಬರೆದ ಲೇಖನ ಅನ್ನುವದಕ್ಕಿಂತ ಇದು ಬರೆಸಿದ ಲೇಖನವೆನ್ನಿಸಿತು, ಯಾಕಂದರೆ ಆ ಕಾರ್ಯಕ್ರಮದಲಿ ಆರಂಭದಿಂದ ಕೊನೆಯವರೆಗೂ ನಡೆದಿದ್ದು ನನ್ನ ವಿರುದ್ದದ ಷಡ್ಯಂತ್ರವೆ

ಇದಕ್ಕೆ ಉತ್ತರಿಸುವ ಅವಶ್ಯಕತೆಯೂ ನನ್ನಲಿ ಇದ್ದಿಲ್ಲ. ‘ಅವಧಿ’ ಇಂದು ಯುವಜನಾಂಗದ ಪ್ರೀತಿಪಾತ್ರ ವೇದಿಕೆ. ನಾಡಿನ ಅನೇಕ ಸ್ನೇಹಿತರು ಓದುತ್ತಾರೆ, ನನಗೆ ಇದಕೆ ಉತ್ತರ ಬರೆಯಲೇಬೇಕೆಂಬ ನಾಡಿನಾದ್ಯಂತ ಇರುವ ಸ್ನೇಹಿತರ ಒತ್ತಾಸೆಯಿಂದ ಅವರೆಲ್ಲರ ಪ್ರೀತಿ ವಿಶ್ವಾಸಕೆ ಕಟ್ಟುಬಿದ್ದು ಈ ಪ್ರತಿಕ್ರಿಯೆ ಅಷ್ಟೇ. ವಿಶ್ವನಾಥ ಸ್ವತಂತ್ರವಾಗಿ ಯೋಚಿಸಲಿ ಸ್ವತಂತ್ರವಾಗಿ ಬೆಳೆಯಲಿ ಅನ್ನುವದೆ ನನ್ನ ಆಶಯ. ಕಡತಂದವಿಷಯಗಳಿಗೆ ಬಾಳಿಕೆ ಕಡಿಮೆ

‍ಲೇಖಕರು avadhi

August 28, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

Trackbacks/Pingbacks

  1. ಟೀಕೆ ಮಾಡುವಾಗ ಸಂಯಮವಿರಲಿ.. – . - […] ಈ ಕುರಿತು ಕೆ ಎಂ ವಿಶ್ವನಾಥ ಮರತೂರ ಅವರು ಬರೆದ ಸಮೀಕ್ಷಾ ಬರಹ ‘ಅವಧಿ’ಯಲ್ಲಿ ಪ್ರಕಟವಾಗಿತ್ತು. ಅದು ಇಲ್ಲಿದೆ- ಇದಕ್ಕೆ ಕಥೆಗಾರ ಮಹಾಂತೇಶ ನವಲಕಲ್ ಅವರು ಪ್ರತಿಕ್ರಿಯೆ…
  2. ಅನಾವಶ್ಯಕ ಚರ್ಚೆ ಇಲ್ಲಿಗೆ ಬಿಟ್ಟುಬಿಡಿ.. – . - […] ಇದಕ್ಕೆ ಕಥೆಗಾರ ಮಹಾಂತೇಶ ನವಲಕಲ್ ಅವರು ಪ್ರತಿಕ್ರಿಯೆ ನೀಡಿದರು. ಅದು ಇಲ್ಲಿದೆ– […]
  3. ನಿಮ್ಮದು ಕಥೆಯಲ್ಲ.. ಸಂಶೋಧನಾ ಲೇಖನ – . - […] ಇದಕ್ಕೆ ಕಥೆಗಾರ ಮಹಾಂತೇಶ ನವಲಕಲ್ ಅವರು ಪ್ರತಿಕ್ರಿಯೆ ನೀಡಿದರು. ಅದು ಇಲ್ಲಿದೆ– […]

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: