ಸುಮಾ ಆನಂದರಾವ್ ಸರಣಿ: ನನ್ನ ನೆನಪಿನ ಹಡಗು

। ನಿನ್ನೆಯಿಂದ ।

ಅನಿಯಮಿತ   ಕಲ್ಪನೆ  ಸ್ಮೃತಿಗಳ  ಖಜಾನೆ  ನೆನಪಿನಾ ಬುತ್ತಿ .  ನಿಸರ್ಗದ ಭವ್ಯ ಸುಂದರ ದೃಶ್ಯಗಳು ಸಂತಸ ಸಂಭ್ರಮ  ಗಾನ  ಮೌನ  ಗಂಭೀರ  ಹೀಗೆ  ಹಲವಾರು ಮಜಲುಗಳ ಸಮ್ಮಿಲನ.

ನಮ್ಮ್ಮೆಲ್ಲರನ್ನು  ಕೂರಿಸಿಕೊಂಡ ಎತ್ತಿನ ಗಾಡಿ ದಕ್ಷಿಣಾಭಿಮುಖವಾಗಿ ಊರಿನೆಡೆಗೆ ಹೊರಟಿತು. ಎತ್ತುಗಳು ಕತ್ತಿಗೆ  ಕಟ್ಟಿದಾ ಗಂಟೆಯ ಶಬ್ದಕ್ಕೆ ಸರಿಯಾಗಿ ಹೆಜ್ಜೆ ಹಾಕುತ್ತ ರಭಸದಿಂದ ಹೊರಟಿವೆ .

ರಾಸುಗಳೇ  ಹಾಗೆ ಮನೆಯ ಹಾದಿ ತುಳಿದರೆ ಸಾಕು ವೇಗ ಹೆಚ್ಚಾಗುತ್ತದೆ . ಇಕ್ಕೆಲಗಳಲ್ಲಿಯೂ ಹಳದಿ ಬಣ್ಣದ ಗಂಟೆ ಹೂಗಳು ಅರಳಿ ಹೊಳೆಯುತ್ತಿದ್ದವು .ಸುಮಾರು ಅರ್ಧ ಮೈಲಿ ಕ್ರಮಿಸಿದ ನಂತರ ಸುಂದರವಾದ ಹಗರಿ ಸಿಗುತ್ತದೆ .ಇದು ಪೂರ್ವದಿಂದ ಪಶ್ಚಿಮಕ್ಕೆ ಹರಿಯುತ್ತಿತ್ತು.

ಎರಡು ಮೂರು ಕಡೆ ಹಳ್ಳದೋಪಾದಿಯಲ್ಲಿ ನೀರು ಹರಿಯುವುದನ್ನು ಕಂಡು ಅದಾಗಲೇ ಇಳಿಯಲು ತವಕಿಸುತ್ತಿದ್ದೆವು . ಅಮ್ಮ ಮತ್ತೊಂದು ದಿನ ಚಿಕ್ಕ ಪ್ರವಾಸವಿರುವುದಾಗಿ ಹೇಳಿ ಸಮಾಧಾನಿಸುತ್ತಿದ್ದಳು .ಮಿಕ್ಕ ಜಾಗವೆಲ್ಲ ಮರಳಿನಿಂದ ಆವೃತವಾಗಿತ್ತು .

ಈಗ ರಸ್ತೆಯಿಂದ ಸುಮಾರು ಹತ್ತು ಅಡಿ ಆಳಕ್ಕೆ ಇಳಿದು ಅರ್ಧ ಫರ್ಲಾಂಗು ಮರಳಿನಲ್ಲಿ ಸಾಗಿ ಮದ್ಯೆ ಹರಿವ ತೊರೆಯಲ್ಲಿ ಎತ್ತುಗಳು ದಾಹ ತೀರಿಸಿಕೊಂಡ ನಂತರಹತ್ತು  ಅಡಿ ಎತ್ತರಕ್ಕೆ ಹತ್ತಿದರೆ ರಸ್ತೆ ಸಿಗುತ್ತದೆ.ಈ ಹಾದಿಯಲಿ ಮಾರ ಎತ್ತುಗಳಿಗೆ ಕಟ್ಟಿದ ಹಗ್ಗವನ್ನು ಬಿಗಿಗೊಳಿಸಿ ಇಳಿಸಬೇಕು ಹತ್ತಿಸಬೇಕು .

ನಾವೆಲ್ಲಾ ಭಯಭೀತರಾಗಿ  ಕುಳಿತಿರುತ್ತಿದ್ದೆವು .ಕಣ್ಣು ಹಾಯುವವರೆಗೂ ಹಗರಿಯ ಸುಮನೋಹರ ನೋಟವನ್ನು  ತುಂಬಿಕೊಳ್ಳುತ್ತಿದ್ದೆವು .ಅಮ್ಮ ಗಂಗಮ್ಮನಿಗೆ ಅರಿಶಿನ ಕುಂಕುಮ ಹಾಕಿ ಪೂಜಿಸುತ್ತಿದ್ದಳು ಹತ್ತುವಾಗ ಎರೆಡೂ  ಬದಿ ಗಿಡಮರಗಳಿಂದಾವೃತವಾದ ಕತ್ತಲೆಯಿಂದ ಕೂಡಿದಂತಹ ನಿಶ್ಯಬ್ದವಾಗಿ ಹರಿಯುವ ಕಾಲುವೆಯೊಂದಿತ್ತು . 

ಹೆಸರು ಕಳ್ಳರ ಕಾಲುವೆ .ಅದು ನಮ್ಮೆಲ್ಲರಿಗೆ  ಕಳ್ಳರ ವಾಸಸ್ಥಾನದಂತೆ ಭಾಸವಾಗುತ್ತಿತ್ತು .ಮುಂದೆ ಸಿದ್ದಾಪುರ ಕಾಲುವೆ , ಕೆರೆ ಕಾಲುವೆಗಳಲ್ಲಿ ಮಡಿವಾಳರು ಬಟ್ಟೆ ಒಗೆಯುತ್ತಿದ್ದರು . ಸಮತಟ್ಟಾದ ಹಾದಿಯಲಿ ಸಾಗಿದಂತೆಲ್ಲ ಹಚ್ಚ ಹಸಿರಿನ ಗದ್ದೆಗಳು ಮೈತುಂಬಿ ನಗೆ ಬೀರುತ್ತಿದ್ದವು , ಹಾಗೆ ನಮ್ಮ ಕಣ್ಣುಗಳು ಅರಳುತ್ತಿದ್ದವು .

ಈ ಗದ್ದೆಗಳ ಮಧ್ಯೆ ನಾಲ್ಕು ಅಡಿಬಂಡೆಯಮೇಲೆ ಗಣೇಶನಸುಂದರವಾದ  ಕೆತ್ತೆನೆ ಇತ್ತು . ಇದು ಸೃಷ್ಟಿಕರ್ತನಾರೋ  ಯಾರಿಗೂ ತಿಳಿಯದು.ಅದರ ಹತ್ತಿರದ ಬಂಡೆಯ ಮೇಲೆ ಬಟ್ಟೆಗಳನ್ನು ಶುಚಿಗೊಳಿಸುತ್ತಿದ್ದ  ಸ್ವಾಭಿಮಾನಿ  ತಾತ ,ಆಲ್ಲಿಂದಲೇ ಕೈ ಬೀಸಿ ಸಂತಸದ ನಗೆ ಬೀರುತ್ತಿದ್ದ .

ಬಲಗಡೆ ಮಾರಮ್ಮನ ಗುಡಿ ಬಂತೆಂದರೆ ಊರಿನ ಪ್ರವೇಶ .ಒಂದೆರೆಡು ನಿಮಿಷಗಳ ನಂತರ ಬಂದೇ ಬಿಟ್ಟಿತು ತಾತನ ಮನೆ .   ಒಂದು ನಿಮಿಷ ಸಂಭ್ರಮ ಮೇರೇ ಮೀರಿತು .ನಮ್ಮೆಲ್ಲರನ್ನೂ ಎತ್ತಿ ಗಾಡಿಯಿಂದ ಕೆಳಗೆ ಇಳಿಸಿದರು .

ವಿಶಾಲವಾದ ಎರೆಡು ಕಟ್ಟೆಗಳು .ಕೆಳಗಿನ ಕಟ್ಟೆಯ ಮೇಲೆ ಮನೆಯ ಮುಂಬಾಗಿಲಿಗೆದುರಾಗಿ ಕಲ್ಲಿನಿಂದ ಕಟ್ಟಿದ ದೊಡ್ಡ ಬಾವಿ . ಅದರ ಗಾಲಿಗೆ ಹಗ್ಗ ಯಾವಾಗಲೂ ಹಾಕಿರುತ್ತಿದ್ದರು .ಎರೆಡು ಆಮೆಗಳನ್ನು ನೀರು  ಶುಚಿಗೊಳಿಸಲು ಬಿಟ್ಟಿರುತ್ತಿದ್ದರು . 

ಒಮ್ಮೆ ಬಾವಿಯಲ್ಲಿ ಇಣುಕಿ ನೋಡಿಹಿಂದಿರುಗಿ ನಾಲ್ಕು ಮೆಟ್ಟಿಲನ್ನು ಹತ್ತಿದರೆ ಮೇಲಿನ ಕಟ್ಟೆ. ಮುಂದೆ ಕಮಾನುಗಳಿಂದಾ ವೃತವಾದ ಆಟವಾಳಿಗೆ . ಪಕ್ಕದಲ್ಲಿ ಹೊರಭಾಗಕ್ಕೆ ಮೆಟ್ಟಿಲುಗಳು .  ಕೆಳಗಡೆ ನಾಗರ ಕಲ್ಲು , ಮೇಲೆ ತುಳಸಿಗಿಡ . ಮರದ ಬೃಹತ್ ತಲ ಬಾಗಿಲು ಎತ್ತರವಾದ ಹೊಸ್ತಿಲು .ಒಳಸಾಗಿದರೆ ಪಡಸಾಲೆ ಮತ್ತೊಂದು ಬಂದೋಬಸ್ತು ಮರದ ಬಾಗಿಲು ಎರೆಡು ಕೈಗಳಿಂದ ಇಳಿಯಬೇಕು ಹಾಗಿತ್ತು . ಮುಂದೆ ನಡುಮನೆ .ಆಗಲೇ ಅತ್ತೆ ನಡುಮನೆಯ ತುಂಬಾ ತಟ್ಟೆಗಳನ್ನು ಇಟ್ಟಿದ್ದರು .

ಅವ್ವ  ಬಾವಿಯಿಂದ ನೀರು ಸೇದಿಕೊಂಡು ಮಡಿಯಿಂದಕಟ್ಟಿಗೆ ಒಲೆಯ ಮೇಲೆ  ರಸಗವಳ ಸಿದ್ಧಪಡಿಸುತ್ತಿದ್ದಳು ಎಷ್ಟು ರುಚಿಯಾದ ಊಟ ! ಅವ್ವನ ಪ್ರೀತಿ ತುಂಬಿಕೊಂಡು ಹಾಗಿರುತ್ತಿತ್ತೇನೋ !  ನಂತರ ದೇವರ ಮನೆ.

ಲಕ್ಷಣವಾಗಿತ್ತು ಹಾಗೆ ಮುಂದೆ ಸಾಗಿದರೆ ಬಚ್ಚಲು ಮನೆ ಸಿಮೆಂಟಿನ ತೊಟ್ಟಿ ,ದೊಡ್ಡ ತಾಮ್ರದ ಹಂಡೆ , ಎಡಕ್ಕೆ ಹಿತ್ತಿಲ ಬಾಗಿಲು .ಎದುರಿಗೆ ನೂರಾರುವರ್ಷಗಳಷ್ಟು ಪುರಾತನವಾದ ಬೃಹದಾಕಾರದ ಆಲದಮರ.  

ಇತಿಹಾಸದ ಸಂಗತಿಗಳನ್ನೆಲ್ಲ ತನ್ನೊಳಗೆ ಹುದುಗಿಸಿಕೊಂಡು ಬೀಗುತ್ತ ನಿಂತಂತೆ ಭಾಸವಾಗುತ್ತಿತ್ತು  ಬೃಹತ್ ಬಿಳಲುಗಳು ನೇತಾಡುತ್ತಿದ್ದವು .  ವಿಧ ವಿಧದ  ಪಕ್ಷಿ ಸಂಕುಲಗಳು ವಾಸವಾಗಿದ್ದವು.  ಬುಡದಲ್ಲಿ ದೊಡ್ಡ ಬೇರುಗಳು ನೆಲದಿಂದ ಮೂರು ಅಡಿ ಎತ್ತರಕ್ಕೆ ವಿಶಾಲವಾಗಿ ಹರಡಿ ಹಲವಾರು ಆಕೃತಿಗಳನ್ನು ಸೃಸ್ಟಿ ಸಿತ್ತು  . 

ಇಂದಿಗೂ ಮನದಿ ಮೂಡಿದ  ಸಂಶಯಗಳಿಗೆ ಉತ್ತರವೇ ಸಿಕ್ಕಿಲ್ಲ . ಪಕ್ಕದಲ್ಲಿ ಕೊಟ್ಟಿಗೆಯಲ್ಲಿ ರಾಸುಗಳು ತುಂಬಿರುತ್ತಿದ್ದವು.

ತಾತನಿಗೆ ಇಬ್ಬರೇ ಮಕ್ಕಳು . ಅಮ್ಮ ಹಾಗು ಅವರ ಅಣ್ಣ ನಮ್ಮ ಸೋದರಮಾವ .  ಮುತ್ತವ್ವ ಅವ್ವ ತಾತ ಮಾಮ ಅತ್ತೆ ಐದು ಜನ ಮಕ್ಕಳು . ನಾವು ನಾಲ್ಕು ಜನ ಸೇರಿ ಒಂಬತ್ತು ಜನ !  ಮಕ್ಕಳ ಸಾಮ್ರಾಜ್ಯ  . ಅಮ್ಮನಿಗೆ ಅತ್ತೆ ಮಾವನ ಮಗಳು . ಹಾಗಾಗಿ ಅವರಿಬ್ಬರೂ ಜೊತೆಯಲಿ ಆಡಿ  ಬೆಳೆದವರು . ಅವರಿಬ್ಬರ ಸ್ನೇಹದ ವರ್ಣನೆಗೆ ಪದಗಳು ಸಾಲದು .

 ಕಟ್ಟೆಯ  ಮೇಲೆ ಮಲಗಿ ಆಗಸದಿ ಚುಕ್ಕಿಗಳನ್ನೆಣಿಸುತ್ತ ಮುಂದಿನ ಅಧ್ಯಾಯದಿ  ತೇಲಿಸೋಣವೆ ನಮ್ಮ ನೆನಪಿನ ಹಡಗ ?

‍ಲೇಖಕರು Avadhi

October 22, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: