'ಸುನಿಲನ ಪುಸ್ತಕಾ ಯಾಕ್ ಬರಲಿಲ್ಲಾ….???' – ಪ್ರಶಾಂತ್ ಆಡೂರ್ ಬರೀತಾರೆ

ಪ್ರಶಾಂತ್ ಆಡೂರ್

ಎರಡ ಸಾವಿರದ ಹದಿಮೂರು, ಅಗಸ್ಟ ೨೫, ರವಿವಾರ ಅಂದರ ನಾಳೆ ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣದ ಒಳಗ ನಮ್ಮ ವಸುಧೇಂದ್ರನ ಛಂದ ಪುಸ್ತಕದ ’ಮಾಯಾ ಕೋಲಾಹಲಾ’ ಪುಸ್ತಕ ಬಿಡುಗಡೆ ಸಮಾರಂಭ. ಈ ಕಥಾ ಸಂಕಲನ ಬರದವರು ಮೌನೇಶ ಬಡಿಗೇರ. ಈ ಬುಕ್ ಜೊತಿ ನಮ್ಮ facebook ಆತ್ಮೀಯ ಮಿತ್ರ ಸುನಿಲನ ಮೊದಲ translation ಬುಕ್ಕು ರಿಲೀಸ್ ಆಗಬೇಕಿತ್ತ, ಆದರ ಈಗ ಅದ ಕಾರಾಣಂತರಗಳಿಂದ ಆಗಂಗಿಲ್ಲಾ.
ಯಾಕ ಆಗಂಗಿಲ್ಲಾ ಅನ್ನೋದಕ್ಕ ಮಂದಿ facebookನಾಗ ತಮ್ಮ ತಲ್ಯಾಗ ತಿಳದಿದ್ದ ಮಾತಾಡಲಿಕತ್ತಾರ, ಯಾರೊ
“ಸುನಿಲ ಗಡಿಬಿಡಿ ಒಳಗ english to kannada dictionary ಬದಲಿ, english to english dictionary ರೆಫರ್ ಮಾಡಿ ಬುಕ್ ಬರದಿದ್ದಾ, ಹಿಂಗಾಗಿ ಅದನ್ನ ಇನ್ನೊಮ್ಮೆ translate ಮಾಡಲಿಕ್ಕೆ ವಸು ವಾಪಸ ಕೊಟ್ಟಾನ” ಅಂತ ಒಂದಿಷ್ಟ ಮಂದಿ ಅಂದರ ಇನ್ನೊಂದಿಷ್ಟ ಮಂದಿ ವಸುಧೇಂದ್ರನ deadline ಟೆನ್ಶನದಾಗ ಪಾಪ deadly ಸುನಿಲ್ ಫ್ರಂಟ ಪೇಜನಾಗಿಂದ ಬುಕ್ ಟೈಟಲ್ LIFE AND TIMES OF MICHAEL K. ಅನ್ನೋದನ್ನ translate ಮಾಡೋದ ಮರತ ಬುಕ್ ಹೆಸರ ’ಲೈಫ್ & ಟೈಮ್ಸ್ ಆಫ್ ಮೈಕಲ್ ಕೆ’ ಅಂತ ಕನ್ನಡದಾಗ ಹಂಗ ಬರದ ಸಬಮಿಟ್ ಮಾಡಿದ್ದಾ ಅದಕ್ಕ ವಸು “ನೀ ಎರಡ ತಿಂಗಳ ಟೈಮ್ ತೊಗೊಂಡ ಕನ್ನಡದಾಗ ಒಂದ ಟೈಟಲ್ ಹುಡ್ಕೊಂಡ ಬಾ ಆಮ್ಯಾಲೆ ಬುಕ್ ಮಾಡೋಣ ಅಂತ ಕಳಸಿದಾ” ಅಂತ ಅಂದರು.

ಇನ್ನ ಕೆಲವೊಬ್ಬರು ’ಇಲ್ಲಾ, ಸುನಿಲ ಆ ಪುಸ್ತಕ ಬರಿಬೇಕಾರ ಎಡಗೈಲೆ ದೊಡ್ಡ ದೊಡ್ಡ ನಿಘಂಟು ರೆಫರ್ ಮಾಡಿ ಮಾಡಿ ಕೈ ಕಗ್ಗಂಟ ಮಾಡ್ಕೊಂಡ ಕಡಿಕೆ ಆ ಗಂಟ ಬಿಡಸಿಗೊಳ್ಳಿಕ್ಕೆ ಆಪರೇಶನ್ ಮಾಡಿಸಿಕೊಂಡಾ ಇನ್ನ ಹಿಂತಾದರಾಗ ಬುಕ್ ರಿಲೀಸ್ ಆದಮ್ಯಾಲೆ autograph ಕೊಟ್ಟ ಕೊಟ್ಟ ಬಲಗೈಗೂ ಏನರ ಆಗಿ ಗಿಗಿತ್ತ, ಯಾಕ ಸುಮ್ಮನ ರಿಸ್ಕ ತೊಗೊಬೇಕು ಅದರಾಗ ಈಗ ಎಡಗೈ ಕೆಲಸಾನೂ ಬಲಗೈಲೆ ನಡದದ ಇನ್ನ ಹಂತಾದರಾಗ ಬಲಗೈಗೂ ಏನರ ಆದರ ಏನ ಗತಿ, ಇರೋವ ಎರಡ ಕೈ ಅಂತ ಅವನ ತನ್ನ ಬುಕ್ ರಿಲೀಸ್ ಮುಂದ ಹಾಕಿಸ್ಯಾನ’ ಅಂದರು.
ಆದರ ಇವ ಯಾವದು ಖರೇ ಅಲ್ಲಾ, ಅದ ಆಗಿದ್ದ ಹಕಿಕತ್ ಬ್ಯಾರೆ. ನಾ ಬೇಕಾರ ಆ ಪಬ್ಲಿಶ್ ಆಗಲಾರದ ಬುಕ್ ಮುಟ್ಟಿ ಅದರ ಮ್ಯಾಲೆ ಆಣಿ ಮಾಡಿ ಹೇಳ್ತೇನಿ ಇದರಾಗ ಪಾಪ ಆ ಸುನಿಲಂದು ಮತ್ತ ನಮ್ಮ ವಸುಂದ ಏನು ತಪ್ಪ ಇಲ್ಲಾ.
ಅದ ಆಗಿದ್ದ ಏನಂದರ ನಂಗ ಒಂದ ತಿಂಗಳ ಹಿಂದ ವಸುಧೇಂದ್ರ ಫೋನ ಮಾಡಿ
“ನಮ್ಮ ಸುನಿಲ ತುಂಬಾ ಚೆನ್ನಾಗಿ ಪುಸ್ತಕ ಬರದಿದಾನ ಕಣೋ ಅದಕ್ಕೊಂದು ಚಿಕ್ಕದಾಗಿ ಬೆನ್ನುಡಿ ಬರದ ಕೊಡ್ತಿಯಾ” ಅಂತ ಕೇಳಿದಾ.
ನಾ ಏಕ್ದಮ ಖುಶ್ ಆದೆ, ಅಲ್ಲಾ ಒಂದ ಪುಸ್ತಕ ಬರೇಯೋ ಪುರಸತ್ತ ಇಲ್ಲದ ನಂಗ ಜನಾ ಸೀದಾ ಬೆನ್ನುಡಿ, ಮುನ್ನಡಿ ಬರಿಲಿಕ್ಕೆ ಹೇಳಲಿಕತ್ತಾರಲಾ ಅಂತ ಖರೇನ ಖುಷಿ ಅನಸ್ತ. ನಾ ’ಸರಿ ಯಾಕ ಆಗವಲ್ತಾಕ ನೀ ಇಷ್ಟ ಕೇಳ್ತಿ ಅಂದರ ಇಲ್ಲಾ ಅನ್ನಲಿಕ್ಕೆ ಆಗ್ತದೇನು ಅದರಾಗ ಅದು ಸುನಿಲನ ಪುಸ್ತಕಕ್ಕ ಯಾರಿಗರ ಇಲ್ಲಾ ಅನ್ನಲಿಕ್ಕೆ ಧೈರ್ಯ ಅದ ಏನು, ನೀ ಏನ ಚಿಂತಿ ಮಾಡಬ್ಯಾಡ ನಾ ಬರದ ಕೊಡ್ತೇನಿ ತೊಗೊ’ ಅಂತ ಹೇಳಿ ಅವನ ಬುಕ್ ಬಗ್ಗೆ ಡಿಟೇಲ್ಸ್ ತೊಗೊಂಡೆ. ಮುಂದ ಒಂದ ವಾರದಾಗ ಎರಡ ಪೇಜ್ ಬೆನ್ನುಡಿ ಬರದ ನನ್ನ ಫೊಟೊ ಅಟ್ಯಾಚ ಮಾಡಿ ಕಳಿಸೇ ಬಿಟ್ಟೆ. ಅಲ್ಲಾ ನನ್ನ ಕೆಲಸ ಗೊತ್ತಲಾ, ಅಗದಿ ಫಾಸ್ಟ…
ಮುಂದ ಒಂದ ತಾಸಿಗೆ ವಸು ಹಾಟ್ ಲೈನ ಮ್ಯಾಲೆ ಫೋನ ಮಾಡಿ
“ಏನ್ ಕಣೋ ಬೆನ್ನುಡಿ ಅಂದರೆ ಏನ ಬರದಿದ್ದೀಯಾ?” ಅಂದಾ.
ನಾ ಅನ್ಕೊಂಡೆ ಬಹುಶಃ ನಾ ನಮ್ಮ ಹುಬ್ಬಳ್ಳಿ ಭಾಷಾದಾಗ ಬರದಿದ್ದ ಅವಂಗ ತಿಳದಿರಲಿಕ್ಕಿಲ್ಲಾ, ಇನ್ನ ಮತ್ತೇಲ್ಲೆ ಇದನ್ನ ಬೆಂಗಳೂರ ಕನ್ನಡದಾಗ translate ಮಾಡಸಬೇಕು ಅಂತ ಇಂವಾ ಟೆನ್ಶನ್ ತೊಗೊಂಡಿರಬೇಕು ಅಂತ ನಾ
“ಯಾಕ? ನಾ ಬರದಿದ್ದ ತಿಳಿವಲ್ತೇನ್?” ಅಂತ ಕೇಳಿದೆ.

“ಅಲ್ಲೋ, ಪುಸ್ತಕಾ ಓದಿ ಬೆನ್ನುಡಿ ಬರಿ ಅಂದರೆ ನೀ ಏನ ಓದಿ ಬರದಿದಿಯಾ?” ಅಂತ ಕೇಳಿದಾ.
“ಅಲ್ಲಪಾ, ಆ ಸುನಿಲಾ ಇಂಗ್ಲಿಷ ಪುಸ್ತಕಾ ಓದಿ ಕನ್ನಡದಾಗ ಟ್ರಾನ್ಸಲೇಟ ಮಾಡಿ ಬುಕ್ಕ ಬರದಿದ್ದಾ, ಅದಕ್ಕ ನಾ ಪುಸ್ತಕದ ಹಿಂದಿನ ಪೇಜ (blurb) ಓದಿ ಅದನ್ನ ಕನ್ನಡದಾಗ translate ಮಾಡಿ ಬೆನ್ನುಡಿ ಬರದೇನಿ” ಅಂದೆ.
“ಅಯ್ಯೋ, ನನ್ನ ಕರ್ಮ” ಅಂತ ವಸುಧೇಂದ್ರ ಸಿಟ್ಟಲೇ ಫೋನ ಇಟ್ಟಾ.
ವಸು ಬರೇ ಅಯ್ಯೋ ನನ್ನ ಕರ್ಮ ಅಂದಿದ್ದ ನನಗ ಅಗದಿ ಉತ್ತರ ಕರ್ನಾಟಕದ ದೊಡ್ಡ ಬೈಗಳ ಇದ್ದಂಗ ಯಾಕಂದರ ಅಂವಾ ಯಾರಿಗೂ ತುಟಿ ಪಿಟ್ಟ ಅಂದ ಮನಷ್ಯಾ ಅಲ್ಲಾ, ಅಷ್ಟ ಸೂಕ್ಷ್ಮ ಮನಷ್ಯಾ. ಹಂತಾವ ಹಿಂಗ ಅಂದಾನಂದರ ಅವಂಗ ಎಷ್ಟ ಬೇಜಾರ ಆಗಿರಬಾರದ ನೀವ ವಿಚಾರ ಮಾಡ್ರಿ.
ಮುಂದ ಒಂದ ತಾಸಿಗೆ ನಮ್ಮ ಸುನೀಲ ಫೋನ ಮಾಡಿದಾ
“ಏನ್, ಸಾರ ನೀವು ಬೆನ್ನುಡಿ ಬರದಕೊಡಿ ಅಂದರೆ ಏನೇನೊ ಬರದ ಕೊಟ್ಟಿದ್ದೀರಂತೆ, ವಸು ಸರ್ ತುಂಬಾ ಬೇಜಾರ ಮಾಡ್ಕೊಂಡ ಈಗ ನನ್ನ ಬುಕ್ ರಿಲೀಸ್ ಕ್ಯಾನ್ಸೆಲ್ ಮಾಡಿ ಮುಂದಿನ ಸರತೆ ಮಾಡೋಣಾ ನಿನ್ನ ಪುಸ್ತಕಕ್ಕೆ ಬೆನ್ನುಡಿ ಇಲ್ಲದಿದ್ದರೆ ಭಣಾ ಭಣಾ ಅನಸತ್ತೆ, at least ಬೆನ್ನುಡಿನಾದರು original ಇರಲಿ” ಅಂತ ಹೇಳಿದರು ಅಂತ ಭಾಳ ಕೆಟ್ಟ ಅನಿಸಿಗೊಂಡ ಹೇಳಿದಾ.
ಪಾಪ ನಮ್ಮ ಸುನಿಲಾ oxford dictionary ಇಂದ ಹಿಡದ ಸಾಹಿತ್ಯ ಪರಿಷತ್ dictionary ತನಕ ಎಲ್ಲಾ ಎಡಗೈಲೆ ರೆಫರ್ ಮಾಡಿ ಬರದಿದ್ದಾ ಹಂತಾದರಾಗ ಇದ ಹಿಂಗ ಆಗಿ ಬಿಡ್ತಲಾ, ಅದು ನನ್ನಿಂದ ಅಂತ ನಂಗೂ ಖರೇನ ಭಾಳ ಕೆಟ್ಟ ಅನಸ್ತ…..ಹಿಂಗಾಗಿ ಅವನ ಬುಕ್ ನಾಳೆ ರಿಲೀಸ್ ಆಗಲಾರದಂಗ ಆತ.
ಅಲ್ಲಾ ಆ ಸುನಿಲ Life and times of Michael K ಅಂತ ಒಂದ ಬುಕ್ ಓದಿ ಅದನ್ನ ಕನ್ನಡದಾಗ ಟ್ರಾನ್ಸಲೇಟ್ ಮಾಡಿ ಪುಸ್ತಕ ಬರದಿದ್ದಕ್ಕ ನಾ ಅದರ ಇಂಗ್ಲಿಷ ಬೆನ್ನುಡಿ ಓದಿ ಕನ್ನಡಕ್ಕ translate ಮಾಡಿದ್ದೆ, ಇದರಾಗ ನಂದೇನ ತಪ್ಪ ಹೇಳ್ರಿ. ಅಲ್ಲಾ ಹಂಗ ಪೂರ್ತಿ ಬುಕ್ಕಿಗೆ ಬುಕ್ translate ಮಾಡಿದವರನ ಬಿಟ್ಟ ಬರೇ ಬೆನ್ನುಡಿ translate ಮಾಡಿದವರ ಮ್ಯಾಲೆ ವಸು ಸಿಟ್ಟ ಆದರ ಹೆಂಗ ಅಂತೇನಿ. ಇರಲಿ ಎಷ್ಟ ಅಂದರೂ ಅಂವಾ ನನ್ನ publisher ಅಲಾ ಅಂತ ಸುಮ್ಮನಾದೆ.
ಕಡಿಕೆ ಮೊನ್ನೆ ಮೂರ ದಿವಸದ ಹಿಂದ ಪುಸ್ತಕ ಬಿಡಗಡೆ ಕಾರ್ಯಕ್ರಮಕ್ಕ ಬಾ ಅಂತ ವಸುಂದ ಮೇಲ್ ಬಂದ ಮ್ಯಾಲೆ ಅವನ ಸಿಟ್ಟ translate ಆಗೇದ ಅಂತ ಸಮಾಧಾನ ಆತ.

ಇನ್ನ ನಮ್ಮ ಸುನಿಲನ ಪುಸ್ತಕ ಮುಂದ ಅಶ್ವೀಜ್ ಮಾಸದಾಗ ಬರೋದ ಗ್ಯಾರಂಟಿ ಆದರ ಬೆನ್ನುಡಿ ನಂದಿರಂಗಿಲ್ಲಾ ಇಷ್ಟ. ಅಲ್ಲಾ ಅದು ಖರೆ ಬಿಡ್ರಿ ಟೈಟಲನಿಂದ ಹಿಡದ ಕಂಟೆಂಟ ತನಕಾ ಎಲ್ಲಾನು translate ಮಾಡಿದರ ಹೆಂಗ, at least ಬೆನ್ನುಡಿನರ original ಇರಬೇಕಲಾ ಹಿಂಗಾಗಿ ಬ್ಯಾರೆ ಯಾರಿಗರ ಹೇಳಿ ವಸು ಬರಸ್ತಾನ ಆ ಮಾತ ಬ್ಯಾರೆ.
ಆದರೂ ವಸು ಮತ್ತೊಂದ translation ಪುಸ್ತಕ ರೇಡಿ ಮಾಡಿಸಿ ಮತ್ತೊಬ್ಬ ಹೊಸಾ ರೈಟರನ ಅಂದರ ನಮ್ಮ ಸುನಿಲನ್ನ ಕನ್ನಡ ಸಾಹಿತ್ಯ ಜಗತ್ತಿಗೆ ಪರಿಚಯ ಮಾಡಿಸಲಿಕತ್ತಾನ ಅಂತ ಖುಷಿ ಅನಸ್ತು. ಅಲ್ಲಾ ಹಂಗ ನಮ್ಮ ಸುನಿಲಗ ಏನ ಯಾರ god father ಬ್ಯಾಡ ಬಿಡ್ರಿ. ಅಂವಾ ಅವಕಾಶ ಸಿಕ್ಕರ godಗೆ father ಆಗೊ capacity ಇದ್ದ ಮನಷ್ಯಾ. ಅದರಾಗ ಅಂವಾ ಇತ್ತೀಚಿಗೆ ಒಂದಿಷ್ಟ ಖೊಟ್ಟಿ ದೇವರನ ಬ್ಯಾರೆ ಸೃಷ್ಟಿ ಮಾಡ್ಯಾನ. ಹಿಂಗಾಗಿ ಯಾರ ಕೈ ಕೊಟ್ಟರು ಅವರಂತೂ ಅವಂಗ ಕೈ ಕೊಡಂಗಿಲ್ಲಾ.
ಅನ್ನಂಗ ನಾಳೆ ನಾ ಬರಲಿಕತ್ತೇನಿ ಬೆಂಗಳೂರಿಗೆ, ನೀವು ಯಾರರ ಫ್ರೀ ಇದ್ದರ ಬರ್ರಿ. ಲಗೂನ ಟಿಫಿನಗೆ ಬಂದ ಬಿಡ್ರಿ…….ಏ, ವಸು ಏನ ತಪ್ಪ ತಿಳ್ಕೊಳಂಗಿಲ್ಲಾ ಆಡೂರವರ ಕರದಿದ್ದರು ಅದಕ್ಕ ಬಂದೇವಿ ಅಂತ ಹೇಳ್ರಿ.

(ಇದು ಕಾಲ್ಪನಿಕ ಪ್ರಹಸನ, ಹಂಗ ಖರೇನ ಸುನಿಲನ ಪುಸ್ತಕ ಯಾಕ postpone ಆತು ಅನ್ನೋದ ಒಂದು ಅಂವಾ ಖೊಟ್ಟಿ ಮಾಡಿದ್ದ ದೇವರಿಗೆ ಗೊತ್ತ ಇಲ್ಲಾ ಸಾಕ್ಷಾತ್ ಶ್ರೀವಸುಧೇಂದ್ರಗ ಗೊತ್ತ)

 
 

‍ಲೇಖಕರು avadhi

August 23, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

15 ಪ್ರತಿಕ್ರಿಯೆಗಳು

  1. bharathi

    ಅದರಾಗ ಈಗ ಎಡಗೈ ಕೆಲಸಾನೂ ಬಲಗೈಲೆ ನಡದದ ಇನ್ನ ಹಂತಾದರಾಗ ಬಲಗೈಗೂ ಏನರ ಆದರ ಏನ ಗತಿ, ಇರೋವ ಎರಡ ಕೈ …hahahahahaha … nam sunilana pustaka indaldidre naale barutte … ivattu barlilla anta bejarittu .. nim lekhana odhi adoo odoythu adoor mahashaya …:)))

    ಪ್ರತಿಕ್ರಿಯೆ
  2. sunil

    ನಿಮ್ಮ ಕೈಲಿ ತಮಾಷೆ ಮಾಡಿಸಿಕೊಳ್ಳೋಕೂ ಭಾರಿ ಮಜಾ ಅನ್ಸುತ್ತೆ.
    ನನ್ನ ಪುಸ್ತಕದ ಯಾಕ್ ಬಂದಿಲ್ಲ ಅನ್ನೋದಕ್ಕ ಮಜಬೂತ್ ಕಾರಣ ಹುಡುಕಿದ್ದೀರಿ.
    I have enjoyed this ha ha ha

    ಪ್ರತಿಕ್ರಿಯೆ
  3. girija

    ha ha. nice sir, enjoyed the prahasana. blurb translation is new concept in literature now..ha.ha
    girija

    ಪ್ರತಿಕ್ರಿಯೆ
  4. dixit

    As usual good one, it seems like marketing strategy for upcoming sunil sirs book ha ha. Any way all the best for vasudhendra sirs function. Hope to see adur sir in function.

    ಪ್ರತಿಕ್ರಿಯೆ
  5. Gopaal Wajapeyi

    ಹಹಹಹಹಹಹಹಹಹಹಹಹಹಹಹಹಹಹ……. Hoggo nina… Ollepaa maaraayaa… 🙂

    ಪ್ರತಿಕ್ರಿಯೆ
  6. nachiket

    ಸುನಿಲ ಆ ಪುಸ್ತಕ ಬರಿಬೇಕಾರ ಎಡಗೈಲೆ ದೊಡ್ಡ ದೊಡ್ಡ ನಿಘಂಟು ರೆಫರ್ ಮಾಡಿ ಮಾಡಿ ಕೈ ಕಗ್ಗಂಟ ಮಾಡ್ಕೊಂಡ ಕಡಿಕೆ ಆ ಗಂಟ ಬಿಡಸಿಗೊಳ್ಳಿಕ್ಕೆ ಆಪರೇಶನ್ ಮಾಡಿಸಿಕೊಂಡಾ ಇನ್ನ ಹಿಂತಾದರಾಗ ಬುಕ್ ರಿಲೀಸ್ ಆದಮ್ಯಾಲೆ autograph ಕೊಟ್ಟ ಕೊಟ್ಟ ಬಲಗೈಗೂ ಏನರ ಆಗಿ ಗಿಗಿತ್ತ, ಯಾಕ ಸುಮ್ಮನ ರಿಸ್ಕ ತೊಗೊಬೇಕು ಅದರಾಗ ಈಗ ಎಡಗೈ ಕೆಲಸಾನೂ ಬಲಗೈಲೆ ನಡದದ ಇನ್ನ ಹಂತಾದರಾಗ ಬಲಗೈಗೂ ಏನರ ಆದರ ಏನ ಗತಿ, ಇರೋವ ಎರಡ ಕೈ ಅಂತ ಅವನ ತನ್ನ ಬುಕ್ ರಿಲೀಸ್ ಮುಂದ ಹಾಕಿಸ್ಯಾನ….
    this could be the valid reason sir, he has so much fan following in facebook and that is likely to increase after his first issue.. i mean book release…very funny article, the way you look at issues is very punny.
    thanks avadhi for sharing
    nachiket

    ಪ್ರತಿಕ್ರಿಯೆ
  7. chetana

    lekhana chennaagide. naguttale odikondiddaaytu.
    adre ishtondu kaaleleta hosa barahagaarana belavanige drushtiyinda olleyadalla annisitu. Sunil innu sakashtu beleyabekide. neewu aapta valayadavaru endu gottilladavarige ee lekhana dari tappisabhudu. aduu allade sunil na atyuttama series ‘Khotti devaru’ ankana baraha illi teera laghuvaagi bittide. aa barahagala gaa,mbheeryakke dhakke aaguvantide.
    hasyavanna hasyavaagiye nodabeklu, nija. aadare adarinda Sunil image ge aagalii Vasu image ge aagali (illi vasu ge tondare aagilla) kundaagabaaradu.
    kshamisi. Sunil odu – barahgala gunamatta ulisikondu beleyabeku annuva vipareeta kaalajiyinda ee comment maduttiddene
    – CT

    ಪ್ರತಿಕ್ರಿಯೆ
    • prashant adur

      ಚೇತನಾ
      ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದ
      ಇದು ಖಂಡಿತವಾಗಿಯೂ ಸುನಿಲನ ಕಾಲೆಳತವಲ್ಲಾ, ಅವನ ಬರವಣಿಗೆಗೆ ನನಗು ಹೆಮ್ಮೆ ಇದೆ, ಅವನು ಇನ್ನು ತುಂಬಾ ಬೆಳಿಲಿ ಎಂಬ ಸದಾಶಯ ಯಾವಗಲೂ ಇರುತ್ತದೆ. ಆದಾಗ್ಗೆಯೂ ನಾನು ಸುನಿಲನ permission ತೆಗೆದು ಕೊಂಡೆ ಲೇಖನವನ್ನ ಪ್ರಕಟಣೆಗೆ ಕಳಸಿದ್ದು. ಅವನ ಪುಸ್ತಕ ಪ್ರಕಟವಾಗುತ್ತಿಲ್ಲಾ ಎನ್ನುವ ದು:ಖ ನನಗೆ ಅವನಿಗಿದ್ದಷ್ಟೆ ಇದೆ.
      ಇನ್ನು ನನ್ನ ಲೇಖನಗಳನ್ನ ಓದಿಕೊಂಡವರಿಗೆ ಎಂದು ಅವು ದಾರಿ ತಪ್ಪಿಸುವದಿಲ್ಲ ಅನಿಸುತ್ತೆ…ಇದು ಯಾರದೆ imageಗೆ ಕುಂದತರುವ ಪ್ರಯತ್ನವಂತು ಖಂಡಿತ ಅಲ್ಲಾ, ನೀವೆ ಹೇಳಿದ ಹಾಗೆ ಹಾಸ್ಯವನ್ನ ಹಾಸ್ಯವಾಗಿಯೇ ನೋಡಬೇಕು. ನಿಮ್ಮ ಅನಿಸಿಕೆಗೆ ಸ್ವಾಗತ ಮತ್ತು ಪ್ರತಿಕ್ರಿಯೆಗೆ ಮತ್ತೊಮ್ಮೆ ಧನ್ಯವಾದ
      ಪ್ರಶಾಂತ ಆಡೂರ-ಹುಬ್ಬಳ್ಳಿ

      ಪ್ರತಿಕ್ರಿಯೆ
  8. Ashok shettar

    ಬರ್ಮುಡಾ ಚೊಣ್ಣ ಹಾಕಿಕೊಂಡು ಸಾಕ್ಸ್ ತೊಟ್ಟುಕೊಂಡು ಅವ್ನು ಧ್ಯಾನ ಮಾಡುವ ರೀತಿಗಾಗಿ ಅವನ ಖೊಟ್ಟಿ ದೇವತೆಗಳು ಸಿಟ್ಟಾಗಿವೆಯಂತೆ. ಅದರ ಫಲವಾಗಿ ಅವನ ಪುಸ್ತಕ ಬಿಡುಗಡೆ ಗಣಪತಿ ಮದುವೆಯಂತಾಗಿದೆ ಎಂಬುದು ಸದ್ಯದ ಸುದ್ದಿ..:)

    ಪ್ರತಿಕ್ರಿಯೆ
  9. sunil

    Ondu spashtane kodabeku naanu..
    Pustaka barade iddakke halavaaru kaarana ide.
    Life and times of michael k bahala atyuttama pustaka mattu mahattaravaada africada saahitya.
    Adanna anuvaada maadi prakatane maaduvaaga adu acchukattaagi barabeku annuva jawaabdaari ide.
    Vasudhendra avarantaha hesaranta publishergalu bahala mutuvarji mattu perfection inda aa pustaka baralu bayasuttaare.
    So ondu pustaka anuvaada aadaaga adakke nyaaya odagisabekaaddu obba lekhaka mattu publisher jawabdaari iratte.
    Adannu innoo channagi maadalu samayabeku endu namage annisitu. Adakkaagi mundoodalaagide ashte.
    Sunil

    ಪ್ರತಿಕ್ರಿಯೆ
  10. Sharadhi

    ಅಗ್ಗದಿ ಶಾಣ್ಯಾ ನಮ್ಮ ಆಡೂರ!, ಇನ್ನೂ ಪ್ರಕಟವಾಗದ ಪುಸ್ತಕದ ಕುರಿತು ಅದಾಗಲೇ ಒಂದು ಕಾಲ್ಪನಿಕ ಹಾಸ್ಯ ಲೇಖನ ಪ್ರಕಟಿಸಿ ಆಗಿದೆ!-Good one indeed.

    ಪ್ರತಿಕ್ರಿಯೆ
  11. bmbasheer

    ಸುನಿಲ್ ಬರೆದಿದ್ದಾರೆ ಅಂದ ಮೇಲೆ ಚೆನ್ನಾಗಿಯೇ ಇರುತ್ತೆ

    ಪ್ರತಿಕ್ರಿಯೆ
  12. ಸತೀಶ್ ನಾಯ್ಕ್

    ಸುನಿಲ್ ರ ಪುಸ್ತಕ ಬಿಡುಗಡೆ ಹೀಗೆ ಮುಂದ್ ಹೋಯ್ತು ಅಂತ ಜಸ್ಟ್ ಎರಡು ದಿನದ ಹಿಂದಷ್ಟೇ ಗೊತ್ತಾಯ್ತು. ಗೊತ್ತಾಗಿದ್ ಕೂಡ್ಲೇ ಒಂಥರಾ ಆಶ್ಚರ್ಯ ಭರಿತ ಸಂಕಟ ಆದರೂ, ಇವತ್ತಿನ ಮಟ್ಟಿಗೆ ಅವರ ಪುಸ್ತಕ ಬಿಡುಗಡೆ ಮುಂದು ಹೋಗಿದ್ದರ ಕುರಿತಾಗಿ ಖುಷಿ ಆಯಿತು ಅನ್ಕೊಬೋದು. ಇವತ್ತು ಧಿಡೀರ್ ಅಂತ ಆಫೀಸ್ ನಲ್ಲಿ ಬಾಂಬ್.. ಐದು ದಿನ ಆಫೀಸ್ ಪ್ರವಾಸ..!! ಅರ್ಧ ತಮಿಳುನಾಡು ಕಾಲುಭಾಗ ಕೇರಳ ಸುತ್ಕೊಂಡು ಬರಬೇಕಿದೆ ಈ ಐದು ದಿನದಲ್ಲಿ. ಪಾಪಿಗಳು ಭಾನುವಾರ ಅನ್ನೋ ಕರುಣೆ ಕೂಡಾ ತೋರಿಸ್ದೇ ಪ್ರೊಗ್ರಾಮ್ ಸಿದ್ಧ ಮಾಡಿದಾರೆ. ಎಲ್ಲಿ ಈ ಪ್ರೊಗ್ರಾಮ್ ಮಿಸ್ ಆಗುತ್ತೋ ಅಂತ ಬೇಜಾರಿತ್ತು ಆದ್ರೆ ವಿಷಯ ಕೇಳಿ ನಿಜವಾಗಲು ಕಿವಿಗೆ ಜಾಮೂನಿನ ರಸ ಬಿಟ್ಟ ಹಾಗಾಯ್ತು ಇವತ್ತು. ಆದರೂ ನಾಳೆ ನನ್ನ ಮೆಚ್ಚಿನ ಲೇಖಕ ವಸುದೇಂದ್ರ ಅವರ ಪುಸ್ತಕ ಬಿಡುಗಡೆ. ಸುನಿಲ್ ಅವರದ್ದು ಇಲ್ಲದಿದ್ದರೂ, ಅವರ ಪುಸ್ತಕ ಬಿಡುಗಡೆಗೆ ಹೋಗುವ ಯೋಜನೆಯನ್ನೂ ಹಾಕಿದ್ದೆ. ಆಫೀಸಿನ ಯೋಜನೆಗಳ ಮುಂದೆ ಆ ಆಸೆಗೂ ಎಳ್ಳು ನೀರು ಬಿಡೋ ಹಾಗಾಯ್ತು. ಬೆಟರ್ ಲಕ್ ನೆಕ್ಸ್ಟ್ ಟೈಮ್ ಸತಿ..
    ಅಂದ ಹಾಗೆ ಸುನಿಲ್ ರ ಪುಸ್ತಕ ಬಿಡುಗಡೆ ಮುಂದಕ್ಕೆ ಹೋಗಿದ್ದು ಯಾಕೆ ಅಂತ ನೀವು ಕೊಟ್ಟ ಕಾಲ್ಪನಿಕ ಕಾರಣಗಳು ನಗೆಯುಕ್ಕಿಸಿ ಇಷ್ಟ ಆದವು.. 🙂

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: