ಚಿತ್ರ ಕಲಾ ಪರಿಷತ್ ನ ಗೋಡೆಯ ಮೇಲೆ ಒಂದು ಕವನ ತೂಗುತ್ತಿತ್ತು. ಕಲಾಕೃತಿಗಳು ಇರಬೇಕಾದ ಜಾಗದಲ್ಲಿ ಕವಿತೆಗೇನು ಕೆಲಸ ಎಂದು ಬಂದವರೆಲ್ಲಾ ನಿಬ್ಬೆರಗಾಗಿದ್ದರು. ಅದು ಸುದೇಶ್ ಮಹಾನ್ ಸ್ಟೈಲ್. ತಾವು ಬರೆದ ಕವಿತೆಯೊಂದನ್ನು, ತಮ್ಮ ಅದ್ಭುತ ಮೋಡಿ ಮಾಡುವ ಅಕ್ಷರದಲ್ಲಿ ಬರೆದು, ಕಟ್ಟು ಹಾಕಿಸಿ ಕಲಾಕೃತಿಯಂತೆ ತೂಗು ಹಾಕಿದ್ದರು. ಆಶ್ಚರ್ಯವೆಂದರೆ ಉಳಿದ ಅವರ ಕಲಾಕೃತಿಗಳಂತೆ ಅದಕ್ಕೂ ಸಿಕ್ಕಾಪಟ್ಟೆ ಬೇಡಿಕೆ ಬಂದದ್ದು.
ಕವಿತೆಯೊಂದನ್ನುಕಲಾಕೃತಿಯಾಗಿಸಿದ ಹಿರಿಮೆ ಸುದೇಶ್ ಗೆ ಸಲ್ಲಬೇಕು.ಮಂಗಳೂರಿನ ಅಲೋಶಿಯಸ್ ಕಾಲೇಜ್ನಲ್ಲಿ ತರಲೆ ಮಾಡುತ್ತಾ, ಸ್ಟ್ರೈಕ್ ಮಾಡಿಸುತ್ತಾ
ಓಡಾಡುತ್ತಿದ್ದ ಸುದೇಶ್ ಸಮುದಾಯ ರಂಗತಂದದ ತೆಕ್ಕೆಗೆ ಬಿದ್ದರು. ಅಲ್ಲಿಂದ ಅವರ ನೋಟ ಬೇರೆಯಾಯಿತು. ಅಪ್ಪ ಚಂದ್ರಶೇಖರ್ ಹಲವು ಕಲಾವಿದರು ಅರಳಲು ಕಾರಣರಾದವರು. ಮಾರ್ನಮಿ ಕಟ್ಟೆಯ ಅಜಂತಾ ಕಲಾವಿದರು ಹಲವು ಪ್ರತಿಭೆಗಳ ಗರಡಿ ಮನೆಯಾಗಿತ್ತು.
ಸುದೇಶ ಬ್ರಷ್ ಹಿಡಿದು ಬೆಂಗಳೂರಿಗೆ ಬಂದ. ನಾಟಕದ ಪೋಸ್ಟರ್ ಬರೆದ. ರಂಗಪ್ರೇಮಿಗಳು ಅವನ ರೇಖೆ ನೋಡಿ ದಂಗಾದರು. ನಂತರ ಆತ ಕಲಾವಿದನಾಗಿ ದೊಡ್ಡ ಎತ್ತರ ಮುಟ್ಟಿದ್ದಾನೆ. ಸುದೇಶ್ ಬಗ್ಗೆ ತಿಳಿಯಬೇಕಾದರೆ ಅವನ ವೆಬ್ ಸೈಟ್ www.sudeshmahan.comಗೆ ಭೇಟಿಕೊಡಿ. ಇಷ್ಟವಾದರೆ ಅವನಿಗೊಂದು ಈ ಮೈಲ್ sudeshmahan@gmail.com ಮಾಡಿ. ಈಗ ಆತ ಚೆನ್ನೈ ನಲ್ಲಿ ಮಣಿರತ್ನಂ ಮನೆ ಪಕ್ಕದ ಬೀದಿಯಲ್ಲಿರುವ ಗ್ಯಾಲರಿ ಯಲ್ಲಿ ತನ್ನ ಬುದ್ದ ಸರಣಿಯ ಪ್ರದರ್ಶನದಲ್ಲಿ ಬ್ಯುಸಿಯಾಗಿದ್ದಾನೆ . ಇಲ್ಲಿ ಅವನ ಬುದ್ದ ಸರಣಿ ಹಾಗೂ ಇತ್ತೀಚಿನ ಕಲೆಯ ಸ್ಲೈಡ್ ಶೋ ಇದೆ.






0 Comments