ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸುಗತ ಹ್ಯಾಸ್ ಅನ್ ‘ಔಟ್ಲುಕ್’

sugata.jpgಸುಗತ ಶ್ರೀನಿವಾಸರಾಜು- ಹೆಸರೇ ಸೂಚಿಸುವಂತೆ ಅರ್ಧ ಅಪ್ಪನ ಗುಣವನ್ನೇ ಹೊತ್ತ ಹುಡುಗ. ‘ನಮ್ಮೊಡನಿಲ್ಲದೆಯೂ ನಮ್ಮೊಡನಿರುವ’ ಚಿ ಶ್ರೀನಿವಾಸರಾಜು ಅವರ ಮಗ. ಬಹುಶ ಹೀಗೆ ಪರಿಚಯಿಸುವುದು ಸರಿಯಲ್ಲವೇನೋ. ಇದನ್ನು ಶ್ರೀನಿವಾಸರಾಜು ಅವರೂ ಒಪ್ಪುತ್ತಿರಲಿಲ್ಲ. ಅಪ್ಪನ ಹೆಸರು ಬಳಸಿ ಇವರ ಯಾವ ಮಕ್ಕಳೂ ಬೆಳೆಯಲಿಲ್ಲ.

ಸುಗತ ಇಂದು ರಾಷ್ಟ್ರ ಮಟ್ಟದಲ್ಲಿ ಪತ್ರಿಕೋದ್ಯಮದಲ್ಲಿ ಒಳ್ಳೆಯ ಹೆಸರು ಗಳಿಸಿದ್ದಾನೆ. ಡೆಕ್ಕನ್ ಹೆರಾಲ್ಡ್, ಟೆಲಿಗ್ರಾಫ್ ಮೂಲಕ ಈಗ ಖ್ಯಾತ ಔಟ್ಲುಕ್ ವಾರಪತ್ರಿಕೆಯ ಕುಟುಂಬದ ಸದಸ್ಯ. ಪತ್ರಿಕೋದ್ಯಮ ಸಿನಿಕರ ತಾಣವಾಗುವುದು ಸುಲಭ. ಏಕೆಂದರೆ ಎಲ್ಲರೂ ತಾವೇ ಜಗತ್ತಿನ ಕೋಳಿಗಳು ಎಂದುಕೊಂಡಿರುತ್ತಾರೆ. ಹಾಗಾಗಿ ಸಂವೇದನೆಗಳು ಬೇಗ ಸಿನಿಕತನದತ್ತ ವಾಲುತ್ತವೆ. ಆದರೆ ಸುಗತ ಖಂಡಿತಾ ಭಿನ್ನ. ಈತನ ಕಳಕಳಿ ಇವರು ಹೆಕ್ಕುವ ವಿಷಯಗಳಲ್ಲೇ ಗೊತ್ತಾಗುತ್ತದೆ. ದೇಶ ವಿದೇಶಗಳನ್ನು ಸುತ್ತಿರುವ ಸುಗತನಿಗೆ ಪತ್ರಿಕೋದ್ಯಮ ಏನಾಗಿರಬೇಕು ಎನ್ನುವ ಸ್ಪಷ್ಟ ಕಲ್ಪನೆಯಿದೆ.

ಕರ್ನಾಟಕ ಸಾಹಿತ್ಯ ಅಕಾಡೆಮಿಯ ನಿಯತಕಾಲಿಕ ‘ಅನಿಕೇತನ’ ಇಂಗ್ಲಿಷ್ ಆವೃತ್ತಿಯ ಸಂಪಾದಕರಾಗಿದ್ದ ಸುಗತ ಸಾಹಿತ್ಯಕ್ಕೂ, ಪತ್ರಿಕೆಗೂ ಅಪರೂಪದ ನೋಟಗಳನ್ನು ಕೊಟ್ಟಿದ್ದರು. ಶ್ರೀನಿವಾಸ ರಾಜು ಅವರ ಮೂಕ ನಾಟಕಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ

20080303cov.jpg

ರಾಜಕುಮಾರ್ ನಿಧನ ಹೊಂದಿದಾಗ ಔಟ್ಲುಕ್ ಗಾಗಿ ಇವರು ಬರೆದ ಬರಹ ಪತ್ರಿಕೋದ್ಯಮ ಕಂಡ ಮುಖ್ಯ ಬರಹಗಳಲ್ಲೊಂದು. ಸುಗತ ಔಟ್ಲುಕ್ ನ ಬ್ಲಾಗ್ನಲ್ಲಿ ಪ್ರತೀ ಮಂಗಳವಾರ ಅಂಕಣ ಬರೆಯುತ್ತಿದ್ದಾರೆ. ಖಂಡಿತಾ ಓದಿ. ಇಷ್ಟವಾದರೂ, ಕಷ್ಟವಾದರೂ ಅವರನ್ನು ಸಂಪರ್ಕಿಸಿ: sugataraju@gmail.com

‍ಲೇಖಕರು avadhi

27 February, 2008

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading