ಪುರೂರವ ಕೊಟ್ಟೂರು
ಇವತ್ತು ತುಂಬಾ ದಿವ್ಸ ಆದ ಮೇಲೆ ನನ್ನ ಗೆಳೆಯ ಒಬ್ಬ ಸಿಕ್ಕಿದ್ದ. ಅದೂ ಇದೂ ಹಾಳು ಮೂಳು ಅಂತ ಮಾತಾಡಿ ಆದ ಮೇಲೆ ಮಾತು ಇತ್ತೀಚೆಗೆ ನೋಡಿದ ಸಿನೆಮಾಗಳ ಕಡೆ ಹರೀತು.
ಅವನು:- ಯಾವ ಫಿಲ್ಮು ನೋಡಿದ್ಯೋ ರೀಸೆಂಟಾಗಿ
ನಾನು:- ಧೂಮ್ ೩ ನೋಡಿದ್ನಪ್ಪ ಧೂಮ್ ೧ ಮತ್ತೆ ೨ ನೋಡಿದ ಮಜಾ ಬರ್ಲಿಲ್ಲ ಕಣಪ್ಪ, ಅದಿರ್ಲಿ ನೀನ್ಯಾವ ಸಿನೆಮಾ ನೋಡಿ ದಬಾಕಿದಿಯ ಅದು ಮೊದ್ಲು ಹೇಳಪ್ಪ
ಅವನು:- ತುಂಬಾ ಸಿನೆಮಾ ನೋಡಿದೆ ಕಣೋ, ಅದ್ರಲ್ಲಿ ತುಂಬಾ ಎಫೆಕ್ಟಿವ್ ಅನ್ಸಿದ್ದು ನಮ್ಮ ಪುನೀತ್ ಸಿನೆಮಾ “ನಿನ್ನಿಂದಲೇ”, ಅಂದ
ನಾನು:- ಲೋ, ತಲೇ ಗಿಲೇ ಕೆಟ್ಟಿದ್ಯಾ ನಿಂಗೆ, ಸಿನೆಮಾ ನೋಡ್ದೋರೆಲ್ಲ ಡಬ್ಬಾ ಮೂವಿ ಅಂತಿದಾರೆ, ಪೇಪರ್ನಲ್ಲಿ ರಿವೀವ್ ಕೂಡ ಅಷ್ಟಕ್ಕಷ್ಟೇ ಬಂದಿತ್ತು ನೀನು ನೋಡಿದ್ರೆ ಎಫೆಕ್ಟಿವ್ ಇತ್ತು ಅಂತೀಯಲ್ಲೋ ಅಂದೆ.
ಅದಕ್ಕವ್ನು ಏನಂತಾ ರಿಪ್ಲೈ ಕೊಟ್ಟ ಗೊತ್ತಾ? ಅವನ ಮಾತು ಕೇಳಿದ ಮೇಲೆ ಅವನು ಹೇಳಿದ್ದೇ ಸರಿ ಅನ್ನಿಸ್ತು.
ಅವನು:- ನಿನಗ್ಗೊತ್ತಲ್ಲೋ ಮಾರಾಯ ನನಗೆ ಮೊದ್ಲಿಂದಲು ಆಮ್ನೀಷಿಯಾ ಅಂದ್ರೆ ನಿದ್ರಾ ಹೀನತೆ ರೋಗ. ಡಾಕ್ಟ್ರ ಹತ್ರ ಹೋದಾಗ ಅವ್ರು ಕೊಟ್ಟ ನಿದ್ದೆ ಗುಳಿಗೆಗೆ ನಿದ್ದೆ ಇರ್ಲಿ ಆಕಳಿಕೆ ಕೂಡಾ ಬಂದಿರ್ಲಿಲ್ಲ ನನಗೆ, ಡಾಕ್ಟ್ರಿಗೂ ಕೂಡಾ ಶ್ಯಾನೆ ಆಶ್ಚರ್ಯ ಆಗಿತ್ತು. ಆದ್ರೆ ಮೊನ್ನೆ ನನ್ನ ತಮ್ಮನ ಬಲವಂತಕ್ಕೆ “ನಿನ್ನಿಂದಲೇ” ಮೂವಿ ನೋಡೋಕೆ ಹೋದೆ. ಶುರು ಆದ ಕಾಲು ಗಂಟೆ ಮಾತ್ರ ಸಿನ್ಮಾ ನೋಡಿದ ನೆನಪು ಆಮೇಲೆ ನನಗೆ ಎಚ್ಚರ ಆಗಿದ್ದು ನನ್ನ ತಮ್ಮ ಸಿನ್ಮಾ ಮುಗೀತು ಎದಳಣ್ಣೋ ಅಂತ ಎಬ್ಬಿಸಿದ ಮೇಲೆ ಕಣಾ.
ನನಗೋ ಅವನ ಮಾತು ಕೇಳಿ ಅವನ ರೋಗ ಬಗೆಹರಿದ ರೀತಿಯನ್ನು ಕೇಳಿ ನನ ಕೈ ನನಗ್ಗೊತ್ತಿಲ್ದೇನೇ ಮೂಗಿನ ಮೇಲೆ ಹೋಗಿತ್ತು. ’ಆಮೇಲೇನಾಯ್ತೋ’ , ಅಂದೆ.
ಅದಕ್ಕವನು, “ಇನ್ನೇನಾಗ್ಬೇಕು ಮಾರಾಯ ನನ್ನ ತಮ್ಮ ಬಯ್ತಾ ಇದ್ದ, “ನಿನೇನೋ ಮಲಗ್ಬಿಟ್ಟೆ ಕಣಣ್ಣಾ, ನಂಗೆ ಸಿನ್ಮಾ ನೋಡೋಕೂ ಆಗ್ದೆ ಬಿಡೋಕೂ ಆಗ್ದೆ ನಾ ಪಟ್ಟ ಕಷ್ಟಾ ಆ ದೇವ್ರಿಗೆ ಗೊತ್ತು, ನಿನ್ನನ್ನಾ ಅರ್ಧಕ್ಕೇ ಎಬ್ಬಿಸ್ಕೊಂಡು ಬರಾಣ ಅಂತಿದ್ದೆ ಆದ್ರೆ ನೀನು ಬಾಳಾ ದಿವ್ಸ ಆದ ಮೇಲೆ ನಿದ್ದೆ ಮಾಡೋದು ನೋಡಿ, ಈಗ್ಲಾದ್ರು ನಿದ್ದೆ ಬಂತಲ್ಲ ಇವ್ನಿಗೆ ಅನ್ಕೊಂಡು ಸಿನ್ಮಾ ಡೈರೆಕ್ಟ್ರಿಗೆ ಒಂದು ಸಲಾಮ್ ಹೊಡ್ದೆ ಕಣಣ್ಣಾ” ಅಂತ ನನ್ನ ತಮ್ಮ ಹೇಳ್ತಾ ಇದ್ದ ಕಣೋ. ಇನ್ಮೇಲೆ ಆ ಡೈರೆಕ್ಟ್ರ ಸಿನೆಮಾ ನೋಡೋದು ಮಾತ್ರ ತಪ್ಸೊಲ್ಲ ಕಣೋ ಅಂದ.
ಟಿವಿ ೯ ನವರು ದಿನಾ ಹೇಳ್ತಾ ಇದ್ರೂ ನನಗೆ ನಂಬಿಕೆ ಬಂದಿರ್ಲಿಲ್ಲ ಆದ್ರೆ ಅವನು ಹೇಳೀದ್ದು ಕೇಳಿ ನನಗೇ ಮೊಟ್ಟ ಮೊದಲ ಬಾರಿಗೆ ಅನ್ನಿಸಿದ್ದು “ಹೀಗೂ ಉಂಟಾ” ಅಂತಾ!!!!! ಮತ್ತೆ ಸಂಜೆ ಇನ್ನೊಂದು ನ್ಯೂಸ್ ಬಂತು “ನಿನ್ನಿಂದಲೇ” ಮೂವಿ ಮೇಲೆ ಕತ್ತರಿ ಪ್ರಯೋಗ ಮಾಡಿ ಮೂರು ಗಂಟೆಯ ಅವಧಿಯಿಂದ ಎರಡೂ ಕಾಲು ಗಂಟೆಯ ಅವಧಿಗೆ ಇಳಿಸ್ತಾ ಇದ್ದಾರೆ ಅಂತ. ಇದನ್ನು ಸಂಜೆ ಅದೇ ಗೆಳೆಯನಿಗೆ ಕಾಲ್ ಮಾಡಿ ತಿಳಿಸಿದೆ, ಅದಕ್ಕವನು “ಛೇ, ಒಳ್ಳೆ ನಿದ್ದೆ ಅವಧಿನೇ ಕಡಿಮೆ ಆಗ್ತದಲ್ಲೋ” ಅಂತ ಸಖತ್ ಬೇಜಾರಾದ.






:)))))))))))))
nakkubitte pururava ji… “nimmindale”……..
super discription about ‘ninnindale’ movie
ಹೊಹೊಹೊಹೊ……ನಗು..ನಂಗೆ…ನಿಮ್ ಬರಹ ಓದಿ…ಸೂಪರ್….
ha ha ha… ತುಂಬಾ ಮಜವಾಗಿ ಬರೆದಿದ್ದೀರಿ ಪುರೂವರ, ಈ ಕನ್ನಡ ಸಿನಿಮಾಗಳಲ್ಲಿ ಇನ್ನೂ ಎಷ್ಟು ದಿನ ಮರ ಮರ ಸುತ್ತಿಸುವ ಪ್ಲಾನ್ ಇದೆಯೋ ನಾವೂ ನೋಡಿಯೇ ಬಿಡೋಣ.. ಅಲ್ಲಿಯ ತನಕ ಒಳ್ಳೆಯ ನಿದ್ದೆಗೆ ಭಂಗ ಬರದಿರಲಿ:)
– ಸಿನೆಮಾ ಕುರಿತ ಒಂದು ವಿನೂತನ ವಿಮರ್ಶಾ ಶೈಲಿ, ಮನಕೆ ಹಿಡಿಸಿತು. ಸಿನೆಮಾ ಅಷ್ಟು ಕೆಟ್ಟದಾಗಿದೆಯೆ
ಅಮ್ನೇಶಿಯಾ ಅಂದ್ರೆ ನಿದ್ರಾಹೀನತೆ ಅಲ್ರೀ ಮರೆವಿನ ರೋಗ, ನಿದ್ರಾಹೀನತೆಗೆ ಇನ್ಸೋಮ್ನಿಯಾ ಅಂತಾರೆ.
ree tumba bejarayitu. obradaru film bage chenagi comment madidarala anta. adre odida mele bejaru maretu obne joragi nake. adu patrika kacheriya dedline avadhiyali. abb obne hote hunaguvavarege nake kanri
@Narayana M S: ಹೌದು ನೀವು ಸರಿ, ಇನ್ಸೋಮ್ನಿಯಾ ಬದಲು ತಪ್ಪಾಗಿ ಅಮ್ನೆಸಿಯ ಅಂತ ಬರೆದಿರುವೆ. ತಿದ್ದಿದ್ದಕ್ಕೆ ಧನ್ಯವಾದಗಳು.