ನಾ ದಿವಾಕರ್
ಪ್ರಜಾತಂತ್ರ ವ್ಯವಸ್ಥೆಯಲ್ಲಿ ಕಾಣುವ ಒಂದು ಲೋಪ ಎಂದರೆ ಇಲ್ಲಿನ ಮುಕ್ತ ವಾತಾವರಣದಲ್ಲಿ ಸುಸ್ಥಿರ ಸಮಾಜಕ್ಕೆ ಅಗತ್ಯವಾದ ವಿದ್ಯಮಾನಗಳಿಗೆ ಇರುವಷ್ಟೇ ಅವಕಾಶ ಮನುಕುಲ ವಿರೋಧಿ ಧೋರಣೆಗಳ ಬೆಳವಣಿಗೆಗಳಿಗೂ ಇರುತ್ತದೆ. ಹಾಗಾಗಿಯೇ ಮಾನವ ಇತಿಹಾಸದಲ್ಲಿ ಸಾರ್ವಕಾಲಿಕವಾಗಿ ಸ್ವೀಕೃತವಾಗಿರುವ ಪ್ರಜಾತಂತ್ರ ವ್ಯವಸ್ಥೆ ಇನ್ನೂ ಪರಿಪೂರ್ಣತೆಯನ್ನು ಪಡೆದಿಲ್ಲ. ಪ್ರಜೆಗಳಿಗಾಗಿ, ಪ್ರಜೆಗಳಿಂದ ಮುನ್ನಡೆಯುವ ಈ ವ್ಯವಸ್ಥೆ ಪರಿಪೂರ್ಣತೆಯನ್ನು ಹೊಂದಬೇಕಾದರೆ ಪ್ರಜೆ ಎನ್ನುವ ಪದದ ವ್ಯಾಪ್ತಿ, ಹರವು, ಉತ್ತರದಾಯಿತ್ವ, ಹಕ್ಕುಗಳು, ಹೊಣೆಗಾರಿಕೆ ಮತ್ತು ಪಾತ್ರವನ್ನು ಸ್ಪಷ್ಟಪಡಿಸುವುದು ಅಗತ್ಯ. ಪ್ರಜಾ ಪ್ರಾತಿನಿಧ್ಯ ಪದ್ಧತಿಯಲ್ಲಿ ಸ್ಥಾಪಿತವಾಗುವ ವಿಶ್ವದ ಅನೇಕ ಪ್ರಜಾತಂತ್ರ ವ್ಯವಸ್ಥೆಗಳಲ್ಲಿ ಈ ಒಂದು ಸ್ಪಷ್ಟೀಕರಣ ದೊರೆಯುವುದಿಲ್ಲ, ಭಾರತವನ್ನೂ ಸೇರಿದಂತೆ. ಹಾಗಾಗಿಯೇ ಭಾರತದ ಪ್ರಜಾತಂತ್ರ ವ್ಯವಸ್ಥೆ ಒಂದು ಸುಂದರ ಗುಲಾಬಿ ತೋಟದಂತೆ ಕಂಗೊಳಿಸುತ್ತಿದೆ. ನಳನಳಿಸುವ, ಘಮಘಮಿಸುವ ಹೂಗಳ ತೆರೆಮರೆಯಲ್ಲೇ ಅಪಾಯಕಾರಿ ಮುಳ್ಳುಗಳು ಮೆರೆಯುತ್ತಿರುತ್ತವೆ. ಕಪ್ಪು ಬಿಳುಪಿನ ಸಮಾಗಮ ಇಲ್ಲದೆ ಜೀವನದ ಸಾಕ್ಷಾತ್ಕಾರ ಸಾಧ್ಯವಿಲ್ಲ ಎಂಬ ವೇದಾಂತದ ನಂಬಿಕೆಗಳ ಹಿನ್ನೆಲೆಯಲ್ಲಿ ಹೂವು ಮುಳ್ಳುಗಳ ಸಂಗಮವನ್ನು ಸ್ವಾಗತಿಸುವ ಸಾತ್ವಿಕತೆಯನ್ನು ಸಮಾಜದಲ್ಲಿ ವ್ಯವಸ್ಥಿತವಾಗಿ ಬೆಳೆಸಲಾಗುತ್ತದೆ. ಸಮಸ್ಯೆ ಉದ್ಭವಿಸುವುದು ಗುಲಾಬಿ ತೋಟದ ಮುಳ್ಳುಗಳು ಹೂಗಳ ವ್ಯಾಪ್ತಿಯನ್ನು ಮೀರಿ ಬೆಳೆದು ನಿಂತಾಗ ಮಾತ್ರ.
ಬಹುಶಃ ಭಾರತದ ಪ್ರಜಾತಂತ್ರ ವ್ಯವಸ್ಥೆ ಇಂತಹ ಒಂದು ಅಪಾಯಕಾರಿ ಸಂದರ್ಭದಲ್ಲಿದೆ. ವಸಾಹತುಶಾಹಿಯಿಂದ ಮುಕ್ತವಾಗಿ ಆರು ದಶಕಗಳೇ ಕಳೆದಿವೆ. ಈ ಅವಧಿಯಲ್ಲಿ ಭಾರತದ ಜನಸಂಖ್ಯೆ ಆರು ಪಟ್ಟು ಹೆಚ್ಚಾಗಿದೆ. ಸಂಪನ್ಮೂಲಗಳು ವೃದ್ಧಿಯಾಗಿದೆ. ಆಥರ್ಿಕ ವ್ಯವಸ್ಥೆ ವಿಶ್ವಮಾನ್ಯತೆಯನ್ನು ಪಡೆಯುವ ಮಟ್ಟಿಗೆ ಬೆಳೆದಿದೆ. ನೈಸಗರ್ಿಕ ಸಂಪತ್ತು ವಿಪುಲವಾಗಿದೆ. ದೇಶದ ಜನತೆ ಹೆಚ್ಚು ಸುಶಿಕ್ಷಿತರಾಗುತ್ತಿದ್ದಾರೆ. ಆಧುನಿಕತೆಯತ್ತ ದೇಶ ದಾಪುಗಾಲು ಹಾಕುತ್ತಿದೆ. ಸಾಮಾಜಿಕ ನ್ಯಾಯ ಹಲವಾರು ಜನಸಮುದಾಯಗಳಿಗೆ ಮರೀಚಿಕೆಯೇ ಆಗಿದ್ದರೂ ವಿಶಾಲ ತಳಹದಿಯಲ್ಲಿ ಶೋಷಿತ ಜನಸಮುದಾಯಗಳಿಗೆ ಕೊಂಚ ಮಟ್ಟಿನ ನ್ಯಾಯ ದೊರಕಿದೆ. ಸಮಕಾಲೀನ ಸಮಾಜದ ಅವಶ್ಯಕತೆಗಳಿಗೆ ಪೂರಕವಾಗಿ ಭಾರತ ವಿಜ್ಞಾನ ಕ್ಷೇತ್ರದಲ್ಲಿ ವಿಶ್ವಮಾನ್ಯತೆ ಪಡೆದಿದೆ. ಮಂಗಳ ಗ್ರಹಕ್ಕೂ ಕಾಲಿಟ್ಟಿದೆ. ಚಂದ್ರಯಾನದ ಸಾಹಸಕ್ಕೆ ಮುಂದಾಗಿದೆ. ವಿಶ್ವದ ಯಾವುದೇ ಪ್ರಬಲ ಶಕ್ತಿಯನ್ನು ಎದುರಿಸುವ ಸಾಮಥ್ರ್ಯ, ಅಂದರೆ ಮಿಲಿಟರಿ ಸಾಮಥ್ರ್ಯ, ಹೊಂದಿದೆ. ವಿಜ್ಞಾನ, ತಂತ್ರಜ್ಞಾನ ಮತ್ತು ಉನ್ನತ ಶಿಕ್ಷಣಕ್ಕಾಗಿ ಹೊರದೇಶಗಳತ್ತ ನೋಡುತ್ತಿದ್ದ ಭಾರತ ಇಂದು ಈ ಕ್ಷೇತ್ರಗಳಲ್ಲಿ ಮುಂಚೂಣಿ ಪಾತ್ರ ವಹಿಸುತ್ತಿದೆ. ಈ ಸುಂದರ ಗುಲಾಬಿ ಹೂಗಳು ಭಾರತವನ್ನು, ಕವಿ ಇಕ್ಬಾಲ್ ಹೇಳಿದಂತೆ, ಒಂದು ಅದ್ಭುತ ಹೂದೋಟದಂತೆ ಮಾಡಿವೆ.

ಸಸ್ಯ ಲೋಕದ ಒಂದು ವೈಶಿಷ್ಟ್ಯವೆಂದರೆ ಯಾವುದೇ ಸಸ್ಯಗಳು ಎತ್ತರಕ್ಕೆ ಬೆಳೆದಂತೆಲ್ಲಾ ತಳಮಟ್ಟದಲ್ಲಿರುವ ಚಿಕ್ಕ ಪುಟ್ಟ ಗಿಡಗಂಟಿಗಳು, ಕಳೆ ಮತ್ತು ಹುಲ್ಲು ನಗಣ್ಯವಾಗುತ್ತವೆ. ಗುಲಾಬಿ ತೋಟದ ಸೌಂದರ್ಯವನ್ನು ಸವಿಯಲು ತೋಟದೊಳಗೆ ನಡೆದಾಡುವ ಪ್ರಬುದ್ಧ ಮನಸ್ಸುಗಳೂ ಸಹ ತಮ್ಮ ಕಾಲಡಿಗೆ ಸಿಲುಕಿ ನಲುಗಿಹೋಗುವ ಹುಲ್ಲು ಕಡ್ಡಿಗಳನ್ನು ಲೆಕ್ಕಿಸುವುದೇ ಇಲ್ಲ. ಆ ಹುಲ್ಲು ಕಡ್ಡಿಗಳಿಗೂ ಜೀವವಿದೆ, ಆತ್ಮ ಸಂವೇದನೆ ಇದೆ, ಒಂದು ಬದುಕು ಇದೆ ಎನ್ನುವ ಪರಿವೆಯೇ ಇಲ್ಲದಂತೆ ಸುವಾಸನೆಯ ಲೋಕದಲ್ಲಿ ವಿಹರಿಸುವ ಪ್ರವೃತ್ತಿ ಸಹಜವಾಗಿಯೇ ಮಾನವ ಸಮಾಜದಲ್ಲಿ ಅಂತರ್ಗತವಾಗಿದೆ. ನೆಲದ ಮೇಲೆ ನಡೆದಾಡುವ ಪ್ರಭೃತಿಗಳಿಗೆ ಈ ಹುಲ್ಲು ಕಡ್ಡಿಗಳು ಕಾಲಡಿ ಹೊಸಕಿಹಾಕಬಹುದಾದ ತ್ಯಾಜ್ಯದಂತೆ ಕಂಡುಬರುತ್ತವೆ. ನೆಲದ ಸ್ಪರ್ಶವನ್ನೇ ಮಾಡದೆ ಬಾನಾಡಿಗಳಂತೆ ಆಕಾಶದಿಂದಲೇ ಹೂದೋಟದ ಸೌಂದರ್ಯವನ್ನು ಸವಿಯುವ ಮೇಲ್ ಹಂತದ ಪ್ರಭೃತಿಗಳಿಗೆ ಈ ಹುಲ್ಲು ಕಡ್ಡಿಗಳು, ಗಿಡಗಂಟಿಗಳು ಕಾಣುವುದೇ ಇಲ್ಲ. ಕಂಡರೂ ನಿರ್ಲಕ್ಷಿಸಬಹುದಾದ ನಿಜರ್ೀವ ವಸ್ತುಗಳಂತೆ ಮಾತ್ರ ಕಾಣುತ್ತವೆ.
ಪ್ರಜಾತಂತ್ರ ವ್ಯವಸ್ಥೆಯನ್ನು ನಿರ್ವಹಿಸುವ ಪ್ರಾತಿನಿಧಿಕ ಶಕ್ತಿಗಳು ಈ ಹೂದೋಟದಲ್ಲಿ ವಿಹರಿಸುತ್ತಲೇ ಇರುತ್ತವೆ. ಹೂಗಳ ಸುವಾಸನೆಯ ಗುಂಗಿನಲ್ಲಿ ಂಟಟ ತಿಜಟಟ ಎಂಬ ಭ್ರಮೆಯಲ್ಲಿ ಜೀವನದ ಆಸ್ವಾದ ಪಡೆಯುತ್ತವೆ. ಸುಂದರವಾದ ಹೂಗಳನ್ನು ಮುಟ್ಟಿ ನೋಡುವ ಸಂದರ್ಭದಲ್ಲಿ ಮುಳ್ಳು ಚುಚ್ಚಿಕೊಂಡಾಗ ಈ ಪ್ರಾತಿನಿಧಿಕ ಶಕ್ತಿಗಳಿಗೆ ನಮ್ಮ ಪ್ರಜಾತಂತ್ರ ವ್ಯವಸ್ಥೆಯ ಹಿಂದೊಗಲಿನಲ್ಲಿ ಇರುವ ಕಂಟಕದ ಸ್ಪರ್ಶ ಆಗಬೇಕು. ಆದರೆ ಹಾಗಾಗುತ್ತಿಲ್ಲ. ಮುಳ್ಳುಗಳು ಏಕೆ ಬೆಳೆದಿವೆ ಎಂದು ಯೋಚಿಸುವ ಅವಶ್ಯಕತೆ ಇರುವುದಿಲ್ಲ. ಏಕೆಂದರೆ ಇದು ನೈಸಗರ್ಿಕ ವಿದ್ಯಮಾನ. ಮುಳ್ಳುಗಳು ಇರಕೂಡದು ಎಂಬ ಭ್ರಮೆಯೂ ಇರಬೇಕಿಲ್ಲ. ಏಕೆಂದರೆ ಇದು ವ್ಯವಸ್ಥೆಯ ಅನಿವಾರ್ಯತೆ. ಮುಳ್ಳುಗಳನ್ನು ಕಿತ್ತೊಗೆದರೂ ಬೆಳೆಯುತ್ತಲೇ ಇರುವುದೂ ನೈಸಗರ್ಿಕ ಪ್ರಕ್ರಿಯೆಯೇ. ಹಾಗಾದಲ್ಲಿ ನಮ್ಮ ಆಯ್ಕೆ ಏನು ? ಹೂಗಳ ಸೌಂದರ್ಯವನ್ನೇ ಹಾಳು ಮಾಡುವ ಮಟ್ಟಿಗೆ ಮುಳ್ಳುಗಳು ಬೆಳೆಯದಂತೆ ಎಚ್ಚರ ವಹಿಸುವುದು ಒಂದು ಸ್ವಾಸ್ಥ್ಯ ಸಮಾಜದಿಂದ ಸಾಧ್ಯವಾಗಬಹುದಾದ ಕೆಲಸ. ಆದರೆ ಇದಕ್ಕೆ ಸಮಾಜದ ಸ್ವಾಸ್ಥ್ಯ ಮಾನದಂಡ. ಭಾರತವನ್ನು ಸುಂದರ ಹೂದೋಟಕ್ಕೆ ಹೋಲಿಸಿ ಗುಲಿಸ್ಥಾನ್ ಎಂದು ಕರೆದ ಕವಿ ಇಕ್ಬಾಲ್, ಸ್ವಾತಂತ್ರ್ಯದ ನಂತರ ಭಾರತೀಯ ಸಮಾಜದಲ್ಲಿ ಈ ಸ್ವಾಸ್ಥ್ಯತೆ ಉಂಟಾಗುತ್ತದೆ ಎಂದು ಭಾವಿಸಿದ್ದರೇನೋ ? ದುರಂತವೆಂದರೆ ಇದು ಸಾಧ್ಯವಾಗಿಲ್ಲ.
ಕಂಟಕಗಳಿಂದ ಮುಕ್ತರಾಗುವುದು ಹೇಗೆ ? ಇದು ಚರ್ಚೆಗೊಳಗಾಬೇಕಾದ ವಿಚಾರ.






0 Comments