ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ಸೀರೆಯೊಳಗಿನ ನೋವುಗಳು, ಕೃಷ್ಣನ ಸಾಹಿತ್ಯಕ್ಕೆ ಸ್ಫೂರ್ತಿಗಳು..’ ಸುಧಾ ಬರೀತಾರೆ

ಸೀರೆಯೊಳಗಿನ ನೋವುಗಳು, ಕೃಷ್ಣನ ಸಾಹಿತ್ಯಕ್ಕೆ ಸ್ಫೂರ್ತಿಗಳು..

ಸುಧಾ ಬಿ ಓ


ನಂಗೆ ಸಾಹಿತ್ಯದ ಆಸಕ್ತಿ ಹೆಚ್ಚೂ ಇದೆ,ಅದರ ಹುಚ್ಚು ಇದೆ.ಒಮ್ಮೊಮ್ಮೊ ಅನಿಸೋದು ಆಲನಹಳ್ಳಿ ಸಾಹಿತ್ಯಾನ ನಾನು ಯಾಕೆ ಓದಲಿಲ್ಲ ಅಂತ.ಛೇ! ನಾವೆಂತ ಮೂರ್ಖರು ಅಂದ್ರೆ ಕೆಲವರ ಮಾತಿಗೆ ಶರಣಾಗತರಾಗಿಬಿಡ್ತೀವಿ ಕಣ್ರಿ. ಯಾರೋ ಹೇಳಿದ್ರು ಅವರೇನು ಅಂತಾ ಬರಹಗಾರರಲ್ಲ,ಬರೀ ಲೈಂಗಿಕತೆ! ಏನು ಓದ್ಬೇಕಪ್ಪ ಅಂತರ್ನ ಅಂತ. ಅವ್ರೇನೋ ಹೇಳಿದ್ರು, ನಿಜಕ್ಕೂ ನಾನು ದಡ್ಡೀನೆ. ಕೊನೆಗೂ ಅವಕಾಶ ಸಿಕ್ತು.ಮೋಡದ ಮರೆಯ ತಾರೆ ಶ್ರೀಕೃಷ್ಣ ಆಲನಹಳ್ಳಿಯವರ ಸಾಹಿತ್ಯ ಸಪ್ತಾಹ ಕಾರ್ಯಕ್ರಮಕ್ಕೆ ಹೋಗಲು.
ನಿಜಕ್ಕೂ ಕೃಷ್ಣ ಮೋಡದ ಮರೆಯ ತಾರೆಯೆ. ಅಲಕ್ಷಿತ ಸಾಹಿತಿಯ ಕಡೆ ಲಕ್ಷ್ಯ ಕೊಟ್ಟ ಆದಿಮ ಆಜೀವಕ ಗುರುಕುಲಕ್ಕೆ ಸಹೃದಯರು ಋಣಿಯಾಗಿದ್ದಾರೆ. ಕೃಷ್ಣ ನವ್ಯ ಬರಹಗಾರ.ಬರೆದದ್ದು 3 ಕಾದಂಬರಿ. ‘ಕಾಡು’, ‘ ಪರಸಂಗದ ಗೆಂಡೆತಿಮ್ಮ’
‘ಭುಜಂಗಯ್ಯನ ದಶಾವತಾರಗಳು’. ಲಂಕೇಶ್,ಅನಂತಮೂತರ್ಿ ಸಾಹಿತಿಗಳಂತವರ ಕೈಯಲ್ಲೇ ಕೃಷ್ಣನು ಬಳಸುವ ಭಾಷೆ ಅದ್ಭುತವಾಗಿದೆರ” ಎಂದು ಹೊಗಳಿಸಿಕೊಂಡಿದ್ದರೂ ಅವರಷ್ಟು ಪ್ರಚಲಿತವಾಗಲಿಲ್ಲ. ಈ ಕಾಲದ ತುತರ್ು ಕನ್ನಡದ ಶ್ರೇಷ್ಟ ಮನಸ್ಸು ಆಲನಹಳ್ಳಿ. ಬದುಕಿನ ಕೇಂದ್ರವಾದ ‘ಗಂಡು-ಹೆಣ್ಣಿನ ಸಂಬಂಧ’, ‘ಕಾಮ-ಪ್ರೇಮ’ದ ವಿಚಾರದ ಆಲೋಚನೆಗಳೇ ಕೃಷ್ಣನ ಬರವಣಿಗೆಯ ಸಾಲುಗಳಿಗೆ ಜೀವ ತುಂಬಿದ ಅಕ್ಷರಗಳಾಗಿವೆ. ಅವರ ಕಾದಂಬರಿಗಳಲ್ಲಿ ಸಮಾಜದ ಬಹುತೇಕ ಸಮಸ್ಯೆಗಳಾದ ಯಜಮಾನ್ಯ,ಜಾತಿ,ವರ್ಗ ಸಂಘರ್ಷ,ಹೆಣ್ಣಿನ ಶೋಷಣಾ ಸ್ಥಿತಿ ಎಲ್ಲವನ್ನೂ ಕಾಣಬಹುದು. ಆದರೆ ನನ್ನನ್ನು ಕಾಡಿದ್ದು ಆ ಸೀರೆಯೊಳಗಿನ ನೋವಿನ ಸ್ಥಿತಿಗಳು”. ‘ಜೀವನ ಪ್ರೀತಿ ಇದ್ದವನು,ಜೀವ ತುಂಬಿ ಬರೆಯಬಹುದು’ ಎಂಬ ಕೃಷ್ಣನ ಮಾತಿಗೆ ಸಾಕ್ಷಿ ಅವನ ಕಾದಂಬರಿಗಳು.
‘ಕಾಡು’ ಕಾದಂಬರಿ ಕಾಡಿದ್ದು… … ‘ಕಾಡು’ ಕಿಟ್ಟಿ ಎಂಬ ಬಾಲಕ ಕಾಣುವ ತನ್ನೂರಿನ ನಿಜಸ್ಥಿತಿಗಳೊಂದಿಗೆ ಹೆಣೆದುಕೊಂಡಿದೆ. ವರ್ಗಸಂಘರ್ಷವೇ ಮೇಲಾಗಿರುವ ಊರಿನಲ್ಲಿ ಚಂದ್ರಯ್ಯ ಊರ ಮುಖಂಡ. ಮದುವೆಯಾದರೂ ನೆರೆಊರಿನ ಬಸಕ್ಕನ ಸಂಗ ಬಯಸಿದನು. ಎದುರೇ ನಿಲ್ಲದ,ಉಸಿರಾಡಲು ಕಷ್ಟಪಡುವ ಹೆಂಡತಿ ಚಂದ್ರಯ್ಯನ ಕೈಹಿಡಿದ ಸಂಗಾತಿ. ಭಯಭೀತಳಾಗೇ ಬದುಕುವ ಆಕೆ ದಿನರಾತ್ರಿ ತನ್ನ ಗಂಡ ಪಕ್ಕದೂರಿನ ಬಸಕ್ಕನ ಮನೆಯಲ್ಲಿ ಹಾಸಿಗೆ ಹಂಚಿಕೊಳ್ಳುವ ಕಟುಸತ್ಯ ಗೊತ್ತಾದರೂ,ಮನವಿದ್ದ ಕಲ್ಲುಬಂಡೆಯಂತೆ ಸುಮ್ಮನಿರುತ್ತಿದ್ದವಳು”. ಎಂದಾದರೊಮ್ಮೆ ತೋರುವ ಪ್ರೀತಿಗಾಗಿ ಜೀವಹಿಡಿದುಕೊಂಡವಳು. ಸೂಳೆಯ ಪಟ್ಟ ಹೊತ್ತ ಬಸಕ್ಕ ಚಂದ್ರಯ್ಯನಲ್ಲಿ ಬಯಸಿದ್ದು ಹಣ,ಅಂತಸ್ತು,ವಡವೆ,ವಸ್ತ್ರವನ್ನಲ್ಲ, ಸುಖವನ್ನು ಪ್ರೇಮವನ್ನು.ಅನೈತಿಕತೆಯಲ್ಲೂ ನೈತಿಕತೆ ಮೆರೆದವಳು ಬಸಕ್ಕ. ತನ್ನೂರಿನ ಗೌಡನಿಂದ ಚಂದ್ರಯ್ಯನಿಗೆ ಆಪತ್ತು ಕಾದಿದೆ ಎಂದು ತಿಳಿದ ಕೂಡಲೇ ಅವನನ್ನ ಸುರಕ್ಷಿತವಾಗಿರಲು ರಾತ್ರೋ ರಾತ್ರಿ ಹೇಳಿ ಕಳುಹಿಸಿದವಳು. ಅಂತಃಕರಣವಿರುವ ಹೆಣ್ಣಿಬ್ಬರ ಮನಸ್ಸು,ದೇಹ ಬಯಸಿದ್ದು ಚಂದ್ರಯ್ಯ ನೀಡುವ ಸುಖ ಮತ್ತು ಪ್ರೇಮವನ್ನು.
‘ಭುಜಂಗಯ್ಯನ ದಶಾವತಾರಗಳು’– ‘ಲೋ.. .. ನೀನಿದ್ದೀಯಲ್ಲಾ’ ಎಂಬ ಶಕ್ತಿಯ ಸ್ಮರಣೆ ಮಾಡುತ್ತ ಬದುಕುವ ಭುಜಂಗಯ್ಯನ ಕಥೆಯಿದು. ಲಿಂಗಾಯಿತ ಸಮುದಾಯದವನಾದರೂ ಭುಜಂಗಯ್ಯನ ಒಡನಾಟವೆಲ್ಲಾ ಬೇರೆಯವರ ಜೊತೆಯಲ್ಲ್ಲಿಯೇ. ಬಡವರು,ದೀನ ದಲಿತರನ್ನು ಕಂಡರೆ ಅಪಾರ ಪ್ರೀತಿ.ಕಷ್ಟವೆಂದಾಗ ಮಿಡಿಯುವ ಮನಸ್ಸು ಭುಜಂಗಯ್ಯನದು. ಇಲ್ಲಿಯೂ ಜಾತಿ,ಯಜಮಾನ್ಯ,ವರ್ಗಸಂಘರ್ಷವಿದ್ದರೂ ನನ್ನನ್ನು ಕಾಡೋದು ಸುಶೀಲಾಳ ಪಾತ್ರ. ಭುಜಂಗಯ್ಯ ಗೃಹಸ್ಥ. ಸುಶೀಲಾ ಬಳೆಗಾರನ ಮಗಳು. ತಂದೆ ತೀರಿಕೊಂಡ ನಂತರ ಭುಜಂಗಯ್ಯನ ಹೋಟೆಲ್ ನ ಚಿಕ್ಕಮನೆಯಲ್ಲೇ ವಾಸವಿದ್ದವಳು. ಒಳ್ಳೆಯ ಮನಸ್ಸಿರುವ ಯುವಕನನ್ನು ಕೈಹಿಡಿಯಬೇಕೆಂದು ಬಯಸುತ್ತಿದ್ದ ಆಕೆಯ ಮನಸ್ಸಿನಲ್ಲಿ ಮೂಡುತ್ತಿದ್ದದ್ದು ಭುಜಂಗಯ್ಯನ ಚಿತ್ರ. ಹೋಟೆಲ್ ನ ಕೆಲಸಗಾರನೊಬ್ಬ ಸುಶೀ ಮೇಲೆ ಕಣ್ಣಾಕಿ,ಆಕೆ ಸಿಗದಿದ್ದಾಗ ಭುಜಂಗಯ್ಯನ ಹೆಂಡತಿ ಪಾರ್ವತಿ ಹತ್ತಿರ ಸುಶೀಗೆ ಸೂಳೆ ಪಟ್ಟಕಟ್ಟಿ ಸಂಬಂಧವಿದೆ ಎಂಬ ಸುದ್ದಿ ಹೇಳುತ್ತಾನೆ. ಮೊದಲೇ ಗೈಯ್ಯಾಳಿ ಪಾರ್ವತಿ. ಪಂಚಾಯತಿ ಕರೆಸುತ್ತಾಳೆ. ತನ್ನವರಾರು ಇಲ್ಲದ,ಮದುವೆಯಾಗದ ಸುಶೀಲ ಸಮಾಜ ಕೊಟ್ಟ ಪಟ್ಟಕ್ಕೆ ಅಮಾಯಕಳಾಗಿ, ಅಸಹಾಯಕಳಾಗಿ ತಲೆಬಾಗಿಸುತ್ತಾಳೆ. ಆಕೆಯ ಮುಗ್ಧತೆಗೆ ಪ್ರೀತಿಗೆ ಮನಸೋತ ಭುಜಂಗಯ್ಯನು ಅವಳ ಸಂಗಾತಿಯಾಗುತ್ತಾನೆ. ತಾಳಿಕಟ್ಟಿ ಬಂಧಿಸದೇ ಅವಳ ಪ್ರೀತಿಯ ನಗು ಅರಳುವ ವಸ್ತುವೊಂದನ್ನು ಆಕೆಯ ಕುತ್ತಿಗೆಗೆ ಹಾಕಿ ಅವಳನ್ನು ಸಂಗಾತಿಯಾಗಿ ಸ್ವೀಕರಿಸುತ್ತಾನೆ.ಅವನನ್ನೇ ಬದುಕೆಂದು ನಂಬಿದ್ದ ಆಕೆಗೆ ಭುಜಂಗಯ್ಯ ಕಣ್ಣನ್ನು ಕಳೆದುಕೊಂಡದ್ದು ಭರಿಸಲಾಗದ ದುಃಖವನ್ನು ತರಿಸುತ್ತದೆ. ಆಸ್ಪತ್ರೆಗೆ ಬಂದ ಪಾರ್ವತಿ ಸುಶೀಯನ್ನು ಬೈಯುತ್ತಿದ್ದಾಗ,ಪಾರ್ವತಿಯ ಅಪ್ಪ ನಿನ್ನ ಈ ವಟವಟ ಮಾತುಗಳೇ ಇದಕೆಲ್ಲ ಕಾರಣ ಅಂದಾಗ ತಟ್ಟನೆ ಬಂದುತ್ತರ ನನಗೆ ನಿಧಾನಕ್ಕೆ ಮಾತಾಡೊಕ್ಕೆ ಬರಲ್ಲ,ನಯವಾಗಿ ಮಾತಾಡದು ಗೊತ್ತಿಲ್ಲ”ಎಂಬುದು ಇಡೀ ಪಾರ್ವತಿಯ ಮನಸ್ಥಿತಿ,ಭುಜಂಗಯ್ಯನ ಮೇಲಿರುವ ಪ್ರೀತಿ ಈ ಮಾತಿನಿಂದ ವ್ಯಕ್ತವಾಗುತ್ತದೆ.ಊರಿಗೆ ಹಿಂದಿರುಗಿದಾಗ ಸುಶೀಯ ಕೈಯನ್ನು ಭುಜಂಗಯ್ಯನ ಕೈಬಿಗಿಹಿಡಿದಿದ್ದ ರೀತಿ ನೋಡಿದ ಪಾರ್ವತಿಯ ಮನಸ್ಸು ದುಃಖದಿಂದ ಮನೆಕಡೆ ಹೆಜ್ಜೆ ಹಾಕುತ್ತದೆ.
ಅರಿವಿಲ್ಲದೇ ಬೇಕೆಂದಾಗ ಬೇಡವೆಂದಾಗ ಬರುವ ಇಂತಹ ಪ್ರೀತಿಯ ನೋವುಗಳು ನನ್ನನ್ನು ಕಾಡುತ್ತವೆ. ಸೂಳೆಯರೆಂದರೆ ಆರೋಪ ಮಾಡುವ ಸಮಾಜದೆದುರು ಸುಶೀ ಬಸಕ್ಕಳದು ಅಂತಃಕರಣವಿರುವ ಪ್ರೇಮವೇ ಎಂಬುದು ತಿಳಿಯುತ್ತದೆ. ನಮ್ಮೆಲ್ಲರ ನಡುವೆಯೇ ಇಂತಹವರ ಬದುಕು ನಾಶವಾಗಿದೆ.ಕಾರಣ ನಾವೆಲ್ಲರೂ ಅವರ ನೈಜ ಸ್ಥಿತಿಯನ್ನರಿಯದೇ ಸಮಾಜ ಕೊಟ್ಟ ಅವರ ಪಟ್ಟಕ್ಕೆ ಕೀಳಾದ ಬೆಲೆಕೊಟ್ಟು,ಅವರನ್ನು ಮನುಷ್ಯರೇ ಅಲ್ಲ ಎನ್ನುವ ರೀತಿಯಲ್ಲಿ ನಡೆಸಿಕೊಂಡದಕ್ಕೆ, ನಡೆಸಿಕೊಳ್ಳುತ್ತಿರುವುದಕ್ಕೆ.
ಪರಸಂಗದ ಗೆಂಡೆತಿಮ್ಮ ಕಾದಂಬರಿಯಲ್ಲಿ ನಾಯಕ ತಿಮ್ಮ ಮುಗ್ಧ. ಪರರ ಒಳಿತಿಗಾಗಿಯೇ ಬದುಕುತ್ತಿದ್ದವನು.ಏನನ್ನೂ ಪ್ರಶ್ನೆ ಮಾಡದ ಅವನು ಯಾರೋ ತನ್ನ ಹೆಂಡತಿಯ ಶೀಲದ ಬಗ್ಗೆ ಕಟುವಾಗಿ ಮಾತನಾಡಿದಾಗ ಸಿಟ್ಟಿಗೆದ್ದು ಪ್ರಶ್ನಿಸುತ್ತಾನೆ. ಮರಂಕಿ ಅವನ ಹೆಂಡತಿ. ಹಳ್ಳಿಯವಳಾದರೂ ನಗರಜೀವನವನ್ನು ಬಯಸುವವಳು.ಅವಳ ಆಧುನಿಕತೆಯ ಸಂಕೇತವಾಗಿ ಬಾಡಿ,ಸೀರೆಯೊಳಗೆ ತೊಡುವ ಲಂಗ,ಸೆಂಟ್(ಗಂಧದಹೆಣ್ಣೆ) ಮುಂತಾದವನ್ನು ಆಕೆ ಇಷ್ಟಪಡುತ್ತಿರುತ್ತಾಳೆ. ಅವಳ ಮನಸ್ಸು ಬಯಸಿದ್ದು ಆಕರ್ಷಣೆಯೇ ಎನ್ನುವುದು ಕಾಣುತ್ತದೆ.ತನ್ನ ಗಂಡ ಈ ರೀತಿಯಾಗಿಯೇ ಇರಬೇಕು ಎಂಬುದು ಆಕೆಯ ಆಸೆ. ತನ್ನ ಗಂಡನನ್ನ ಮುದ್ದಿಸುವ ಆಕೆ ಅವನ ಹಳ್ಳಿಯತನವನ್ನು ಹೋಗಲಾಡಿಸಲು ಯತ್ನಿಸುತ್ತಿರುತ್ತಾಳೆ. ಈ ನಡುವೆಯೇ ಊರ ಮೇಸ್ಟ್ರ ಆಕರ್ಷಣೆಗೆ ಮಾರುಹೋಗುತ್ತಾಳೆ. ಬಟ್ಟೆ, ದೇಹ ಶುದ್ಧವಿದ್ದರೆ ಸಾಕಾಗಲ್ಲ, ಮನಸ್ಸು ಶುದ್ಧವಿರಬೇಕು ಎನ್ನುವ ತಿಮ್ಮನ ಮಾತುಗಳು ಮರಂಕಿಯ ಅಸ್ತಿತ್ವವನ್ನೇ ಹಿಡಿದು ಅಲ್ಲಾಡಿಸುತ್ತದೆ. ಆದರೂ ಆಕೆಯ ಬಯಕೆಯನ್ನು ತೀರಿಸಿದ್ದು ಮೇಸ್ಟ್ರು. ಇದನ್ನು ಕಂಡ ತಿಮ್ಮ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುತ್ತಾನೆ. ತನ್ನ ಬಯಕೆಯನ್ನು ಅರಿಯದ ಮುಗ್ದ ಗಂಡನಿಂದ ಸುಖ ಸಿಗಲಾರದ ಮರಂಕಿ ಬಯಸಿದ್ದು ಮೇಸ್ಟ್ರನ್ನ. ಹೇಳಿಕೊಳ್ಳಲಾಗದ ನೋವು ಆಕೆಗೆ ಪರಿಹಾರ ರೂಪವಾಗಿ ಕಂಡದ್ದು ಮೇಸ್ಟ್ರಲ್ಲಿ.
ಹೆಣ್ಣನ್ನು ಮಾತನಾಡದೇ ಇರುವ ಸ್ಥಿತಿಗೆ ತಂದ ಸಮಾಜದಲ್ಲಿ ಈ ಎಲ್ಲಾ ಸೀರೆಯೊಳಗಿನ ನೋವುಗಳು ನೋವುಗಳಾಗಿಯೇ, ಅಪವಾದಗಳಾಗಿಯೇ ಉಳಿದಿವೆ. ಗಂಡು-ಹೆಣ್ಣು, ಕಾಮ-ಪ್ರೇಮ ಇವು ಬದುಕಿನ ಬಹು ಮುಖ್ಯ ಆಯಾಮಗಳು. ಒಂದನ್ನು ಬಿಟ್ಟು ಮತ್ತೊಂದು ಇರಲಾರದು. ಹೆಣ್ಣಿನ ಮನಸ್ಥಿತಿ ಮತ್ತು ದೇಹಸ್ಥಿತಿ ಎರಡನ್ನೂ ಅರಿಯಬೇಕಾದ ಕಾಲದಲ್ಲಿಯೇ ಆಕೆಯನ್ನು ‘ಆರೋಪಿ’ ಸ್ಥಾನಕ್ಕೆ ಬಡ್ತಿ ಕೊಟ್ಟುಬಿಡುತ್ತೇವೆ. ಇದು ಎಲ್ಲ ಕಾಲದಲ್ಲೂ ಎಲ್ಲ ಸಂದರ್ಭದಲ್ಲೂ ಜರುಗುತ್ತಾ ಬಂದಿರುವ ಸತ್ಯ. ಕೃಷ್ಣ ಗಂಡು-ಹೆಣ್ಣಿನ ಸಂಬಂಧಕ್ಕೆ ಅಪಾರ ಬೆಲೆ ಕೊಟ್ಟಿರುವವರು. ಅವರೆಲ್ಲಾ ಬರವಣಿಗೆಯಲ್ಲಿ ಹೆಣ್ಣಿನ ಸ್ಥಿತಿ ಏನು ಎಂಬುದನ್ನು ತಿಳಿಸಿದ್ದಾರೆ. ಈ ಕಾಲದ ತುತರ್ು ಬರವಣಿಗೆಯಾಗಿ ಕೃಷ್ಣನ ಸಾಹಿತ್ಯ ಕಣ್ಣಮುಂದೆ ನಿಲ್ಲುತ್ತದೆ……,
ಕರ್ನಾಟಕ, ಕೇರಳ ರಾಜ್ಯಗಳಲ್ಲಿ ಸಾಹಿತಿಯಾಗಿ ಗುರುತಿಸಿಕೊಂಡ ಕೃಷ್ಣನ ಕಾದಂಬರಿಗಳು ಸಿನಿಮಾಗಳಾದಾಗ, ಸಿನಿಮಾದ ಮೂಲಕ ಜನರ ಮನದಲ್ಲಿ ಬೇರೂರಿದವನು ಕೃಷ್ಣ. ಲೋಕೇಶರ ನಟನೆ ಕೃಷ್ಣನ ಪಾತ್ರಗಳಿಗೆ ಮತ್ತಷ್ಟು ಜೀವತುಂಬಿ ಕೃಷ್ಣನ ಬರವಣಿಗೆಗೆ ವಿಶೇಷ ಮೌಲ್ಯವನ್ನು ತಂದುಕೊಟ್ಟಿದೆ.
 

‍ಲೇಖಕರು G

28 October, 2013

1 Comment

  1. narayanaswamy kempaiah

    Alanahalli Krishna bareda kathe-kadambarigalannagali, Palyagar Langekshra krithigalagali, Shanthinath Desai avru bareda kathe kadambarigalnnagali odadavaru GANDHADA OLAGIDDOO adannu agranisada sthithiyannullavaru.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading