ಡಾ. ಸೀತಾಲಕ್ಷ್ಮಿ ಕರ್ಕಿಕೋಡಿ ಇನ್ನಿಲ್ಲ
ಹೊಸ ತಲೆಮಾರಿನ ವಿಮರ್ಶಕಿ, ಪತ್ರಕರ್ತೆ ಡಾ. ಸೀತಾಲಕ್ಷ್ಮಿ ಕರ್ಕಿಕೋಡಿ ಇಂದು ಸಂಜೆ 8.30 ಕ್ಜೆ ನಿಧನರಾದರು.
ನಾಡಿನ ಹಿರಿಯ ಸಾಹಿತಿ ವಿ.ಗ.ನಾಯಕ್ ಅವರ ಮಗಳು ಸೀತಾಲಕ್ಷ್ಮಿ ‘ವಿಜಯ ಕರ್ನಾಟಕ’ ಪತ್ರಿಕೆಯ ಹಿರಿಯ ಉಪ ಸಂಪಾದಕಿಯಾಗಿದ್ದರು.
‘ಪರಾಮರ್ಶೆ’ ಸಹಿತ ಹಲವು ಕೃತಿಗಳನ್ನು ಅವರು ಕನ್ನಡಕ್ಜೆ ನೀಡಿದ್ದಾರೆ.
ಎರಡು ವರ್ಷಗಳಿಂದ ಅವರು ಅನಾರೋಗ್ಯಕ್ಕೀಡಾಗಿದ್ದರು.
ಸೀತಾಲಕ್ಷ್ಮಿ ಅವರು ತಂದೆ ವಿ.ಗ.ನಾಯಕ, ತಾಯಿ ಶ್ಯಾಮಲಾ ಕರ್ಕಿಕೋಡಿ ಅವರನ್ನು ಅಗಲಿದ್ದಾರೆ.






ಸುದ್ದಿ ತಿಳಿದು ಆಘಾತವಾಯ್ತು.ಪ್ರತಿಭಾಶಾಲಿಯೂ ಕ್ರಿಯಾಶೀಲವೂ ಆಗಿದ್ದ ಆ ಚೇತನಕ್ಕೆ ನನ್ನ ಕಂಬನಿಯ ಬಿಂದುಗಳು..ಹೆತ್ತವರ ಒಡಲ ಸಂಕಟದಲ್ಲಿ ನಾವೂ ಇದ್ದೇವೆ.
ಬಹಳ ದುಃಖದ ಸುದ್ದಿ. ಕನ್ನಡ ಕ್ಷೇತ್ರಕ್ಕೆ ಸಾಹಿತ್ಯ ತುಂಬಲಾರದ ನಷ್ಟ. ಅವರ ಆತ್ಮಕ್ಕೆ ಚಿರಶಾಂತಿಯನ್ನು ಕೋರುತ್ತೇನೆ ಮತ್ತು ಡಾ. ಸೀತಾಲಕ್ಷ್ಮಿ ಕರ್ಕಿಕೋಡಿ ಬಂಧುಬಳಗದವರಿಗೆ ಅಗಲುವಿಕೆಯ ದುಃಖವನ್ನು ಸಹಿಸುವ ಶಕ್ತಿಯನ್ನು ಭಗವಂತನು ನೀಡಲಿ ಎಂದು ಪ್ರಾರ್ಥಿಸುತ್ತೇನೆ.