ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸಿಂಪಲ್ಲಾಗ್‌ ಒಂದು ಸೂಪರ್ಬ್‌ ಚಿತ್ರ..

dilawar

ದಿಲಾವರ್ ರಾಮದುರ್ಗ 

ತಮಾಷೆ, ಶಾಬ್ದಿಕ ಅಥವಾ ಪದಗಳ ಆಟ, ಹಿತವೆನಿಸುವ ಪಾತ್ರಗಳು ಮತ್ತು ಅನಿರೀಕ್ಷಿತ ಅಂತ್ಯಗಳನ್ನು ನೀಡುವ ಅಮೆರಿಕದ ಹೆಸರಾಂತ ಸಣ್ಣ ಕತೆಗಾರ ಓ ಹೆನ್ರೀ (ವಿಲಿಯಂ ಸಿಡ್ನಿ ಪೊರ್ಟರ್‌) ಅವರ ಕತೆಗಳು ಮತ್ತು ಚಿಕನ್‌ ಸೂಪ್‌ ಫಾರ್‌… ಸೋಲ್‌ ಪುಸ್ತಕಗಳಲ್ಲಿ ಬರುವ ಪುಟ್ಟ ಪುಟ್ಟ ಚಂದದ ಕತೆಗಳ ಹಾಗಿರುವ ಒಂದು ನವಿರು ಕತೆಯನ್ನಿಟ್ಟುಕೊಂಡ ‘ಸಿಂಪಲ್ಲಾಗ್ ಇನ್ನೊಂದ್‌ ಲವ್‌ ಸ್ಟೋರಿ’ ಎನ್ನುವ ಲವ್ಲೀ ಚಿತ್ರ ರೂಪಿಸಿರುವ ಅಶು ಬೆದ್ರ ಮತ್ತು ತಂಡದ ಎಲ್ಲರಿಗೂ ದಿಲ್‌ ಸೇ ಸಲಾಂ.

simpallaagi innonduಸಿಂಪಲ್ಲಾಗ್‌… ಒಳಗೊಂದು ಲವ್ಲೀ ಜರ್ನಿ ಇದೆ. ಕತೆಯ ಪಾತ್ರಗಳು ತಮ್ಮ ಜತೆ ಪ್ರೇಕ್ಷನನ್ನೂ ಜರ್ನಿ ಮಾಡಿಸುತ್ತವೆ. ಇದು ಪ್ರೇಮಜಗತ್ತಿನೊಳಗೊಂದು ಪುಟ್ಟ ಜರ್ನಿ ಅಷ್ಟೇ. ಸಿಂಪ್ಲೀ ಸುಪರ್ಬ್‌. ಒಂದಷ್ಟು ಸಾಹಸ, ಹರಟೆ, ತರಲೆ, ತಮಾಷೆ, ಹುಡುಕಾಟ ಒಂಚೂರು ಬದ್ಮಾಶ್‌ಗಿರಿ ಎಲ್ಲ ಜೊತೆ ಜೊತೆಯಾಗಿ ಪ್ರೇಮಿಗಳ ಇಡೀ ಪಯಣವನ್ನು ಸುಖದ ದಡಕ್ಕೆ ಸೇರಿಸುತ್ತವೆ. ಪ್ರತಿಯೊಬ್ಬರ ಬದುಕಿನ ಜರ್ನಿಯಲ್ಲೂ ಇಷ್ಟೇ ಆಗೋದು. ಸ್ನೇಹ, ಪ್ರೀತಿ, ಸಂಬಂಧಗಳಲ್ಲಿ ಸಹಜ ಸ್ಪಂದನೆ ಮತ್ತು ನಿರೀಕ್ಷೆಗಳು ಪ್ರಾಮಾಣಿಕವಾಗಿದ್ದರೆ ಪ್ರೇಮ ಪಯಣ ಸುಖಾಂತ್ಯವೇ.

simple suniಸರಳ ನಿರೂಪಣೆ, ಕಚಗುಳಿ ಇಡುವ ಮಾತುಗಳು, ಎಷ್ಟು ಬೇಕೊ ಅಷ್ಟೇ ತಮಾಷೆ. ಚೇಷ್ಟೆ, ಸಾಹಸ ಮತ್ತು ಲವ್‌ ಸಿಕ್ವೆನ್ಸ್, ಸಾಧಾರಣ ಲುಕ್‌ ಇರುವ ಹುಡುಗ, ಹುಡುಗಿಯರು ಮತ್ತು ಪುಟಾಣಿ ಪ್ರತಿಭೆ… ಇವೆಲ್ಲವನ್ನಿಟ್ಟುಕೊಂಡು ನವಿರಾದ ಕಾಮಿಡಿ ಸಾಧ್ಯವಾಗಿಸಿದ ನಿರ್ದೇಶಕ ಸುನಿ ಚಿತ್ರವನ್ನು ಗೆಲ್ಲಿಸಿದ್ದಾರೆ. ಸಾಹಸಿ ಯುವಕ, ನಟ, ನಿರ್ಮಾಪಕ ಅಶು ಬೆದ್ರ ಅವರಿಗೆ ಈ ಚಿತ್ರ ಭರ್ಜರಿ ಗೆಲುವು ತಂದುಕೊಟ್ಟಿದೆ. ಅವರಿಂದ ಇನ್ನಷ್ಟು ಇಂಥ ಸಿಂಪ್ಲಿ ಸೂಪರ್ಬ್‌ ಚಿತ್ರಗಳನ್ನು ಧಾರಾಳವಾಗಿ ನಿರೀಕ್ಸಿಬಹುದು. ಆತ್ಮೀಯ ಗೆಳೆಯ ಅಶು ಬೆದ್ರಗೆ ಅಭಿನಂದನೆ ದಿಲ್‌ ಸೇ.
______________
* ಮೇಘನಾ ಗಾಂವ್ಕರ್‌ಗೊಂದು ಸ್ಪೇಶಲ್‌ ಸಲಾಂ. ತುಂಬ ವರ್ಷಗಳ ಹಿಂದೆ ಗೆಳೆಯ ನಿರ್ದೇಶಕ ನವೀನ್‌ ಸುನಗ, ವಿಷ್ಣು ಮತ್ತು ನಾನು ಸೇರಿ ಮಾಡಿದ ಒಂದು ಡಿಜಿಟಲ್‌ ಮೂವೀಯಲ್ಲಿ (An Eion of Discontent) ಒಂದು ಪುಟ್ಟ ಪಾತ್ರ ನಿರ್ವಹಿಸಿದ್ದ ಮೇಘನಾ ಗಾಂವ್ಕರ್‌ ಈಗ ದೊಡ್ಡ ಸ್ಟಾರ್‌! ಮೇಘನಾ ಅಭಿನಯ ‘ಸಿಂಪಲ್ಲಾಗ್‌ ಇನ್ನೊಂದ್‌ ಲವ್‌ ಸ್ಟೋರಿ’ ಚಿತ್ರ ವೀಕ್ಷಣೆಯನ್ನು ಮತ್ತಷ್ಟು ಉಲ್ಲಸಿತಗೊಳಿಸಿತು.

‍ಲೇಖಕರು admin

20 March, 2016

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading