ಮಂಜುನಾಥ ಲತಾ

ಈಗ ಹೇಗಿದ್ದರೂ ಕನ್ನಡದಲ್ಲಿ ತರಹೇವಾರಿ, ಚಿನ್ನದಂಥ, ರನ್ನದಂಥ ಪುಸ್ತಕಗಳು ನಿತ್ಯವೂ ಪ್ರಕಟಗೊಳ್ಳುತ್ತಿರುವುದು ಸರಿಯಷ್ಟೆ. ಆದರೆ ಅವುಗಳ ಕುರಿತು ಮಾತನಾಡುವವರಾರು?
ಪ್ರಶ್ನೆ: ಎಲ್ಲಿದ್ದೀರಿ ವಿಮರ್ಶಕರೆ?
ಇನ್ನೊಂದು ಪ್ರಶ್ನೆ: ಹೀಗೆ ಹೊಳೆಹೊಳೆವ ಹಾಗೆ ಕಂಗೊಳಿಸುವ ಪುಸ್ತಕಗಳ ಬಗ್ಗೆ ಮಾತನಾಡುವವರು ಯಾರು, ಚರ್ಚೆ ಕೈಗೆತ್ತಿಕೊಳ್ಳುವವರು ಯಾರು?
ಪ್ರಶ್ನೆಗಿಷ್ಟು ಉತ್ತರ:
ಪತ್ರಿಕೆಗಳಲ್ಲಿ ‘ ಸಾದರ ಸ್ವೀಕಾರ’ ಇದೆಯೆ?, ಕನಿಷ್ಠ ಆ ಲೇಖಕನ, ಲೇಖಕಿಯ ಕೃತಿಗಳ ಕುರಿತು ಮಾತುಕತೆ ಸರಿ ಇದೆ ಎನ್ನಿಸುತ್ತಿದೆಯೆ?
ತಮ್ಮ ತಮ್ಮವರ ಪುಸ್ತಕಗಳ ಬಗ್ಗೆ ಪುಂಗಿ ಊದುವವರ ಸಂಗ ನಮಗೆ ಬೇಕಿದೆಯೆ?
ಪ್ರಜಾ ವಾಣಿಯೂ ಸೇರಿದಂತೆ ನಮ್ಮ ಯಾವ ಕನ್ನಡ ಪತ್ರಿಕೆ ಈ ಕ್ಷಣದಲ್ಲಿ ಈ ‘ಟೈರ್ ರಾಮ್ಸಾಮಿ’ಗೆ, ‘ನಕ್ಷತ್ರ ಮೋಹ’ಕ್ಕೆ ಕನಿಷ್ಠ ಕಣ್ಣು ಮಿಟುಕಿಸಿದೆಯೆ ನೋಡಿ…!(ಇದು ಈ ಕ್ಷಣದ ಉದಾಹರಣೆ ಮಾತ್ರ)
ನಾನು ಹೇಳ್ತಾ ಇರೋದು ಸರಿ ಅನ್ನಿಸಿದರೆ..
ನಾವೇ ಯಾಕೆ ಇಂತಹ ಹೊಸ ಪುಸ್ತಕಗಳ ಕುರಿತು ಇದೇ social mediaಗಳಲ್ಲಿ ಚರ್ಚಿಸಬಾರದು?
ಹೊಸ ಕೃತಿಗಳ ಕುರಿತು, ಅಲ್ಲೆಲ್ಲೋ ಮುಗ್ಗಲು ಹಿಡಿದು ಮೂಲೆಗಳಲ್ಲಿ ಕುಳಿತ ಹಳೆಯ ತಲೆಮಾರಿನ ಗಣ್ಯರನ್ನು ಈ ಹೊಸ ವೇದಿಕೆಗೆ ತರಬಾರದು?
ಈಗ ನನ್ನ ವಿನಂತಿ : ಅಂತಹ ಕೃತಿಗಳನ್ನು ದಯಮಾಡಿ ನನಗೆ ತಲುಪಿಸಿ…’ ಭಲ್ಲೆ ಭಲ್ಲೆ ಭಲ್ಲೆ …’ ವಿಮರ್ಶಕರನ್ನು ಒಪ್ಪಿಸುವ ಜವಾಬ್ದಾರಿ ನನ್ನದು…





ಖಂಡಿತವಾಗಿಯೂ ಪುಸ್ತಕದ ವಿಮರ್ಶೆ ಮಾಡಬೇಕಿದೆ