ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸಾಹಿತ್ಯ ಸಮ್ಮೇಳನದಲ್ಲಿ ನಡೆಯುತ್ತೆ 'ಮ್ಯಾಜಿಕ್'

r-g-halli

ಆರ್ ಜಿ ಹಳ್ಳಿ ನಾಗರಾಜ್ 

*ಸಾಹಿತ್ಯ ಸಮ್ಮೇಳನದಲ್ಲಿ ಅಪಾರ ಜನ ಜಾತ್ರೆ. ಕನ್ನಡಿಗರ ಉತ್ಸಾಹ ವಿಸ್ಮಯಗೊಳಿಸುವಂತಿದೆ.

*ಮುನ್ನೂರಕ್ಕೂ ಅಧಿಕ ಪುಸ್ತಕ ಮಳಿಗೆಗಳು ಇವೆ. ಮೋದಿ ಮಹಾಶಯ ಮಾಡಿದ ದುಡ್ಡಿನ ಯಡವಟ್ಟು ಇನ್ನೂ ಚೇತರಿಕೆ ಆಗಿಲ್ಲ.

*ಕೆಲವು ಪ್ರತಿಷ್ಠಿತ ಪ್ರಕಾಶಕ, ಮಾರಾಟಗಾರರಿಗೆ ಪರವಾಗಿಲ್ಲ ಅನ್ನುವ ವ್ಯಾಪಾರ. ಬೆಂಗಳೂರಿನ ಎರಡು ಪ್ರತಿಷ್ಠಿತ ಪ್ರಕಾಶನಗಳು ಪ್ರತಿವರ್ಷ ಪುಸ್ತಕ ಮಳಿಗೆಯ ಪ್ರವೇಶ ದ್ವಾರದಲ್ಲೆ ಎಂಟು ಹತ್ತು ಮಳಿಗೆ ಹಿಡಿದು ಸಾವಿರಾರು ಜನರನ್ನು ತಮ್ಮಲ್ಲೆ r-g-halli3ಹಿಡಿದಿಡುತ್ತಾರೆ! ಮಳಿಗೆಗಳು ಪ್ರತಿ ಸಮ್ಮೇಳನದಲ್ಲೂ ಇವರಿಗೆ ಹೀಗೆ “ಪ್ರವೇಶ ದ್ವಾರದಲ್ಲೇ” ಸಿಕ್ಕುತ್ತಿರುವ ನಿಗೂಢ ಅರ್ಥವಾಗುತ್ತಿಲ್ಲ.

*ನಮ್ಮ ಅನ್ವೇಷಣೆ ಪ್ರಕಾಶನಕ್ಕೆ ರೂ. 2,500/_ ಮುಂಗಡ ಕೊಟ್ಟು ಮಳಿಗೆ ಕಾಯ್ದಿರಿಸಿದರೂ ಸಿಕ್ಕಿದ್ದು “307”ನೇ ಮಳಿಗೆ! ಅಲ್ಲಿ ನೊಣ ಹೊಡೆಯಲೂ ಜನ ಬರುತ್ತಿಲ್ಲ ಎಂಬ ಪರಿಸ್ಥಿತಿ ಇದೆ. ನಮ್ಮಂಥವರ ನೂರಾರು ಮಳಿಗೆಗೆ ಮೊದಲದಿನ ಸಾವಿರ ರೂ.ಗಳ ವ್ಯಾಪಾರವೂ ಇಲ್ಲ.

*ಕಲಾಕೃತಿಯಿಂದ ಅಲಂಕಾರಗೊಂಡ ಮಳಿಗೆಗೆ ಬಂದಷ್ಟು ಜನರಾದರೂ ವಚನ ಸಾಹಿತ್ಯದ ಸವಿಯನ್ನಂತೂ ಉಂಡು ಹೋಗುತ್ತಿದ್ದಾರೆ.

*ಇನ್ನೂ ಎರಡು ದಿನ ಸಮ್ಮೇಳನದಲ್ಲಿ ಜನ ಬಂದು ಪುಸ್ತಕ ಕೊಳ್ಳಬಹುದು ಎಂಬ ಆಶಯ ಇದೆ. ನಾನು ಆಶಾವಾದಿಯಾಗಿ ಕಾಯುತ್ತಿದ್ದೇನೆ.

r-g-halli1

‍ಲೇಖಕರು Admin

4 December, 2016

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading