ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸಾಸಿವೆ ತರಲು ಹೇಳಿದೆಯಲ್ಲ..

ಯತ್ಕಿಂಚಿತ್…

jayashree_deshapande

ಜಯಶ್ರೀ ದೇಶಪಾಂಡೆ.

ಸಾಸಿವೆ ತರಲು ಹೇಳಿದೆಯಲ್ಲ ತಥಾಗತನೇ ಅದೂ ಸಾವಿಲ್ಲದ ಮನೆಯಿಂದ…
ನಾನರಿಯೆ ಮತ್ಯಾ೯ ಮತ೯ಗಳ ಕುಹರಗಭ೯ಗಳಲ್ಲೇನಿದೆಯೆಂದು,
ಹುಟ್ಟು ಇಲ್ಲದ ನನ್ನ ಕೈಯೊಳಗೆ ನನ್ನ ಸಾವೂ ಇಲ್ಲವಲ್ಲ…!

ಹಾವಿನ ಬಾಯೊಳಿದ್ದೂ ಗುಟುಕು ನೀರಿಗೆ ಬಾಯೊಡ್ಡುವ ಕಪ್ಪೆ ಕೇಳಿತ್ತು
ನಿತ್ಯ ನಿರಂತರ ಹುಟ್ಟು ಸಾವಿಗೊಡ್ಡಿದ ಪ್ರಶ್ನೆ! ಜೀವಜಾತರ ಪ್ರಜ್ಞೆಸಾಲು ತೆರೆದ ನಚೀಕೇತನಾಗಿ..

ಅಗೋ ನೋಡಲ್ಲಿ ಹಾಲುಗೆನ್ನೆಯ ಮೇಲಿರುವ ಕಣ್ಣೀರ ಕರೆಯ ಸಾಕ್ಷಿಯಾಗಿ ‘ ನಿನ್ನ ಯುದ್ದವ
ನಾನು ಮುನ್ನಡೆಸುವೆ’ ಅಂತಳುವ ಕಂದ
ತನ್ನಪ್ಪನ ಚಿತೆಯೆದುರು ಇಟ್ಟದ್ದು ಸಾವಲ್ಲ ಬದುಕು..

ಗಿರಿಗಹ್ವರ ಶ್ರೇಣಿಶೋಣಿತ ಪದರಗಳ
ನಡುವೆ ತಹತಹಿಸಿ ಕರೆದ ಮನಶ್ಯಾಂತಿ, ಜಪತಪಗಳಲ್ಲಿ ಕಾಣದ ಸ್ಥಿರತೆ ನಿನ್ನ ನಿಮೀಲಿತ ನೇತ್ರಗಳೊಳಗಡಗಿರುವುದ
ಅರಿಯದ ಕಿರುಕೀಟ ನಾನು…
ಅನುಮಾನದ ಹುತ್ತದೊಳಗಡಗಿ ದಿಟ್ಟಿ ನೆಟ್ಟಲ್ಲಿ ಕಣ್ಣಿಗೆದುರಾಗುವ ಅಜ್ಞಾನದ
ಹೊಗೆಯೊಳಾಡುವ ಕೈ ಕಾಲುಗಳ ಬಲ ಕುಸಿದು ನಿವೀ೯ಯ೯ವದೇಕೋ?

ಕಚ್ಚದಿರು ಸಪ೯ವೇ ಅಂದೆ ನೀನು ಭುಸಗುಡದಿರದಿರು ಎಂಬುದನ್ನರಿಯದ
ಉರಗವದು ರಕ್ತಸಿಕ್ತ..ಹೆಡೆಯೆತ್ತುವ
ಅರಿಷಡ್ವಗ೯ಗಳ ಹೊಡೆತಕ್ಕೆ ಬಿದ್ದು ಬಯಲಾದ ನನ್ನಂತರಂಗಕ್ಕೆ ಬೇಕಿತ್ತು ನಿನ್ನ ಕರುಣೆಯ ಸ್ಪಷ೯!

ಪ್ರಶ್ನೆಗಳ ಚಕ್ರವ್ಯೂಹಕ್ಕೆ ತಳ್ಳಿ ನನ್ನ
ಮನಮಸ್ತಿಷ್ಕಕ್ಕೆ ಬರೆಯೆಳೆವ ಲೌಕಿಕದಿ
ಉಳಿವಳಿವಿನ ಕಾಳೆಗದಲ್ಲಿ ಸೋಲೋ ಗೆಲುವೋ ನಿನ್ನದೇ ಕೈಯೊಳಗಿದೆ
ತಥಾಗತನೇ…
ಬಾ ಕರುಣಾಳುವಾಗಿ…ಬೆಳಕ ತೋರು!

‍ಲೇಖಕರು Admin

4 October, 2016

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading