ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸಾವು ಕೂಡ ಈ ಚಾನೆಲ್ಲುಗಳಿಗೆ ರೋಚಕ ಸಂಗತಿ…!

ಗೋಪಾಲ ವಾಜಪೇಯಿ

ಭರ್ತಿ ಹನ್ನೆರಡು ವರ್ಷ… ನಾನಲ್ಲಿಯೇ ವಾಸಿಸಿದ್ದೆ…ಹೈದರಾಬಾದಿನ ಅದೇ ದಿಲಸುಖ್ ನಗರದಲ್ಲಿ…
ವೆಂಕಟಾದ್ರಿ ಥೇಟರ್, ಕೊನಾರ್ಕ್ ಥೇಟರ್, ದಿಲಸುಖ್ ನಗರದ ಬಸ್ ಸ್ಟಾಪು ಇರುವ ರಸ್ತೆಯಲ್ಲಿ ನಿತ್ಯ ಸಂಜೆಗೆ ಇರುವೆ ಕಾಲಿಡಲಿಕ್ಕೂ ಜಾಗವಿರದಷ್ಟು ಜನಸಂದಣಿ… ಜೀವ ಎಡಗೈಯಲ್ಲಿಟ್ಟುಕೊಂಡೇ ಓಡಾಡಬೇಕು… ಈ ಮೊದಲು ಅದೇ ಜಾಗದ ಸಮೀಪದ ಪೋಲಿಸ್ ಸ್ಟೇಶನ್ ಹತ್ತಿರವೇ ಬಾಂಬು ಸ್ಫೋಟವಾಗಿತ್ತು. ಅದಾದ ಮೇಲೆ ಹೀಗೆಯೇ ಸೈಕಲ್ ಹಿಂದಿನ ಕ್ಯಾರಿಯರಿನಲ್ಲಿಟ್ಟ ಟಿಫಿನ್ ಬಾಕ್ಸಿನಲ್ಲಿ ಅಡಗಿಸಿಟ್ಟಿದ್ದ ಬಾಂಬನ್ನು ಪೊಲೀಸರು ಸಕಾಲಕ್ಕೆ ಪತ್ತೆ ಹಚ್ಚಿ ನಿಷ್ಕ್ರಿಯಗೊಳಿಸಿದ್ದರು.
ಇವತ್ತು ಅಲ್ಲಿ ದಿಲಸುಖ್ ನಗರದಲ್ಲಿ ಬಾಂಬು ಇದ್ದದ್ದೇ ಗೊತ್ತಾಗಲಿಲ್ಲವಲ್ಲ ನಮ್ಮ ರಕ್ಷಕರಿಗೆ…
ಅಲ್ಲಿ ಅಷ್ಟು ಜನ ಅಮಾಯಕರು ಜೀವ ಕಳಕೊಂಡಿರುವ ಹೊತ್ತಿನಲ್ಲಿ, ಅವರೆಲ್ಲ ಹೌಹಾರಿ ಕೂತಿರುವ ಹೊತ್ತಿನಲ್ಲಿ, ನಮ್ಮ ಚಾನೆಲ್ಲುಗಳು ಸುದ್ದಿ ಬಿತ್ತರಿಸುತ್ತಿರುವ ‘ಪರಿ’ ನೋಡಿ…
”ಇದೀಗ ಬಂದ ಮಾಹಿತಿಗಳು ತುಂಬಾ ರೋಚಕವಾಗಿವೆ,” ಎಂದು ಉಲಿದಳೊಬ್ಬ ವಾರ್ತಾ ವಾಚಕಿ…!
ಸಾವು ಕೂಡ ಈ ಚಾನೆಲ್ಲುಗಳಿಗೆ ರೋಚಕ ಸಂಗತಿ…!

 

‍ಲೇಖಕರು G

22 February, 2013

2 Comments

  1. ಬಸೂ

    nija

  2. bharathi bv

    Houdu … abbaa ella samvedanegalannoo kalkondu bittidaareno ansutte

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading