ಸಾಲ್ಮನ್ ಮೀನು ಮತ್ತು ನಾನು…

ಕುಸುಮ ಪಟೇಲ್

ಸಾಲ್ಮನ್ ಮೀನು ಮತ್ತು ನಾನು
ಪ್ರವಾಹದ ಎದುರು ಈಸಿ ಈಸಿ ಸುಸ್ತಾದ
ನನಗೆ ಸಿಗಬೇಕೆ ಪ್ರವಾಹದ ಎದುರೇ
ಬಾಳು ನೀಗುವ ಸಾಲ್ಮನ್ ಮೀನು !

ಭೇಟಿ
ನಂತರ ಹಸ್ತ ಲಾಘವ, ನಗು ವಿನಿಮಯ, ಉಭಯ ಕುಶಲೋಪರಿ
ಬದುಕಿನ ಸಾರ್ಥಕತೆ, ನಿರರ್ಥಕತೆಯಂತಹ
ದೊಡ್ಡ ದೊಡ್ಡ ಪ್ರಶ್ನೆಗಳಿಗೆ, ಒಂದು ಮುಗುಳ್ನಗೆಯ ಉತ್ತರ

ಹೀಗೇ ಸಾಗಿದ ಪಯಣ
ದಾರಿ ಸವೆದಂತೆ –ಪ್ರಶ್ನೆ?ಸಾಲ್ಮನ್ ಮೀನೇ ಗೊತ್ತೇ
ಪುರಾಣ ಪುಣ್ಯ ಜಾನಪದ ಐತಿಹ್ಯ
ಕಥೆಗಳಲ್ಲಿ ಇದೆ ನಿನ್ನ
ಅಗಣಿತ ಉಲ್ಲೇಖ, ಜಾಣ್ಮೆಯ ಲೆಕ್ಕ ..

ಮತ್ತೆ ಮುಗುಳ್ನಗೆಯ ಉತ್ತರ..
ಸಾವಧಾನ ಮನ ಬಿಚ್ಚಿದ ಸಾಲ್ಮನ್
ಇದೆ ನನಗೂ –ಮಣ್ಣ ವಾಸನೆ
ನರ ಮಿಡಿತ, ತವರ ಸೆಳೆತ
ಎಲ್ಲಾ ಮೀರಿದ ಎದೆ ಬಡಿತ

ಆದರೆ ದ್ವಂದ್ವಗಳಿಲ್ಲ,ಪ್ರಶ್ನೆಗಳಿಲ್ಲ
ಯಾವುದೇ ವೈಭವೀಕರಣವಿಲ್ಲ, ಎಲ್ಲ ನಿರಾಳ
ಸಂಘರ್ಷ ಬದುಕಿನ ಕುರುಹೇ ಇಲ್ಲದಂತೆ –ಸಾಲ್ಮನ್
ಆ ಕ್ಷಣ ನಾ ಕಕ್ಕಾಬಿಕ್ಕಿ ಆಗಿದೆಯೇ ಮೀನಿಗೆ
ಭಗವದ್ಗೀತೆಯ ಕರ್ಮ ಯೋಗದ ಪಾರಾಯಣ

ಅಶರೀರ ವಾಣಿಯಂತೆ ಸಾಲ್ಮನ್
ವ್ಯರ್ಥ ಕಾಲಹರಣ- ನನಗೆ ಆಗದ ಮಾತು
ಬದುಕು ವಿಸ್ಮಯ
ಜುಳು ಜುಳು ನೀರಲ್ಲಿ ಅದು ಅಂತರ್ಧಾನ

ಪ್ರಕೃತಿ ಬಿಚ್ಚಿಟ್ಟ ಸತ್ಯದ ಮುಂದೆ
ಎಲ್ಲಾ ಪದಗಳೂ ಮಂಡಿಯೂರಿ ನಿರಾಭರಣ
ನಿಶ್ಯಬ್ದ ಪದಗಳ ಮುಗ್ಧ ಸಾಲ್ಮನ್ ಕವಿತೆಯ
ಮುಂದೆ ಪ್ರಬುದ್ಧೆ – ನಾ ಮಂತ್ರ ಮುಗ್ಧೆ…

———–

ಸಾಲ್ಮನ್ ಮೀನಿನ ಬಗ್ಗೆ ಟಿಪ್ಪಣಿ :
ಇದು ಉತ್ತರ ಅಟ್ಲ್ಯಾಂಟಿಕ್, ಪೆಸಿಫಿಕ್ ಸಾಗರಗಳಲ್ಲಿ ಮತ್ತು ಉತ್ತರ ಅಮೆರಿಕಾದ ನದಿಗಳಲ್ಲಿ ವಾಸವಾಗಿರುವಂತಹ ಮೀನು. ಇದು ಜಾಣ್ಮೆಗೆ ಮತ್ತು ಸಂಘರ್ಷದ ಬದುಕಿಗೆ ಹೆಸರುವಾಸಿ. ಪೂಜ್ಯನೀಯ ಭಾವದಿಂದ ನೋಡಲ್ಪಡುವ ಜಲಚರ ಎಂದು ಪ್ರತೀತಿ. ಸಿಹಿ ನೀರಿನಲ್ಲಿ ಹುಟ್ಟಿ, ಸಾಗರಕ್ಕೆ ಸಾಗಿ ಮತ್ತೆ ಸಂತತಿ ಬೆಳೆಸಲು ಸಿಹಿ ನೀರಿಗೇ ಬರುವ ಈ ಜಲಚರದ ಬದುಕಿನ ರೀತಿ ವಿಜ್ಞಾನಿಗಳಿಗೇ ಒಂದು ವಿಸ್ಮಯ. ಬದುಕಿನ ರೀತಿಯ ಅರ್ಥ ಹುಡುಕುವ ಯತ್ನದಲ್ಲಿ ಈ ಕವನ.

‍ಲೇಖಕರು avadhi

May 9, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: