ಸಾಗರ ಫೊಟೋಗ್ರಫಿಕ್ ಸೊಸೈಟಿ- ನೀನಾಸಮ್ ನ ‘ಕಲಾತ್ಮಕ ಛಾಯಾಗ್ರಹಣ ಶಿಬಿರ’

ಕಿರಣ ಭಟ್

ಕಲಿಕೆಗೆ ದಕ್ಕಿದ ಹೊಸ ಕಣ್ಣೋಟಗಳು.

‘‘ ….Thank you all organizers for making me learn and value the art of photography. ….Thank you for teaching me a way ahead’
– Dr Ravindra

‘Thank you for your excellent effort to make us professionals’
Mahaveer Kumar H.V.

‘It was life time memorable event. I am happy to be part of family. Together let us build a new breed of photography.’
Gowreesh Kapany (Renowned photographer and resource person)

‘It was an amazing workshop and I was happy to share and learn from you guys
Good Light to you all.’ –
Gowtam Ramesh (Renowned photographer and resource person)

‘It was an amazing workshop thanks for making me know the value and learn photography art’
Raji

‘Age was no bar there. I was really inspired by the enthusiastic participation of aged honorable persons’
Nagendra Hegde Mutmurdu. (Renowned photographer and resource person)

‘Apart from learning photography, I have learnt to live a simple and energetic life by seeing SPS and NEENASAM team’
-Mounesh Achar

‘ನನ್ನ ಆಸಕ್ತ ಕಲೆಯ ಸೂಕ್ಷ್ಮತೆ ಜಾಗೃತಗೊಳಿಸಿದ ಸಾಗರ ಫೋಟೋಗ್ರಫಿ ಸೊಸೈಟಿ ಯ ಗುರುವೃಂದ ಮತ್ತು ಸಹ ಶಿಬಿರಾರ್ಥಿಗಳಿಗೆ ಅನಂತಾನಂತ ವಂದನೆಗಳು’
-ವಿದ್ಯಾಶಂಕರ್ ಎ.ಜಿ.

‘ನಿಮ್ಮೆಲ್ಲರೊಂದಿಗೆ ಕಳೆದ ಈ ನಾಲ್ಕು ದಿನಗಳು ನಮ್ಮ ಜೀವನದ ಅತ್ಯಮೂಲ್ಯ ಕ್ಷಣಗಳು’
-ರುಕ್ಮಿಣಿ

‘… ಪರಿಕರಗಳ ಪ್ರಾಮುಖ್ಯತೆಯೊಂದಿಗೆ, ಚಿತ್ರ ಜಗತ್ತಿನ ಸುಂದರ ಚಿತ್ರಣ ಪರಿಚಯಿಸಿದ ಎಲ್ಲರಿಗೂ ಧನ್ಯವಾದಗಳು.’
-ಭಾಗ್ಯ. ಡಿ.

ಇಂಥ ಹಲವಾರು ಅನುಭವಗಳು ಬಂದಿದ್ದು ‘ ಸಾಗರ ಫೋಟೋಗ್ರಫಿ ಸೊಸೈಟಿ’ ಯ ಫೋಟೋಗ್ರಫಿ ಶಿಬಿರದ ಕುರಿತು. ಛಾಯಾಚಿತ್ರಗ್ರಹಣ ಎಂದರೆ ಬರೇ ಕ್ಲಿಕ್ಕಿಸುವದಲ್ಲ. ಅದು ಹೊಸ ಮನುಷ್ಯ ಸಂಬಂಧಗಳನ್ನ ಬೆಳೆಸುತ್ತದೆ. ಸಂಬಂಧಗಳನ್ನ ಗಟ್ಟಿಗೊಸುತ್ತದೆ. ಹಲವು ಬಾರಿ ಭಾವಪರವಶಗೊಳಿಸುತ್ತದೆ.ಅದೊಂದು ಭಾವಯಾನ ಎನ್ನುತ್ತಲೇ ಅನುಭವೀ ಛಾಯಾಚಿತ್ರ ಕಲಾವಿದರು ಸ್ವಾನುಭವದ ಕಥೆಗಳನ್ನ ಹೇಳುತ್ತ ಫೊಟೋಗ್ರಫಿಯ ತತ್ವಗಳನ್ನೂ, ತಾಂತ್ರಿಕತೆಯನ್ನೂ ತಿಳಿಸುತ್ತಲೇ ಹೋದರು ನಾವು ಸುಮಾರು ನಲವತ್ತು ಜನ ಮೈಯೆಲ್ಲ ಕಿವಿಯಾಗಿ ಇಂಥ ಅನುಭವಗಳನ್ನ ಕೇಳುತ್ತ, ಅವರು ಕ್ಲಿಕ್ಕಿಸಿದ ಚಿತ್ರಗಳಿಗೆ ಬೆರಗಾಗುತ್ತ ಹೆಗ್ಗೋಡಿನ ರಂಗಮಂದಿರದೊಳಗೆ ಕುಳಿತಿದ್ದೆವು.

‘ಎಸ್.ಪಿ.ಎಸ್. ನ ಫೋಟೋಗ್ರಫಿ ಶಿಬಿರ ಉಳಿದವುಗಳಿಗಿಂತ ಭಿನ್ನವಾಗೋದು ಈ ಕಾರಣಕ್ಕೇ. ಎಸ್.ಪಿ.ಎಸ್ ಪ್ರತೀ ವರ್ಷ ನಡೆಸೋ ನಾಲ್ಕು ದಿನಗಳ ಈ ಶಿಬಿರದಲ್ಲೂ ಅದೇ ರೀತಿ ಹೊಸ ಸಂಬಂಧಗಳು ಹುಟ್ಟಿಕೊಳ್ತವೆ. ಆಪ್ತವಾಗ್ತವೆ. ಕಲಿಸೋ ಪ್ರಕ್ರಿಯೆಯೂ ಕಲಿಯೋ ಪ್ರಕ್ರಿಯೆಯೂ ಒಂದೇ ಆಗಿಬಿಡ್ತದೆ. ಒಂದೇ ಮನೆಯವರು ಕೂತು ಪಟ್ಟಾಂಗ ಹೊಡೆದ ಹಾಗೆ ಮಾತುಕತೆ, ಚರ್ಚೆ, ಕಲಿಕೆ. ಒಟ್ಟಿಗೇ ಊಟ, ವಾಸ. ಸೂರಿನಡಿಯ ಪಾಠವನ್ನೂ ಮೀರಿಸೋ ಹೊರಗಡೆಯ ಚಟುವಟಿಕೆ. ಭರತನಾಟ್ಯ, ಡೆ.ೂಳ್ಳು ಕುಣಿತ, ಯಕ್ಷಗಾನ, ಕುಂಭ ಕಲೆ, ಕಸೂತಿ, ಹೊರಾಂಗಣ ಕೂಡ. ಇಕ್ಕೇರಿ ದೇವಸ್ಥಾನ, ಚಂಪಕ ಸರಸು, ಬಟ್ಟೆಮಲ್ಲಪ್ಪದ ಹಿನ್ನೀರು….ಏನೆಲ್ಲಾ .ಕ್ಲಿಕ್ಕಿಸುತ್ತಲೇ ಕಲಿಯೋ ವಿಶಿಷ್ಟ ರೀತಿ ಇದು. ಅಲ್ಲೇ ಕ್ಲಿಕ್, ಅಲ್ಲೇ ರಿಸಲ್ಟ್, ಅಲ್ಲೇ ಸಮಸ್ಯೆಗಳಿಗೆ ಪರಿಹಾರ. ಹೊಸದಾಗಿ ಕ್ಯಾಮರ ಹಿಡಿದವರಿಗಂತೂ ಇದೊಂದು ಅದ್ಭುತ ಕಲಿಕೆ.

ಇಂಥ ಇಂದು ಶಿಬಿರವನ್ನು ಪ್ರತಿ ವರ್ಷವೂ ನಡೆಸಿಕೊಂಡು ಬರುತ್ತಿರುವ ಸಾಗರದ ಎಸ್.ಪಿ.ಎಸ್ ಫೋಟೋಗ್ರಫಿ ಸೊಸೈಟಿ ಈಗ ಸಾಕಷ್ಟು ಹಿರಿದು. ಫೋಟೋಗ್ರಫಿಯಲ್ಲಿ ಅಪರಿಮಿತ ಆಸಕ್ತಿ ಹೊಂದಿದ ದೊಡ್ಡೇರಿ ವೆಂಕಟಗಿರಿರಾವ್ ಹುಟ್ಟುಹಾಕಿದ ಸಂಸ್ಥೆಯಿದು. ದೊಡ್ಡೇರಿಯವರ ಹೆಸರನ್ನ ಹಲವು ಜನ ಕೇಳಿರಬಹುದು. ‘ಸುಧಾ’ ವಾರಪತ್ರಿಕೆಗಾಗಿ ತುಂಬ ಒಳ್ಳೆಯ ಧಾರಾವಾಹಿಗಳನ್ನ ಬರೆದವರು ಅವರು. ನಮ್ಮ ಬಾಲ್ಯದಲ್ಲಿ ಅವರ ಧಾರಾವಾಹಿಗಳನ್ನ ಓದೋದಕ್ಕಾಗಿಯೇ ‘ಸುಧಾ’ ಕ್ಕಾಗಿ ಕ್ಯೂ ಇರ್ತಿತ್ತು. ಧಾರಾವಾಹಿಗಳ ವಿನ್ಯಾಸದಲ್ಲೇ ಹೊಸ ಪ್ರಯೋಗ ಮಾಡಿದವರು. ಸ್ವತ: ಫೋಟೋಗ್ರಾಫರ್ ಆಗಿರೋ ಕಾರಣಕ್ಕೆ ಮಾಡೆಲ್ ಗಳನ್ನಿಟ್ಟುಕೊಂಡು ಕಥೆಯ ದೃಶ್ಯಗಳ ಫೋಟೋ ತಗೆದು ಧಾರಾವಾಹಿಗಳಲ್ಲಿ ಹಾಕ್ತಿದ್ರು. ಅದೊಂದು ಥರಾ ಕಥಾಚಿತ್ರಮಾಲಿಕೆ ಯ ಹಾಗೇ ಇರ್ತಿತ್ತು.

ಆ ಕಾಲಕ್ಕಂತೂ ಅದೊಂದು ವಿಶೇಷ ಅನುಭವವೇ. ಹಲವಾರು ವರ್ಷ ಡಾಕ್ಟರಿಕೆ ಮಾಡಿದ, ಮರಳಿ ಹಳ್ಳಿಗೆ ಮರಳಿದ, ಸಾಕಷ್ಟು ಮೌಲಿಕ ಸಾಹಿತ್ಯ ರಚಿಸಿದ, ಎಲ್ಲಕ್ಕಿಂತ ಮಿಗಿಲಾಗಿ ಫೋಟೋಗ್ರಫಿಯಲ್ಲಿ ರಾಷ್ಟ್ರೀಯ, ಅಂರತರ್ರಾಷ್ಟ್ರೀಯ ಮನ್ನಣೆ ಗಳಿಸಿದ ದೊಡ್ಡೇರಿಯವರು ಕನಸು ಕಂಡಿದ್ದು ಮಾತ್ರ ಗ್ರಾಮೀಣ ಫೋಟೋಗ್ರಫಿಯ ಒಂದು ತಂಡದ್ದು. ಹಾಗೆ ಹುಟ್ಟಿದ್ದೇ ‘ಸಾಗರ ಫೋಟೋಗ್ರಫಿ ಸೊಸೈಟಿ’. ಅವರ ಕನಸನ್ನು ನನಸಾಗಿಸ್ತಾ ಬಂದವರು ಅವರ ಮನೆಯವರು, ಹಿರಿಯರದ ಕೆ.ಎಸ್. ರಾಜಾರಾಮ್, ಎ.ಜಿ.ಲಕ್ಷಮೀನಾರಾಯಣ, ಶೈಲೇಂದ್ರ ಬಂದಗದ್ದೆ ಮತ್ತು ಗೆಳೆಯರು.

ಕಳೆದೆರಡು ದಶಕಗಳಿಂದ ಎಸ್.ಪಿ.ಎಸ್ ಅವರ ಕನಸುಗಳನ್ನ ಕಾರ್ಯರೂಪಕ್ಕೆ ತರುತ್ತಲೇ ಬಂದಿದೆ. ಸಾಕಷ್ಟು ಗ್ರಾಮಾಂತರ ಯುವಕರಲ್ಲಿ ಕಲಾತ್ಮಕ ಫೋಟೋಗ್ರಫಿಯ ಆಸಕ್ತಿ ಹುಟ್ಟಿಸಿದೆ. ಕಾಲಕಾಲಕ್ಕೆ ಪೋಷಿಸಿ ಬೆಳೆಸಿದೆ. ಎಸ.ಪಿ.ಎಸ್ ನ ಸೂರಿನಡಿ ಪಳಗಿದ ಅನೇಕರು ಈಗ ಅಂತರರಾಷ್ಟ್ರೀಯ ಮಟ್ಟದ ಫೋಟೋಗ್ರಾಫರ್ಗಳಾಗಿದ್ದಾರೆ. ಹೊಸ ಕಲಾವಿದರು ಹುಟ್ಟುತ್ತಲೇ ಇದ್ದಾರೆ.

ಎಸ್.ಪಿ.ಎಸ್, ಹೆಗೋಡಿನ ನೀನಾಸನಮ್ ಜೊತೆ ಸೇರಿ 2022ರ ಕೊನೆಯಲ್ಲೂ ನಾಲ್ಕು ದಿನಗಳ ‘ಫೋಟೋಗ್ರಫಿ ಶಿಬಿರ’ ನಡೆಸಿತು. ಹೆಗ್ಗೋಡು ನೀನಾಸಮ್ ನ ಸುಂದರ, ಶಾಂತ ಪರಿಸರ, ಜೊತೆ ಸೇರಿದ ಹಳ್ಳಿಯೂಟದ ಘಮ, ಚುಮುಗುಡುವ ಚಳಿಯಲ್ಲಿ ಬಿಸಿ ಬಿಸಿ ದೋಸೆ, ಹಬೆಯಾಡುವ ಕಾಫಿ. ಜೊತೆಗೆ ತಿಳಿದದ್ದನ್ನೆಲ್ಲ ದಾಟಿಸಿಯೇಬಿಡುವ ಹುರುಪಿನ ಅಥಿರಥ ಮಹಾರಥ ಸಂಪನ್ಮೂಲ ವ್ಯಕ್ತಿಗಳು. ಕೈಲೊಂದು ಕ್ಯಾಮರಾ. ಇನ್ನೇನು ಬೇಕು?

ಹಿರಿಯ ಕೆ.ಎಸ್ ರಾಜಾರಾಮ್ ರ ಉತ್ಸಾಹಕ್ಕಂತೂ ಮೇರೆಯೇ ಇರ್ಲಿಲ್ಲ್ಲ. ಶಿಬಿರಾರ್ಥಿಗಳು ಎಲ್ಲ ವಿಭಾಗಗಳ್ಲೂ ಕಲಿಕೆ ಪಡೆಯಲಿ ಎನ್ನೋ ಅದಮ್ಯ ಆಸ್ಥೆಯಿಂದ ಬೆಳಿಗ್ಗೆ ಆರರಿಂದ ರಾತ್ರಿ ಹತ್ತರ ವರೆಗೂ ನಡೆೆಯುವ ಹಾಗೆ ಶಿಬಿರದ ವಿನ್ಯಾಸ ಮಾಡಿಬಿಟ್ಟಿದ್ರು.

ನೀನಾಸಮ್ ನ ಕೆ.ವಿ.ಅಕ್ಷರ ಶಿಬಿರವನ್ನು ಉದ್ಘಾಟಿಸಿದರೆ ಅತಿಥಿಗಳಾಗಿದ್ದ ಯಶವಂತ ಜಾಧವ್, ಮಾತು ಪ್ರತಿ ಕಲೆಯಲ್ಲೂ ಕಾಣಬಹುದಾದ ‘ ಆ ದಿವ್ಯ ಕ್ಷಣ’ ದ ಕುರಿತಾಗಿತ್ತು.

ಫೋಟೋಗ್ರಫಿ ಯ ಮೂಲ ತತ್ವಗಳ ಕುರಿತು ಗರಣಿ ವೆಂಕಟೇಶ್, ದೇವಾಲಯಗಳ ವಿನ್ಯಾಸಗಳ ಕುರಿತು ಟಿ. ಎಸ್. ಗೋಪಾಲ್, ದೇವಾಲಯಗಳ ಫೋಟೋಗ್ರಫಿ ಕುರಿತು ಗೌತಮ್ ರಮೇಶ್ ಚಿತ್ರಗಳೊಂದಿಗೆ ವಿವರಿಸಿದ್ರು. ಎಸ್.ಪಿ.ಎಸ್ ನ ಈಶಾನ್ಯ ಎನ್ನೋ ಹುಡುಗನ ‘ಶೋಲಾ ಕಾಡು’ ಗಳ ಕುರಿತ ಕಿರುಚಿತ್ರ ಪ್ರದರ್ಶನ ಬೆರಗುಗೊಳಿಸ್ತು. ಸಂಜೆ ಹೆಗ್ಗೋಡಿನ ಕಲಾವಿದರ ‘ವಾಲಿ ವಧೆ’ ಯಕ್ಷಗಾನ ಫೊಟೋಗ್ರಫಿಗಾಗಿಯೇ ವಿನ್ಯಾಸ ಮಾಡಿದಂತಿತ್ತು.

ಕೆ.ಎಸ್ ರಾಜಾರಾಮ್ ಫೋಟೋಗ್ರಫಿಯ ವಿನ್ಯಾಸಗಳ ಕುರಿತು ಹೇಳಿದ್ರು, ನಾಗೇಂದ್ರ ಮುತ್ಮುರ್ಡು ರವರದು ಪಿಕ್ಟೋರಿಯಲ್ ಫೋಟೋಗ್ರಫಿ ಜೊತೆಗಿನ ‘ಭಾವಯಾನ’.ಗೌರೀಶ್ ಕಪಾನಿ ವನ್ಯಜೀವಿ ಫೋಟೋಗ್ರಫಿ ಕುರಿತಂತೆ ಅನುಭವಗಳನ್ನ, ಅದರ ಮೌಲ್ಯಗಳನ್ನ ಹಂಚಿಕೊಂಡ್ರು. ನಂದನ್ ಹೆಗಡೆ ಒಂದಿಷ್ಟು ಹೊಸ ಪ್ರಯೋಗಗಳನ್ನ ಮಾಡಿದ ತರುಣ. ಅವರ ಅನುಭವಗಳೂ ವಿಶಿಷ್ಟವೇ ಆಗಿದ್ವು.

ಬೆಳಿಗಿನ ಜಾವದಲ್ಲೇ ಸಾಗರದ ‘ ಮೊಳಗು’ ತಂಡದ ಹೆಣ್ಣುಮಕ್ಕಳ ಡೊಳ್ಳು ಕುಣಿತ. ಮಂಜು, ಸೂರ್ಯರಶ್ಮಿಗಳ ಬೆಳಕಲ್ಲಿ ಫೊಟೋಗ್ರಪಿಯ ಅನುಭವ. ಜೊತೆ ಜೊತೆಗೇ ಕಲಾವಿದೆ ಫಣಿಯಮ್ಮನವರ ಕುಂಭ ಕಲೆ ಯ ಪ್ರದರ್ಶನವೂ. ಈ ನಡುವೆ ವಿಶಿಷ್ಟವಾಗಿ ವಿನ್ಯಾಸಗೊಂಡ ಬೆಳಕಿನಲ್ಲಿ ಪೋರ್ಟ್ರೇಟ್ ಫೋಟೋಗ್ರಫಿ. ಹಿರಿಯ ರಂಗಕಲಾವಿದೆ ವಿದ್ಯಾ ಅಕ್ಷರ ಮಾಡೆಲ್ ಆಗಿ ಸಹಕರಿಸಿದ್ರು.

ಇನ್ನೊಂದು ಮುಂಜಾನೆ ನಸುಕಲ್ಲಿ ಬಟ್ಟೆಮಲ್ಲಪ್ಪದ ಹಿನ್ನೀರಲ್ಲಿ ಮಂಜು ಮುಸುಕಿದ ಪರಿಸರದ ಚಿತ್ರಣ. ಸಂಜೆ ಸ್ಮೃತಿ ಗೋಪಾಲ್ ಮತ್ತು ನಿರತ ಗೋಪಾಲ್ ರ ಭರತನಾಟ್ಯ ಕಾರ್ಯಕ್ರಮ. ಇಂಥದೆಲ್ಲವನ್ನೂ ನಡೆಸಿದ್ದು ಶಿಬಿರಾರ್ಥಿಗಳು ಅವುಗಳ ಚಿತ್ರಣದ ಅನುಭವ ಪಡೆಯೋದಕ್ಕೆ ಅಂತಲೇ.

ಇಷ್ಟು ಕಡಿಮೆ ಫೀ ಯಲ್ಲಿ, ಮಹಿಳೆಯರಿಗೆ, ವಿದ್ಯಾರ್ಥಿಗಳಿಗೆ ರಿಯಾಯತಿ ಕೂಡ ಇಟ್ಕೊಂಡು ಇಷ್ಟು ವಿಸ್ತಾರವಾದ ನೋಟಗಳನ್ನಿಟ್ಕೊಂಡು, ನಾಲ್ಕು ದಿನಗಳ ಕಾಲ ನಡೆಯೋ ಈ ವಸತಿ ಸಹಿತ ಶಿಬಿರ ಖಂಡಿತವಾಗ್ಯೂ ನಮ್ಮ ನಡುವಿನ ಅತಿ ಮಹತ್ವದ ಶಿಬಿರ. ವಿಶೇಷ ಎಂದ್ರೆ ಶಿಬಿರದ ನಂತರವೂ ಕಲಿಕೆ ಮುಂದುವರಿಯೋದು. ಶಿಬಿರದ ವಾಟ್ಸಾಪ್ ಗ್ರೂಪಲ್ಲಿ ಶಿಬಿರಾರ್ಥಿಗಳು ಅವರು ತೆಗೆದ ಚಿತ್ರಗಳನ್ನ ಹಾಕೋದು, ಪರಿಣಿತರು ಅವುಗಳ ಕುರಿತು ಸಲಹೆಗಳನ್ನು ಕೊಡೋದು ನಡೆದೇ ಇದೆ. ಆ ನಿಟ್ಟಿನಲ್ಲೂ ಇದು ಅಪರೂಪದ ಶಿಬಿರವೇ.

ಒಂಥರ ಮನೆಮಂದಿಯೆಲ್ಲ ಕಲೆತು ಕಲಿಯುವ ಅಪೂರ್ವ ಅನುಭವ ನೀಡಿದ ಈ ಶಿಬಿರದ ಕೊನೆಯಲ್ಲಿ ಸರ್ಟಿಫಿಕೇಟ್ ಪಡೆದು ಹೊರಟವರ ಮುಖಗಳಲ್ಲಿ ಶಿಬಿರದುದ್ದಕ್ಕೂ ಕೇಳಿ ಬರುತ್ತಿದ್ದ, ‘ಗುಡ್ ಲೈಟ್’ ಇತ್ತು.

ಹಲವಾರು ಕನಸುಗಳನ್ನು ಹೊತ್ತು, ಇಂಥ ಶಿಬಿರ ಸಂಘಟನೆಯ ಮುಂಚೂಣಿಯಲ್ಲಿರುವ ಹಿರಿಯ ಕೆ.ಎಸ್. ರಾಜಾರಾಮ್ ಸರ್ ರ ಹೆಗಲಿಗೆ ಹೆಗಲು ಕೊಟ್ಟು ದುಡಿದ ಛಾಯಾಚಿತ್ರಕಲಾವಿದ ಜಿ.ಆರ್. ಪಂಡಿತ ರಿಗೆ ವಿಶೇಷ ಅಭಿನಂದನೆಗಳು ಸಲ್ತವೆ.

ಹೀಗೆಲ್ಲ ಇದೆ ನೋಡಿ; ಆಸಕ್ತರು ಮುಂದಿನ ಬಾರಿ ಈ ಶಿಬಿರ ತಪ್ಪಿಸ್ಕೊಳ್ಬೇಡಿ.

‍ಲೇಖಕರು Admin

January 4, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: