ಪಿ ಸಾಯಿನಾಥ್ ಪ್ರಶಸ್ತಿ ವಿಜೇತೆ ವಿ ಗಾಯತ್ರಿ ಅವರ ಸಂಪಾದಕತ್ವದ ‘ಸಹಜ ಸಾಗುವಳಿ’ ಹೊಸ ಸಂಚಿಕೆ ಮಾರುಕಟ್ಟೆಯಲ್ಲಿದೆ. ಸಹಜ ಸಾಗುವಳಿ ಪತ್ರಿಕೆಯ ಆಯ್ದ ಒಂದು ಲೇಖನವನ್ನು ಇಲ್ಲಿ ನೀಡುತ್ತಿದ್ದೇವೆ
ಭಾಸ್ಕರ್ ಸಾವೆ
ನುಡಿ ನಮನ
ಇತ್ತೀಚಿನ ತಮ್ಮ ಗುಜರಾತ್ ಪ್ರವಾಸದಲ್ಲಿ ಭೇಟಿ ಮಾಡಿದ ಭಾರತೀಯ ಸಾವಯವ ಕೃಷಿಯ ನೇತಾರ ಭಾಸ್ಕರ್ ಸಾವೆ ಅವರಿಗೆ ಸಹಜ ಸಾಗುವಳಿ ಬಳಗ ಸಲ್ಲಿಸಿದ ನುಡಿ ನಮನ.
ಭಾರತದ ಸಾವಯವ ಕೃಷಿ ಸಮುದಾಯದ ಆರಾಧ್ಯ ಮೂತರ್ಿ ಭಾಸ್ಕರ್ ಸಾವೆಗೀಗ ತೊಂಬತ್ತರ ವಯೋಮಾನ. ಭಾರತದಲ್ಲಿ ಸಾವಯವ/ಸಹಜ ಕೃಷಿ ಕೈಗೊಂಡು ಅದನ್ನು ಉತ್ತೇಜಿಸಿದ ಅಗ್ರಗಣ್ಯರು ಇವರು ಎಂದರೆ ಸರಿಯಾದೀತು. ಸಾವೆಯವರು ಸಾವಯವ ಕೃಷಿ ಚಳುವಳಿಗೆ ಕೊಟ್ಟ ಕೊಡುಗೆಯನ್ನು ಪದಗಳಲ್ಲಿ ಹಿಡಿದಿಡಲು ಸಾಧ್ಯವಿಲ್ಲ ಎಂದು ಮೊದಲೇ ಹೇಳಿಬಿಡುತ್ತೇವೆ. ಆಧುನಿಕ ಕೃಷಿಯ ಹೆಸರಲ್ಲಿ ನೆಲ, ಜಲ, ಗಾಳಿಗಳು ವಿಷಮಯಗೊಂಡು, ಜೀವಚರಗಳು ನಾಶವಾಗಿ ಇಡೀ ಪರಿಸರ ವಿನಾಶದೆಡೆಗೆ ನಡೆಯುತ್ತಿದ್ದ ಸಂದರ್ಭದಲ್ಲಿ, ಜೀವ ಕಾಪಾಡುವ ರೀತಿಯಲ್ಲಿ ವಿವೇಕದ ಕೃಷಿಯನ್ನು ಮಾಡುವುದು ಹೇಗೆ ಎಂದು ತೋರಿಸಿಕೊಟ್ಟವರು ಭಾಸ್ಕರ್ ಸಾವೆಯಂಥವರು. ಪಾರಂಪಾರಿಕ/ ಸಾವಯವ ಕೃಷಿಯನ್ನು ಎತ್ತಿ ಹಿಡಿಯುವಲ್ಲಿ ಇವರು ವಹಿಸಿದ ಪಾತ್ರ ಅಸಾಧರಣವಾದದ್ದು.
ಕೃಷಿಯ ಹೆಸರಲ್ಲಿ ಉಂಟಾಗುತ್ತಿರುವ ವಿನಾಶಕ್ಕೆ ಪ್ರತಿರೋಧ ಒಡ್ಡಿ, ಇಂಥ ಪ್ರಯತ್ನಗಳನ್ನೆಲ್ಲಾ ಒಗ್ಗೂಡಿಸುವಲ್ಲಿ ನಾಯಕ ಸ್ಥಾನದಲ್ಲಿದ್ದು ಅವಿರತ ಶ್ರಮಿಸಿದ ಸಾವೆಯವರಿಗೆ ನಾವು ಅನುಗಾಲ ಖುಣಿಗಳಾಗಿರಲೇಬೇಕು. ಸಾವೆಯವರ ಪವಿತ್ರ ಕೃಷಿ ಕ್ಷೇತ್ರ ಮತ್ತು ಅವರ ಇರುವಿಕೆ ಇಲ್ಲದೇ ಹೋಗಿದ್ದರೆ ಇಂದು ಲೂಟಿಕೋರರು ನಮ್ಮ ಕೃಷಿಯನ್ನು ಇಡಿಯಾಗಿ ನುಂಗಿಬಿಡುತ್ತಿದ್ದರು ಎನ್ನುವುದರಲ್ಲಿ ಎರಡು ಮಾತಿಲ್ಲ.
ಸಾವೆಯವರು ಆಧುನಿಕ ಕೃಷಿಗೆ ಒಡ್ಡಿದ ಪ್ರತಿರೋಧಕ್ಕೆ ಒಂದು ಭಿನ್ನತೆ/ವೈಶಿಷ್ಟ್ಯ ಇದೆ. ಇದರ ಮಹತ್ವವನ್ನು ಸಾವಯವ ಪರಿವಾರದ ಮಂದಿ ಕೂಡ ಅನೇಕ ಸಂದರ್ಭಗಳಲ್ಲಿ ಅರ್ಥಮಾಡಿಕೊಳ್ಳುವಲ್ಲಿ ಸೋಲುತ್ತಾರೆ. ಸಾವಯವ ಕೃಷಿ ಚಳುವಳಿಗೆ ಸ್ಪೂತರ್ಿ ಮತ್ತು ಹುಟ್ಟುಕೊಟ್ಟ ಸಾವೆಯಂಥವರ ಅಮೂಲ್ಯ ಚಿಂತನೆಗಳು ಇಂದು ಮೇಣದಂತೆ ಕರಗಿ ಹೋಗುತ್ತಿವೆ. ಸ್ವಾಥರ್ಿಗಳು ಇದನ್ನು ತಮಗೆ ಇಷ್ಟ ಬಂದಂತೆ ಬಳಸಿಕೊಳ್ಳುತ್ತಿದ್ದಾರೆ. ಸಕರ್ಾರಗಳಂತೂ, ಇವು ತಮ್ಮದೇ ಚಿಂತನೆಗಳೇನೋ ಎನ್ನುವಂತೆ ವತರ್ಿಸುತ್ತಿವೆ. ಇಂಥ ಸಂದರ್ಭದಲ್ಲಿ ಸಾವೆಯಂಥವರ ಸ್ಪಟಿಕ ಶುದ್ಧ ಚಿಂತನೆಗಳನ್ನು ಸೂಕ್ಷ್ಮವಾಗಿ ನೋಡಬೇಕಾದ ಅಗತ್ಯ ಇನ್ನೂ ಹೆಚ್ಚಾಗಿದೆ.
ಸಾವೆಯವರು, ಸಾವಯವ/ಸಹಜ ಕೃಷಿ ಸಾಧ್ಯ ಮಾತ್ರವಲ್ಲ, ಸಾಕಷ್ಟು ಲಾಭದಾಯಕ ಕೂಡ ಎನ್ನುವುದನ್ನು ಪ್ರತ್ಯಕ್ಷವಾಗಿ ಮಾಡಿ ತೋರಿಸಿದರು. ಅವರು ಸಹಜ ಕೃಷಿ ಕೈಗೊಂಡ ಸಂದರ್ಭ ಎಂಥದ್ದೆಂದರೆ- ಉತ್ಪಾದನೆ ಹೆಚ್ಚಿಸುವ ಹೆಸರಲ್ಲಿ, ಕೋಟ್ಯಾಂತರ ಹಸಿದ ಹೊಟ್ಟೆಗಳನ್ನು ತುಂಬಿಸುವ ಹೆಸರಲ್ಲಿ ಸಕರ್ಾರ ಮತ್ತು ಖಾಸಗಿ ಹಿತಾಸಕ್ತಿಗಳು ಒಂದಾಗಿ ಕೃಷಿ ರಂಗದ ಮೇಲೆ ಎರಗಿದ ಸ್ಥಿತಿ ಅದು. ನೆಲ, ಜಲ, ಗಾಳಿಗಳನ್ನು ವಿಷಮಯಗೊಳಿಸದೆ, ಸುತ್ತಲ ಜೀವ ಕೋಟಿಗೆ ಘಾಸಿಮಾಡದೆಯೇ ರೈತರು ಮಾಡುತ್ತಿದ್ದ ಕೃಷಿ ಪದ್ಧತಿಗಳನ್ನು ಸಂಪೂರ್ಣ ಅಳಿಸಿ ಹಾಕಿದ್ದ ಸಂದರ್ಭ ಅದು. ಆಧುನಿಕ ಕೃಷಿಯಿಂದ ಉಂಟಾದ ಅನಾಹುತವನ್ನೆಲ್ಲಾ ಸಾರ್ವಜನಿಕ ಹಿತಾಸಕ್ತಿಯ ಹೆಸರಿನಲ್ಲಿ ಮರೆಮಾಚಿ ‘ದೋಚುವವನೇ ಧೀರ’ ಎಂಬ ಸಮೂಹ ಸನ್ನಿ ಸೃಷ್ಟಿಯಾಗಿದ್ದ ಸ್ಥಿತಿ ಅದು.
ಕೃಷಿ ವಿ.ವಿಗಳೆಂಬ ಆಧುನಿಕ ಜ್ಞಾನ ಮಂದಿರ(ಇದರ ಪೂಜಾರಿಗಳೆಲ್ಲಾ ಕೃಷಿ ತೊರೆದ ರೈತ ಮಕ್ಕಳೇ)ಳಲ್ಲಿ ಬೆಚ್ಚಗೆ ಕುಳಿತು, ಕೃಷಿಯೆನ್ನುವುದು ಪರಿಸರಕ್ಕೆ ಪೂರಕವಾಗಿದ್ದುಕೊಂಡು ಮಾಡುವ ಕಾಯಕ ಎನ್ನುವ ಶತ ಶತಮಾನಗಳ ತಿಳುವಳಿಕೆಯನ್ನೇ ಸರ್ವನಾಶ ಮಾಡಲಾಗಿತ್ತು. ಇತರರ ಮೇಲೆ ಮತ್ತು ತಮ್ಮ ತಮ್ಮ ನಡುವೆಯೇ ಯುದ್ಧ ಸಾರುವ ಮಾನವರ ರೀತಿಗಿಂತ ಪ್ರಕೃತಿಯ ರೀತಿ ಭಿನ್ನವಾದ್ದು ಎಂಬ ಸತ್ಯವನ್ನೇ ತೊಡೆದುಹಾಕುವ ಪ್ರಯತ್ನ ನಡೆದಿತ್ತು. ಜನ ಬಾಳಿ ಬದುಕುತ್ತಾ ಬಂದ, ಉತ್ಪಾದನೆ ಮಾಡುತ್ತಾ ಬಂದ ರೀತಿ ರಿವಾಜುಗಳನ್ನೇ ಬದಲಾಯಿಸಿದ ಆಧುನಿಕ ವ್ಯವಸ್ಥೆಯು, ತಲೆತಲಾಂತರಗಳಿಂದ ಬೆಳೆದುಬಂದ ಜನರ ಜ್ಞಾನ ಮತ್ತು ಆತ್ಮವಿಶ್ವಾಸವನ್ನು ನಾಶಮಾಡುವಲ್ಲಿ ಯಶಸ್ವಿಯಾಯಿತು. ಜನರ ಜ್ಞಾನವನ್ನು ‘ಓಬಿರಾಯನ ಕಾಲದ್ದು, ಅವೈಜ್ಞಾನಿಕವಾದದ್ದು’ ಎಂದು ಮೂಲೆಗೆ ಸರಿಸಿತು. ಶತ ಶತಮಾನಗಳ ಅನುಭವ ಮತ್ತು ವಿವೇಕವನ್ನು ಒಂದೇ ಬೀಸಿನಲ್ಲಿ ಹೊರದಬ್ಬಿ ಕೈಗಾರಿಕೆಮುಖಿಯಾದ, ಕಾಪರ್ೊರೆಟ್ ಪ್ರಪಂಚಕ್ಕೆ ಅನುಕೂಲವಾದ ಪದ್ಧತಿಗಳನ್ನು ಉತ್ತೇಜಿಸಲಾಯಿತು. ಹೀಗೆ ಮಾಡುವಲ್ಲಿ ಉಂಟಾದ ಅಲ್ಲೋಲ ಕಲ್ಲೋಲ ಮತ್ತು ರೈತರ ಮನಸ್ಸಿನ ಮೇಲೆ ಉಂಟಾದ ಕೌರ್ಯ ಊಹಿಸಲಸಾಧ್ಯ. ರೈತರ ಯಾವತ್ತೂ ಆತ್ಮವಿಶ್ವಾಸವನ್ನೇ ನಾಶಮಾಡಿ ನೆಲ, ಜಲ, ಕಾಡು, ಮರಗಿಡ, ಪಶುಪಕ್ಷಿಗಳ ಜೊತೆಗಿನ ಸಂಬಂಧವನ್ನು ಕಡಿದು ಹಾಕಿತು. ಜ್ಞಾನ ನಿಮರ್ಾತೃಗಳಾಗಿದ್ದ, ಸಂಶೋಧಕರಾಗಿದ್ದ ರೈತರನ್ನು ಜ್ಞಾನ ಭಿಕ್ಷುಕರ, ಗ್ರಾಹಕರ ಸ್ಥಾನಕ್ಕೆ ಇಳಿಸಿಬಿಟ್ಟಿತು. ಈ ವಿನಾಶದ ಕಥೆಯನ್ನು ಮತ್ತು ಅದರ ಕೌರ್ಯದ ವಿರಾಟ್ ಸ್ವರೂಪವನ್ನು ಸಂಪೂರ್ಣವಾಗಿ ಬಿಡಿಸಿಡುವುದು ಇನ್ನೂ ಸಾಧ್ಯವಾಗಿಲ್ಲ.
ಈ ಎಲ್ಲ ದ್ವಂಸದ ಅವಶೇಷಗಳ ನಡುವೆ, ಆಕ್ರಮಣಕಾರಿ ಶಕ್ತಿಗಳ ನಡುವೆ ಏಕಾಂಗಿಯಾಗಿ ನಿಂತು, ಯಶಸ್ವಿ ಸಾವಯವ ಕೃಷಿ ಕ್ಷೇತ್ರವನ್ನು ಕಟ್ಟಿ ಅದರ ಅನುಭವಗಳನ್ನು ಎಲ್ಲಾ ಕಡೆ ಹಂಚಿಕೊಳ್ಳುತ್ತಾ, ಸಹಬಾಂಧವ ರೈತರನ್ನು ಉತ್ತೇಜಿಸುತ್ತಾ, ಪ್ರತಿರೋಧದ ಹೋರಾಟ ಕಟ್ಟುವುದೆಂದರೆ ಸಾಮಾನ್ಯದ ಮಾತಲ್ಲ. ಮಾತ್ರವಲ್ಲ, ತಾವು ಕಟ್ಟಿದ ಹೋರಾಟವನ್ನು ಗಟ್ಟಿಗೊಳಿಸಿ ಮುಂತೆಗೆದುಕೊಂಡು ಹೋಗಲು ಮುಂದಿನ ಪೀಳಿಗೆಗಳಿಗೆ ಅಗತ್ಯವಾದ ಅವಕಾಶಗಳನ್ನು ಕೂಡ ಸೃಷ್ಟಿಸಿಕೊಟ್ಟಿದ್ದಾರೆ. ಇದಕ್ಕಾಗಿ ಸಾವೆ ಮತ್ತು ಅವರಂಥವರಿಗೆ ನಾವು ಸದಾ ಖುಣಿಗಳಾಗಿದ್ದೇವೆ. ನಮ್ಮ ದಿನಂಪ್ರತಿ ಬದುಕಿನ, ಚಿಂತನೆಯ, ಚಚರ್ೆಯ ಭಾಗವಾಗಿ ಉಳಿಯುವ ಈ ಹೋರಾಟದ ಫಲಗಳು ಅತ್ಯಮೂಲ್ಯ. ಅಷ್ಟರ ಮಟ್ಟಿಗೆ ಈ ಧೀಮಂತ ಸಾವಯವ/ಸಹಜ ಕೃಷಿಕರ ಪ್ರಯತ್ನಗಳು ಯಶಸ್ವಿಯಾಗಿವೆ ಎಂಬುದನ್ನು ಇಲ್ಲಿ ಒತ್ತಿ ಹೇಳಲೇ ಬೇಕು.
ಸಾವೆ ಮತ್ತು ಅವರ ವಾರಗೆಯವರು ಈ ಹೋರಾಟದ ಕಿಚ್ಚನ್ನು ನಮ್ಮಲ್ಲಿ ಹತ್ತಿಸದೆ ಹೋಗಿದ್ದರೆ ನಮ್ಮ ಕೃಷಿ ಬೇರೆಯೇ ದಾರಿ ಹಿಡಿಯುತ್ತಿತ್ತು( ಅನೇಕ ದೇಶಗಳಲ್ಲಿ ಆಗಿರುವ ರೀತಿಯಲ್ಲಿ). ಕುಲಾಂತರಿಯಂಥ ಕುಲಗೆಟ್ಟ ತಾಂತ್ರಿಕತೆಯ ವಿರುದ್ಧ ನಡೆದಿರುವ ಇವತ್ತಿನ ಹೋರಾಟದ ಸಂದರ್ಭದಲ್ಲಿ ಈ ಅನುಭವ ಅಷ್ಟೇ ಮಹತ್ವದ್ದಾಗಿದೆ. ಏಕೆಂದರೆ, ಯಾವುದೇ ಸಾವಯವ ಪ್ರಯತ್ನಗಳ ಭವಿಷ್ಯತ್ತು ಕೃಷಿಯಲ್ಲಿ ಕುಲಾಂತರಿಯ ವಿರುದ್ಧದ ಪ್ರತಿರೋಧ ಮತ್ತು ಹೋರಾಟಗಳ ಮೇಲೆ ನಿಂತಿದೆ ಎಂಬುದರಲ್ಲಿ ಎರಡು ಮಾತಿಲ್ಲ.
ಸಹಜ ಸಾಗುವಳಿ/ಇಕ್ರಾ ಮತ್ತು ಕನರ್ಾಟಕದ ಸಾವಯವ ಬಳಗವು ಸಾವಯವ ಕೃಷಿ ಚಳವಳಿಯನ್ನು ವಿಶಾಲ ಚೌಕಟ್ಟಿನಲ್ಲಿ ನೋಡುತ್ತದೆ. ಸಾವಯವ ಕೃಷಿ ಎನ್ನುವುದು ಅಹಿಂಸೆ, ವಿಕೇಂದ್ರೀಕರಣ, ಸುಸ್ಥಿರ ಮತ್ತು ಸಮದಶರ್ಿ ಪರಿಸರಕ್ಕಾಗಿನ ಹೋರಾಟವಾಗಿದ್ದು, ಪಯರ್ಾಯ ರೀತಿಯಲ್ಲಿ ಬದುಕುವ, ನೋಡುವ ಮತ್ತು ಕಾಯಕ ಮಾಡುವ ಹೋರಾಟ ಎಂಬುದು ನಮ್ಮ ತಿಳಿವಳಿಕೆ. ಸಾವಯವ/ ಸಹಜ ಕೃಷಿ ಚಳವಳಿಯ ಬೀಜಗಳು ಎಲ್ಲ ಕಡೆ ಮೊಳಕೆಯೊಡೆದದ್ದೇ ಹೀಗೆ. ಇಂಥ ಉದಾತ್ತವಾದ ಚಳವಳಿಯನ್ನು, ‘ರಾಸಾಯನಿಕ ಒಳಸುರಿಯ ಬದಲಿಗೆ ಸಾವಯವ ಒಳಸುರಿ, ಕಂಪನಿಗಳಿಂದ ಸಾವಯವ ಉತ್ಪನ್ನಗಳ ದೃಢೀಕರಣ ಮತ್ತು ಸಕರ್ಾರದ(ಮೂಲತಃ ವಿನಾಸಹ ಮತ್ತು ಅವನತಿಗಳಿಗೆ ಜವಾಬ್ದಾರಿಯಾಗಿದ್ದು, ಆಗಿರುವುದು ಸಕರ್ಾರ) ಸಬ್ಸಿಡಿಯ ಕಾರ್ಯಕ್ರಮ’ ಎನ್ನುವಲ್ಲಿಗೆ ಇಳಿಸಿಬಿಡುವುದು ದೊಡ್ದ ದುರಂತ.
ನಮ್ಮ ಅನುಭವಗಳನ್ನು, ನಮ್ಮ ಹೋರಾಟಗಳನ್ನು ಮತ್ತು ನಮ್ಮ ಚರಿತ್ರೆಗಳನ್ನು ಅಳಿಸಿಬಿಡುವ, ಮೂಲೆಗೆ ಸರಿಸುವ, ತಿರುಚುವ ಮತ್ತು ಸುಸ್ಥಿರ ಸಾವಯವ ಮತ್ತು ಸಹಜ ಕೃಷಿಯನ್ನು ಕೆಲ ತಂತ್ರಜ್ಞಾನಗಳಿಗೆ ಇಳಿಸಿಬಿಡುವ ವ್ಯವಸ್ಥಿತ ಪ್ರಯತ್ನ ನಡೆಯುತ್ತಲೇ ಇದೆ. ‘ರೈತರ ಆಸಕ್ತಿ ಇರುವುದು ಲಾಭ ಮತ್ತು ದುಡ್ಡಿನಲ್ಲಿ’ ಎಂದು ಹೇಳುವ ಮೂಲಕ ಇದನ್ನು ಸಮಯ ಬಂದಾಗಲೆಲ್ಲಾ ಸಮಥರ್ಿಸಿಕೊಳ್ಳಲಾಗುತ್ತದೆ. ಕಾಪರ್ೊರೆಟ್ ದುರಾಕ್ರಮಣವನ್ನು ಪ್ರತಿರೋಧಿಸಿ, ರೈತ ಮುಂದಾಳತ್ವದ ಕೃಷಿ ವ್ಯವಸ್ಥೆಗಳನ್ನು ಪುನರ್ಸ್ಥಾಪನೆ ಮಾಡುವಲ್ಲಿ ರೈತ ಸಮುದಾಯ ಮತ್ತು ಇತರರ ಅಸಾಧಾರಣ ಕೊಡುಗೆಯನ್ನು ಅಳಿಸಿಹಾಕುವ ಪ್ರಯತ್ನ ಇದು. ಅವರ ಭಾವನೆಯ ಮೇಲೆ ಎಸಗುತ್ತಿರುವ ಇನ್ನೊಂದು ರೀತಿಯ ಕೌರ್ಯ ಮತ್ತು ವಂಚನೆ ಇದು. ನಮ್ಮ ಇತ್ತೀಚಿನ ಗುಜರಾತಿನ ಪ್ರವಾಸದ ಸಮಯದಲ್ಲಿ ನಾವು ಕಂಡು ಕುಶಲವಾಡಿದ ಎಲ್ಲಾ ರೈತರು(ಸರ್ವಧಮನ್ ಪಟೇಲ್, ಬನರ್ಾಡ್, ಧೀರೇಂದ್ರ ಸೊನೆಜಿ ಮತ್ತು ಸ್ಮಿತಾ ಬೆನ್, ದಿನೇಶ್ ಪಟೇಲ್ ಮತ್ತು ಇತರರು) ಇದರ ಬಗ್ಗೆಯೇ ಮಾತನಾಡುತ್ತಿದ್ದರು. ನಾವು ನೋಡುವ, ಮಾಡುವ ಮತ್ತು ಬದುಕುವ ವಿಭಿನ್ನವಾಗಿರಬೇಕಾದ ಬಗ್ಗೆಯೇ ಬಗ್ಗೆಯೇ ಒತ್ತುಕೊಟ್ಟು ಮಾತನಾಡುತ್ತಿದ್ದರು. ಸಾವಯವ ಕೃಷಿಯೆನ್ನುವುದನ್ನು ಕೇವಲ ಒಂದು ಕೃಷಿ ಪದ್ಧತಿಯಾಗಿ ನೋಡದೆ ಮನೋಭಾವನೆ ಬದಲಾವಣೆಯ ಜೊತೆಜೊತೆಗೇ ನೋಡಬೇಕಾದ ಬಗ್ಗೆ ಅವರೆಲ್ಲಾ ಹೇಳುತ್ತಿದ್ದರು. ಇದನ್ನೆಲ್ಲಾ ನೋಡಿದಾಗ ನಮ್ಮ ಸಾವಯವ ಕೃಷಿ ಚಳವಳಿ ‘ಶುದ್ಧ ಸ್ಪಟಿಕ’ ಚಿಂತನೆ ಮತ್ತು ಮೌಲ್ಯಗಳ ಮೇಲೆ ಕಟ್ಟಲ್ಪಟ್ಟಿದೆ ಎಂಬುದು ನನಗೆ ಮತ್ತೆ ಮತ್ತೆ ಸಾಬೀತಾಗುವಂತಿತ್ತು. ಮತ್ತು ನಾವು ನೋಡುವ ಕ್ರಮದಲ್ಲಿ ಆಮೂಲಾಗ್ರ ಬದಲಾವಣೆ ಆಗಬೇಕಾಗಿರುವುದು ಖಚಿತವಾಯಿತು.
ಹೀಗಾಗಿ ಧೀಮಂತ ಸಾವಯವ ಕೃಷಿಕರ ಬಗ್ಗೆ, ಸಾವಯವ ಚಳವಳಿಯ ಬಗ್ಗೆ, ತತ್ವ ಮತ್ತು ಆಚಣೆಯಲ್ಲಿ ಅದು ಹುಟ್ಟುಹಾಕಿರುವ ವಿಭಿನ್ನ ಮೌಲ್ಯಗಳ ಬಗ್ಗೆ ನಾವು ಪದೇ ಪದೇ ಜ್ಞಾಪಿಸಿಕೊಳ್ಳುತ್ತಾ ಇತರರಿಗೂ ಜ್ಞಾಪಿಸುತ್ತಾ ಇರುವುದು ಮುಖ್ಯ ಎಂದು ನಾವು ನಂಬುತ್ತೇವೆ. ಎಲ್ಲವನ್ನೂ ಬೇಗ ಮರೆಯುವ ಮತ್ತು ಎಲ್ಲದಕ್ಕೂ ತಕ್ಷಣದ ಪರಿಹಾರಗಳನ್ನು ಹುಡುಕುವ ಇಂದಿನ ಯುಗದಲ್ಲಿ ರೈತರ ಚೈತನ್ಯಶೀಲ ಚರಿತ್ರೆಗಳನ್ನು ತಿಳಿದುಕೊಳ್ಳುವುದು, ಬರೆದಿಡುವುದು ಹೊಸ ಮಾದರಿಗಳ ಸೃಷ್ಟಿ ಕಾರ್ಯಕ್ಕೆ ಊರುಗೋಲಂತೆ.
ಪತ್ರಿಕೆಯ ಮುಂದಿನ ಸಂಚಿಕೆಗಳಲ್ಲಿ ನಾವು ಕಂಡು ಕುಶಲವಾಡಿದ ಇನ್ನಿತರ ಆದರ್ಶಪ್ರಾಯ ರೈತರ ಅನುಭವ, ವಿಚಾರಗಳ ಬಗ್ಯೂ ಬರೆಯಲಾಗುತ್ತದೆ. ಇದು ರೈತ ಬಾಂಧವರಿಗೆ ಮಾತ್ರ ಆಸಕ್ತಿ ಉಂಟುಮಾಡುತ್ತದೆ ಎಂಬ ಕಾರಣಕ್ಕಲ್ಲ, ನಮ್ಮೆಲ್ಲರಿಗೂ ಸಾವಯವ ಕೃಷಿ ಚಿಂತನೆಗಳನ್ನು ಮುಂತೆಗೆದುಕೊಂಡು ಹೋಗಲು ಮತ್ತು ಈ ದಿಕ್ಕಿನಲ್ಲಿ ನಮ್ಮನ್ನು ಆವರಿಸಿಕೊಳ್ಳುತ್ತಿರುವ ವಿಸ್ಮೃತಿಯ ಬಲೆಯನ್ನು ಕಳಚಿಹಾಕಲು ಸಹಾಯವಾಗುತ್ತೆದೆ ಎಂದು ಆಶಿಸುತ್ತೇವೆ.
* * * *
ಕಾಡು ಹಂದಿಗೆ ಸಿಂಹದ ಹಿಕ್ಕೆ, ಇಲಿಗೆ ಬೆಕ್ಕಿನ ಹಿಕ್ಕೆ
ಒಮ್ಮೆ ಒಬ್ಬ ರೈತ ಸಾವೆಯವರಲ್ಲಿಗೆ ಬಂದು, ‘ಸಾವೇಜಿ, ನನ್ನ ಹೊಲದಲ್ಲಿ ಕಾಡು ಹಂದಿ ಕಾಟ ತಾಳಲಾರೆ, ಏನಾದರೂ ಉಪಾಯ ಹೇಳಿ’ ಎಂದು ಕೇಳಿಕೊಳ್ಳುತ್ತಾರೆ. ಸ್ವಲ್ಪ ಯೋಚಿಸಿದ ಸಾವೆಯವರು, ‘ನಿನಗೆ ಯಾವುದಾದರೂ ಮೃಗಾಲಯ ಹತ್ತಿರದಲ್ಲಿದೆಯೇ? ಹೋಗಲು ಸಾಧ್ಯವಾಗುತ್ತೇ?’ ಎಂದು ಕೇಳುತ್ತಾರೆ. ರೈತ ‘ಹತ್ತಿರದಲ್ಲಿಲ್ಲ. ಆದರೆ ಹೋಗಬಲ್ಲೆ’ ಎನ್ನುತ್ತಾನೆ. ಆಗ ಸಾವೆಯವರು, ‘ನೀನು ಅಲ್ಲಿ ಹೋಗಿ, ಸಿಂಹವನ್ನು ನೋಡಿಕೊಳ್ಳುವವನ ಹತ್ತಿರ ಸ್ನೇಹ ಬೆಳೆಸಿ, ಸಿಂಹದ ಹಿಕ್ಕೆಯನ್ನು ತಂದು ನಿನ್ನ ಹೊಲದ ಸುತ್ತಲೂ ಹಾಕು’ ಅನ್ನುತ್ತಾರೆ. ಆತ ‘ಸರಿ’ ಎಂದು ಹೊರಟು ಹೋಗುತ್ತಾರೆ. ಕೆಲ ದಿನಗಳ ನಂತರ ರೈತ ಕುಷಿಯಾಗಿ ಬಂದು, ಸಾವೆಯವರಿಗೆ ದೀರ್ಘ ದಂಡ ಪ್ರಣಾಮ ಹಾಕಿ ಅವರ ಪದತಲದಲ್ಲೇ ಕುಳಿತು ಬಿಡುತ್ತಾರೆ. ‘ನನ್ನ ಹೊಲದಲ್ಲಿ ಕಾಡುಹಂದಿಯ ಕಾಟ ಪೂತರ್ಿ ನಿಂತು ಹೋಯಿತು. ಸಾವೇಜಿ, ನೀವೇ ನನ್ನ ದೇವರು’ ಎಂದು ಕೊಂಡಾಡುತ್ತಾರೆ.
ಈ ಘಟನೆಯನ್ನು ನಮ್ಮೊಂದಿಗೆ ಹೇಳುತ್ತಾ ಸಾವೆಯವರು, ‘ಬೆಕ್ಕು ಯಾಕೆ ತನ್ನ ಹಿಕ್ಕೆಯನ್ನು ಮಣ್ಣಲ್ಲಿ ಮುಚ್ಚಿಡುತ್ತೆ ಹೇಳಿ, ಇಲಿಗೆ ತಾನಿರುವುದು ಗೊತ್ತಾಗಬಾರದು ಅಂತ. ನಿಮ್ಮ ಹೊಲದಲ್ಲಿ ಇಲಿ ಕಾಟವಿದ್ದರೆ ಬೆಕ್ಕಿನ ಹಿಕ್ಕೆ ತಂದು ಸುತ್ತಲೂ ಹಾಕಿ, ಆಮೇಲೆ ನೋಡಿ’ ಎಂದು ಕಣ್ಣು ಮಿಟುಕಿಸಿ ನಕ್ಕರು.
ಸ್ವಾಮಿನಾಥನ್ ಕಟಕಟೆಗೆ ಬರಲಿ
‘ಎಂ.ಎಸ್.ಸ್ವಾಮಿನಾಥನ್ ಮೇಲೆ ದಾವೆ ಹೂಡಬೇಕು. ಕಟಕಟೆಯಲ್ಲಿ ನಿಲ್ಲಿಸಿ, ಹಸಿರು ಕ್ರಾಂತಿಯ ಅನಾಹುತವನ್ನು ಹೇಗೆ ಸರಿಪಡಿಸುತ್ತೀರಿ ಎಂದು ವಿಚಾರಣೆ ಮಾಡಬೇಕು. ಹಾಗೆಯೇ ದೊಡ್ಡ ಅಣೆಕಟ್ಟುಗಳನ್ನು ಆಧುನಿಕ ಭಾರತದ ದೇವಸ್ತಾನಗಳು ಎಂದ ನೆಹರುವನ್ನು ಕೂಡ ವಿಚಾರಣೆಗೆ ಒಳಪಡಿಸಬೇಕು’. ನಮ್ಮನ್ನು ಕಂಡ ತಕ್ಷಣ, ಮರೆತು ಹೋಗುವ ಮುನ್ನ ಹೇಳಿಬಿಡಬೇಕು ಅನ್ನುವಂತೆ ಸಾವೇಜಿ ಹೇಳಿದ ಮಾತು ಇದು.
* * * * * *
ಸಹಜ ಸಾಗುವಳಿ ದ್ವೈಮಾಸಿಕ
ಕಾಪರ್ೊರೆಟ್ ದುರಾಕ್ರಮಣ ವಿರೋಧಿಸಿ ಸುಸ್ಥಿರ/ಸಾವಯವ ಕೃಷಿಗೆ ಮೀಸಲಾದ ಪತ್ರಿಕೆ
ಸಂಪಾದಕಿ: ವಿ. ಗಾಯತ್ರಿ
ವಾಷರ್ಿಕ ಚಂದಾ: ಅರವತ್ತು ರೂಪಾಯಿಗಳು
ಪ್ರಕಾಶಕರು: ‘ಇಕ್ರಾ’, ನಂ.22, ಮೈಖಲ್ಪಾಳ್ಯ, ಹೊಸ ತಿಪ್ಪಸಂದ್ರ ಅಂಚೆ
ಬೆಂಗಳೂರು – 560075 ದೂರವಾಣಿ: 080- 25283370
e-mail: icrable@gmail.com





Corrected mail id: icrablr@gmail.com