ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸಮ್ಮೇಳನದ ಅಂಗಳ..

2 Comments

  1. ಲಕ್ಷ್ಮೀನಾರಾಯಣ ವಿ.ಎನ್

    ಮಾನ್ಯರೆ,
    ವಿಶ್ವಕನ್ನಡ ಸಮ್ಮೇಳನದ ಬಗೆಗೆ ಸಿಗುವ ಮಾಹಿತಿಗಳನ್ನು ನೀವು ಪ್ರಕಟಿಸುತ್ತಿರುವುದು ಸ್ತುತ್ಯಾರ್ಹ.ಈ ಸಂಭ್ರಮದ ಸಂತೋಷದ ವರದಿಗಳ ಜೊತೆ ಜೊತೆಗೆ ಇದಕ್ಕೆ ಸಂಬಂಧಿಸಿದ ಎಲ್ಲಾ ಏರ್ಪಾಡುಗಳ ಖರ್ಚು-ವೆಚ್ಚ, ಗುತ್ತಿಗೆದಾರರ ವಿವರ, ಯಾವ ಬಾಬತ್ತುಗಳಲ್ಲಿ ಇವಕ್ಕೆ ಹಣ ಒದಗಿಸಲಾಗುತ್ತಿದೆ ಇತ್ಯಾದಿ ವಿವರಗಳನ್ನೂ ಕಲೆಹಾಕಿ ಪ್ರಕಟಿಸಿದರೆ ಒಳ್ಳೆಯದು. ಇದು ಮೇಲುನೋಟಕ್ಕೆ ಉತ್ಸವ-ಪ್ರಶಸ್ತಿ-ಅನುದಾನಗಳ ಸರ್ಕಾರವಾದ್ದರಿಂದ ಮತ್ತು ಜನರ ಹಣವನ್ನು ನಿಜವಾದ ಅಭಿವೃದ್ಧಿಕಾರ್ಯಗಳಿಗೆ ಸರಿಯಾಗಿ ಬಳಸಲಾಗುತ್ತಿದೆಯೆ ಎಂಬುದನ್ನು ಗಮನಿಸಲು ಈ ಕ್ರಮ ಅಗತ್ಯ ಎಂದು ನನಗನ್ನಿಸುತ್ತದೆ.ಎಷ್ಟೇ ಸರಳವಾಗಿರಲಿ ಅಥವಾ ವೈಭವೋಪೇತವಾಗಿರಲಿ ಯಾವುದೂ ಬಿಟ್ಟಿ ಬರುವುದಿಲ್ಲ.everything costs something. ಈಗಂತೂ every thing costs heavily. ಅಲ್ಲದೆ ದೊಂದಿ ಬೆಳಕಿನ ದೊಂಬರಾಟದಕಡೆ ಜನರ ಗಮನ ಸೆಳೆದು ಮನೆಗಳನ್ನು ಲೂಟಿಮಾಡುವುದು ಬಹಳ ಹಳೆಯ ತಂತ್ರ.ಸಂಘಪರಿವಾರ ಇದರಲ್ಲಿ ಬಹುನುರಿತ ಮಂದಿ. ಏನು ಮಾಡಿದರೂ ಅದಕ್ಕೊಂದು ಕೊಂಕು ಮಾಡುತ್ತಾರೆ ಎಂದು ಎಲ್ಲಿ ಆಕ್ಷೇಪಿಸುತ್ತಾರೋ ಎಂಬ ಸಂಕೋಚಕ್ಕೆ ಪಕ್ಕಾಗದೆ ಕನ್ನಡಿಗರ ಹೆಸರಿನಲ್ಲಿ ನಡೆಯುತ್ತಿರುವ ಉತ್ಸವದ ಆರ್ಥಿಕ ಮಗ್ಗಲುಗಳನ್ನೂ ಗಮನಿಸುವುದು ಅಗತ್ಯ.ಈ ಉತ್ಸವಗಳ ಹಿಂದಿರುವ ರಾಜಕೀಯ ಫಲಾನುಭವಿಗಳು ಕಣ್ಣಿಗೆ ಕಾಣಿಸುತ್ತಾರೆ. ಆದರೆ ಆರ್ಥಿಕ ಫಲಾನುಭವಿಗಳು ಯಾರೆಂದು ತಿಳಿಯುವುದು ಅಷ್ಟು ಸುಲಭವಲ್ಲ.ಅದು ಲೆಕ್ಕ ಪರಿಶೋಧಕರ ಕಡತಗಳಲ್ಲಿ ತಾಂತ್ರಿಕವಾಗಿ ನಮೂದಾಗಿ ಜನರ ಕೈಗೆ ದಕ್ಕದಿರಬಹುದು. ಅದು ಮೀಡಿಯಾ ಮಾಡಬಹುದಾದ ಜನರ ಪರವಾದ ಕರ್ತವ್ಯ. ಅವಧಿ ಈ ಅಪ್ರಿಯ ಕೆಲಸವನ್ನು ಮಾಡಲಿ ಎಂದು ನಿರೀಕ್ಷಿಸುತ್ತೇನೆ.

    • balu

      well said , thanks

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading