ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸನ್ಮಾನ + ಅವಮಾನ~ ಸಮಾನ

avadhi

ನಗೆ ಸಾಮ್ರಾಟರಾದ ನಾವು ಸನ್ಮಾನ ಅವಮಾನಗಳನ್ನು ಸಮಾನವಾಗಿ ಕಾಣುವವರು, ನಮಗೆ ಹೊಗಳಿಗೆ ತೆಗಳಿಕೆಗಳಲ್ಲಿ ಯಾವುದೇ ಹೆಗ್ಗಳಿಕೆ ಕಾಣುವುದಿಲ್ಲ.  ಒಂದು ವರ್ಷಗಳಿಂದ ನಮ್ಮ ಅನುಯಾಯಿಗಳಾಗಿರುವ ನಿಮಗೂ ಇದು ತಿಳಿದದ್ದೇ. ಆದರೆ ನಮ್ಮ ಏಕಸದಸ್ಯ ಸಂಸ್ಥೆಯ ಇನ್ನುಳಿದ ಸಿಬ್ಬಂದಿಗಳು ನಿಮ್ಮಷ್ಟೇ ಹುಲುಮಾನವರು. ಅವರಿಗೆ ತಮ್ಮ ಕೆಲಸವನ್ನು ಯಾರಾದರೂ ಗುರುತಿಸಿ ಬೆನ್ನು ತಟ್ಟಿದರೆ ಇಲ್ಲವೇ ಬೆನ್ನಿಗೆ ಗುದ್ದು ಹಾಕಿದರೆ ಇನ್ನಷ್ಟು ಮುಂದೆ ತೆವಳುವುದಕ್ಕೆ ಸಹಾಯವಾಗುತ್ತದೆ.

-ನಗೆ ನಗಾರಿ ಡಾಟ್ ಕಾಮ್

ಹಾಲಿನ ಪ್ಯಾಕೆಟಿನಿಂದ, ಆಲ್ಕೋಹಾಲಿನಿಂದ ನೀರನ್ನು ಮಾತ್ರ ಹೀರಿ ಬಾಯಾರಿದವನಿಗೆ ನೀಡಿ ಪ್ರಾಣ ಉಳಿಸುವ ‘ಹಂಸ’ದ ಹಾಗಿರುವ ಅವಧಿಯಲ್ಲಿ ನಗೆ ನಗಾರಿಯ ಸದ್ದು ಪ್ರತಿಧ್ವನಿಸಿರುವುದು ನಮ್ಮ ಸಂಸ್ಥೆಯ ಸಮಸ್ತರಿಗೆ ಸಂತೋಷ ತಂದಿದೆ. ವರ್ಷವೊಂದನ್ನು ಪೂರೈಸಿರುವ ನಾವು ಹೀಗೇ ಸಾಗಿದಲ್ಲಿ ಎರಡು ವರ್ಷ ಪೂರೈಸಬಹುದು ಎಂದು ಆರ್ಥಿಕತೆಯ ಕುಸಿತದ ಬಗ್ಗೆ ವರ್ಷಗಳ ಹಿಂದೆ ಮುನ್ಸೂಚನೆ ನೀಡಿದ್ದ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಹೀಗಾಗಿ ಮುಂದಿನ ವರ್ಷದ ವಾರ್ಷಿಕೋತ್ಸವದ ರಹಸ್ಯ ಕಾರ್ಯಕ್ರಮಕ್ಕೆ ತಪ್ಪದೆ ಅವಧಿಯ ವರದಿಗಾರರನ್ನು ಆಹ್ವಾನಿಸುತ್ತೇವೆ ಎಂದು ನಾವು ಈ ಮೂಲಕ ಆಶ್ವಾಸನೆ ಕೊಡುತ್ತಿದ್ದೇವೆ.

– ನಗೆ ಸಾಮ್ರಾಟ್

‍ಲೇಖಕರು avadhi

1 February, 2009

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading