ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಲಿಂಗರಾಜ ಸೊಟ್ಟಪ್ಪನವರ ಕವಿತೆ- ಸದ್ದು ಗದ್ದಲವಿಲ್ಲದ ಕೇರಿಯಲಿ…

ಲಿಂಗರಾಜ ಸೊಟ್ಟಪ್ಪನವರ

ಅವಳು ಮೆಲ್ಲನೆ ಪಾದ ಆಡಿಸುತ್ತ ಬರುತ್ತಾಳೆ
ಸದ್ದಾಗಬಾರದೆoಬ ಕಳಕಳಿಯ
ಅವಳ ನವಿರು ಪಾದಗಳನು ಚುಂಬಿಸದೆ ಹೇಗೆ ಇರಲಿ
ಗದ್ದಲವಾಗದಂತೆ ಘಲು ಘಲುವ ಅವಳ ಗೆಜ್ಜೆ ನಾದವನು
ಮನದುoಬದೆ ಹೇಗೆ ಇರಲಿ

ಈ ಕೇರಿಯಲಿ
ಅವಳು ನಿತ್ಯ ಬರುತ್ತಾಳೆ
ಸದ್ದು ಗದ್ದಲ ಬೇಡವೆಂಬ ಕೋರಿಕೆಗೆ
ನಾನು ಕನಲದೆ ಉಳಿದು ಎಷ್ಟೋ ದಿನಗಳಾದವು

ಎದೆ ತುಳಿದು ಅವಳು ನಲಿವಾಗಲೂ
ಗದ್ದಲಕ್ಕಂಜಿ ಎದೆ ಸದ್ದಾಗದಂತೆ ಹೋದ ನಾನು
ಅವಳ ಕೋಮಲ ಪಾದಗಳಿಗೆ ದಕ್ಕದೆ ಹೋದೆ

ಸದ್ದು ಗದ್ದಲವಿಲ್ಲದ ಕೇರಿಗೆ
ಈಗಲೂ ಹುಡುಗಿಯರು ಬರುತ್ತಾರೆ
ಕೋಮಲ ಪಾದಗಳು
ಕನಲದೆ ಉಳಿವ ಹೃದಯ
ಈಗಲೂ ಇವೆ

‍ಲೇಖಕರು Admin

8 March, 2023

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading