ಮೈಸೂರಿನಲ್ಲಿ ‘ಕನ್ನಡ ದೃಶ್ಯ ಕಾವ್ಯಕುಸುಮ’

ಸಾಂಸ್ಕೃತಿಕ ನಗರಿ ಎಂಬ ಗರಿಯನ್ನು ಹೊತ್ತಿರುವ ಸುಂದರ ನಗರಿ ನಮ್ಮ ಮೈಸೂರು. ರಾಜಾಶ್ರಮ ಪಡೆದು ಶಾಸ್ತ್ರೀಯ ಸಂಗೀತ, ನೃತ್ಯ, ವಾದ್ಯ, ಸಾಹಿತ್ಯ, ಚಿತ್ರಕಲೆ ಹೀಗೆ ವಿವಿಧ ಪ್ರದರ್ಶಕ ಕಲೆಗಳ ಬೆಳೆದು ಇಂದು ವಿಶ್ವಖ್ಯಾತಿಯನ್ನು ಪಡೆದುಕೊಂಡಿದೆ. ಸಂಸ್ಕೃತಿ ಟ್ರಸ್ಟ್, ಸಂಸ್ಥೆಯು ಕಳೆದ ೧೨ ವರ್ಷಗಳಿಂದ ಮೈಸೂರಿನಲ್ಲಿ ಸ್ಥಾಪನೆಗೊಂಡು ವಿವಿಧ ಕಲಾ ಪ್ರಕಾರಗಳ ಪ್ರಸರಣಕ್ಕಾಗಿ ಕಾರ್ಯನಿರ್ವಹಿಸುತ್ತಿದೆ. ಶಾಸ್ತ್ರೀಯ ಕಲೆಗಳಾದ ಭರತನಾಟ್ಯ, ಕರ್ನಾಟಕ ಸಂಗೀತ, ಹಿಂದೂಸ್ಥಾನಿ ಸಂಗೀತ, ವಾದ್ಯ ಸಂಗೀತ ಮತ್ತು ರಂಗಕಲೆಗಳ ತರಬೇತಿ ಕೇಂದ್ರವನ್ನು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದ್ದು, ೧೦೦ ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಲಾ ಶಿಕ್ಷಣ ಪಡೆಯುತ್ತಿದ್ದಾರೆ. ಇದುವರೆವಿಗೂ ರಾಜ್ಯ ಮತ್ತು ರಾಷ್ಟçಮಟ್ಟದ ಹಲವಾರು ಸಂಗೀತ, ನೃತ್ಯ ಮತ್ತು ನಾಟಕೋತ್ಸವಗಳನ್ನು, ಕಾರ್ಯಾಗಾರ, ಕಮ್ಮಟ ಆಯೋಜಿಸಿ ನೂರಾರೂ ಕಲಾವಿದರನ್ನು ಮೈಸೂರಿನ ಕಲಾರಸಿಕರಿಗೆ ಪರಿಚಯಿಸಿದೆ.

ರೂಪುರೇಶೆ:
೧) ಗುರುಕುಲ ಪದ್ಧತಿ: ೫ ವರ್ಷ ಮೇಲ್ಪಟ್ಟ ಯಾವುದೇ ವಿದ್ಯಾರ್ಥಿಗಳಿಗೆ ವಿವಿಧ ಕಲಾಪ್ರಕಾರಗಳಲ್ಲಿ ತರಬೇತಿ
೨) ಶೈಕ್ಷಣ ಕ ಪದ್ಧತಿ: ಹಂಪಿ ವಿವಿ ಜಾನಪದ ವಿವಿ, ಸಂಗೀತ ವಿಶ್ವವಿದ್ಯಾಲಯದ ಅಂಗಸ೦ಸ್ಥೆಯಾಗಿ ಡಿಪ್ಲೋಮ ಸರ್ಟಿಫಿಕೆಟ್ ಕೋರ್ಸ್ಗಳನ್ನು ಪ್ರಾರಂಭಿಸುವುದು.
೩) ಕಲಾ ಪ್ರಕಾರಗಳು: ಭರತನಾಟ್ಯ, ಕರ್ನಾಟಕ ಶಾಸ್ತ್ರೀಯ ಸಂಗೀತ, ಜಾನಪದ ಸಂಗೀತ, ವಾದ್ಯ ಹಾಗೂ ನಾಟಕ ಕಲೆಗಳ ತರಬೇತಿ.
೪) ವಸ್ತು ಸಂಗ್ರಹಾಲಯ: ಭಾರತದ ಶಾಸ್ತ್ರೀಯ ಮತ್ತು ಜಾನಪದ ನೃತ್ಯದ ವೇಷಭೂಷಣ ಹಾಗೂ ವಾದ್ಯ ಪ್ರಕಾರಗಳ ಸಂಗ್ರಹಾಲಯ.
೫) ಸಾಂಸ್ಕೃತಿಕ ಕಲಾಗ್ರಾಮವನ್ನು ಸ್ಥಾಪಿಸಿ ಇಲ್ಲಿನ ಮಕ್ಕಳಿಗೆ ಪ್ರದರ್ಶಕ ಕಲೆಗಳ ತರಬೇತಿ ಮತ್ತು ಪ್ರಸರಣ ಮಾಡುವುದು.
೬) ಮಕ್ಕಳಿಗೆ ಶಾಸ್ತ್ರೀಯ ಸಂಗೀತ, ನೃತ್ಯ, ನಾಟಕ ಕಲೆಗಳ ತರಬೇತಿ
೭) ಕರ್ನಾಟಕ ರಾಜ್ಯ ಪ್ರೌಢಶಿಕ್ಷಣ ಮಂಡಳಿ ನಡೆಸುವ ಪರೀಕ್ಷೆಗೆ ವಿದ್ಯಾರ್ಥಿಗಳಿಗೆ ತರಬೇತಿ
೮) ಗ್ರಂಥಾಲಯ, ವಸ್ತುಸಂಗ್ರಹಾಲಯ -ಬುಡಕಟ್ಟು ಜನಾಂಗದ ಜೀವನವನ್ನು ಪ್ರತಿಬಿಂಬಿಸುವ ವಸ್ತುಗಳು
೯) ಸಭಾಂಗಣ
೧೦) ಧ್ವನಿ ಮತ್ತು ದೃಶ್ಯ ವಿಭಾಗ (Audio visual section)
೧೧) ಹಿಂದುಳಿದ ವರ್ಗಗಳ ಮಕ್ಕಳಿಗೆ ಉಚಿತ ಕಲಾ ತರಬೇತಿ
೧೨) ನಶಿಸಿಹೋಗುತ್ತಿರುವ ಕಲೆಗಳು ಮತ್ತು ಜಾನಪದ ಕಲೆಗಳ ಪುನರುಜ್ಜೀವನ

ವಿವಿಧ ಕಾರ್ಯಕ್ರಮಗಳು ಮತ್ತು ಉದ್ದೇಶ:
ಸಂಸ್ಕೃತಿ ಸೌರಭ:

ಸಂಸ್ಕೃತಿ ಪ್ರದರ್ಶಕ ಕಲೆಗಳ ಕೇಂದ್ರವು ಮೈಸೂರಿನಲ್ಲಿ ತನ್ನದೆ ವೈಶಿಷ್ಟ್ಯದೊಂದಿಗೆ ಕಲಾಸ್ತಿಕಯುಳ್ಳವರಿಗೆ ಸಂಗೀತ, ನೃತ್ಯ, ವಾದ್ಯ ಮುಂತಾದವುಗಳ ತರಬೇತಿಯನ್ನು ನೀಡುತ್ತಿದೆ. ಪ್ರತಿ ವರ್ಷವೂ ಸಂಸ್ಥೆಯು ವಿವಿಧ ಕಲಾ ಪ್ರಕಾರಗಳ ಅನಾವರಣಕ್ಕಾಗಿ ಸಂಗೀತ-ನೃತ್ಯದ ಸಂಸ್ಕೃತಿ ಸೌರಭ ಉತ್ಸವ, ರಂಗಭೂಮಿ ಮತ್ತು ಮೂಕಾಂಬಿನಯದ ಪ್ರಸ್ತುತಿಗಾಗಿ ರಂಗ ಸಂಭ್ರಮ ಮತ್ತು ದೇಶದ ವಿವಿಧ ಜಾನಪದ ಕಲೆಗಳಿಗಾಗಿ ಜಾನಪದ ಸಿರಿ ಎಂಬ ರಾಷ್ಟ್ರೀಯ ಮಟ್ಟದ ಉತ್ಸವಗಳನ್ನು ನಡೆಸುತ್ತಿದೆ.

ಮುಂಬರುವ ಸಾಲಿನಲ್ಲಿ ಸಂಗೀತ, ನೃತ್ಯಕ್ಕೆ ಸಂಬ೦ಧಿಸಿದ ಪುಸ್ತಕ ಮಳಿಗೆ ಮತ್ತು ನೃತ್ಯ ಪರಿಕರಗಳ ಪ್ರದರ್ಶನ ಕೇಂದ್ರವನ್ನು ಸ್ಥಾಪಿಸಲು ಉದ್ದೇಶಿಸಿದೆ.

ನೃತ್ಯ ಸಿಂಚನ:
ಭಾತದಾದ್ಯ೦ತ ಶಾಸ್ತ್ರೀಯ ಸಂಗೀತ, ನೃತ್ಯ, ವಾದ್ಯ, ನಾಟಕ ಇತ್ಯಾದಿ ಕಲೆಗಳನ್ನು ಅಭ್ಯಾಸಿಸುತ್ತಿರುವ ಲಕ್ಷಕ್ಕೂ ಮೀರದ ಉದಯೋನ್ಮೂಕ ಕಲಾವಿದರಿದ್ದಾರೆ. ಆದರೆ ತಮ್ಮ ೧೫-೨೦ ವರ್ಷದ ಅಭ್ಯಾಸದ ನಂತರ ವೇದಿಕೆಗಳಲ್ಲಿ, ವಿವಿಧ ಜಿಲ್ಲಾ, ರಾಜ್ಯ ಮತ್ತು ರಾಷ್ಟ್ರಮಟ್ಟದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಅವಕಾಶ ಸಿಗುವುದು ಕಡಿಮೆ. ಇದೇ ಉದ್ದೇಶದಿಂದ ಮೈಸೂರಿನ ನಾದಬ್ರಹ್ಮ ಸಂಗೀತ ಸಭಾ ವೇದಿಕೆಯಲ್ಲಿ ಕಳೆದ ೩ ವರ್ಷಗಳಿಂದ ವಿವಿಧ ಕಲಾಪ್ರಕಾರದ ಕಲಾವಿದರಿಗೆ ಏಕವ್ಯಕ್ತಿ ಪ್ರದರ್ಶನಕ್ಕಾಗಿ ನೃತ್ಯ ಸಿಂಚನ ಕಾರ್ಯಕ್ರಮವನ್ನು ಪ್ರತಿ ತಿಂಗಳ ಎರಡನೇ ಶನಿವಾರ ನಡೆಸಿಕೊಂಡು ಬ೦ದಿದ್ದು. ಈಗಾಗಲೇ ೧೫೦ಕ್ಕೂ ಹೆಚ್ಚು ಕಲಾವಿದರ ಕಾರ್ಯಕ್ರಮವನ್ನು ಸಾದರ ಪಡಿಸಿದ್ದಾರೆ. ಮುಂಬರುವ ದಿನಗಳಲ್ಲಿ ಇದನ್ನು ಮೈಸೂರಿನ ಎಲ್ಲಾ ತಾಲ್ಲೂಕುಗಳಲ್ಲಿ ನಡೆಸಬೇಕಾಗಿ ಕಾರ್ಯರೂಪ ಸಿದ್ಧಪಡಿಸಲಾಗಿದೆ. ಹಲವಾರು ನೃತ್ಯ ಪ್ರದರ್ಶನಗಳನ್ನು ನೀಡುತ್ತಾ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ಸಾಂಸ್ಕೃತಿಕ ಕೇಂದ್ರ :
ಕಲೆಗಳ ತರಬೇತಿಗಾಗಿ ಸಾಂಸ್ಕೃತಿಕ ರಾಜಧಾನಿ ಎಂಬ ಖ್ಯಾತಿಯನ್ನು ಪಡೆದಿರುವ ಮೈಸೂರು ಜಿಲ್ಲೆಲ್ಲಿ ಶಾಸ್ತ್ರೀಯ ಸಂಗೀತ, ನೃತ್ಯ, ವಾದ್ಯ, ನಾಟಕ, ಸಾಹಿತ್ಯ ಪ್ರದರ್ಶಕ ಕಲೆಗಳನ್ನು ಕಲಿಯಲು ಸಂಸ್ಥೆ.

ವಿದ್ಯಾವಾಟಿಕಾ:
ಸಂಸ್ಕೃತಿ ಗ್ರಂಥಾಲಯ ಮತ್ತು ವಸ್ತು ಸಂಗ್ರಾಹಲಯ: ಮೈಸೂರಿನಲ್ಲಿ ಸುಮಾರು ೩೦ಕ್ಕೂ ಹೆಚ್ಚು ನೃತ್ಯ ಶಾಲೆಗಳಿವೆ, ಹವ್ಯಾಸಿ ರಂಗಭೂಮಿಯ ಸುಮಾರು ೨೫ ತಂಡಗಳಿವೆ. ಅಲ್ಲದೇ, ಮೈಸೂರು ವಿಶ್ವವಿದ್ಯಾನಿಲಯ ಡಾ.ಗಂಗುಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ
ವಿಶ್ವವಿದ್ಯಾಲಯ ಕಲೆ ತರಬೇತಿಗಾಗಿ ಇರುವ ಸಂಸ್ಥೆಗಳು. ವಿಶ್ವವಿದ್ಯಾಲಯದಲ್ಲಿ ಅಭ್ಯಾಸ ಮಾಡುವ ವಿದ್ಯಾರ್ಥಿಗಳಿಗೆ ಅಲ್ಲಿನ ಗ್ರಂಥಾಲಯಗಳಲ್ಲಿ ವಿಷಯಕ್ಕೆ ಸಂಬ೦ಧಿಸಿದ ಪುಸ್ತಕಗಳು ಲಭ್ಯವಿರುತ್ತದೆ.

ಆದರೆ ಖಾಸಗಿ ಸಂಸ್ಥೆಯ ಗುರುಗಳಿಗೆ, ಕಲಾವಿದರಿಗೆ ಮತ್ತು ವಿದ್ಯಾರ್ಥಿಗಳಿಗೆ ಪುಸ್ತಕಗಳಿಗೆ ಪುಸ್ತಕಗಳು ಲಭ್ಯವಾಗುವುದು ಬಹಳ ಕಷ್ಟ.

ಸಂಸ್ಕೃತಿ ಸಂಸ್ಥೆಯ ಮತ್ತೊಂದು ಆಯಾಮವಾಗಿ “ವಿದ್ಯಾವಾಟಿಕಾ” ಎಂಬ ವಿಶೇಷ ಗ್ರಂಥಾಲಯವನ್ನು ನಡೆಸಿಕೊಂಡು ಬರುತ್ತಿವೆ. ಭಾರತೀಯ ಕಲೆ, ಸಂಗೀತ, ನೃತ್ಯ, ನಾಟಕ, ರಾಮಾಯಣ, ಮಹಾಭಾರತ, ಜಾನಪದ ಮಹಾಕಾವ್ಯಗಳು, ಶಾಸ್ತ್ರಗ್ರಂಥಗಳು, ಸಮಕಾಲೀನ ಪುಸ್ತಕಗಳು ಮತ್ತು ಮಾನವಿಕ ವಿಜ್ಞಾನಕ್ಕೆ ಸಂಬ೦ಧಿಸಿದ ೩೦೦೦ ಕ್ಕೂ ಹೆಚ್ಚು ಪುಸ್ತಕಗಳನ್ನು, ಮಾಸಪತ್ರಿಕೆ, Journals, Documentaries, Short films, Audio – Video Recordings ಹೊಂದಿದೆ. ಸಂಗೀತ ವಿಶ್ವವಿದ್ಯಾಲಯ, ಮೈಸೂರು ವಿಶ್ವವಿದ್ಯಾಲಯ ಹಾಗೂ ಖಾಸಗಿ ಸಂಸ್ಥೆಗಳಲ್ಲಿ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳುತ್ತಿದ್ದಾರೆ. ಶಾಸ್ತ್ರೀಯ ಕಲೆಗಳಲ್ಲಿ ಉನ್ನತ ಶಿಕ್ಷಣ ಪಡೆಯುತ್ತಿರುವವರು ಕಿರು ಸಂಶೋಧನೆ, ಮಹಾಪ್ರಬಂಧಗಳಿಗೆ ಈ ಪುಸ್ತಕಗಳು ಅನುಕೂಲವಾಗಿದೆ.

ನಗರ ಪ್ರದೇಶದಲ್ಲಿರುವ ವಿದ್ಯಾರ್ಥಿಗಳಿಗೆ ಮೀಸಲಾಗಿರದೆ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೂ ಈ ಪುಸ್ತಕಗಳು ಲಭ್ಯವಾಗಬೇಕಿದೆ. ಹಿಂದುಳಿದ ವರ್ಗದ ಮಕ್ಕಳು, ಬುಡಕಟ್ಟು ಜನಾಂಗದವರು, ಹೆಣ್ಣು ಮಕ್ಕಳಿಗೆ ಉಚಿತವಾಗಿ ಈ ಪುಸ್ತಕಗಳು ದೊರೆಯಬೇಕು. ಈ ನಿಟ್ಟಿನಲ್ಲಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರವು ಸಂಸ್ಕೃತಿ ಟ್ರಸ್ಟ್ ಗೆ ನಿವೇಶನವನ್ನು ನೀಡಿ ಸಹಕರಿಸಿದೆ. ಗ್ರಂಥಾಲಯವು ಮೈಸೂರು ಜಿಲ್ಲೆಯ ಸುತ್ತಮುತ್ತಲಿನ ತಾಲ್ಲೂಕು, ಗ್ರಾಮ ಮತ್ತು ಇತರೆ ಅವಕಾಶ ವಂಚಿತರವನ್ನು ತಲುಪಲು ತನ್ನ ವ್ಯಾಪ್ತಿಯನ್ನು ವಿಸ್ತರಿಸಲು ಯೋಜನೆ ರೂಪಿಸಿದೆ.

ಈ ನಿಟ್ಟಿನಲ್ಲಿ ಸಂಸ್ಕೃತಿ ಸಂಸ್ಥೆಯು ಈಗಾಗಲೇ ಪೂರಕವಾದ ಕೆಲಸಗಳನ್ನು ಕೈಗೊಂಡಿದೆ.

೧. ೮ ಶಾಸ್ತ್ರೀಯ ನೃತ್ಯಗಳ ಕುರಿತಾದ ಪುಸ್ತಕಗಳು- ಕನ್ನಡ, ಹಿಂದಿ, ಸಂಸ್ಕೃತಿ ಮತ್ತು ಇಂಗ್ಲೀಷ್ ಭಾಷೆಗಳಲ್ಲಿ-೧೫೦೦ ಪುಸ್ತಕಗಳ ಸಂಗ್ರಹಣೆ.
೨. ಭಾರತೀಯ ರಂಗಭೂಮಿ-ಪಾಶ್ಚಾತ್ಯ ರಂಗಭೂಮಿಗೆ ಸಂಬ೦ಧಿಸಿದ ಸುಮಾರು ೨೦೦ ಪುಸ್ತಕಗಳು.
೩. ಮೂಕಾಭಿನಯ, Body, language, acting & stage techniques ಕುರಿತಾದ -೬೦ ಪುಸ್ತಕಗಳು.
೪. ಸಂಗೀತ, ನೃತ್ಯ, ವಾದ್ಯಕ್ಕೆ ಸಂಬ೦ಧಪಟ್ಟ- ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಸಚಿತ್ರ ಪುಸ್ತಕಗಳು (ಚಿತ್ರಕಲೆ, ಶಿಲ್ಪಕಲೆ) ಸುಮಾರು ೫೦ ಪುಸ್ತಕಗಳು

೫. ದೆಹಲಿ ದೂರದರ್ಶನ, ಬೆಂಗಳೂರು ದೂರದರ್ಶನದಿಂದ ಸಂಗೀತ, ನೃತ್ಯಕ್ಕೆ ಸಂಬ೦ಧಪಟ್ಟ ಧ್ವನಿ ಸುರುಳಿ ಮತ್ತು ಡಿ.ವಿ.ಡಿ ಗಳನ್ನು ಸಂಗ್ರಹಿಸಲಾಗಿದೆ.
೬. ಭಾರತದ ವಿವಿಧ ಭಾಗಗಳಲ್ಲಿ ಪ್ರಕಟಗೊಳ್ಳುವ ಮಾಸಿಕ ಪತ್ರಕೆಗಳಾದ
Shruthi- ಕಳೆದ ೨೦ ವರ್ಷಗಳ ಸಂಚಿಕೆ
Wisdom- ಕಳೆದ ೧೦ ವರ್ಷಗಳ ಸಂಚಿಕೆ
Attendance – ಕಳೆದ ೫ ವರ್ಷಗಳ ಸಂಚಿಕೆ
ಕಲಾಸ್ಪಂದನ -ಕಳೆದ ೩ ವರ್ಷಗಳ ಸಂಚಿಕೆ
ಕಲಾಸಿಂಚನ – ಕಳೆದ ೯ ವರ್ಷಗಳ ಸಂಚಿಕೆ
IRCEN, New Delhi ಮಾಸಿಕ ಪತ್ರಿಕೆ
೭. ಕಲಾವಿದರಿಗೆ ಅಗತ್ಯವಾಗಿ ಬೇಕಾಗಿರುವ ನಾಟ್ಯಶಾಸ್ತ್ರ, ಅಭಿನಯದರ್ಪಣ ವಿಷ್ಣುಧರ್ಮಾತ್ತರ ಪುರಾಣ, ಲಾಸ್ಯರಂಜನ, ಭರತಾರ್ಣವ, ಸಂಗೀತ ರತ್ನಾಕರ, ದಶರೂಪಕ, ಭಾರತೀಯ ಜಾನಪದ ನೃತ್ಯಗಳು, ಕರ್ನಾಟಕ ಜಾನಪದ ಕಲೆಗಳ ಕೋಶ, ಭರತ ಮಂಜರಿ, ಗೀತ
ಗೋವಿಂದ ಪುಸ್ತಕಗಳ ಸಂಗ್ರಹ.
೮. ಕುವೆಂಪು, ಬೇಂದ್ರೆ, ಪುತಿನ, ಡಿವಿಜೆ, ಚಂದ್ರಶೇಖರ ಕಂಬಾರ, ಎಸ್.ಎಲ್.ಭೈರಪ್ಪ, ಇತ್ಯಾದಿ ಸಾಹಿತಿಗಳ ಪುಸ್ತಕಗಳು.
೯. Oxford university Kentucky university ಇತ್ಯಾದಿ ವಿದೇಶಿ ವಿಶ್ವವಿದ್ಯಾನಿಲಯಗಳಲ್ಲಿ ಪ್ರಕಟಗೊಂಡ ಪುಸ್ತಕಗಳ ಸಂಗ್ರಹ.
೧೦. ಕನ್ನಡ, ಇಂಗಿಷ್, ಸಂಸ್ಕೃತ ನಿಘಂಟು
೧೧. ದಿನಪತ್ರಿಕೆಯಲ್ಲಿ ಬಂದ ಪ್ರಮುಖ ಲೇಖನಗಳು
೧೨. ವಿವಿಧ ಶ್ರೇಷ್ಠ ಕಲಾವಿದರ ಜೀವನ ಚರಿತ್ರೆಯ ಪುಸ್ತಕಗಳು
೧೩. ನೃತ್ಯ ಬಳಕೆಯಾಗುವ ನೃತ್ಯಬಂಧಗಳನ್ನು ಒಳಗೊಂಡ ಪುಸ್ತಕಗಳು

ಸ್ವತಃ ಕಲಾವಿದೆಯಾಗಿ ರಾಜ್ಯ, ರಾಷ್ಟç ಮತ್ತು ಅಂತಾರಾಷ್ಟ್ರೀಯ ಮಟ್ಟದ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಾಗ ಅಲ್ಲಿನ ವಿಶೇಷ ವಾದ್ಯಗಳು (ಸ್ವತಃ ಕಲಾವಿದ ತಯಾರಿಸುವ ತಂತಿ, ಗಾಳಿ, ಚರ್ಮ ವಾದ್ಯಗಳು), ಮುಖವಾಡಗಳು ಹಾಗೂ ಅವರು ಉಪಯೋಗಿಸುವ ಉಡುಪುಗಳು ಮತ್ತು
ರಂಗಪರಿಕರಗಳನ್ನು ಇದುವರೆಗೆ ಕರ್ನಾಟಕ, ತಮಿಳುನಾಡು, ಕೇರಳ, ಬಿಹಾರ್, ಪಶ್ಚಿಮ ಬಂಗಾಲ, ಭೂತಾನ್, ಅಂಡಮಾನ್, ಛತ್ತಿಸ್‌ಗಡ್, ದೆಹಲಿ ಇತ್ಯಾದಿ ಕಡೆಗಳಿಂದ ಸಂಗ್ರಹಿಸಿರುತ್ತವೆ.

ಧ್ವನಿ ಸುರುಳಿ
ಇಂದಿನ ದಿನಗಳಲ್ಲಿ ವಿವಿಧ ಇಲಾಖೆಗಳು, ಸಂಘ ಸಂಸ್ಥೆಗಳು ಸ್ಪರ್ಧೆಗಳನ್ನು ಆಯೋಜಿಸುತ್ತವೆ. ಇದಕ್ಕೆ ಸ್ಪರ್ಧಿಗಳಿಗೆ ೫-೧೦ ನಿಮಿಷಗಳ ಕಾಲಾವಕಾಶವನ್ನು ಮಾತ್ರ ನೀಡಲಾಗುತ್ತದೆ. ಇದೇ ಕಾರಣದಿಂದ ವಿವಿಧ ಡಿ.ವಿ.ಡಿ ಆಡಿಯೋ ಸಿಡಿಗಳನ್ನು ಕಲಾವಿದರಿಗಾಗಿ ಸಂಗ್ರಹಿಸಲಾಗಿದೆ ಮತ್ತು ರೆಕಾರ್ಡಿಂಗ್ ಮಾಡಿಸಲಾಗಿದೆ. ಇದುವರೆಗೆ ಸುಮಾರು ೫೦೦ಕ್ಕೂ ಹೆಚ್ಚು ಹಾಡುಗಳನ್ನು ಸಂಗ್ರಹಿಸಿರುತ್ತೇವೆ.

‍ಲೇಖಕರು Admin

March 8, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: