ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸದಾ ವಟಗುಡುವ ಕಪ್ಪೆ..

jadiyappa-gedlagatti

ಜಡಿಯಪ್ಪ ಗೆದ್ಲಗಟ್ಟಿ 

ಸದಾ ವಟಗುಡುವ ಕಪ್ಪೆ

ಬುದ್ದನ ಕಿವಿಯಲ್ಲಿ

ಪಿಸು ಮಾತಿನಲಿ ಹೇಳಬಯಸಿತ್ತು

ಮನುಷ್ಯನಿನ್ನು ಹುಡುಕುತಿದ್ದಾನೆ

ಸಾವಿಲ್ಲದ ಮನೆಯ ಸಾಸಿವೆಯನ್ನು.

 

ಸದಾ ವಟಗುಡುವ ಕಪ್ಪೆ

ಬುದ್ದನ ಕಿವಿಯಲ್ಲಿ

ಪಿಸು ಮಾತಿನಲಿ ಹೇಳ ಬಯಸಿತ್ತು

ಮನುಷ್ಯನಿನ್ನು ಹುಡುಕಾಡುತ್ತಿದ್ದಾನೆ

ಮತ್ತೊಂದು ಸಾಸಿವೆ ಬೆಳೆಯದ

ಸಾವೆ ಗೊತ್ತಿರದ ಭೂಮಿಯನು.

 

ಸದಾ ವಟಗುಡುವ ಕಪ್ಪೆ

ಬುದ್ದನ ಕಿವಿಯಲ್ಲಿ

ಪಿಸು ಮಾತಿನಲಿ ಹೇಳಬಯಸಿತ್ತು

ಅವನಿಗಿನ್ನು ಅರಿವಾಗಿಲ್ಲ

ಸಾವಿಗಿಂತ ಸಂತೋಷ ಮುಖ್ಯ

ಪ್ರಾಣಕ್ಕಿಂತ ಪ್ರೀತಿ ಮುಖ್ಯ.

 

ಸದಾ ವಟಗುಡುವ ಕಪ್ಪೆ

ಬುದ್ದನ ಬುಜವೇರಿ ಕುಳಿತಿದೆ

ಕಿವಿಗತ್ತಿರವಾಗಿ

ಮುಗಿಯದ ಕತೆಗೆ ಉತ್ತರವಾಗಿ.

 

ಪದ್ಮಾಸನದಲಿ ಮಂಡೂಕಾಸನ

shravya-h

ಎಚ್ ಶ್ರಾವ್ಯ

ಲೋಕದ ನೋವ ತನ್ನೊಳು ಭರಿಸಿ
ರಾಜೋಪಕಾರವ ತಳದಿ ಖಂಡಿಸಿ
ಲೋಕೋಪಕಾರದ ಪಥವ ಆಲಿಸಿ
ನಿರ್ಮಲ ಚಿತ್ತದಿ ಜ್ಙಾನವನರಗಿಸಿ
ಜಗದಾಲಯದೀ ಶಾಂತಮೂರ್ತಿಯ
ಯೋಗಮುದ್ರೆಯ ಬಾಹುವನೇರಿದ
ವೀರನು ತನ್ನ ಧ್ವನಿಯ ಮದದಿ
ಸಮೀಪಿಸಿದವರ ಭೀತಿಯೊಳಿರಿಸಿ
ನಾಲಿಗೆಯಲಿ ಕೀಟಗಳ ಕಬಳಿಸಿ
ನೆಲ-ಜಲ ಪ್ರಯಾಣದಿ ಬೇಸತ್ತು
ಜಗದೆಲ್ಲಾ ಮಿಥ್ಯೆಯ ಮನದರಿತು
ಅರಿತವನಲಿ ಹೇಳುವ ಸಲುವಾಗಿ
ಆ ಕಿವಿಯಲ್ಲೇನೋ ಪಿಸುಗುಡಲು
ಆ ಕರ್ಣವು ಎಲ್ಲವನೂ ಆಲಿಸಲು
ಪದ್ಮಾಸನದಲಿ ಮಂಡೂಕಾಸನವು
ಕಣ್ಣಿನ ರೆಪ್ಪೆಯನೂ ಪುಳಕಿಸಿತು..

‍ಲೇಖಕರು Admin

27 September, 2016

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading