ಸದಾಶಿವ್ ಸೊರಟೂರು
ನಿಮಗೆ ಗೊತ್ತಾ?
‘ಅಲ್ಲದೆ’
‘ಆದರೆ’
ಈ ಪದಗಳನು ಬಳಸುವುದು
ಎಷ್ಟು ಸುಲಭ;
ದ್ವಂದ್ವವೇ ಇಲ್ಲ.
‘ಬಳಿಕ’ ಸರಿಯೊ?
‘ಆಮೇಲೆ’ ಸರಿಯೊ?
ಇದು ಸ್ವಲ್ಪ ಕಷ್ಟವೇ ಬಿಡಿ..
‘ಆಮೇಲೆ’
‘ಅನಂತರ’
ಇವರೆಡನ್ನೂ ಬಳಸೋದು
ಎಲ್ಲಿ? ಹೇಗೆ? ಕಷ್ಟ ಕಷ್ಟ!
‘ಮತ್ತು’
‘ಹಾಗೂ’
ಇವುಗಳನ್ನು…!?
ಉಫ್..ಖಂಡಿತ ಸುಲಭವಿಲ್ಲ..
ಯಾವುದು ಸುಲಭ? ಯಾವುದು ಕಷ್ಟ?
ಸಂಕಟ ಬರೀ ಪದಗಳದ್ದಲ್ಲ
ಬದುಕಿನದ್ದು
ಅದರಾಚೆಗಿನದ್ದೂ!
0 ಪ್ರತಿಕ್ರಿಯೆಗಳು