ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸತೀಶ ಕುಲಕರ್ಣಿ ಓದಿದ ‘ಮಾಧವ ಕೌಶಿಕ್ ಕವಿತೆಗಳು’

ಸತೀಶ ಕುಲಕರ್ಣಿ

ಹಿಂದಿಯ ಪ್ರಸಿದ್ಧ ಕವಿ ಮಾಧವ ಕೌಶಿಕ್‌ರ ೪೫ ಕವಿತೆಗಳನ್ನು ಶ್ರೀಮತಿ ಸುಮಾ ಕಾಟ್ಕರ್ ಕನ್ನಡಕ್ಕೆ ತಂದ ಸಹಜ ಕವಿತೆಗಳಿವು. ತುಂಬ ಸರಳ ಭಾವ, ಲಯ ಪ್ರಾಪ್ತಿಯಾಗುವಂತೆ ಅನುವಾದಿಸಿದ್ದಾರೆ. ಕೌಶಿಕ್ ರ ಕಾವ್ಯ ಭಾಷೆ ತುಂಬ ಸರಳ ತರಲುವಾದುದು. ಕೋವಿಡ್ ಭಾರತದ ಆರದ ಕಣ್‌ತೇವ ಚಿತ್ರಗಳಿಗೆ ಮನುಷ್ಯ ಮತ್ತು ಯುಗ ಪರಿವರ್ತನೆಯ ಸಂಜ್ಞೆಗಳನ್ನು ಕವಿತೆ ಚಿತ್ರಿಸಿವೆ. ಮನುಷ್ಯ ಮತ್ತು ಮನುಷ್ಯತ್ವವೇ ಇಲ್ಲಿನ ಶಕ್ತಿ.

ಸ್ವಾತಂತ್ರ್ಯ ದಿನದಂದು ಹೋರಿ ಕೇಳುತ್ತಿದ್ದಾನೆ ಸ್ವಾತಂತ್ರ್ಯನಾಗಿರುವನೇನು ನಾನು ? ಹೋರಿ ಹೆಸರಿನ ಒಬ್ಬ ರೈತ ಕೇಳುವ ಪ್ರಶ್ನೆ ನಮ್ಮದೆಲ್ಲರದಾಗುತ್ತದೆ. ನಿರಾಶ್ರಿತನೊಬ್ಬ ‘ಜಗಕ್ಕೆ ಪ್ರಶ್ನೆ – ಮುಗಿಯುತ್ತಲೇ ಇಲ್ಲೊ ಈ ಪಯಣ ?’ (ಲಾಕ್ ಡೌನ್ )

ಗಾಳಿ ಬಿರುಗಾಳಿ ಮಿಂಚು ಸಿಡಿಲು ಬಿಸಿಲು ನೆರಳು ಮಳೆ ಮುಗಿಲು ನಿಸರ್ಗದ ಈ ಎಲ್ಲ ಬಣ್ಣಗಳು ಜೀವನದ ಪ್ರತಿಬಿಂಬಗಳು ಪ್ರಕೃತಿ ಪುರುಷ ಎಂಬ ಕವಿತೆಯ ಸಾಲುಗಳು ಜೀವ ಭಾವಕ್ಕೆ ಹೊಂದಿಕೊಂಡು ಬರೆದವು. ಮಕ್ಕಳ ಕಣ್ಣುಗಳಿಂದ ನೋಡಿ : ಜಗತ್ತು ಅದೆಷ್ಟು ಸುಂದರವಾಗಿದೆ ಎಂಬ ಸಾಲುಗಳಾಗಲಿ, ಶಬ್ದಗಳ ಶಕ್ತಿಯ ಎದುರು ದೇವರೂ ತಲೆ ಬಾಗುತ್ತಾನೆ – ಈ ಪಂಕ್ತಿಗಳು ಸೆರೆ ಹಿಡಿಯತ್ತವೆ.

ನೀರಿನಲ್ಲಿ ನೀರಿನಂತಿರಬೇಕು ಶಬ್ದದಲ್ಲಿ ಅರ್ಥದಂತಿರಬೇಕು ಲಾಭದಲ್ಲಿ ಹಾನಿಯಂತಿರಬೇಕು ಇವೆಲ್ಲ ಓದುತ್ತ ಹೋದಂತೆ ನಮ್ಮವೇ ಅನ್ನಿಸುತ್ತವೆ. ಮನುಷ್ಯ ಸ್ವಭಾವ, ಕಾಲ ಪರಿವರ್ತನೆಯ ಸಂಜ್ಞೆ ಇವೆಲ್ಲೆ ಕೌಶಿಕ್ಕಾ ವ್ಯದ ಕಾಯಾಂತರಗಳು. ಕನ್ನಡದ್ದವೇ ಎನ್ನುವಷ್ಟರಮಟ್ಟಿಗೆ ಅನುವಾದವಾಗಿವೆ.

‍ಲೇಖಕರು avadhi

17 February, 2023

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading