ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸತೀಶ್ ಶೃಂಗೇರಿ ನಮ್ಮನ್ನೆಲ್ಲ ಅಗಲಿದ್ದಾರೆ.

ಗೋಪಾಲ ವಾಜಪೇಯಿ

ನಮ್ಮೆಲ್ಲರ ಮೆಚ್ಚಿನ ವ್ಯಂಗ್ಯ ಚಿತ್ರಕಾರ ಮತ್ತು ಆಯುರ್ವೇದ ವೈದ್ಯ ಡಾ. ಸತೀಶ್ ಶೃಂಗೇರಿ ಇಂದು ಬೆಳಿಗ್ಗೆ ಬೆಂಗಳೂರಿನಲ್ಲಿ ನಮ್ಮನ್ನೆಲ್ಲ ಅಗಲಿದ್ದಾರೆ.

ಕೆಲವು ವರ್ಷಗಳಿಂದ ಶ್ವಾಸಕೋಶದ ತೊಂದರೆಯಿಂದ ಬಳಲುತ್ತಿದ್ದರೂ ಸದಾ ನಗುನಗುತ್ತ, ಪ್ರಚಲಿತ ವಿದ್ಯಮಾನಗಳನ್ನು ತಮ್ಮ ಮೊನಚಾದ ಪೆನ್ನಿನಿಂದ ‘ಚುಚ್ಚು’ತ್ತ ‘ಚಚ್ಚು’ತ್ತ, ಸದಾ ನಗುತ್ತ, ನಗಿಸುತ್ತ ಇದ್ದವರು.

ಸತೀಶ್ ಬರೆಯುತ್ತಿದ್ದ ವ್ಯಂಗ್ಯಚಿತ್ರಗಳು ಅವರ ಸಾಮಾಜಿಕ ಕಳಕಳಿಯ ಪ್ರತೀಕಗಳಾಗಿ ಹೊಮ್ಮುತ್ತಿದ್ದವು. ರಾಷ್ಟ್ರೀಯ ಅಂತಾರಾಷ್ಟ್ರೀಯ ಮಟ್ಟದ ಅನೇಕ ವ್ಯಂಗ್ಯಚಿತ್ರ ಸ್ಪರ್ಧೆಗಳಲ್ಲಿ ಪ್ರಶಸ್ತಿ ಪಡೆದಿದ್ದ ಸತೀಶ್ ಕರ್ನಾಟಕ ರಾಜ್ಯ ವ್ಯಂಗ್ಯಚಿತ್ರಕಾರರ ಸಂಘದ ಕಾರ್ಯದರ್ಶಿಯೂ ಆಗಿದ್ದರು.

ಇನ್ನೂ ಕೇವಲ 44 ರ ವಯಸ್ಸಿನ ಸತೀಶ್ ನನಗೆ ಕಳೆದ ಇಪ್ಪತ್ತು ವರ್ಷಗಳಿಂದ ಪರಿಚಿತರು. ಗದಗಿನಲ್ಲಿ ಕೆಲವು ವರ್ಷವಿದ್ದ ಅವರಿಗೆ ಉತ್ತರ ಕರ್ನಾಟಕದ ಭಾಷೆಯ ಸೊಗಡು ಮತ್ತು ಜನಜೀವನದ ಬಗ್ಗೆ ತುಂಬ ಆಸಕ್ತಿಯಿತ್ತು. ನಾನು ‘ಕರ್ಮವೀರ’ವನ್ನು ಸಂಪಾದಿಸುತ್ತಿದ್ದಾಗ ‘ವಾರದಾಗ ಮೂರು ಸಾರೆ’ ನಮ್ಮ ಕಚೇರಿಗೆ ಬಂದು ಹೋಗುತ್ತಿದ್ದರು. ಅವರಿಂದ ನಾನು ಹರಟೆ, ಹಾಸ್ಯಲೇಖನಗಳು, ವಿಡಂಬನೆಗಳಿಗೆ ಚಿತ್ರ ಬರೆಯಿಸುತ್ತಿದ್ದೆ.

ಬೆಂಗಳೂರಿನಲ್ಲಿಯೇ ಸ್ವಂತ ಆಯುರ್ವೇದ ಚಿಕಿತ್ಸಾಲಯ ನಡೆಸುತಿದ್ದ ಅವರು ಮೂಡುಬಿದ್ರೆಯ ಆಳ್ವಾ’ಸ್ ಆಯುರ್ವೇದಿಕ್ ಕಾಲೇಜಿನ ಸಂದರ್ಶಕ ಪ್ರಾಧ್ಯಾಪಕರೂ ಆಗಿದ್ದರು.

ಕೆಲ ದಿನಗಳ ಹಿಂದೆ ಅವರನ್ನು ಬೆಂಗಳೂರಿನ ಸೇಂಟ್ ಫಿಲೋಮಿನಾ ಆಸ್ಪತ್ರೆಗೆ ಚಿಕಿತ್ಸೆಗಾಗಿ ಸೇರಿಸಲಾಗಿತ್ತು. ಪರಿಸ್ಥಿತಿ ತುಂಬ ಗಂಭೀರ ಎಂದು ಗೊತ್ತಾಗಿ ನಿನ್ನೆಯಷ್ಟೇ ಬೆಂಗಳೂರಿನ ವ್ಯಂಗ್ಯಚಿತ್ರಕಾರ ಮಿತ್ರರೆಲ್ಲ ಅವರನ್ನು ಕಂಡು ಬಂದಿದ್ದರು.

ಡಾ. ಸತೀಶ್ ಶೃಂಗೇರಿ ಅವರ ನಿಧನದಿಂದಾಗಿ ಕರ್ನಾಟಕ ನಿಜಕ್ಕೂ ಒಬ್ಬ ಭರವಸೆದಾಯಕ ಕಲಾವಿದನನ್ನು ಕಳೆದುಕೊಂಡಿದೆ.

‍ಲೇಖಕರು G

27 September, 2012

5 Comments

  1. ಪಂಡಿತಾರಾಧ್ಯ ಮೈಸೂರು

    ಡಾ ಸತೀಶ್ ಶೃಂಗೇರಿಯವರ ಅಕಾಲಿಕ ಸಾವಿನ ವಿಷಯ ತಿಳಿದು ದುಃಖವಾಯಿತು.
    ಅವರು ವ್ಯಂಗ್ಯ ಚಿತ್ರಕಾರರಾಗಿ ಭಾವರೋಗ ವೈದ್ಯರೂ ಆಗಿದ್ದವರು.
    ಇನ್ನೂ ಬಹಳ ಕಾಲ ಬಾಳಿ ಬದುಕಬೇಕಿದ್ದವರ ಅನರೀಕ್ಷಿತ ಕಣ್ಮರೆಯಿಂದ
    ಅವರಿಗೇ ಆದ ನಷ್ಟದಂತೆ ಮತ್ತು ಅವರ ಬಂಧುಗಳಿಗೂ ಆಗಿರುವ ದುಃಖದಲ್ಲಿ ನಾನೂ ಭಾಗಿ.

  2. Mohan V Kollegal

    ‘ಈಗಷ್ಟೇ ಬಂದವ ಆಗಲಿ ಹೊರಡುವಿ ಯಾತಕ್ಕ’ ಎಂಬಂತಾಯಿತು. ಬಳಹ ದುಃಖವಾಗುತ್ತಿದೆ… ಅವರ ಆತ್ಮಕ್ಕೆ ಶಾಂತಿ ಲಭಿಸಲಿ… ಈ ದುಃಖವನ್ನು ತಡೆದುಕೊಳ್ಳುವ ಶಕ್ತಿ ಅವರ ಕುಟುಂಬ ವರ್ಗದವರಿಗೆ ದೊರಕಲಿ… 🙁

  3. ananthshandreya

    sathish avaradu khanditha saayuvu vayassalla vaidyaragi nanage parichitharu kelavu varshagala hinde bengaloorina srinivasa nagaradallidda avara clinic ge halavusala bheti needidde sneha poorva sarala manushy avara saavu dukha thandide

  4. ananthshandreya

    d.satheesh avaru kelauv varshagala hinde benagaloorina srinivasanagaradalli clinic nedusuthiddaga naanu allige hoguthidde sarala snehasheela manushya duddige aase paduthiralilla avaradu sayuvu vayassalla avarige nanna shraddanjali

  5. renuka prakash

    satish avara vyanga chitragalinna monuchu geregalu,nannannu tumba aakakarshiddavu…..nimma vayassina nanu innu ille iddene..nivu matra nira mele bareda gereyadiralla…bhagavanta ninu tuba kruri

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading