ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸಂವಿಧಾನ ಸಾಯಿಕುಮಾರ್ ಜೊತೆ ʼಫಟಾ ಫಟ್ ʼ

ಎಸ್‌ ಎಂ ಸಾಯಿಕುಮಾರ್‌ ೨೩ ವರ್ಷದ ಈ ಯುವಕ ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲೂಕಿನ ಟಿಬಿ ಡ್ಯಾಂನಲ್ಲಿ ಸೆಕ್ಯೂರಿಟಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಚಿಕ್ಕ ವಯಸ್ಸಿನಿಂದ ತಂದೆಯವರಿಂದ ಸಂವಿಧಾನದ ಬಗ್ಗೆ ಸಾಕಷ್ಟು ತಿಳಿದುಕೊಂಡ ಇವರಿಗೆ ಸಂವಿಧಾನದ ಪ್ರಚಾರ ಮಾಡಬೇಕು ಎನ್ನುವ ಆಸೆ ಇತ್ತು.

ಅತ್ಯಂತ ಭಿನ್ನವಾಗಿ ಸಂವಿಧಾನದ ಪ್ರಚಾರವನ್ನು ಹೇಗೆ ಮಾಡಬೇಕೆಂದು ಯೋಚಿಸಿ ತಮ್ಮ ಎದೆಯ ಮೇಲೆ ಶಾಶ್ವತವಾಗಿ ಸಂವಿಧಾನದ ಹೇಳಿಕೆಯನ್ನು ಹಚ್ಚೆ ಹಾಕಿಸಿಕೊಳ್ಳುವ ನಿರ್ಧಾರಕ್ಕೆ ಬಂದರು.

ಆಗ ಕಂಡಿದ್ದು ಅದೇ ಜಿಲ್ಲೆಯಲ್ಲಿ ಹಿರಿಯ ಪೋಲೀಸ್‌ ಅಧಿಕಾರಿಯಾಗಿದ್ದ ಮ.ನಂಜುಂಡಸ್ವಾಮಿ.

ಸಂವಿಧಾನದ ಕುರಿತು ಅವರು ನೀಡಿದ ಹೇಳಿಕೆಗೆ ಸಾಯಿಕುಮಾರ್‌ ಮೊರೆಹೋದರು. ಈಗ ಇವರ ಎದೆಯ ಮೇಲೆ ಸಂವಿಧಾನದ ಹೇಳಿಕೆ ಶಾಶ್ವತವಾಗಿ ಅಚ್ಚೊತ್ತಿದೆ.

ಈ ಕುರಿತು ʼಅವಧಿʼಯು ನಡೆಸಿದ ಫಟಾ ಫಟ್‌ ಸಂದರ್ಶನ ಇಲ್ಲಿದೆ. 

ಘೋಷವಾಕ್ಯ ಎದೆಯ ಮೇಲೆಯೇ ಹಚ್ಚೆ ಹಾಕಿಸಿಕೊಂಡಿದ್ದು ಏಕೆ ?

> ಚಿಕ್ಕ ವಯಸ್ಸಿನಿಂದ ಅಪ್ಪನಿಂದ ಅಂಬೇಡ್ಕರ್‌ ಅವರ ಬಗ್ಗೆ ಕೇಳಿಕೊಂಡು ಬೆಳೆದೆ. ಅವರು ರಚಿಸಿದ ಸಂವಿಧಾನದ ಘೋಷವಾಕ್ಯ ನನ್ನೋಟ್ಟಿಗೆ ಇರಬೇಕೆಂದು ಎದೆಯ ಮೇಲೆ ಹಚ್ಚೆ ಹಾಕಿಸಿಕೊಂಡೆ.

ಸಾಯಿಕುಮಾರ್‌ ನೀವು ಸಿನಿಮಾ ಸಾಯಿಕುಮಾರ್‌ ಅಲ್ಲ ತಾನೇ ?

> ಅಲ್ಲವೇ ಅಲ್ಲ. ನಾನು ಎಸ್‌ ಎಂ ಸಾಯಿಕುಮಾರ್‌.

ದೇಶಭಕ್ತಿಯನ್ನ ರೀತಿಯಿಂದ ತೋರಿಸಿದ್ದರ ಉದ್ದೇಶ ?

> ದೇಶದ ಮೇಲಿರುವ ಪ್ರೀತಿಯನ್ನು ಬೇರೆ ಯಾವ ರೀತಿ ತೋರಿಸಬೇಕೆಂದು ತಿಳಿಯಲಿಲ್ಲ. ಹಾಗಾಗಿ ಹಚ್ಚೆ ಹಾಕಿಸಿಕೊಂಡೆ.

ʼಎಸ್‌ ಎಂ ಸಾಯಿಕುಮಾರ್‌ʼ ಎಸ್‌ ಎಂ ಎಸ್‌ ಗು ನಿಮಗು ಏನು ಸಂಬಂಧ ?

> ನನ್ನ ಹೆಸರಿನಲ್ಲಿಯೇ ಎಸ್‌ ಎಂ ಎಸ್‌ ಇದೆ. ಹಚ್ಚೆ ಹಾಕಿಸಿಕೊಳ್ಳುವುದರ ಮೂಲಕ ಒಗ್ಗಟ್ಟಿನ ಬಗ್ಗೆ ಸಂದೇಶ ಕೊಟ್ಟಿದ್ದೇನೆ.

ಮತ್ತಾವುದಾದರೂ ಘೋಷವಾಕ್ಯವನ್ನ ಹಚ್ಚೆ ಹಾಕಿಸಿಕೊಳ್ಳುವ ಯೋಜನೆ ಇದೆಯೇ ?

> ಇಲ್ಲ. ಇದನ್ನ ನನ್ನ ಕೊನೆಯುಸಿರು ಇರುವವರೆಗೂ ಹಾಗೆಯೇ  ಉಳಿಸಿಕೊಳ್ಳುತ್ತೇನೆ.

‍ಲೇಖಕರು Avadhi

19 September, 2020

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading