ಸಂಪು ಕಾಲಂ : ನಾನು ’ಫೆಮಿನಿಸ್ಟ್’ ಅಲ್ಲ!

ನಾನು ‘ಫೆಮಿನಿಸ್ಟ್’ ಅಲ್ಲ!

ಈಗ ಹೇಳ ಹೊರಟ ವಿಷಯವನ್ನುಬರೆಯಬಾರದೆಂದು ಸಾಕಷ್ಟು ಬಾರಿ ಅನಿಸಿದೆ, ಆದರೂ ಇತ್ತೀಚೆಗೆ ಗಮನಕ್ಕೆ ಬರುತ್ತಿರುವ ಕೆಲವು ಘಟನೆಗಳ ನಂತರ ಇದನ್ನುಬರೆಯಲೇಬೇಕು ಎನಿಸಿತು. ವಿಷಯ ಏನು, ಅದನ್ನು ‘ಚರ್ಚೆ’ಗೆ ಯಾಕೆ ಒಳಪಡಿಸಲು ಇಷ್ಟವಿಲ್ಲ ಎಂದು ಮೊದಲು ಹೇಳಿಬಿಡುತ್ತೇನೆ. ವಿಷಯ ‘ಸ್ತ್ರೀ’. ಅಂದಮೇಲೆ ಆಕೆ ಯಾವುದೇ ಒಂದು ‘ವಸ್ತು’ ಅಥವಾ ‘ವಿಚಾರ’ ಅಲ್ಲ ಹೌದಲ್ಲವೇ, ಕುರಿತು ಮಾತುಕತೆಯಾಡಲು? ಆದರೂ ‘ಸ್ತ್ರೀ’ ಹಾಗೂ ‘ಸ್ತ್ರೀವಾದ’ದ ಬಗೆಗಿನ ಕೆಲವು ತಪ್ಪು ಕಲ್ಪನೆಗಳನ್ನು ಗಮನಿಸಿದರೆ ಇದರ ಬಗ್ಗೆ ಕೊಂಚ ಯೋಚಿಸಬೇಕು ಅನಿಸುತ್ತದೆ.

ನಮಗೆ ಕಾಲೇಜಿನಲ್ಲಿ  ‘ಜೆಂಡರ್ ಸ್ಟಡೀಸ್’ ಅಂತ ಒಂದು ಸಬ್ಜೆಕ್ಟ್ ಇತ್ತು. ಮೊದಲಿಗೆ ನಮಗೆಲ್ಲಾ ನಗು, “ಏನಪ್ಪಾ ಹೇಳ್ಕೊಡ್ತಾರೆ ಇದರಲ್ಲಿ” ಅಂತ!  ಪ್ರೊ.ರಾಮದಾಸ್,  ನನಗೆ ಮೊದಲ ಬಾರಿಗೆ  ‘ಸ್ತ್ರೀವಾದ’ ಬಗ್ಗೆ ಗಮನ ಸೆಳೆಯಲು ಸಹಾಯ ಮಾಡಿದ ಗುರುಗಳು. ತರಗತಿಗೆಬಂದವರೇ, ‘ಐ ಆಮ್ ಅ ಫೆಮಿನಿಸ್ಟ್” ಅಂದರು. ಅಲ್ಲಿಯವರೆಗೂ ಗಂಡಸರೂ ಫೆಮಿನಿಸ್ಟ್ಗಳಾಗಬಲ್ಲರು ಎಂಬ ಸತ್ಯ ಹೊಳೆದೇ ಇರಲಿಲ್ಲ. (ಹಾಗೆ ನೋಡ ಹೋದರೆ ಹೆಂಗಸರಿಗಿಂತ ಹೆಚ್ಚು ಗಂಡಸರೇ ಫೆಮಿನಿಸ್ಟ್ಗಳಾಗಿರುತ್ತಾರೆ ಕೆಲವೊಮ್ಮೆ!). ಅಂದು ಅಲ್ಲಿ ಚರ್ಚೆ ಮಾಡಲಾದ ಹಲವಾರು ಆಸಕ್ತಿಕರ ವಿಷಯಗಳಲ್ಲಿ  ಒಂದನ್ನು ನಾನಿಲ್ಲಿ ಹೇಳಲೇ ಬೇಕು. ಅದೇನೆಂದರೆ  ‘ಸೆಕ್ಸ್’  ಮತ್ತು  ‘ಜೆಂಡರ್’ ನ ಸಾಮ್ಯ ಮತ್ತು ವ್ಯತ್ಯಾಸ. ಈ ಪಾಠದ ಹೆಸರು ಕೇಳಿ ಮುಜುಗರಪಟ್ಟದ್ದು ಅಂದೇ ಮೊದಲು ಮತ್ತು ಕೊನೆ.

‘ಸೆಕ್ಸ್’ ಅಥವಾ ‘ಲಿಂಗ’ ಎಂಬುದು ಶಾರೀರಿಕ. ಕೆಲವು ದೇಹ ರಚನಾ ಬದಲಾವಣೆಯನ್ನು ವರ್ಗೀಕರಿಸಲು ನಾವು ಕೊಟ್ಟ ಹೆಸರು ‘ಸ್ತ್ರೀಲಿಂಗ’, ‘ಪುಲ್ಲಿಂಗ’ ಇತ್ಯಾದಿ. ಆದರೆ ‘ಜೆಂಡರ್’ ಎಂಬುದು ಮಾನಸಿಕ. ಇದು ನಮ್ಮ ಬೆಳವಣಿಗೆಯೊಂದಿಗೆ ಸಾಮಾಜಿಕವಾಗಿ ನಮಗೆ ಬಳುವಳಿಯಾಗಿ ಬರುವ ಅಂಶ. ಸ್ವಲ್ಪಗಮನಿಸಿ, ಯಾವುದೇ ಹೆಣ್ಣು ಸ್ವಲ್ಪ ಧೈರ್ಯ ಸ್ಥೈರ್ಯಗಳಲ್ಲಿ ಮುಂದಿದ್ದರೆ, ‘ಒರಟುತನ’ ತೋರಿದರೆ, ಆಕೆ ‘ಗಂಡುಬೀರಿ’ಯಾಗಿಬಿಡುತ್ತಾಳೆ. ಯಾಕೆಂದರೆ, ‘ಧೈರ್ಯ’ವನ್ನು ನಾವು ಪುರುಷರಿಗೇ ಅನ್ವರ್ಥವಾಗಿಸಬಯಸುತ್ತೇವೆ. ಗಂಡು ಸ್ವಲ್ಪ ಸೌಮ್ಯವಾಗಿದ್ದು, ಮೆದುವಾಗಿದ್ದರೆ ‘ಹೆಂಗ್ಸು’ ಅಂತ ರೇಗಿಸುತ್ತೇವೆ. “ಯಾಕೋ ಹಂಗೆ ಹೆಂಗಸರ ಹಾಗೆ ಅಳ್ತೀಯ?”, “ಪಾಪ ಹೆಣ್ಣೆಂಗ್ಸು”, “ಗಂಡಸಾಗಿ ಮನೆ ಕೆಲಸ ಮಾಡೋದಾ”, “ಅಲ್ಲಾ,  ಆಕೆ ಏನ್ಭಜಾರಿ”, “ಮನೆ ಗಂಡಸು ನೀನು”, ಎಂಬ ಮಾತುಗಳು. ಹುಟ್ಟಿದ ಮಗು ಹೆಣ್ಣಾದರೆ ಪಿಂಕ್ಬಣ್ಣದ ಮೇಲೆ ಮಿನ್ನಿ ಮೌಸ್ ಇರುವ ಹೊದಿಕೆ, ಕಿಚನ್ಸೆಟ್ ಆಟ ಸಾಮಾನು ಕೊಡುತ್ತೇವೆ. ಗಂಡಾದರೆ ನೀಲಿ ಬಣ್ಣದ ಹೊದಿಕೆಯ ಮೇಲೆ ಕಾರ್ಚಿತ್ರದ ಹೊದಿಕೆ, ಟ್ರೈನ್ ಆಟ ಸಾಮಾನು ತರುತ್ತೇವೆ. ಈ ರೀತಿಯಾದ ಹತ್ತು ಹಲವಾರು ರೂಢಿಗಳು ನಮ್ಮನ್ನು ಬೆಳೆಸುತ್ತವೆ. ಇದು ಅತ್ಯಂತ ಸಹಜ ಮತ್ತು ಪ್ರಾಪಂಚಿಕ. ಅಂದರೆ, ಕೆಲವು ಅನಿಯಮಿತ ವ್ಯಾಖ್ಯಾನಗಳನ್ನು ‘ಗಂಡಸು’ ಮತ್ತು ‘ಹೆಂಗಸಿ’ಗೆ’ ನಾವು ಕೊಟ್ಟು ಬಿಟ್ಟಿರುತ್ತೇವೆ ಅದರಂತೆಯೇ ನಮ್ಮ ಮೈಂಡ್ ಟ್ಯೂನ್ ಆಗುತ್ತದೆ. ಇದು ತಪ್ಪು ಅಂತ ನಾನು ಖಂಡಿತ ಹೇಳುತ್ತಿಲ್ಲ. ಮನುಷ್ಯ ಸಹಜವಾದ ಕೆಲವು ಗುಣಗಳು ಈ ರೀತಿ ಟ್ಯೂನಿಂಗ್ ಅನ್ನು ಬಯಸುತ್ತವೆ. ಆದರೆ ಈ ಮಿತಿಗಳನ್ನು ಅರ್ಥ ಮಾಡಿಕೊಂಡು ಅದನ್ನು ಮೀರಿ ಬೆಳೆಯುವ ಗ್ರಹಣ ಶಕ್ತಿ ಮತ್ತು ವಿವೇಚನೆಗಳು ನಮ್ಮಲ್ಲಿ ಜಾಗೃತಗೊಳ್ಳಬೇಕು. ಆಗ ನಾವು ನೀರು ಹಾಕಿ ಬೆಳೆಸಿದ ಕೆಲವು ರೂಢಿಗತ ನಡವಳಿಕೆಗಳ ಹೊರತಾಗಿಯೂ ನಾವು ಇತರರನ್ನು ಒಪ್ಪಿಕೊಳ್ಳಲು ಸಹಕರಿಸುತ್ತದೆ, ಈ ಜಾಗೃತಿಗೆ ‘ಜೆಂಡರ್’ ಅಥವಾ ‘ಫೆಮಿನಿಸಂ’ಗಳ ಅಧ್ಯಯನಗಳು ಸಹಕಾರಿ.

ಈ ‘ಫೆಮಿನಿಸಂ’ ಅಥವಾ ‘ಫೆಮಿನಿಸ್ಟ್’  ಎಂಬ ಪರಿಕಲ್ಪನೆಯು ಅತ್ಯಂತ ಅಪಾರ್ಥಕ್ಕೆ ಒಳಗಾಗಿ ನಗೆ ಪಾಟಲಾಗಿದೆ. ಸಿನೆಮಾ ಮುಂತಾದ ಜನಪ್ರಿಯ ಮಾಧ್ಯಮಗಳು ‘ಫೆಮಿನಿಸ್ಟ್’ಗಳನ್ನು ಹಾಸ್ಯಮಯವಾಗಿ, ವ್ಯಂಗ್ಯವಾಗಿ ಚಿತ್ರಿಸಿ ಅನರ್ಥವಾಗಿರುವುದು ದುರದೃಷ್ಟಕರ. ಸ್ವಲ್ಪ ಚಿಕ್ಕ ಬಟ್ಟೆ ಹಾಕಿ ಓಡಾಡುವುದ ತಡೆಯುವುದು, ಪ್ರೇಮಿಗಳನ್ನು ದೂರ ಮಾಡುವುದು, ತುಟಿ ತುಂಬಾ ಲಿಪ್ಸ್ಟಿಕ್ಮೆತ್ತಿ, ಬಾಬ್ಕಟ್ಮಾಡಿ, ಸ್ಲೀವ್ಲೆಸ್ರವಿಕೆ ತೊಟ್ಟು, ಝಂಡಾ ಹಿಡಿದು ಓಡಾಡಿ ನಂತರ ಬಂದು ಇಂಗ್ಲೀಷಿನಲ್ಲಿ ‘ಜುವೆಲ್ಲರಿ’ ಬಗ್ಗೆ ಹರಟೆ ಹೊಡೆಯುವುದು ಖಂಡಿತ ಅಲ್ಲ. ಈರೀತಿ ‘ಫೆಮಿನಿಸ್ಟ್’ ಅಂತೂ ನಿಜವಾದ ಫೆಮಿನಿಸ್ಟ್ ಅಲ್ಲ. ಯಾವುದೇ ವ್ಯಕ್ತಿಯನ್ನು ಸಮಾನವಾಗಿ ನೋಡುವುದು, ಸಮವಾಗಿ ವ್ಯವಹರಿಸುವುದು, ಮಕ್ಕಳನ್ನುಈ ರೀತಿ ಬೇಧ ಭಾವವಿಲ್ಲದೆ ಬೆಳೆಸುವುದು, ಯಾರೂ ಮೇಲಲ್ಲ ಯಾರೂ ಕೀಳಲ್ಲ ಎಂಬ ಅರಿವನ್ನು ಮೂಡಿಸುವುದು ಇದು ನಿಜವಾದ ಫೆಮಿನಿಸಂನ ಅಧ್ಯಯನ ಮತ್ತು ಅನುಸಂಧಾನ.

ಮೊನ್ನೆ ಒಬ್ಬ ಹಿರಿಯರನ್ನು ಭೇಟಿ ಮಾಡಿದ್ದೆ, ಆಕೆ ಕೆಲವು ವಿಚಾರಗಳನ್ನು ಚರ್ಚಿಸುತ್ತಾ ಮಹಿಳೆಯರ ಬಗೆಗೆ, ಮಹಿಳಾ ಸಾಹಿತ್ಯದ ಬಗೆಗೆ ಕೆಲ ಹಿರಿಯರು ಕಡೆಗಣಿಸಿರುವುದು, ಮಹಿಳೆಯರ ಬಗೆಗೆ ಕೀಳಾಗಿ ಮಾತನಾಡಿರುವುದು ಇತ್ಯಾದಿ ತಮ್ಮ ಸ್ವತಹ ಅನುಭವಗಳನ್ನುಹಂಚಿಕೊಂಡರು. ಆಗ ನನಗೆ ಇದರ ಕುರಿತು ಮಾತನಾಡಲೇಬೇಕು ಎನಿಸಿತು. ನಿಮ್ಮಅನಿಸಿಕೆ, ಸಲಹೆಗಳನ್ನೂ ಹಂಚಿಕೊಳ್ಳುತ್ತೀರಾ?

 

‍ಲೇಖಕರು G

December 14, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

7 ಪ್ರತಿಕ್ರಿಯೆಗಳು

  1. Mohan V Kollegal

    ಒಳ್ಳೆಯ ಲೇಖನ ಅಕ್ಕ… ಹೆಣ್ಣಿಂದ ಗಂಡು, ಗಂಡಿಂದ ಹೆಣ್ಣು… ಆದರೂ ಪ್ರಾಕೃತಿಕವಾಗಿ ಚೂರು ಸಾಮರ್ಥ್ಯದಲ್ಲಿ ಬದಲಾವಣೆಯಿರುತ್ತದೆ, ಹಾಗಂದ ಮಾತ್ರ ಆಕೆ ಅಬಲೆಯಲ್ಲ. ಒಬ್ಬರನ್ನೊಬ್ಬರು ಗೌರವಿಸಬೇಕು. ಹೆಣ್ಣೆಂದರೆ ಹೂವಿನಂತೆ, ಅದನ್ನು ಕಾಪಾಡಿಕೊಳ್ಳುವ ಜವಾಬ್ದಾರಿ ಗಂಡಿಗೆ ಸೇರಿದ್ದು, ದಬ್ಬಾಳಿಕೆ ಸಲ್ಲ. 🙂

    ಪ್ರತಿಕ್ರಿಯೆ
  2. Paresh Saraf

    ಸೆಕ್ಸ್ ಮತ್ತು ಜೆಂಡರ್ ಅನ್ನು ವ್ಯಾಖ್ಯಾನಿಸಿದ ರೀತಿ ಬಹಳ ಚೆನ್ನಾಗಿದೆ. ಚಿಕ್ಕ ಚೊಕ್ಕ ಲೇಖನ ಹಿಡಿಸಿತು 🙂

    ಪ್ರತಿಕ್ರಿಯೆ
  3. Bharath

    ತುಂಬಾ ಚನ್ನಾಗಿದೆ ಲೇಖನ.

    ಜನರು ಎಲ್ಲವನ್ನು ತಮ್ಮ ತಮ್ಮ ಸ್ವಾರ್ಥಕ್ಕೆ ಬಳಸಿಕೊಳ್ಳುತ್ತಾರೆ ಮತ್ತು ವಿಷಯವನ್ನು ತಿರುಚ್ಚುತ್ತಾರೆ. ಎಲ್ಲ ism ಗಳ ಕಥೇನೂ ಇಷ್ಟೇ. ಮೂಲದಲ್ಲಿ ಚಿಂತನೆ ದೊಡ್ದದಾಗಿರುತ್ತೆ. ಆದರೆ ಮೂಲ ಚಿಂತನೆಗಳು ಜನರ ಬಾಯಿಗೆ ಬಂದಾಗ ಬದಲಾಗುತ್ತೆ. generalizing ಅಥವಾ stereotyping ಎಂದು ಗಂಭಿರವಾದ ವಿಚಾರಣೆ ಎದುರು ನಿಲ್ಲುವುದಿಲ್ಲ. feminism ಮೂಲದಲ್ಲಿ ಸಮಾನತೆಯ ಚಿಂತನೆ ಇದೆ. ಆದರೆ ಅದಕ್ಕೆ ಹಲವು ಆಯಾಮಗಳು ಇದೆ. ಈ ಆಯಾಮಗಳು ಅನರ್ಥವಗುವುದು ಪದೇ ಪದೇ ನೋಡಿದ್ದೇವೆ. ಪ್ರತಿಯೊಂದು ವಿಷೆಯವನ್ನು / ಸಂಧರ್ಭ ವನ್ನು ತಿರುಚಿದರೆ ಅಲ್ಲಿ ಒಂದು ಹೆಣ್ಣಿಗೆ ಸೋಶನೆಯಗುವುದು ಕಾಣುತ್ತೆ. ನೇರವಾಗಿ ನೋಡಿದರೆ ವಿಷೆಯ / ಸಂದರ್ಭ ಸ್ವಾಭಾವಿಕವಾಗಿ ಸರಿಯಗಿನೇ ಇರುತ್ತೆ. Feminism ಹೆಸರಿನ ಅಡಿಯಲ್ಲಿ ಸಂಘಟನೆ ಮತ್ತು ಹೊರಾಟವಂತೂ ಹಲವು ಬಾರಿ ಹುಚ್ಚು ದಾರಿ ಹಿಡಿದಿದೆ.

    I am a feminist ಅಂತ ಹೇಳುವುದನ್ನು ನಿಲ್ಲಿಸಿಬಿಟ್ಟಿದ್ದೇನೆ – ಯಾವುದೆ ಒಂದು ism ಗೆ ಅಂಟುಕೊಬಾರದು ಅಂತ.

    ಪ್ರತಿಕ್ರಿಯೆ
  4. Divya

    Hi Samyukta,

    I completely agree with what you are saying.

    I am curious to know about the thoughts behind the Title of this article.(I know you are saying that you do not belong to those stereotypical attributes attached to Feminists!)

    Warm Regards,

    Divya

    ಪ್ರತಿಕ್ರಿಯೆ
  5. samyuktha

    You are right Divya. When I say I am not a ‘feminist’ (notice the quotes), I mean the stereotypical attributes that are attached to feminism and which are totally misunderstood by both men and women. They have made the word merely relate to hate the opposite sex and overtly enjoy their ‘woman liberation’. This naturally has reduced the nobleness of the term feminism and has become a grain for laughter thoughts…

    Woman empowerment or rather human empowerment requires a proper thought process and contemplation on the right sense of feminism.

    Thanks!

    ಪ್ರತಿಕ್ರಿಯೆ
  6. gn nagaraj

    ಜೆಂಡರ್ ಎಂಬ ಪರಿಕಲ್ಪನೆಯನ್ನು ಸರಳವಾಗಿ ವಿವರಿಸುವಲ್ಲಿ ಈ ಪುಟ್ಟ ಬರಹ ಯಶಸ್ವಿಯಾಗಿದೆ. ಅದರೆ ಅದನ್ನೊಂದು ಮಾನಸಿಕ ಕ್ರಿಯೆಯೆಂದು ಪರಿಗಣಿಸುವುದು- ಅದು ಸಾಮಾಜಿಕ ಎಂದು ಮತ್ತೆ ವಿವರಿಸಿದ್ದರೂ ಕೂಡ ಅದರ ಅಗಾಧತೆಯನ್ನು ಅರ್ಥ ಮಾಡಿಕೊಳ್ಳುವುದಕ್ಕೆ, ಪರಿಹಾರವನ್ನು ಕಂಡುಕೊಳ್ಳುವುದಕ್ಕೆ ತೊಂದರೆಯುಂಟು ಮಾಡುತ್ತದೆ.ಜೆಂಡರ್ ಎಂಬುದರ ಮೂಲ ಸಾಮಾಜಿಕವೇ ಆಗಿದೆ. ಮತ್ತು ಇನ್ನೂ ಸ್ಪಷ್ಟ ಪಡಿಸಿಕೊಳ್ಳಬೇಕೆಂದರೆ ಸಾಮಾಜಿಕ ರಚನೆಯ ಸ್ವರೂಪವೇ ಈ ಸಮಸ್ಯೆಯ ಮೂಲ. ಮುಖ್ಯವಾಗಿ ಪಾಳೇಯಗಾರಿ-ಪಿತೃಪ್ರಧಾನ ವ್ಯವಸ್ಥೆಯೇ ಮೂಲ. ಈ ಸಾಮಾಜಿಕ ರಚನೆ ಮಾನಸಿಕವಾಗಿ , ರಾಜಕೀಯವಾಗಿ, ಆರ್ಥಿಕವಾಗಿ, ಸಾಂಸ್ಕೃತಿಕವಾಗಿ ಪರಿಣಾಮ ಬೀರುವುದಾಗಿದೆ. ಆದ್ದರಿಂದ ಕೇವಲ ಮಾನಸಿಕವಾಗಿ ಬದಲಾದರೆ ಸಮಸ್ಯೆ ಪರಿಹಾರವಾಗುತ್ತದೆ ಎಂಬ ಸರಳೀಕೃತ ನಿಲುವಿಗೆ ಬರುವ ಅಪಾಯವಿದೆ. ಸಾಮಾಜಿಕ ರಚನೆಯನ್ನು ಬದಲಾಯಿಸುವುದರಿಂದ ಮಾತ್ರ ಜೆಂಡರ್ ಸಮಸ್ಯೆಯನ್ನು ಪರಿಹರಿಸಲು ಸಾಧ್ಯ. ಅದರಲ್ಲಿಯೂ ಗ್ರಾಮೀಣ ಪ್ರದೇಶದ ಮೇಲಿನ ಪಾಳೆಯಗಾರೀ ಹಿಡಿತವನ್ನು ಸಡಿಲಗೊಳಿಸದೇ ಸಾಧ್ಯವಿಲ್ಲ ಎಂಬ ಅರಿವು ನಮ್ಮೆಲ್ಲರಲ್ಲೂ ಮೂಡಬೇಕಾಗಿದೆ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: