ರೆಡ್ಡಿ ಸಮುದಾಯವು ನಮ್ಮ ದೇಶದ ಪ್ರಮುಖ ಜನಸಮುದಾಯಗಳಲ್ಲಿ ಈ ಜನಾಂಗವೂ ಒಂದಾಗಿದೆ. ವೃತ್ತಿಯಲ್ಲಿ ಪ್ರಮುಖವಾಗಿ ವ್ಯವಸಾಯವನ್ನೇ ಜೀವನಾಧಾರವಾಗಿ ಮಾಡಿಕೊಂಡಿರುವ ಈ ಸಮುದಾಯವು ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು, ಒಡಿಶಾದಲ್ಲಿ ಹೆಚ್ಚಾಗಿ ಕಾಣಬಹುದು. ರೆಡ್ಡಿಗಳಲ್ಲಿ ಅನೇಕ ಒಳಪಂಗಡಗಳೂ ಇವೆ. ರೆಡ್ಡಿ ಸಮುದಾಯದ ಕುರಿತಾಗಿ ಹೆಚ್ಚಿನ ಯಾವುದೇ ಅಧ್ಯಯನಗಳಾಗಿಲ್ಲ. ಹೀಗಾಗಿ ಡಾ.ಕೆ.ಆರ್.ಸಂಧ್ಯಾರೆಡ್ಡಿ ಅವರು, ಸಮುದಾಯದ ಬಗ್ಗೆ ಅಧ್ಯಯನ ನಡೆಸಿ ಸಂಪ್ರದಾಯ, ಆಚರಣೆ, ನಂಬಿಕೆ, ಆಹಾರ ಪದ್ಧತಿ ಮೊದಲಾದವುಗಳನ್ನು ಕೃತಿ ಮೂಲಕ ಹೊರತಂದಿದ್ದಾರೆ.
ಸ್ವ್ಯಾನ್ ಪ್ರಿಂಟರ್ಸ್ ನ ಎಂ.ಕೃಷ್ಣಮೂರ್ತಿ ಅವರು ಈ ಕೃತಿಯನ್ನು ಮುದ್ರಿಸಿದ್ದಾರೆ.

ಡಾ.ಕೆ.ಆರ್.ಸಂಧ್ಯಾರೆಡ್ಡಿ
(ಬೆನ್ನುಡಿಯಿಂದ)
ಈ ದೇಶದ ಪ್ರಮುಖ ಜನಸ.ಮುದಾಯಗಳಲ್ಲಿ ಒಂದೆನಿಸಿದ ರೆಡ್ಡಿ ಸಮುದಾಯದವರು ಕರ್ನಾಟಕದಲ್ಲಿ ಸುಮಾರು 50 ಲಕ್ಷಕ್ಕೂ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಬಹುದೀರ್ಘ ಕಾಲದಿಂದ ಕರ್ನಾಟಕದಲ್ಲಿ ನೆಲೆಸಿರುವ ರೆಡ್ಡಿ ಸಮುದಾಯವನ್ನು ಕುರಿತಂತೆ ಹೆಚ್ಚಿನ ಅಧ್ಯಯನಗಳಾಗಲೀ ದಾಖಲೀಕರಣಗಳಾಗಲೀ ನಡೆದಿಲ್ಲ.
ಇಂತಹ ಒಂದು ಕೊರತೆಯನ್ನು ತುಂಬಿಕೊಡುವ ಒಂದು ಮಹತ್ವದ ಕೆಲಸ ಈ ಕೃತಿಯ ಮೂಲಕ ಆಗಿದೆ. ಕರ್ನಾಟಕದ ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ ಬದುಕಿನಲ್ಲಿ ಅವಿಭಾಜ್ಯವಾಗಿ ಸೇರಿ ಹೋಗಿರುವ ರೆಡ್ಡಿ ಸಮುದಾಯದ ಮೂಲ, ಇತಿಹಾಸ, ವಾಸದ ನೆಲೆಗಳು, ಒಳ ಪಂಗಡಗಳು ಹಾಗೂ ಬೇರೆ-ಬೇರೆ ಪಂಗಡಗಳಲ್ಲಿರುವ ಸಂಪ್ರದಾಯ, ಆಚರಣೆ, ನಂಬಿಕೆ, ಆಹಾರ ಪದ್ಧತಿ ಮೊದಲಾದವುಗಳನ್ನು ಈ ಕೃತಿ ಪರಿಚಯಿಸುತ್ತದೆ.
ಇವುಗಳ ಜಾನಪದೀಯ ಹಾಗೂ ಮಾನವ ಶಾಸ್ತ್ರೀಯ ವಿಶ್ಲೇಷಣೆಯನ್ನು ಮಾಡಿರುವುದು ಇಲ್ಲಿನ ಒಂದು ವಿಶೇಷ. ಕರ್ನಾಟಕದ ರಾಜಕೀಯ, ಶಿಕ್ಷಣ, ವಿಜ್ಞಾನ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಮೊದಲಾದ ಕ್ಷೇತ್ರಗಳಿಗೆ ಅನನ್ಯ ಕೊಡುಗೆ ನೀಡಿದ ಕೆಲವು ಮಹನೀಯರನ್ನು ಪರಿಚಯಿಸಿರುವುದೂ ಸಹ ಈ ಕೃತಿಯ ಇನ್ನೊಂದು ವಿಶೇಷ.





0 Comments