ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸಂತಸ ಎಲ್ಲಿದೆ..?

-ವೀಣಾ ಭಟ್.

ನಿಜವಾದ ಸಂತಸ ಎಲ್ಲಿದೆ..? ಈ ಪ್ರಶ್ನೆಗೆ ಉತ್ತರ ಹೇಳುವುದು ತುಂಬಾ ಕಷ್ಟದ ಕೆಲಸ .ಸಂತಸವೆಂದರೆ ಬೇರೇನೂ ಅಲ್ಲ, ಅದೊಂದು ಮನಸ್ಥಿತಿ ಎಂಬ ಮಾತಿದೆ .

ಬೇರೆಯವರ ಸಂತೋಷದಲ್ಲಿ ಭಾಗಿಯಾಗುವುದು ,ಬೇರೆಯವರ ಸಂತೋಷಕ್ಕೆ ಕಾರಣರಾಗುವುದು ನಿಜವಾದ ಸಂತಸ ಎಂಬುದು ತುಂಬಾ ಉದಾತ್ತವಾದ  ಮಾತು .
ಆದರೆ ಇದನ್ನು ಒಪ್ಪಿಕೊಂಡು ಅನುಷ್ಟಾನಕ್ಕೆ  ತರುವುದು ಕಷ್ಟ ಸಾಧ್ಯ .ಇದನ್ನು ಅನುಸರಿಸಲು ಕೆಲವರಿಗಷ್ಟೇ ಸಾಧ್ಯವಾಗುತ್ತದೆ . ಕುರುಡು ಕಾಂಚಾಣದ ಬೆನ್ನೇರಿ
ಸಂತಸವನ್ನು ಹುಡುಕುವ ವಿಫಲ ಪ್ರಯತ್ನವನ್ನು ನಾವು  ಇನ್ನೂ ..ಬಿಟ್ಟಿಲ್ಲ .ಸಂತೋಷವನ್ನು ಹುಡುಕುತ್ತ  ಸಂತೋಷಪಡುವುದನ್ನು ಮರೆತಿದ್ದೇವೆ …!

ಸಂತಸದ ಪರಿಭಾಷೆ ಒಬ್ಬರಿಂದ ಒಬ್ಬರಿಗೆ ಭಿನ್ನ .ಒಬ್ಬರಿಗೆ ಪಂಚತಾರಾ ಹೋಟೇಲಿನಲ್ಲಿ ಉಳಿದರೆ ,ಅಲ್ಲಿ ತಿಂದರೆ ಅದು ದೊಡ್ಡ ಪ್ರತಿಷ್ಠೆಯ ,ಸಂತಸದ
ವಿಷಯಯವಾಗಿರಬಹುದು .

ಇನ್ನು ಕೆಲವರಿಗೆ ರಸ್ತೆ ಬದಿಯ ಬೋಂಡ ,ಮಸಾಲ ಪೂರಿ ಅಷ್ಟೇ ..ಖುಷಿ ಕೊಡುತ್ತದೆ .

ಕೆಲವರಿಗೆ ವಿದೇಶ ಪ್ರವಾಸ ಸಂತಸ ತರಬಹುದು.ಅದೇ ಇನ್ನೊಬ್ಬರಿಗೆ ಊರಿನ ಪುಟ್ಟ ದೇಗುಲ,ಹಸಿರು ಬೆಟ್ಟ ,ತೋಟದ ಸಣ್ಣ ತೊರೆ ಹೆಚ್ಚು ಆಪ್ಯಾಯಮಾನ ಎನಿಸಬಹುದು.

ಕೆಲವೊಮ್ಮೆ ಸಣ್ಣ ಪುಟ್ಟ ವಿಷಯಗಳು ತುಂಬಾ ಸಂತಸ ಕೊಡುತ್ತವೆ.ಉದಾಹರಣೆಗೆ ..,ಬೀದಿ ನಾಯಿಗೆ ಒಂದು ಬಿಸ್ಕತ್ತು ಕೊಡಿ.ಅದು ಆಸೆಯಿಂದ ತಿಂದು ಬಾಲ  ಅಲ್ಲಾಡಿಸಿ
ಅದರ ನಗು ,ಕೃತಜ್ಞತೆ ತೋರಿಸುತ್ತದೆ .ಆ ಮೂಕ ಪ್ರಾಣಿಯ ಪ್ರೀತಿ ಕಂಡಾಗ ಸಂತಸದ ಅಲೆಯೊಂದು  ನಿಮ್ಮಲ್ಲಿ ಹಾದುಹೋಗುತ್ತದೆ .

ಮಕ್ಕಳೊಂದಿಗೆ ಮಕ್ಕಳಾಗಿ ಬೆರೆತು ,ಕಿಲ ಕಿಲನೆ ನಕ್ಕಾಗ ಮನಸ್ಸೆಷ್ಟು ಹಗುರಾಗುತ್ತದೆ ನೋಡಿ…

ನಿಮ್ಮ ಸುತ್ತಲಿನ ಪ್ರಕೃತಿಯನ್ನು ಗಮನಿಸುತ್ತಿರಿ .ಅಲ್ಲೊಂದು ಸ್ಫೂರ್ತಿಸೆಲೆಯಿದೆ .ಚಿಗುರೆಲೆ ,ಮೊಗ್ಗು ,ಹೂ ,ಹಣ್ಣು ಹೀಗೇ ಪ್ರತಿಯೊಂದೂ  ನಿಮಗೆ ಸಂತಸ ತರಬಹುದು .

ಮಗನಿಗೋ  ,ಮಗಳಿಗೋ ಒಂದಿನ ಶಾಲೆಯಿಂದ ಬರುವಾಗ ಸರ್ ಪ್ರೈಸ್ ಚಾಕಲೇಟ್ ,ಐಸ್ಕ್ರೀಂ ತಂದಿಡಿ .ಅವರ ಮುಖ ಖುಷಿಯಿಂದ ಅರಳುವುದನ್ನು ನೋಡಿ.

ಹಣವೊಂದಿದ್ದರೆ ಎಲ್ಲವನ್ನೂ ಕೊಳ್ಳಬಹುದು ಎಂಬ ಒಣ ಜಂಬ ಕೆಲವರಲ್ಲಿ ಇರುತ್ತದೆ .ಜೀವನಕ್ಕೆ ಹಣ ಬೇಕು,ಆದರೆ ಅದೇ ಮುಖ್ಯವಾದಾಗ ಸಂತಸ ನಮ್ಮಿಂದ
ದೂರವಾಗುತ್ತದೆ .

ಮನುಷ್ಯರ ನಡುವಿನ ಸುಂದರ ಸಂಬಂಧಗಳು ತುಂಬಾ ಖುಷಿ ಕೊಡಬಲ್ಲವು .ಗೆಳೆಯ ,ಗೆಳತಿ ,ತಂದೆ,ತಾಯಿ ,ಮಕ್ಕಳು ..ಹೀಗೆ ಮಾನವ  ಸಂಬಂಧಗಳು
ಜೀವನವನ್ನು ಸುಂದರವಾಗಿಸುವುದಲ್ಲದೆ ಖುಷಿಯನ್ನು ಕೊಡುತ್ತವೆ.

ನಿಮ್ಮ ಕಾಲೇಜ್  ದಿನಗಳ  ನೆನಪುಗಳು ,ಬಾಲ್ಯದ ಸಿಹಿ ನೆನಪುಗಳು ಇವುಗಳನ್ನು ಮಕ್ಕಳೊಂದಿಗೆ ಹಂಚಿಕೊಳ್ಳಿ .ನಿಮ್ಮ ಆವಾಗಿನ ಅನುಭವಗಳು ,ಮಕ್ಕಳ ಈಗಿನ ಜೀವನ ರೀತಿ
ಹೇಗೆ ಭಿನ್ನ ಎಂಬ ಅರಿವಿನ ಜೊತೆಗೆ ನಿಮ್ಮ ಮಕ್ಕಳ ನಡುವಿನ ಬಾಂಧವ್ಯ ಹೆಚ್ಚಾಗಬಹುದು .

ನಿಮ್ಮ ಪೇಪರ್ ನವನು ,ಕೆಲಸದವನು,ವಾಚ್ ಮ್ಯಾನ್ .. ಹೀಗೇ ದಿನಾ ನಿಮ್ಮ ಸುತ್ತಲಿರುವ ಶ್ರಮ ಜೀವಿಗಳಿಗೆ ಒಂದು ಕಿರು ನಗೆ ,ಕೃತಜ್ಞತೆಯ ಮಾತು ತುಂಬಾ
ಖುಷಿಯನ್ನು ಕೊಡಬಲ್ಲುದು.

ಸಂತಸದಲ್ಲಿರುವ ವ್ಯಕ್ತಿ ತನ್ನ ಸುತ್ತಲೂ ಸಂತಸ ಹರಡಬಲ್ಲನು .ಈ ಮಾತಂತೂ ದಿಟ . ಸಂತಸದಲ್ಲಿರುವ ವ್ಯಕ್ತಿ ಎಲ್ಲರ ಜೊತೆ ಸಹನೆಯಿಂದ ,ಪ್ರೀತಿಯಿಂದ
ವ್ಯವಹರಿಸುತ್ತಾನೆ .ವ್ಯಕ್ತಿಯೊಬ್ಬನ  ನಗುಮುಖ  ಅಥವಾ ಮುಗ್ಧ ಮಗುವಿನ ನಗು ಕಂಡಾಗ ನಮ್ಮ ಮುಖದಲ್ಲೂ ನಗು ಅರಳುತ್ತದೆ .ಗುಂಪೊಂದು ನಗುವಿನಲ್ಲಿ
ಮುಳುಗಿ ಹೋಗಿ ಗಲಭೆ ಎಬ್ಬಿಸುತ್ತಿದೆ ಅಂದುಕೊಳ್ಳಿ …ಅದನ್ನು ಕಂಡಾಗ ಸಿಟ್ಟು ಬರುವುದಿಲ್ಲ ,ಯಾವ ವಿಷಯಕ್ಕಾಗಿ ನಗುತ್ತಿದ್ದಾರೆ ಎಂದು ತಿಳಿಯದಿದ್ದರೂ ನಮ್ಮ
ಮುಖದ ಮೇಲೊಂದು ಕಿರುನಗೆ ಬಂದಿರುತ್ತದೆ .

ಬೇರೆಯವರ ಖುಷಿಯನ್ನು ಕಂಡು ಹೊಟ್ಟೆಕಿಚ್ಚು ಪಡುವುದು ನಿಮ್ಮ ಸಂತಸವನ್ನು ಹಾಳುಗೆಡವಬಹುದು .

ವ್ಯಕ್ತಿಯೊಬ್ಬ ನಕಾರಾತ್ಮಕ ಪ್ರತಿಕ್ರಿಯೆ ,ನಿಂದನೆ ಇವುಗಳಿಂದ ನಮ್ಮ ಸಂತಸವನ್ನು ಹಾಳು ಮಾಡಲು ಪ್ರಯತ್ನಿಸಬಹುದು .ಆದರೆ ಇವುಗಳಿಗೆ ನಾವು ಎಷ್ಟು ಬೆಲೆ ಕೊಡುತ್ತೇವೆ
ಅನ್ನುವುದು ಮುಖ್ಯ.

ಕಷ್ಟ ಪಟ್ಟು ಕೆಲಸ ಮಾಡಿ ಯಶಸ್ಸು ಸಿಕ್ಕಿದಾಗ ಆಗುವ ಖುಷಿಯೇ ಬೇರೆ ಅಂತ ಕಷ್ಟ ಪಟ್ಟವರು ಹೇಳುತ್ತಾರೆ .ಇದು ಒಂದು ಧನ್ಯತಾ ಭಾವ ,ಆತ್ಮವಿಶ್ವಾಸ ಕೊಡುತ್ತದೆ .

ಅಜ್ಞಾನವೇ ಪರಮ ಸುಖ ಅಂತಾರೆ.ಹಾಗಂತ ಏನೂ ಮಾಡದೇ,ಏನೂ ತಿಳಿದುಕೊಳ್ಳದೆ ಅದೇ ಪರಮ ಸುಖ ಅಂದ್ಕೋಬೇಡಿ ಮತ್ತೆ …..

ನಿಮ್ಮ ಸಂತಸ ಎಲ್ಲಿದೆ ಅಂತ ಕಂಡುಕೊಳ್ಳಿ ………

Be happy……………Spread happiness….!!!

‍ಲೇಖಕರು sreejavn

12 November, 2011

6 Comments

  1. Anitha Naresh Manchi

    very nice article

  2. Rankusa

    The article reads like the wonderfully (and brilliantly of course!) simplified version of “Happier” by Tal Ben Shahar (’ve not read the entire book though).

    “ನಿಮ್ಮ ಸಂತಸ ಎಲ್ಲಿದೆ ಅಂತ ಕಂಡುಕೊಳ್ಳಿ ………” if only it was that easy! 🙂 and the irony, and at the same time- the beauty about this article is that it is not the last line or the last sentence that summarizes the essence of the writing; but its the very first line and the very first sentence! i.e. “ನಿಜವಾದ ಸಂತಸ ಎಲ್ಲಿದೆ..? ಈ ಪ್ರಶ್ನೆಗೆ ಉತ್ತರ ಹೇಳುವುದು ತುಂಬಾ ಕಷ್ಟದ ಕೆಲಸ” 🙂 how very true!

    Smoothly flowing, not nonsensical, to-the-point written article. short, sweet, crisp, and clean—like the singles being scored by Sachin! Good job and compliments! 🙂

    However, a bit more could’ve been added here. “ನಿಮ್ಮ ಪೇಪರ್ ನವನು ,ಕೆಲಸದವನು,ವಾಚ್ ಮ್ಯಾನ್ .. ಹೀಗೇ ದಿನಾ ನಿಮ್ಮ ಸುತ್ತಲಿರುವ ಶ್ರಮ ಜೀವಿಗಳಿಗೆ ಒಂದು ಕಿರು ನಗೆ ,ಕೃತಜ್ಞತೆಯ ಮಾತು ….” I believe that ‘acting’ as if one is happy is entirely different from ‘being’ when one is genuinely happy. Smiling and greeting others even when one is not genuinely happy is (to me) hypocrisy. And the worst part is that it blatantly reflects. Still worse is that one can never be 100% happy. Does it mean that one should never smile or greet others?? An anomalous scenario which is subject to a never-ending argument.

    (loved the doggy though. what’s ‘her’ name? can bet it’s a ‘she’ ;-))

    regards,
    -R

  3. veena bhat

    Thanks Anita and Rankusa.
    @Rankusa….Thank you very much for understanding beautifully and analyzing it.Yes, you are right..,smiling and greeting somebody when you are not happy is also very important ,it’s like art of living.
    I haven’t read that book on happiness which you have mentioned.Planning to read it …:)

  4. Rankusa

    u’re most welcome!

    i’ve often heard people say that it is a good practice to keep a copy of the letter right next to you, especially when you’re replying to that letter; so that you wouldn’t be missing out on any point being mentioned in there. even a nosy-parker like myself believe that it makes sense.

    well, why did i think about it now? here? guess you’re shrewd enough to figure it out 🙂 if you can’t, no worries!

    and thanx for ‘seriously’ considering my blabbering and ‘planning’ to read that book 🙂

    tc!
    -r

  5. D.RAVIVARMA

    ಮೇಡಂ ನಮಸ್ಕಾರ ,ಮತ್ತೊಂದು ವಿಶಿಷ್ಟವಾದ ಸಬ್ಜೆಕ್ಟ್ ಬಗ್ಗೆ ,ತುಂಬಾ ಸರಳವಾಗಿ,ಆತ್ಮೀಯತೆಯಿಂದ,ಮನಮುತ್ತುವಹಾಗೆ ,ಒಂದಿಸ್ತು ಯೋಚಿಸುವ ಹಾಗೆ ಬರೆದಿದ್ದೀರಿ. ನೀವು ಹೇಳಿದ ಹಾಗೆ ಸಂತಸ ಎನ್ನುವುದು ಮಾನಸಿಕ ಸ್ಥಿತಿ ಅಸ್ಟೆ. ನಾವೆಲ್ಲಾ ಮಕ್ಕಳಿದ್ದಾಗ ಬರಿ ಒಂದು ಕಡ್ಡಿ ಐಸ್ಕ್ರೀಂ, ಬೊಂಬಾಯಿ ಮಿಟಾಯಿ.ಜಾತ್ರೆ ಗಳಲ್ಲಿ,ಕಣ್ಣಿಗೆ ಹಾಕುವ ಬಣ್ಣದ ಕನ್ನಡಕ,ಕೈಯ್ಯಲ್ಲಿ ಗಿರಿಗಿರಿ. ಕದ್ದು ತಿಂದ ಅಡಿಗೆಮನೆಯ ಬೆಲ್ಲ, ಜೆಬುತುಮ್ಬಾ ತುಂಬಿಸಿಕೊಂಡು ತಿನ್ನುತಿದ್ದ ಮಂಡಕ್ಕಿ, ಹೀಗೆ ಹೀಗೆ ನಮ್ಮ ಓಣಿಯ ನಾಯಿಮರಿಗಳಜೋತೆ ಆಟವದುವುದರಲ್ಲೂ ಸಂತಸ ಪಡೆಯುತ್ತಿದ್ದೆವು ಬಟ್ ಈಗ ಅದರ ಕಾನ್ಸೆಪ್ಟ್ ಬೇರೆಯಾಗಿದೆ. ಕೊಳ್ಳುಬಾಕ ಸಂಸ್ಕೃತಿಯನ್ನು ನಮ್ಮ ಮನೆಗಳಿಗೆ,ನಮ್ಮ ಮನಗಳಿಗೆ ತಂದು ಹೇರಿದ ಮೀಡಿಯಾ ನಮ್ಮ ಬೇಡಿಕೆಗಳನ್ನು ಹೆಚಿಸುತ್ತ ಹೋಗಿ ತೃಪ್ತಿ ಅನ್ನುವುದನ್ನು ದೂರ ತಳ್ಳಿದೆ,ಬೈ ರಾಗಿಯೊಬ್ಬ ಎಲ್ಲೋ ಗುಹೆಯಲ್ಲೋ.ನದಿ ಪಕ್ಕದಲ್ಲೋ .ಗಂಜ ಸೇದುತ್ತಲೋ,ಹಾಡು ಹಾದುತ್ತಲೋ ಸಂತಸವಾ ಗಿರುತ್ತಾನೆ.
    “ಅಡಿಗರು ಹೇಳಿದ ಹಾಗೆ ಇದ್ದುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ ” ಮನೆ ಮತ ಎಲ್ಲವನ್ನು ಬಿಟ್ಟು ಊರೂರು ತಿರುಗುವ ಜೋಗಿ, ಸಂತಸದ ಹುಡುಕಾಟ ಹಿಂದಿನಿಂದಲೂ ನಮ್ಮನ್ನು ದಿನನಿತ್ಯ ಕಾಡುವ ಒಂದು ದೊಡ್ಡ myth ಅಲ್ಲವೇ ನೀವು ಹೇಳಿದ ಮಾತು ” ಮನುಸ್ಯ ನಡುವಿನ ಸಂಭಂದಗಳು ತುಂಬಾ ಕುಶಿಕೊದಬಲ್ಲವು.ಹಾಗು ಸಂತಸದಲ್ಲಿರುವ ವ್ಯಕ್ತಿ ತನ್ನ ಸುತ್ತಲು ಸಂತಸ ಹರದಬಲ್ಲನು” ಎಸ್,ನಿಜ ಆದರೆ,ಇಲ್ಲಿ ಸಂಭಂದಗಳೇ ಹಾಳಾಗಿವೆ, ಅವು ದುರಾಸೆ,ಮತ್ಸರ ದಿಂದಾಗಿ ಕ್ರೂರ ರೂಪ ಪಡೆದುಕೊಂಡಿವೆ. ಇಲ್ಲಿ ಮಗ ತಾಯಿಗೆ. ಗಂಡ ಹೆಂಡತಿಗೆ,ಹೆಂಡತಿ ಗಂಡನಿಗೆ, ಅಣ್ಣ ತಂಗಿಗೆ,ತಂಗಿ ಅಣ್ಣನಿಗೆ, ಅಸ್ಟೆ ಏಕೆ ಎಲ್ಲ ಸಂಭಗಳಲ್ಲು,ಮೋಸಮಾಡುವ,ದ್ವೆಸಿಸುವ, ನಾಶ ಮಾಡುವ
    ಹಂತವನ್ನು ತಲುಪಿವೆ. ಬುದ್ದನು ಹೇಳುವ ಹಾಗೆ “ಆಶೆಯೇ ದುಕ್ಕಕ್ಕೆ ಕಾರಣ ದುರಾಸೆಯೇ ವಿನಾಶಕ್ಕೆ ಕಾರಣ ಎನ್ನುವ ಸರಳ ಸತ್ಯವನ್ನು ನಾವು ಅರಿಯಲಿಲ್ಲ ವೇನೋ ,ಸಂತಸ ಅನ್ನುವುದು ಕೂಡ relative .ಕಾನ್ಸೆಪ್ಟ್ ಅಲ್ಲವೇ
    ಒಮ್ಮೆ ಒಂದು ಯೋಗ ಶಿಬಿರದಲ್ಲಿ ಇದೇ ಪ್ರಸ್ನೆ ಕೇಳಿತ್ತು ಒಂನರಿಗೆ ಹೊಟ್ಟೆ ತುಂಬಾ ಊಟ ಮಾಡಿದಾಗ,ಮತ್ತೊಬ್ಬರಿಗೆ ಸಂಗೀತ ಕೇಳಿದಾಗ, ಯಾರಿಗಾದರೂ ಸಹಾಯ ಮಾಡಿದಾಗ, ಕಂತುಬ ನಿದ್ದೆ ಮಾಡಿದಾಗ,yaatra . ಒಳ್ಳೆ ಪುಸ್ತಿಕೆ ಓದಿದಾಗ, ಒಳ್ಳೆ ಸಿನಿಮಾ ನೋಡಿದಾಗ, ಹೊಸಬಟ್ಟೆ ಹಾಕಿಕೊಂಡಾಗ, ಹೆಂಡತಿ,ಜೊತೆ ಜಗಳವಿಲ್ಲದೆ ದಿನಕಳೆದಾಗ.,, ಒಳ್ಳೆ ಮನೆ ಕಟ್ಟಿದಾಗ ,ಪ್ರಶ್ನ್ತವಾದ ಜಾಗಕ್ಕೆ ಹೋದಾಗ ಒಳ್ಳೆ ಗುಂಡಿನ ಪಾರ್ಟಿ ಆದಾಗ ಹೀಗೆ ಹೀಗೆ ನೂರಾರು ಅಭಿಪ್ರಾಯಗಳು ಬಂದಾಗ, ಗುರುಗಳು ಹೇಳಿದ್ದು ವಿಸಿಸ್ತವಗಿತ್ತು ” ಯಾವಾಗಲೋ ಸಂತಸವಗಿರುವುದಕ್ಕೆ ಏಕೆ ಹೆನಗುತ್ತಿರಿ ಎಗಲ್ರ್ ಸಂತಸದಿಂದಿರುವುದಕ್ಕೆ ಏನಾಗಿದೆ ನಿಮಗೆ ಅಂತ ಪ್ರಶ್ನಿಸಿದರು. madam. ನೀವು ಆಯ್ಕೆ ಮಾಡಿಕೊಳ್ಳುವ ವಿಷಯಗಳು ನಿಜಕ್ಕೂ ಅದ್ಬುತ,ಅಸ್ಟೆ ಅಲ್ಲ ಅವು ಸೋಸಿಅಲ್ ರೆಲೆವೆಂಟ್ ಆಗಿ ಒಂದಿಸ್ತು ಚಿಂತನೆಗೆ ಹಚ್ಚುತ್ತವೆ, ಈ ಬದುಕು ಕ್ಸನಿಕ, ಆಕಸ್ಮಿಕ, ಇಲ್ಲಿ ನಾವು ಇದ್ದುದರಲ್ಲೇ ಕುಶಿಯಿಂದಿದ್ದು,ನಮ್ಮ ಸುತ್ತಲಿನವರನ್ನು ಕುಶಿಯದದಿದ್ದರು,ಪರವಾಗಿಲ್ಲ,ಅವರ .ನ್ನುದ್ವೇಷಿಸದೆ,ಹಿಮ್ಸಿಸದೆ ,ಮೊಸಮದದೆಮ್ಬದುಕಲು ಸಾ ದ್ಯವಾದರೆ,ಸಾಕೇನೋ,ಏನಂತೀರ……..
    ರವಿ ವರ್ಮಾ ಹೊಸಪೇಟೆ..

  6. veena bhat

    ರವಿವರ್ಮ ಅವರೆ ನಿಮ್ಮ ಪ್ರತಿಕ್ರಿಯೆಗೆ ತುಂಬಾ ..ತುಂಬಾ…ಧನ್ಯವಾದಗಳು ….:)

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading