ಅಲೆಮಾರಿ
ಒಳಗೂ ..ಹೊರಗೂ
ನೆರಳು ಬಿಡಿಸಿಕೊಂಡಾಗಿದೆ
ಕನಸುಗಳ ಮಾತೆಲ್ಲಿ?
ಮಾತುಗಳೆಲ್ಲ ತರಗೆಲೆ
ಹಿಡಿದು ಪ್ರಯೋಜನವಿಲ್ಲ.
ಪಾಲೋ ಕಾವೋ, ಖಲೀಲ್ ಗಿಬ್ರಾನ್
ಕಡೆಗೇ…
ರಾಬಿನ್ ಶರ್ಮಾನ
ಫೆರಾರಿ ಕೂಡ
ಬೀದಿ ದೀಪದ ಸಾಲಿನಲ್ಲಿ…
ಸಿಗರೇಟಿನ ಹೊಗೆ
ಬೂದಿ ಜತೆ ಕೊಡವಿದರೆ
ಸಿಗ್ನಲ್ಲಿನ ಕೆಂಪು ದೀಪು
ದಾರಿಗೆ!
ಕಾಫಿ ಡೇ ಎದುರು
ಚಹಾ ಮಾರುವ
ಹುಡುಗನಿಗೆ ಕಂಡಿದ್ದು
ಶಾಪಿಂಗ್ ಮಾಲ್
ಹುಡುಗಿಯರ ಸೊಂಟ,
ತನ್ನೂರ ಹುಡುಗಿಯರ
ಕೊಡಪಾನದ ನೆನಪು…
ರಾತ್ರೋರಾತ್ರಿ
ಕಂಪ್ಯೂಟರ್ ಪರದೇ
ಇಂದ
ಎದ್ದು ಬಂದ
ಯಾದ್ದೋ ಫ್ರೆಂಡ್ ರಿಕ್ವೆಸ್ಟ್..
ಈ ಮೇಲು,
ಫೀಮೇಲು
ಆಮೇಲಾಮೇಲೆ
ಮೇಲೆ…ಮೇಲೆ…
ಲೆ…
ಲೆ…
ಎಂದ ಮೇಷ್ಟ್ರು ಕೂಡ
ಕಣ್ಣ ಮುಂದೆ.
***
ಲಜ್ಜೆಗೇಡಿ ಸಂಜೆ
ಬೇಡದ ಚಿತ್ರಗಳು
ಯಾರದ್ದೋ ಪುಳಕದ ನಗು
ಮೂಲೆಯಲ್ಲಿ ಸೆಳಕಿನ ಬಿಗು
ಮನೆ ದಾರಿಯಲ್ಲಿ
ಡಬ್ಬಿಯೊಳಗೆ ಉಳಿದ ಸಾಗು
ಧ್ಯಾನ, ಮೌನ
ಬುದ್ಧ, ತಾವೋ…
ಮೂರು ಮುಕ್ಕಾಲು ಕೋಟಿ
ದೇವರುಗಳೆಲ್ಲಾ
ಮೂರು ದಾರಿಯಲ್ಲಿ
ಒಳೊಳಗೆ ಒದ್ದಾಟ
ಸುಖಾಸುಮ್ಮನೆ ಸಂಕಟ]]>
ಸಂಜೆಗತ್ತಲ ಹಾಡು -ಪಾಡು
ನಿಮಗೆ ಇವೂ ಇಷ್ಟವಾಗಬಹುದು…





ಹಾಯ್, ಸಂಜೆಯ ವಿವಿಧ ರೀತಿಯ ಭಾವಗಳು ವ್ಯಕ್ತವಾಗಿರೋ ರೀತಿ ಚೆನ್ನಾಗಿದೆ, ಹಾಗೆಯೇ ಕವನ ಕೂಡಾ . . .