ಬೆಳಕು ಎಲ್ಲೆಡೆಯೂ ತುಂಬಿದೆ..
ನನ್ನೀ ಕಂಗಳಿಗೆ ಕತ್ತಲೆಯ ಕುರುಹಿಲ್ಲ
ಮಧ್ಯದಲ್ಲೆಲ್ಲೋ ಸಣ್ಣ ಗವಿ,
ಒಳ ಹೋಗಲು ಕುತೂಹಲ,.
ಕಾಲುಗಳಿಗೆ ಏನೋ ಸಿಗುವ ಕಾತರ
ಬೆನ್ನು ಬಾಗಿಸುತ ಬಳಿ ಹೋದೆ..
ಅಲ್ಲೊಬ್ಬಳು ಮೂಲೆ ಗೋಡೆಗೆ
ಒರಗಿ ತಲೆ ತಗ್ಗಿಸಿ ಕುಳಿತ್ತಿದ್ದಳು..
ಹತ್ತಿರ ಹೋದೆ ಅಚ್ಚರಿ
ಆಕೆ ನನ್ನಂತೆಯೇ ಇದ್ದಳು ..
ತುಸು ಸಮೀಪಿಸಿ ಯಾರೆಂದು ಕೇಳಿದೆ
ಆಕೆ ಗಹಗಹಿಸಿ ನಗುತ್ತಾ,
ಓಡೋಡಿ ಹೊರಗೆ ನಡೆದಳು
ಹಿಂಬಾಲಿಸಲು ಮನ ಒಪ್ಪಲಿಲ್ಲ..
ನಾನು ಅಲ್ಲೇ ಆ ಗುಹೆಯಲ್ಲೇ ಉಳಿದೆ
ಆಕೆ ಬದುಕ ಸಂತೆಯಲಿ ಕಳೆದು ಹೋಗಿದ್ದ
ಮುಗ್ಧತೆಯೆಂಬ ನನ್ನವಳು..!
0 ಪ್ರತಿಕ್ರಿಯೆಗಳು