ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ಸಂಗಾತಿ'…

ಅನ್ನಪೂರ್ಣ ದೈತೋಟ ಖಜಾನೆ

ನಿದ್ದೆ ಬರುತ್ತಿದ್ದರೆ ಹೇಳುತ್ತಾನೆ ನಿನ್ನ ಬೆಕ್ಕುಮರಿಗೆ ನಿದ್ದೆ ಬರುತ್ತಿದೆ ಈತನೇನಾದರೂ ಬೆಕ್ಕಾಗಿದ್ದರೆ ನಾನು ಕುಳಿತಾಗ ಸೀರೆಯ ನೆರಿಗೆಯಲ್ಲಿ ಮುದುರಿ ಹೊಟ್ಟೆ ಗುರುಗುಡಿಸುತ್ತಾ ನಿದ್ರಿಸುತ್ತಿದ್ದ ಸದಾ ನನ್ನ ಮನಸು ಹೃದಯಕ್ಕಂಟಿಕೊಂಡಿರುವ ಈತ ಬೆಕ್ಕೇ ಹೌದು ಕಾಯುತ್ತಿರುವಾಗ ಹೇಳುತ್ತಾನೆ ನಿನ್ನ ನಾಯಿಮರಿ ಹಾದಿ ನೋಡುತ್ತಿದೆ ಈತನೇನಾದರೂ ನಾಯಿಯಾಗಿದ್ದರೆ ಮುಖ ಕಂಡೊಡನೆ ಬಾಲವಾಡಿಸುತ್ತಾ ನಗೆ ಕಂಡೊಡನೆ ನೆಗೆದು ಹರ್ಷಿಸುತ್ತಿದ್ದ ಸದಾ ನನ್ನನ್ನು ಕಣ್ಣಲ್ಲಿ ಕಣ್ಣಿಟ್ಟು ಕಾಯುವ ಈತ ನಾಯಿಯೇ ಹೌದು ಹೊಗಳಿದರೆ ನಾಚಿ ಹೇಳುತ್ತಾನೆ ನಿನ್ನ ಗುಬ್ಬಿಮರಿ ಉಬ್ಬಿ ಹೋಗುತ್ತಿದೆ ಈತನೇನಾದರೂ ಗುಬ್ಬಿಯಾಗಿದ್ದರೆ ಹೆಕ್ಕಿ ಆರಿಸಿ ಶ್ರೇಷ್ಠವಾದುದನ್ನು ನನಗೇ ಕೊಡುತ್ತಿದ್ದ ಸದಾ ನನಗೆ ಒಳ್ಳೆಯದೇ ಸಿಗಬೇಕೆಂದು ಹಾರೈಸುವ ಈತ ಗುಬ್ಬಿಯೇ ಹೌದು ನಾನು ಬಸವಳಿದರೆ ಕೇಳುತ್ತಾನೆ, ಸುಸ್ತಾಯ್ತಾ ಮಗಳೇ ಹಸಿವೆಂದರೆ ಕೇಳುತ್ತಾನೆ, ಹಸಿವೇನೋ ಪುಟ್ಟಾ ಹಾಗಾದರೆ, ಈತ ನನ್ನ ತಂದೆಯೇ, ಇಲ್ಲಾ ತಾಯಿಯೇ? ಅಲ್ಲವೆಂದಾದರೆ ಯಾರೀತ ! ನೀವೇ ಹೇಳಿ ಯಾರೀತ !!]]>

‍ಲೇಖಕರು avadhi

22 October, 2010

3 Comments

  1. jahnavi butty

    nice kavana.
    yaraadru aagirli
    manasu haage irli

  2. Shanmukhananda

    adu sarine….

  3. Girisha M.

    ನೀವೇ ಹೇಳಿ ಯಾರೀತ !!

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading