ತರಬೇನಳ್ಳಿ ಷಡಕ್ಷರಿ
ಷಡಕ್ಷರಿ ಎಂದು ಹೆಸರಿಡುವಾಗ ನನ್ನ ಬಗ್ಗೆ ಎಂಥಾ ಕನಸು ಕಂಡಿರಬೇಕು ನನ್ನ “ಅಯ್ಯ” ನನ್ನ “ಅಕ್ಕಯ್ಯ”…
ನಾನು ಸಣ್ಣವನಿದ್ದಾಗ ಈ ಹೆಸರಿನ ಬಗ್ಗೆ ಏನೂ ತಲೆಕೆಡಿಸಿಕೊಂಡಿರಲಿಲ್ಲ. ಅದೇ PUC ಗೆ ಬಂದಾಗ ನನ್ನ ಯುವ ಮನಸ್ಸು ಕೇಳಿತು ಇದು ನಿನಗೆ ಇಷ್ಟಾನೇನೋ ಅಂತಾ. ಉಹು ಅಂತು ಹುಡುಗು ಮನಸು.
‘ಮತ್ತೆ ಸುಮ್ಮನಿದ್ದೀಯಲ್ಲೋ ಬಕ್ರಾ…ಏನಾದ್ರೂ ಕಂಡು ಹಿಡಿಯೋ…ಥೂ ಅದೆಂಥಾ ಹೆಸರೋ ಅದು.. ನಿನ್ನ ಮನಸಿಗೆ ಖುಷಿ ಅನ್ನಿಸೋ ಹೆಸರಿಟ್ಟುಕೊಳ್ಳೊ..’ ಅಂತಾ..SUGGEST ಮಾಡೇ ಬಿಡ್ತು…!
ಹುಡುಕಾಡಿದೆ. ಸರಿ “ಶರೀಷ” ಅಂತಾ ನನಗೆ ನಾನೇ ನಾಮಕರಣ ಮಾಡಿಕೊಂಡೆ. ಯಾವ ಮಂತ್ರ ಪೂಜೆ ನಾಮಕರಣದ ಬಿಟ್ಟಿ ಊಟದ ರಗಳೆ ಯಾವೂ ಇಲ್ಲದೆ!
ಇದು ನನ್ನ ಗೆಳೆಯ ಗೆಳತಿಯರಿಗೆ ಗೊತ್ತಾಗಬೇಕಲ್ಲ…? ನಮ್ಮ ಆ ದಿನಗಳಲ್ಲಿ PUBLICITY ಕೊಡೋದು ಪಡೆಯೋದೂ ಎರಡೂ ತುಂಬಾ ಕಷ್ಟ ಕಷ್ಟ ಹಾಗೂ ತುಂಬಾ…COSTLY AFFAIR. ಹೀಗೊಂದು IDEA ಮಾಡಿದೆ.
ಹೇಗಿದ್ರೂ ಊರಲ್ಲಿ ಒಂದು ನಮ್ಮಪ್ಪ(ಅಯ್ಯ) ಅವರ ಕಾಲದಲ್ಲಿ ತಂದಿದ್ದ ಗಟ್ಟಿ ಮುಟ್ಟಾದ ಸೈಕಲ್ಲಿತ್ತು. ಜೊತೆಗೆ ಗೋಡೇಕೆರೆಯ ಹಿರಿ ಗೆಳೆಯ SIDDU ARTS ನ ಸಿದ್ದು ಇದ್ದಿದ್ದು ನೆನೆಪಾಯ್ತು. ಒಂದು ಬಾನುವಾರ ತುಮಕೂರಿನಿಂದ ರಜಕ್ಕೆ ಹೋದವನು ‘ಅಯ್ಯನ ಸೈಕಲ್ಲು ಬೇಕು ನನಗೆ. ಮನೆಯಿಂದಾ COLLEGE ಗೆ ತುಂಬಾ ದೂರ ಆಗುತ್ತೆ’ ಅಂತಾ ನನ್ನ ಅಯ್ಯನಿಗೆ ಅಕ್ಕಯ್ಯನಿಂದಾ CONVINCE ಮಾಡಿಸಿ…ಅದನ್ನೇರಿ ಸಿದ್ದು ARTS ಬರೆಯುವ ಅಂಗಡಿಗೆ ಹೋದೆ. ಸಿದ್ದುಗೆ ನನ್ನ ಹೊಸ ಹೆಸರು “ಶರೀಷ” ಅಂತ ನನ್ನ ಸೈಕಲ್ಲ ಮೇಲೆ ಬರೆಯಲು ಕೇಳಿಕೊಂಡೆ. ಆತ ಹೇಳಿದ ಮೊದಲ ಮಾತು…‘ಷಡೀ…. ನಿಮ್ಮಪ್ಪಾಜಿಗೆ ನಾನು ಬರೆದುಕೊಟ್ಟಿದ್ದು ಅಂತಾ ಗೊತ್ತಾದ್ರೆ ನನಗೆ ಗ್ಯಾರಂಟಿ ಗೂಸು ಬೀಳುತ್ತೆ ಕಣಮ್ಮ. ನಾನು ಮಾತ್ರ ಬರೆಯಲ್ಲ…ಬೇಕಾದ್ರೆ PAINT- BRUSH ಕೊಡ್ತೀನಿ. ನೀನೇ ಬರೆದುಕೊಳ್ಳಮ್ಮಾ…’ ಅಂದು ಬಿಡೋದೇ…
ಗೆಳತಿ ಬರೆದುಕೊಟ್ಟ ಚಿತ್ರ…
ನನಗೆ FUTURE CONSEQUENCES ಒಂದು ಚಲನ ಚಿತ್ರದಂತೆ ಕಣ್ಮುಂದೆ ಹಾದು ಹೋಯ್ತು. ನನ್ನ ಅಯ್ಯ ಹೋಗಿ ಸಿದ್ದುವಿನ ಅಪ್ಪನಿಗೆ ‘ಏನ್ರೀ..ರಾಜಣ್ಣಾ ನಿಮ್ಮುಡುಗ.. ನನ್ಮಗ ಕೇಳಿದ ಅಂತಾ ಅದ್ಯಾವುದೋ ಅಡ್ಡಕಸ್ಬಿ ಹೆಸರಂತೆ, ಬರೆದುಕೊಟ್ಟು ಬಿಡೋದಾ’ ಅಂತಾ ಗುಟುರು ಹಾಕೋದು; ಆಮೇಲೆ ರಾಜಣ್ಣ ‘ಬರ್ರೀ ಶಂಕ್ರಣ್ಣೋರೇ ಕಾಫಿ ಕುಡಿಯೋಣ… ಅಪರೂಪಕ್ಕೆ ಬಂದಿದ್ದೀರಾ’ ಅಂದು ರಾಜಿ ಮಾಡೋದು… ಆದರೂ ನಮ್ಮಯ್ಯ ಮನೆಗೆ ಬಂದು ನನಗಾಗಿ ದೊಣ್ಣೆ ಹುಡುಕೋದು… ಯಾಕೋ ಸರಿ ಅನ್ನಿಸ್ಸಲಿಲ್ಲಾ…!! SO ನಾನೇ ಸಿದ್ದು ಕೊಟ್ಟ PAINT- BRUSH ತಗೆದುಕೊಂಡು “ಶರೀಷ” ಅಂತಾ ಬರೆದುಕೊಂಡೆ. ಸಿದ್ದುವಿನ TECHNICAL support ನೊಂದಿಗೆ. ಅದೂ ಸೈಕಲ್ಲಿನ ಪೆಡಲ್ ಬಾಕ್ಸ್ ಮೇಲೆ, ಜೋರಾಗಿ ಕಾಣುವಂತೆ..!
ಬರೆದಿದ್ದು ಆಯ್ತು.. BUT ಮನೆಗೆ ತೆಗೆದುಕೊಂಡು ಹೋಗೋಕೆ ಧೈರ್ಯ ಬೇಕಲ್ಲಾ…! ಅಯ್ಯನ ಕೋಪಗೊಂಡ..ಕಣ್ಣು ನೆನಸಿಕೊಂಡು ಒಮ್ಮೆ ಸಿದ್ದುವಿನ ಅಂಗಡಿಯ ಹಿಂದಿನ ಮೋರಿ ಬಳಿ ಹೋಗಿ ಮಾಡಿ ಬಂದೆ…
ಸಿದ್ದು ಕಿರುಗಣ್ಣಲ್ಲೇ ನನ್ನ ಚಡಪಡಿಸುವಿಕೆಯನ್ನ ಗಮನಿಸಿಯೂ ಗಮನಿಸಿಲ್ಲದಂತೆ ಆತನ ಬಣ್ಣ ಬಳಿಯುವ ಕಾಯಕದಲ್ಲಿ ತುಂಬಾ SERIOUS ಆಗಿರುವಂತೆ ತೋರಿಸಿಕೊಂಡ.
ಏನು ಮಾಡೋದು, ಈಗ ಬರೆದಿದ್ದು ಆಯ್ತು. ದಕ್ಕಿಸಿಕೊಳ್ಳೊ ಧೈರ್ಯ ಬೇಕಲ್ಲಾ..? ಯಾವ್ಯಾವುದೋ..ದೇವರಿಗೆ ಕೈಮುಗಿದ ನಂತರ ಕೊನೆಗೆ ಸಿದ್ದೂ ಸಹಾಯವೇ ಕೇಳಿ ಬಿಡೋದು ಅಂತಾ ತೀರ್ಮಾನಿಸಿಬಿಟ್ಟೆ.

‘ಸಿದ್ದು..ನಾಳೆ ಬೆಳಗ್ಗೆ ತನಕ ಈ ಸೈಕಲ್ಲು ಇಲ್ಲೇ ಇರಲಿ. ನನ್ನ ಅಯ್ಯ ಕೇಳಿದ್ರೆ ಇನ್ನೂ ರಿಪೇರಿಗೆ ಬಿಟ್ಟಿದ್ದು ಸರಿಮಾಡಿಲ್ಲ ಅಂತಾ ಹೇಳಿ. ಇಲ್ಲಿಂದಾನೇ ನೇರವಾಗಿ ತುಮಕೂರಿಗೆ ತೆಗೆದುಕೊಂಡು ಹೋಗ್ತೀನಿ’ ಅಂತಾ ಕೇಳಿದೆ.
ಆತನ ಒಪ್ಪಿಗೆ ಇದ್ದರೂ ಮತ್ತೊಂದು ಸಮಸ್ಯೆ ಎದುರಾಯ್ತು. ಆತ ಗೋಡೇಕೆರೆಯಿಂದ ಬಂದು ಅಂಗಡಿ ಬಾಗಿಲು ತೆರೆಯುವ ಹೊತ್ತಿಗೆ ನಾನು ತುಮಕೂರಿಗೆ ಹೋಗುವ ಬಸ್ಸು ಹೊರಟೋಗಿರುತ್ತಿತ್ತು. He can’t help. ಕೊನೆಗೆ Post Office ಪಕ್ಕದಲ್ಲಿರುವ ನನ್ನ favourite Cutting Shop ನ ನನ್ನ ಆತ್ಮೀಯ ಅಣ್ಣನಂತಾ ರಾಜಣ್ಣನ ಸಹಾಯ ಕೇಳೋದು ಅಂತ. ತಕ್ಷಣ ತಡ ಮಾಡದೆ ರಾಜಣ್ಣನ ಬಳಿಗೆ ಹೋಗಿ ನನ್ನ ಪರಿಸ್ಥಿತಿಯ ತೀವ್ರತೆಯನ್ನ ಹೇಳಿ, ಒಪ್ಪಿಸಿ, ಸೈಕಲ್ಲನ್ನ ಅಲ್ಲೇ ಬಿಟ್ಟು ಮನೆ ಕಡೆ ನೆಮ್ಮದಿಯಾಗಿ ಹೋದೆ.
ರಾತ್ರಿ ಮನೆಗೆ ಬಂದ ಅಯ್ಯನಿಗೂ ನನಗೂ ನಡೆದ ಮಧುರ ಸಂಭಾಷಣೆ ಹೀಗಿತ್ತು…
‘ಎಲ್ಲೋ ಸೈಕಲ್ಲೂ ಏನ್ ಮಾಡಿದ್ದೀಯೋ ಕಾಣ್ತಿಲ್ಲಾ..?’
‘ಅದು… ಅದು.. ರಿಪೇರಿ ಇನ್ನೂ ಮುಗಿದಿಲ್ಲ. ನಾಳೆ ಬೆಳಗ್ಗೆ ಕೊಡ್ತಾನಂತೆ. ಅಲ್ಲಿಂದಾನೇ ತೊಗೋಂಡೋಗ್ತೀನಿ ತುಮಕೂರಿಗೆ’
‘ಬಸ್ಸಿಗೆ TOP ಮೇಲೆ ಹಾಕೋಕೆ ಯಾರು ಬರ್ತಾರೆ….? ನಿನ್ ಕೈಯಲ್ಲಿ ಆಗುತ್ತಾ…? ನಾನೇ ಬರ್ಲಾ?’
‘ ಏನೂ ಬ್ಯಾಡಾ. ಅಲ್ಲೇ Cleaner ಮತ್ತೆ Agent ಗಳಿಗೆ ಹೇಳಿದ್ದೀನಿ. ಅವರೇ. ಹಾಕಿಕೊಡ್ತಾರಂತೆ’
‘ಹು..ಸರಿ ಬಿಡು. ಅವರಿಗೆ ಜಾಸ್ತಿ ಕೊಟ್ಟುಬಿಡ್ಬೇಡ. 2 ರೂಪಾಯಿ ಕೊಡು ಸಾಕು…!’
‘ಆಯ್ತು…J’(ಆ ಎರಡು ರೂಪಾಯಿ ನೆಗದು ಬಿದ್ದೋಗಾ…ನೀನು ಸದ್ಯಾ..Bus stand ಗೆ ಬರೋಲ್ಲಾವಲ್ಲಾ…ಅದೇ ಸಾಕೂ..ತಂದೇ..)
ಹೀಗೆ ನನ್ನ ಎಲ್ಲ ಹಿರಿ-ಕಿರಿ ಗೆಳೆಯರ, Cleaner ಗಳ ಮತ್ತು Agent ಗಳ ಸಹಕಾರದಿಂದ. ನನ್ನಪ್ಪನ ಕಣ್ಣು ತಪ್ಪಿಸಿ. ಆ ಶರೀಷನೇ ಈ ಸೈಕಲ್ಲು. ಸವಾರಿ ಮಾಡುವ ನಾನೆಂದು ಸಾರಲು ಸೈಕಲ್ಲು ಬಸ್ಸಿನ TOP ಮೇಲೆ ಮಲಗಿ ತುಮಕೂರಿಗೆ ಪಯಣಿಸಿತು. ತುಮಕೂರಿನ ಸರ್ವಕಾಲಿಕ Famous college ಇಂದು ನನ್ನ ಹೊಸ ಹೆಸರಿನ ಹುಟ್ಟು ಪಡೆದದ್ದನ್ನು ಸಾರುವ ಸಾರಥಿಯಾದ ನನ್ನ ಸೈಕಲ್ಲು ಬಂದು ಸೇರುವ ಮುಂಚೆಯೇ ಮೊದಲನೆಯದಾಗಿ ತನ್ನ ಸೈಕಲ್ಲು stand ನಲ್ಲಿ ಸೇರಿಸಿಕೊಂಡಿತ್ತು. BUT ತುಸು Que ಬಿಟ್ಟು ಎಲ್ಲರಿಗೂ ನನ್ನ ಸೈಕಲ್ಲಿನ ಪೆಡಲ್ ಬಾಕ್ಸಿನ ಮೇಲಿರುವ “ಶರೀಷ” ಕಾಣುವಂತೆ ಜೊತೆಯಲ್ಲಿ Modelling style ನಲ್ಲಿ ನಾನು ಅದಕ್ಕೆ ಒರಗಿ ನಿಂತು ಕೊಂಡು Pose ಬೇರೆ.. (ಕೇಡು) ಮೊದಲು ಬಂದ ಗೆಳೆಯರು ‘ಏನಮ್ಮಾ ಹೊಸ ಹೆಸರೂ!? ಯಾರೋ.. ಅದು ಹುಡುಗಿ? ಯಾವ Section ಮಗಾ…?’
ನಾನು ಮೂಕ ವಿಸ್ಮಿತ.. (ಓಹೋ ಇದು ಕೇಸು ಹಿಂಗೆ ಢಮಾರ್ ಆಗೊಯ್ತಲ್ಲಪ್ಪಾ ಶಿವನೇ…) ಈಗ ನಾನು ಇದು ನನ್ನ ಮೆಚ್ಚಿನ ತುಂಬಾ Fancy ಹೆಸರು ಅಂಥಾ ಯಾವ ಮುಖ ಇಟ್ಟುಕೊಂಡು ಹೇಳಲಿ….
ಆಮೇಲೆ ಇನ್ನೇನು Bell ಬಾರಿಸಲು ಕೆಲವೇ ನಿಮಿಷಗಳಿವೆಯೆಂದಾಗ ಬಂದ ಹುಡುಗಿಯರೂ Sure ನೋಡಿದ್ರೂ ಕೂಡಾ ನೋಡೇ ಇಲ್ಲವೇನೋ ಅನ್ನೋ ಹಂಗೆ ಬ್ಯಾಗ್ ತೆಗೆದುಕೊಳ್ಳೋ ನೆಪದಲ್ಲಿ ನಿಧಾನವಾಗಿ ಒಮ್ಮೆ ಓದಿಕೊಂಡು. ಒಳಗೊಳಗೇ ಕಿಸುಕ್ ಕಿಸುಕ್ ಅನ್ಕೊಂಡು. ಆ ಅವಳು… ಈ ಇವಳನ್ನ ಇವಳು.. ಅವಳನ್ನ ಕಣ್ಣಲ್ಲೇ ಮಾತಾಡಿಸಿಕೊಂಡು ನೋಡಿದ್ಯೇನೇ ಹೊಸಾ ಹೆಸರು ಹುಡುಗಂದೂ ಅಂತಾ ತುಟಿಯಲ್ಲೇ ಗುನುಗಿಕೊಂಡು ನನ್ನಿಂದಾ ದೂರ ಹೋದ ಮೇಲೆ ಜೋರಾಗಿ ನಗುತ್ತಾ ತಿರುಗಿತಿರುಗಿ ನಿನಗೇ ಕಣೋ ’ಗುಬಾಲೂ’ ನಾನು ನಕ್ಕಿದ್ದು ಅಂತಾ signal ಕೊಟ್ಟು CAMPUS ಒಳನಡೆದರು!
ನಾನು ತೀರಾ ಅನಿರೀಕ್ಷಿತವಾದ ಈ ಅಘಾತಗಳಿಂದ ಚೇತರಿಸಿಕೊಳ್ಳುತ್ತಾ ಒಳ ನಡೆದೆ. ಅಂದು ಲತಾ ಮೇಡಮ್ ಮಾಡಿದ Chemistry ಪಾಠ ಅದಾಗಿ ಅದೇ Evaporate ಆಗೋಗಿತ್ತು ನನ್ನ ತಲೆಯಿಂದ. ತಲೆತುಂಬಾ Chemistry Lab ನ ಘಾಟು ಘಾಟು ಹೊಗೆ. ಮಧ್ಯಾಹ್ನದ LUNCH break ನಲ್ಲಿ ನನ್ನ COMBINED section ಗಳ ಗೆಳೆಯ ಗೆಳತಿಯರು ಸಿಗುವವರೆಗೂ ( ನನ್ನ section ನಲ್ಲಿ..only boys ..!! Poor chap).
ತುಂಬಾ ಆತ್ಮೀಯರಾದ ನನ್ನ ಊರಿನ, ನನ್ನ high school ನ ಗೆಳತಿಯರೂ, ಗೆಳೆಯರೂ, ಎಲ್ಲ ಸಿಕ್ಕಾಗ ‘ಅವತ್ತು ಎಲ್ಲ section ಗಳಲ್ಲೂ ಶರೀಷ ಎಂಬ ಸೈಕಲ್ಲಿನದೇ ಮಾತು’ ಎಂದು ಕೇಳಲ್ಪಟ್ಟೆ…FULL ಕುಷ್..ಹುವಾ…
ಆದರೆ ಎಲ್ಲರದ್ದೂ ಅದೇ ಪ್ರಶ್ನೆ… ‘ಯಾರೋ ಅದೂ…!?’
ನನಗೆ ಗೊತ್ತಾಗಿ ಹೋಗಿತ್ತು. ಈ Fancy ಹೆಸರು ನನ್ನ ಹೆಸರು ಉಳಿಸೊಲ್ಲ. ಸ್ವಲ್ಪ ಮೈಮರೆತರೂ ನನ್ನ ಮಾನ ಕಳೆಯುತ್ತೆ ಅಂತ. ಅದಕ್ಕೇ ಒಂದು ಉಪಾಯ ಊಟಕ್ಕೇ ಮುಂಚೆ ಕಂಡುಹಿಡಿದಿದ್ದೆ, ಮತ್ತೆ ನನ್ನ ಹೆಸರಿಗೆ ಮರುನಾಮಕರಣ ಮಾಡಿದ್ದೆ. ಅದೇ ”ಶರೀಷ್ಚಂದ್ರ” ಅಂತ.
ಎಲ್ಲರೂ ಕೇಳಿದಾಗ ಹೇಳಿದೆ, ‘ಪೂರಾ ಹೆಸರು ತುಂಬಾ ಉದ್ದ ಆಗುತ್ತೆ ಅಂತ short ಆಗಿ ನೀವೆಲ್ಲಾ ಶರೀಷ ಅಂತಾ ಕರೀರಿ’ ಅಂದೆ.
‘Wow ..ಕಣೋ…..LOVELY…… Sweet name.. ಸಾಯಂಕಾಲ party ನಮ್ಮ ಮನೇಲಿ ಕಣೋ..!’ ಅಂದು ನನ್ನ ಮಲೆಯಾಳೀ..ಗೆಳತಿ ಮಿನಿಕುಟ್ಟಿ…ನಮ್ಮ “FOX TROUP” ನ ಎಲ್ಲ ತಂಡದ ಸದಸ್ಯರಿಗೂ ತಿಳಿಸಿಯೇ ಬಿಟ್ಟಳು. ಈಗ ಈ ಹಳ್ಳೀ ಹುಡುಗ ನಿರಾಳನಾದ. ಅಂತೂ ನನ್ನ College ನಲ್ಲಿ ನಾನು ಶರೀಷನಾಗಿ ಗುರುತಿಸಿಕೊಂಡಿದ್ದೆ.
ಇಂದಿಗೂ ನನ್ನ PUC Classmates ಸಿಕ್ಕರೆ ಅವರಿಗೆ ನಾನು ಶರೀಷನೇ!
~
ನನ್ನ ಅಪ್ಪ ಅಮ್ಮ ಪ್ರೀತಿಯಿಂದಾ ಇಟ್ಟ ಹೆಸರು ಕುಲಗೆಡಿಸಿ ಬರೀ 2 ವರ್ಷ ನನ್ನ ಹೆಸರನ್ನು ಬದಲಾಯಿಸಿ ಅದರ ಮಜ ತೆಗೆದುಕೊಂಡು ಅನುಭವಿಸಿದ ಕಷ್ಟ ಸುಖ ನಿಮ್ಮೊಂದಿಗೆ ಹಂಚಿಕೊಳ್ಳಬೇಕೆನಿಸಿದ್ದು ಇಂದು ಗೆಳತಿ ಬರೆದ ಪುಸ್ತಕವನ್ನೋದಿದಾಗ, ಹಾಗು Saturday ಆದ್ದರಿಂದಾ…ಎಲ್ಲೋ ಏನನ್ನೋ ಹುಡುಕಲು ಹೋಗಿ ನನ್ನ PUC ಗೆಳೆಯ ಗೆಳತಿಯರು ಬರೆದ AUTOGRAPH ಸಿಕ್ಕಿದ ಸಂಭ್ರಮದ ಕ್ಷಣ ನನ್ನದಾದಾಗ. ಅದರಲ್ಲಿದ್ದ `ಶರೀಷನಿಗೆ’ ಎಂದು ಬರೆದಿದ್ದ ಹಾರೈಕೆಗಳು ಕಾಡಿದಾಗ…..
ವಿಸೂ:
1) ನನ್ನ “ಅಯ್ಯ” ನನ್ನ “ಅಕ್ಕಯ್ಯ”
ನಾನು ಅಪ್ಪನಿಗೆ “ಅಯ್ಯ” ಎಂತಲೂ..ಅಮ್ಮನಿಗೆ ”ಅಕ್ಕಯ್ಯ” ಎಂತಲೂ ಕರೆಯುವುದು ರೂಢಿಗತ ನಮ್ಮ ಮನೆಯಲ್ಲಿ.
2) “FOX TROUP”
ಆ ದಿನಗಳಲ್ಲಿ ನಾವು ( PUC ಯ ಕೆಲ ಗೆಳೆಯರು + ಗೆಳತಿಯರೂ) ಸಮಂತಾ Fox ಳ FAN’s ಗಳಾಗಿದ್ದು, ಅವಳ poster ಸಿಕ್ಕಿದರೆ share ಮಾಡಿಕೊಳ್ಳೊದು, ಹೊಸ ಹಾಡು ಸಿಕ್ಕಿದರೆ..ಮನೆಯಲ್ಲಿ ಎಲ್ಲ ಒಟ್ಟಾಗಿ ಕೂತು tape recorder ನಲ್ಲಿ ಕೇಳೋದುಕ್ಕೆ..ಮಾಡಿಕೊಂಡಿದ್ದ..ಚಿಕ್ಕ (ಬರೀ 30 ಜನ !!!) ತಂಡ…






ನಿಮ್ಮ ಮರುನಾಮಕರಣ ಪುರಾಣ ಚೆನ್ನಾಗಿದೆ – keep it up
-Anil Talikoti
ಧನ್ಯವಾದ ಅನಿಲ ರವರೆ. 🙂