ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಶ್ವಾಸ ಸಂವೇದ – ನರೇಶ ಮಯ್ಯ ಕವಿತೆ

ಶ್ವಾಸ ಸಂವೇದ ಪುಟವಿಟ್ಟ ಬಂಗಾರ ನನ್ನವ್ವ ಕರಿಮಣ್ಣ ಈ ತಾಯ ಬಸಿರ ಋಣ ತೀರಿಸುವುದೆಂತು ? ಆರೈಕೆ ಹಸಿವ ನೀಗಿ ಹಸಿರ ತೊಡಿಸಿತ್ತು ತೊಡೆಗೊಂದಿಷ್ಟು- ತನುವಿಗೊಂದಿಷ್ಟು ಸತ್ವವ ತಂದಿತ್ತಿತ್ತು ಬೆಳೆಯಲು; ಬುದ್ಧಿ ಬಲಿಯಲು, ಈ ಬಯಲ ಆಲಯದೊಳಗೆ ಬಲವ ಬಳಸಲು, ಒಂದಿಷ್ಟು ಕ್ರಾಂತಿಯ ಹಾಡಿ ಕೀತರ್ಿಯ ಮುಡಿಗೇರಿಸಿಕೊಳ್ಳಲು. ಈಗಿದೇನಿದೆ ! ? ನೋಡ ನೋಡುತ್ತ ಮೇಲೆರುಗಲನುವಾಗಿರುವ ಧೋ ಹಿಮದ ದೊಡ್ಡ ಪರ್ವತ ಕೆಳಗಿಣುಕಿದರೋ ಆಳಾಘಾಧವಾದ ಕಂದರ. ನಿವರ್ಾಹವಿಲ್ಲ ಮುಡಿಮುಟ್ಟಬೇಕು ಬೆಟ್ಟ ಬಯಲಾಗುವನಕ. ಏರಲು, ಎರಗಲು ಮತ್ತೆ ಮುಡಿಕಟ್ಟಬೇಕು ಅಲ್ಲಿಂದಾಚೆ ನೇರ ಹೇಮಕೂಟಕ್ಕೆ; ಅಲ್ಲಿರುವ ಔತಣಕೂಟಕ್ಕೊಬ್ಬತಿಥಿಯಾಗಿ ಬಿಜಯಂಗೈಯ್ಯಬೇಕು. ಸೋಲಿಸ ಬೇಡಯ್ಯ, ಗೆಲಿಸು. ಮಾಯ್ಕಾರ ಮಾದೇವ ನಿಂಗಂದಷ್ಟು ಸಾರಿ ಅಂದೇನು ಉಘೇ ಎಂದು. ಕೊಡು ನನಗೆ ನಿನ್ನಲಿರುವ ಆ ಹುಟ್ಟುಗಳ ನಿನ್ನಭಯ ಆಶ್ರಯದ ಹಾಯಿದೋಣಿಯಲಿ ಈ ಭಾವ ಸಾಗರವ ದಾಟಬೇಕು. ಅಸ್ತು ಅನ್ನು ಸಾಕು, ಗೆದ್ದು ಬಂದೇನು ನಿನ್ನ ಗದ್ದುಗೆಗೆ ಎದ್ದು ಬಂದೇನು ಎಪ್ಪತ್ತೇಳುಮಲೆಯಲ್ಲಿ ತಪ್ಪದೇ ನಾಟ್ಯವಾಡತಕ್ಕಂಥ ಆ ನಿನ್ನ ಸದ್ದೀಗೆ ಹಾಲುಣಿಸೆ ಕಾದಿರುವ ನನ್ನವ್ವನ ಆ ಮುದ್ದೀಗೆ.]]>

‍ಲೇಖಕರು G

4 January, 2012

1 Comment

  1. Akshatha Udupa

    No words to explain,,,,very nice!

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading