ಶ್ಲಾಘನೀಯ 'ಜಲ್ಲಿಕಟ್ಟು'

ಡಾ.ಹೆಚ್.ವಿ. ವೇಣುಗೋಪಾಲ್
ಇತ್ತೀಚೆಗೆ ಮಲೆಯಾಳಂ ಭಾಷೆಯ ‘ಜಲ್ಲಿಕಟ್ಟು’ ಚಿತ್ರ ನೋಡಿದೆ.
ಕಸಾಯಿಖಾನೆಯ ವಧಾಸ್ಥಾನದಿಂದ ಹಗ್ಗ ಕಿತ್ತು ಓಡಿ ತಪ್ಪಿಸಿಕೊಳ್ಳುವ ಕೋಣ, ಅದನ್ನು ಹಿಡಿಯಲೆತ್ನಿಸುವ ಊರಿನ ಜನ, ಜೊತೆಗೂಡುವ ಪರವೂರಿನ ಜನಗಳು ಇಲ್ಲಿ ನಮ್ಮ ಮನರಂಜನೆಯ ಸರಕುಗಳು. ಹಸಿವನ್ನು ಹಿಂಗಿಸಿಕೊಳ್ಳುವ ಆದಿಮಾನವನ ಬೇಟೆಯಾಡುವ ಅಗತ್ಯವೇ ಇಂದಿನ ಆಟವಾಗಿ ವಿನೋದವಾಗಿ ಬದಲಾಗಿದೆ. ’ಮೃಗಯಾ ವಿನೋದ’ ಎಂಬ ಮಾತಿಗೆ ಸಹಸ್ತ್ರಾರು ವರ್ಷಗಳೇ ಕಳೆದಿವೆ. ಈ ಚಿತ್ರ ಕೂಡ ನಮ್ಮ ಆಹಾರದ ಬಗೆಗೆ, ಅದರ ಗಳಿಕೆಯ ಬಗೆಗೆ, ನವನಾಗರಿಕ ದಾರಿಯ ಬಗೆಗೆ ತಿವಿದು ಹೇಳುತ್ತಿರುವಂತಿದೆ.
ಮಾನವನು ತನ್ನ ಹಸಿವನ್ನು ಹಿಂಗಿಸುವ ಆಹಾರ ಸಂಪಾದನೆಯ ದಾರಿ ಇಂದು ಹೆಚ್ಚು ವಿಸ್ತಾರವಾಗಿದೆ ಹಾಗು ಕ್ರೂರ ವಿನೋದ ರೂಪವನ್ನು ಪಡೆದಿದೆ. ಅದು ಇಂದು ರುಚಿಯನ್ನು, ಶ್ರೀಮಂತಿಕೆಯನ್ನು, ಅಂತಸ್ತನ್ನು, ಜಾತಿಯನ್ನು, ಮಾರ್ಗವನ್ನು ಅವಲಂಬಿಸುತ್ತಾ ತನ್ನ ರಹದಾರಿಯನ್ನು ವಿಸ್ತಾರ ಗೊಳಿಸುತ್ತಾ ಟಿಸಿಲುಗಳಾಗಿ ಸೀಳಿಕೊಳ್ಳುತ್ತಾ, ಅಸಹನೆ, ದ್ವೇಷ, ಅಸೂಯೆ, ವಂಚನೆ, ಕ್ರೌರ್ಯಗಳನ್ನು ಬಗೆಬಗೆಯಾಗಿ ತುಂಬಿಕೊಳ್ಳುತ್ತಲೇ ಇದೆ. ಈ ಹಸಿವು ಎಂಬುದು ತನ್ನ ಆಕಾರವನ್ನು ಬದಲಿಸಿಕೊಳ್ಳುತ್ತಾ, ಬೇಕುಗಳನ್ನು ಸೃಷ್ಟಿಸಿಕೊಳ್ಳುತ್ತಾ, ಸುಗಮ ಸಾಧ್ಯತೆಗಳ ಕ್ರೂರ ದಾರಿಗಳನ್ನು ಅನ್ವೇಷಿಸುತ್ತಿದೆ. ಕಾಮ ಕ್ರೋಧ ಲೋಭ ಮೋಹ ಮದ ಮಾತ್ಸರ್ಯಗಳು ಇದರ ಹರವು ಆಗಿದೆ. ಭಾರೀ ಶಬ್ದಗಳು, ದೊಡ್ಡ ದೊಡ್ಡ ಆಕಾರಗಳು, ಉದ್ವ್ಯಾಪಿಸುವ ಭಾವಾತಿರೇಕಗಳು, ಕಣ್ಣಿಗೆ ರಾಚುವ ಬಣ್ಣ, ಕತ್ತಲಿನ ನಿಗೂಢತೆ, ನಿಲ್ಲಲಾಗದ ವೇಗದ ಚಲನೆಗಳು ಇದು ವಾಸಿಸುವ ತಾಣಗಳಾಗಿವೆ.
ಈ ಹಿನ್ನೆಲೆಯಲ್ಲಿ ನಾನು ಜಲ್ಲಿಕಟ್ಟುವನ್ನು ಅರ್ಥಮಾಡಿಕೊಳ್ಳಬಯಸುತ್ತೇನೆ.

ಈ ಚಿತ್ರದ ನಿರ್ದೇಶಕರು ತುಂಬಾ ಜತನದಿಂದ ಒಂದು ಸಾಹಿತ್ಯ ಸಾಧ್ಯವಾಗಿದ್ದ ಕಥೆಯನ್ನು ದೃಶ್ಯ ಸಾಧ್ಯಮಾಡಿರುವ ಪರಿ ಶ್ಲಾಘನೀಯವಾಗಿದೆ. ಹಸಿವು ಹಾಗು ಆಸೆಗಳು ಹೇಗೆ ನಮ್ಮ ಬದುಕನ್ನು ನಿಯಂತ್ರಿಸುತ್ತವೆ, ದೂರಗಳನ್ನು ಮತ್ತು ಅಂತರಗಳನ್ನು ಸೃಷ್ಟಿಸುತ್ತವೆ, ಅದೆಷ್ಟೋ ನಾಶಗಳಿಗೆ ಕಾರಣಗಳಾಗುತ್ತವೆ ಎಂಬುದನ್ನು ಢಾಳಾಗಿ ಕಣ್ಣಿಗೆ ರಾಚುವಂತೆ ಚಿತ್ರಿಸಿದ್ದಾರೆ.
ಚಿತ್ರದ ಸಂಗೀತ, ಛಾಯಾಗ್ರಹಣ, ಚಿತ್ರೀಕರಣದ ನಂತರದ ರೂಪಾಂತರಗಳು ಅವರ ಚಿಂತನೆಯನ್ನು ಸಾಕಾರಗೊಳಿಸಿವೆ. ಇಲ್ಲಿ ಯಾವ ಪಾತ್ರಗಳೂ ಮುಖ್ಯವಲ್ಲ, ಯಾವುವೂ ಅಮುಖ್ಯವಲ್ಲ. ಗಂಟೆ ಬಾರಿಸುತ್ತಾ ತಳ್ಳುವಗಾಡಿಯಲ್ಲಿ ಸಿಹಿಯನ್ನು ತರುವ ಹುಡುಗನ ದೃಶ್ಯ, ರಭಸವಾಗಿ ಸುರಿಯುವ ಮಳೆ, ರಾತ್ರಿ, ಸರ್ರನೆ ಬೀಸುವ ಬೆಳಕಿನ ಕೋಲುಗಳಂತಹ ಟಾರ್ಚ್ ಲೈಟ್, ಇನ್ನಿತರ ಕೆಲವು ವಿಸ್ಮಯಕಾರೀ ದೃಶ್ಯಗಳು ಭಾವಚಿತ್ರಣದ ಹೊಸ ಕಾಣ್ಕೆಯನ್ನು ಪರಿಚಯಿಸುತ್ತವೆ. ಮಾನವನ ಮೃಗೀಯ ವರ್ತನೆ ಎಂಬುದನ್ನು ಈ ಚಿತ್ರದಲ್ಲಿ ಒಂದು ವೈನೋದಿಕ ರೂಪಕವಾಗಿ ನಿರೂಪಿಸಲಾಗಿದೆ. ತಪ್ಪಿಸಿಕೊಂಡ ಮೃಗ(ಕೋಣ)ದ ಅಸಹಾಯಕತೆ ಮತ್ತು ರೌದ್ರತೆ ಜೀವದ ಉಳಿವಿನ ಲಕ್ಷಣವಾಗಿ ಗುರುತಿಸಿರುವುದು ಈ ಚಿತ್ರದ ಶ್ಲಾಘನೀಯ ಅಂಶ. ಕುತೂಹಲ, ಭಯ, ಹಾಸ್ಯ, ಜಿಗುಪ್ಸೆ ಎಲ್ಲವನ್ನೂ ಅನುಭವಿಸುವಂತೆ ಕಟ್ಟಿಕೊಟ್ಟಿರುವ ಇಡೀ ಚಿತ್ರದ ತಂತ್ರಜ್ಞರಿಗೆ ಬೆನ್ನು ತಟ್ಟಲೇಬೇಕು.
ಈ ಚಿತ್ರ ನೋಡಿದ ಮೇಲೆ ನನಗೆ ಈ ಹಿಂದೆ ನೆಟ್ ಫ್ಲಿಕ್ಸ್ ನಲ್ಲಿ ನೋಡಿದ ಮರಾಠಿ ಚಿತ್ರ ’ತುಂಬಡ್’ ನೆನಪಿಗೆ ಬಂತು. ಅದು ಜಲ್ಲಿಕಟ್ಟು ಚಿತ್ರದಲ್ಲಿ ಪ್ರತಿಪಾದಿತವಾಗಿರುವ ವಿಷಯವನ್ನು ಕುರಿತ ನಂತರದ ಓದು ಎಂದೆನಿಸುತ್ತದೆ.
Srijan Someshwar
I don’t have words to explain what this movie was. I’m spellbound. We might be unknowingly living in a golden age of cinema. Lijo Jose Pellissery is a visionary director who never ceases to amaze. Revolving around the chaos caused by a rogue buffalo on the run, this movie explores the darkest corners of the human psyche, and makes us question who the real beasts are. Top notch cinematography. But the thing that holds the movie together is the music that makes you sit on the edge of your seat.
Don’t miss out on this. This movie’s gonna stay with you for a long time.
Watch Jallikattu on Amazon Prime Video

‍ಲೇಖಕರು avadhi

November 4, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: