ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಶ್ಯಾಮಲ ಮಾಧವ ಕಂಡಂತೆ ನಿಂಜೂರರ ಕೃತಿಗಳ ಬಿಡುಗಡೆ…

ಶ್ಯಾಮಲಾ ಮಾಧವ

ಮುಂಬೈ ಯೂನಿವರ್ಸಿಟಿ ಕನ್ನಡ ವಿಭಾಗದಲ್ಲಿ ನಮ್ಮ ಪ್ರಿಯ ಡಾ. ವ್ಯಾಸರಾವ್ ನಿಂಜೂರರ ಆತ್ಮಕಥನ, ‘ಎಳೆದ ತೇರು’ ಹಾಗೂ ಸಮಗ್ರ ಕಥಾ ಸಂಕಲನದ  ಲೋಕಾರ್ಪಣೆ ಮಾನ್ಯ ಹಂಪನಾ ಹಾಗೂ ಡಾ. ವಿವೇಕ ರೈ ಕೈಗಳಿಂದ ನೆರವೇರಿತು.

ಡಾ.ಆಶಾದೇವಿ, ಡಾ. ಗೀತಾ ವಸಂತ್ ಹಾಗೂ ಡಾ. ತಾರಿಣಿ ಶುಭದಾಯಿನಿ ಜೊತೆಗಿದ್ದರು. ಅಹಲ್ಯಾ ಬಲ್ಲಾಳ ಹಾಗೂ ನಳಿನಿ ಪ್ರಸಾದ್ ಅವರಿಂದ ನಿಂಜೂರರ ಕೃತಿಗಳ ಓದು, ಕಲಾ ಭಾಗವತ್ ಅವರ ಗಮಕ ಮತ್ತು ನಿರೂಪಣೆ, ಪ್ರಾಜ್ಞರ ಮಾತಿನಂತೆಯೇ ಕಿವಿಗಿಂಪಾಗಿತ್ತು.

ಹಂಪನಾರನ್ನು ಕರೆತಂದ ಇಂಡಿಗೋ ಸ್ವಲ್ಪ ತಡವಾಗಿ ಆಗಮಿಸಿ, ಅವಸರದಲ್ಲಿ ಪ್ರಮಾದದಿಂದ ಎಡಗೈ ಎಡವಿಟ್ಟುಕೊಂಡರೂ,  ಅವರ ಸಾಹಿತ್ಯ ಚರಿತ್ರೆ ಸಂಪುಟದ ಬಗ್ಗೆ ವಿಭಾಗ ಮುಖ್ಯಸ್ಥ ಡಾ.ಜಿ.ಎನ್. ಉಪಾಧ್ಯರು ಕೇಳಿದಂತೆ ಅವರ ಮಾತುಗಳು ಹಾಗೂ ನಡೆದ ಸಂವಾದ ಕಾರ್ಯಕ್ರಮವನ್ನು ರಂಜಿಸಿತು.  

ತವರಿಗೆ ಬಂದಂತಾಗಿದೆ ಎಂದು ಆತ್ಮೀಯತೆಯಿಂದ ಪ್ರಶ್ನೆಗಳಿಗೆ ಉತ್ತರಿಸಿದ ಹಂಪನಾ ಅವರ ಮೌಲಿಕ ಮಾತುಗಳು, ಹಾಗೂ ಅಧ್ಡಯನದ ಬಗ್ಗೆ, ನಿಂಜೂರರ ಆತ್ಮಕಥನ ‘ಎಳೆದ ತೇರು’ ಕೃತಿಯ ಬಗ್ಗೆ ಡಾ. ವಿವೇಕ ರೈಯವರ ಮಹತ್ವದ ಮಾತುಗಳು ಸಮಾರಂಭಕ್ಕೆ ಕಳೆ ಕೂಡಿಸಿದುವು.  

ರಂಗ ಕಲಾವಿದೆ ಅಹಲ್ಯಾ ಬಲ್ಲಾಳರ ನಿಂಜೂರರ ಕೃತಿ ತುಣುಕುಗಳ ಪ್ರಸ್ತುತಿ ರಂಜಿಸಿದಂತೆ, ನಳಿನಿ ಪ್ರಸಾದರ ಓದಿನ ಸೆಲೆಯೂ ಸಭಿಕರನ್ನು ರಸವರ್ಷದಲ್ಲಿ ತೋಯಿಸಿತು. 

ಕೃತಿಗಳು ಅಲಭ್ಯವಾದುದು ಮಾತ್ರ ನಿರಾಶೆಯೆನಿ

‍ಲೇಖಕರು Admin

24 September, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading