ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಶೃತಿ ಮಡವಾಳೆ ಅಂತಾರ..

ಶೃತಿ ಮಡವಾಳೆ

ಬರೀ ನೀಲಿ ಶರ್ಟ್ ಹಾಕಾಂವ್ಗ ಹುಚ್ಚ ವೆಂಕಟ್ ಅಂತಾರ,

ಟೋಪ್ಪಿಗಿ ಮತ್ ಕರಿ ಗೊಗಲ್ ಹಾಕಾಂವ್ಗ ವಾಟಾಳ ನಾಗರಾಜ ಅಂತಾರ,

shruthi-madavaleಕುತ್ತಿಗಿ ತುಂಬ ಬಂಗಾರ ಹಾಕಾಂವ್ಗ ಬಪ್ಪಿ ಲಹರಿ ಅಂತಾರ,

ಕೈಯಾಗ ಯಾವತ್ತೂ icecream cup/cone ಇರಕ್ಕಿಗಿ ಶೃತಿ ಮಡವಾಳೆ ಅಂತಾರ ಅನ್ನೋ range ಗೆ ನಮ್ಮ ಗೆಳ್ಯಾರ ಬಳಗ ಒಳಗ world famous ನಾ ;).

ಅವ್ನೌವ್ನ ಯಾಕಿಷ್ಟ ಖಂಡಾಪಟ್ಟೆ ಸೇರ್ತೆತಿ ಅಂತ ನಂಗೂ ಗೊತ್ತಿಲ್ಲ.

ಸಣ್ಣಾಗಿರ್ತಾ 50 ಪೈಸೆಗೆ ಗಾರೆಗಾರ,ಪೆಪ್ಸಿ ತೊಗೊಂಡ ಸೈಕಲ್ ಮೇಲೆ ಕಾಕಾ ಹೋಗ್ತಿದ್ರ ಯೆಎಎಎಎಎಎ ಪೌಂಪೌ ಅಂತ ಅವಾಜ್ ಮಾಡ್ಕೊಂತ ಓಡಿ ಹೋಗಿ ಅವ್ವ-ಅಪ್ಪ ಕಡೆಯಿಂದ ಖಡತಾ ತಿಂದ್ರು ಬೆನ್ನು ಹತ್ತಿ ಹೋಗಿ ಕ್ಯಾಂಡಿ ತಿನ್ತಿದ್ದೆ. birthday ಗೆ ಅದೀದ gift ಕೊಡೊ ಬದಲಿ ice cream ಯಾಕ ತಂದ ಕೊಡಾಂಗಿಲ್ಲ ಇವರೆಲ್ಲ ಅಂತಿದ್ದೆ.

exam ಮುಗದ್ರ ಒಂದ ವಿಷ್ಯಕ್ಕ ಹೆಚ್ಚ ಖುಷಿ ಆಗ್ತಿತ್ತ, ಹ್ಮಾಂ ಇನ್ನ ice cream ತಿನ್ಬೋದು ಯಾರ ಬಯಾಂಗಿಲ್ಲ ನೆಗಡಿ ಆಕ್ಕೇತಿ ಅಂತ. ಕುಡುಕರಗತೆ ಖುಷಿ ಇರಲಿ ದುಃಖದ situation ಇರಲಿ ice cream ತಿಂದ್ರನ ಮನಸ್ಸು ಸಮಾಧಾನ ಆಕ್ಕೇತಿ… ಯಾವಾಗ ಬುದ್ಧಿ ಬರೋದೊ ನಂಗೊ ಗೊತ್ತಿಲ್ಲ.

ವಿ.ಸೂ: photo ಒಳಗ ಉಪೇಂದ್ರ ನಂಗ ಕಾಪಿ ಮಾಡಾತಾನ ಮನಷಾ

‍ಲೇಖಕರು Admin

25 November, 2016

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading