ನಾಗೇಶ ಹೆಗಡೆಯವರ ಕುರಿತ ಬರಹಕ್ಕೆ ಹಾಲ್ದೊಡ್ಡೇರಿ ಸುಧೀಂದ್ರ ಬರೆದ ಪ್ರತಿಕ್ರಿಯೆಯಲ್ಲಿ ಒಂದು ಸ್ವಾರಸ್ಯಕರ ಸಂಗತಿಯಿದೆ. ಹಾಗಾಗಿ ಅದನ್ನು ಪ್ರತ್ಯೇಕವಾಗಿ ಉಲ್ಲೇಖಿಸಬೇಕೆನ್ನಿಸುತ್ತಿದೆ. ಅದು ಹೀಗಿದೆ:
ಮೊದಲ ಬಾರಿ ನಾಗೇಶ ಹೆಗಡೆಯವರನ್ನು ಭೇಟಿಯಾದಾಗಿನ ಸಂದರ್ಭ. ಮಾತನಾಡಲು ಶಬ್ದಗಳನ್ನು ಹುಡುಕುತ್ತಿದ್ದವನು, “ನಿಮ್ಮ ಲೇಖನದ ಜೊತೆಗೆ ಚೇತನ ಶೀತಲಬಾವಿಯವರ ಲೇಖನಗಳನ್ನೂ ಸುಧಾದಲ್ಲಿ ಓದಿ ಆನಂದಿಸುತ್ತಿದ್ದೆ” ಎಂದೆ. “ಶೀತಲಬಾವಿಯವರು ಈಗಿಲ್ಲ. ಹೋಗಿಬಿಟ್ರು” ಎಂದರು ಸೀರಿಯಸ್ ಆಗಿ. ಮನಸ್ಸಿನಲ್ಲೇ ಮರುಗಿದೆ.
ಮುಂದೊಂದು ದಿನ ಉದಯವಾಣಿ ಸಂಪಾದಕರಾದ ಡಾ. ಆರ್ ಪೂರ್ಣಿಮಾ ಹೊರಗೆಡಹಿದ ಗುಟ್ಟೆಂದರೆ, ನಾಗೇಶ ಹೆಗಡೆ ಅವರು ಷಡಕ್ಷರಿ(ಅವರ ಹೆಸರಿಗೆ ಆರಕ್ಷರ ಅಲ್ಲವೆ?), ಚೇತನ ಶೀತಲಬಾವಿ, ಎನ್ನೆಚ್… ಮುಂತಾದ ಹೆಸರುಗಳಲ್ಲಿ ಬರೆಯುತ್ತಿದ್ದರು ಎಂಬುದು.





0 Comments