ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಶಿಕ್ಷಕನ ನೋವಿಗೆ ಸ್ಪಂದಿಸಿದ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ

– ಸುಷ್ಮಾ ಜಾನ್

ಹಟ್ಟಿ ಕೇರಿಯ ಶಿಕ್ಷಕ ಹಿರಿಯೂರಿನ ಬಾಲೆನಹಳ್ಳಿ ನರಸಿಂಹಮೂರ್ತಿ ಅವರ ಪ್ರಾಮಾಣಿಕತೆ, ಕಾರ್ಯ ನಿಷ್ಠೆಯನ್ನು ಬಲ್ಲ ಕವಿ, ಚಿಂತಕ, ಹವ್ಯಾಸಿ ಪತ್ರಕರ್ತ ಹಾಗು ಕಿರು ಚಿತ್ರಗಳ ನಿರ್ದೇಶಕ-ನಾಗತಿಹಳ್ಳಿ ರಮೇಶ್, ಈ ಶಿಕ್ಷಕ ತನ್ನ ಅವ್ವನನ್ನು ಕ್ಯಾನ್ಸರ್ ನಿಂದ ಉಳಿಸಿಕೊಳ್ಳಲು ಪಡುತ್ತಿರುವ ಪಡಿಪಾಟಲು ಕಂಡು ತಕ್ಷಣ ತಮ್ಮ ಕೈಲಾದ ಸಹಾಯ ಮಾಡಿ ಹಾಗೆಯೇ ಸಾರ್ವಜನಿಕರೆಗೆ ನೆನ್ನೆ (೧೨-೧೧-೨೦೧೩) ಒಂದು ಮನವಿ ಪತ್ರ ಸಲ್ಲಿಸಿದ್ದರು: ಅದರ ಸಾರಾಂಶ ಹೀಗಿದೆ:
ಆತ್ಮೀಯರೆ/ಮಾನ್ಯರೆ,
ನನ್ನ ಬದುಕಿನಲ್ಲಿ ನಾನು ಕಣ್ಣಾರೆ ಕಂಡ ಒಂದು ಸತ್ಯವ ನಿಮ್ಮೊಂದಿಗೆ ಹಂಚಿಕೊಳ್ಳ ಬಯಸುವೆ. ಪ್ರೀತಿ ಸಮತೆ ಪ್ರೇಮ ಕಾರುಣ್ಯಗಳ ಭಾವನೆಗಳೇ ಮೂರ್ತಿವೆತ್ತಂತೆ, ಹಟ್ಟಿ ಕೇರಿಯ . ಶಿಕ್ಷಕ ಹಿರಿಯೂರಿನ ಬಾಲೆನಹಳ್ಳಿ ನರಸಿಂಹಮೂರ್ತಿ ಸಹಜತೆಯ ಸರಳಬಾಳು ನಡೆಸುತ್ತಾ ನನ್ನ ಬದುಕಿಗೆ ಸಾಕ್ಷಿ ಪ್ರಜ್ಞೆಯಾದ ಹುಡುಗ. ನೋವ ಬೆಂಕಿಯಲೇ ಹುಟ್ಟಿದರೂ ನೀರ ಜೀವಾಳವಾದವನು. ನಮ್ಮಳಗಿನ ಸಂಚಲನ ದೇವನೂರರ ಎದೆಗೆ ಬಿದ್ದ ಅಕ್ಷರವಾದರೆ ಈತನ ಬದುಕೇ ಮಹಾ ಸಂಚಲನ. ಕ್ಯಾನ್ಸರ್ ರೋಗಕ್ಕೆ ತುತ್ತಾದ ಅವ್ವನ ಉಳಿಸಿಕೊಳ್ಳಲು ಈತ ಮತ್ತು ಅವ್ವನ ಬಳಗ ಪಡುತ್ತಿರುವ ಹರಸಾಹಸ ಕಷ್ಗಗಳ ಆಕ್ರಂದನಕೆ ಭೂಮಿ ನಡುಗಿದಂತಾಗಿದೆ. ಬೆಂಗಳೂರಿನ ಮಹಾನಗರ ಪಾಲಿಕೆಯ ಹಡ್ಸನ್ ವೃತ್ತದ ದೇವಾಂಗ ರಸ್ತೆಯ HCG ಕ್ಯಾನ್ಸರ್ ಆಸ್ವತ್ರೆಯಲ್ಲಿ ಚಿಕಿತ್ಸೆ ನಡೆಯುತ್ತಿದೆ.

ದುಃಖದ ಮಡುವಲ್ಲಿ ಮುಳುಗಿವೆ ಜೀವಗಳು. ತಮಗೆ ಸಾಧ್ಯವಾದರೆ ನೀವೋಂದು ಅರ ಗಳಿಗೆ ಆತನಿಗೆ ತಾಯಿಯಾಗಿ ಸಂತೈಸುವಿರಾ? ಆವರ ಸಂಪರ್ಕ:9448664735(ನರಸಿಂಹಮೂರ್ತಿ) 9902356901(ಚಂದ್ರಶೇಖರ್)
ಹೆಚ್ಚಿನ ವಿವರಕೆ ಕಷ್ಟಕ್ಕೆ ನಡುರಾತ್ರಿಯಲ್ಲೂ ಓಡೋಡಿ ಬರುವ ಜೀವಪರವಾದಿ ಪತ್ರಕರ್ತ ಕೆ.ಕರಿಸ್ವಾಮಿಯ ಕೇಳಿನೋಡಿ:9343381820
-ನಾಗತಿಹಳ್ಳಿರಮೇಶ

ನಾಗತಿಹಳ್ಳಿರಮೇಶರ ಮನವಿಗೆ ಇಂದು (೧೨-೧೨-೨೦೧೩) ಸ್ಪಂದಿಸಿದ ಮಾನ್ಯ ಶಿಕ್ಷಣ ಸಚಿವರು (ಶ್ರೀ ಕಿಮ್ಮನೆ ರತ್ನಾಕರ್) ನರಸಿಂಹಮೂರ್ತಿ ತಾಯಿಯ ಅರೋಗ್ಯ ವಿಚಾರಿಸಲು ಹಾಸ್ಪಿಟಲ್ಗೆ ಭೇಟಿ ನೀಡಿದ್ದು ಒಂದು ಇಡಿ ಶಿಕ್ಷಕ ಸಮುದಾಯಕ್ಕೆ ಸಲ್ಲಿಸಿದ ಕೊಡುಗೆ. ಸಚಿವರ ಭೇಟಿಯಿಂದ ಎದೆಗುಂದಿದ ಶಿಕ್ಷಕನಿಗೆ ದೊಡ್ಡ ಸಾಂತ್ವನ ಸಿಕ್ಕಿದೆ. ಕರ್ನಾಟಕ ರಾಜಕಾರಣಕ್ಕೆ ಒಂದು ಸ್ವಂತಿಕೆ,ವಿಶಿಷ್ಟತೆಯನ್ನು ತಂದು ಕೊಟ್ಟ ಶ್ರೀ ಶಾಂತವೇರಿ ಗೋಪಾಲಗೌಡ, ಸರಳ ಸಜ್ಜನಿಕೆ ಪ್ರಾಮಾಣಿಕತೆಯರಾಜಕಾರಣಿ ಮಲೆನಾಡ ಗಾಂಧೀ ಶ್ರೀ ಗೋವಿಂದೇಗೌಡರು, ಇವರುಗಳ ಹೆಜ್ಜೆ ಗುರುತುಗಳನ್ನು ಇಂದಿಗೂ ರತ್ನಾಕರ ಅವರಲ್ಲಿಯೂ ಕಂಡು, ನನ್ನ ಕಣ್ಣು ತುಂಬಿ ಬಂದಿದೆ. ಯಾವುದೇ ತೋರ್ಪಡಿಕೆ ಇಲ್ಲದೆ, ಸದ್ದು ಗದ್ದಲಗಳಿಲ್ಲದೆ, ಬಂದು ಕಷ್ಟಕ್ಕೆಸ್ಪಂದಿಸಿದ ಶ್ರೀ ಕಿಮ್ಮನೆ ರತ್ನಾಕರ್ ಅವರ ಈ ನಡೆ ನಿಜಕ್ಕೂ ಶ್ಲಾಘನೇಯ ಮತ್ತು ಅಭಿನಂದನಾರ್ಹ. ಬ್ರಷ್ಟ ರಾಜಕಾರಣದ ಇಂದಿನ ದಿನಗಳಲ್ಲಿ ಕಿಮ್ಮನೆ ರತ್ನಾಕರ್ ಒಂದು ಹೊಸ ಭರವಸೆಯ ಆಶಾಕಿರಣ. ಮಿತ್ರರೇ, ಶಿಕ್ಷಕ ಬಾಲೆನಹಳ್ಳಿ ನರಸಿಂಹಮೂರ್ತಿಗೆ ಸಾಂತ್ವನ, ನೆರವು, ನೀಡ ಬಯಸುವವರು ದಯವಿಟ್ಟು ಕೆಳಗಿನ ದೂರವಾಣಿ ಸಂಖ್ಯೆ/ವಿಳಾಸವನ್ನು ಸಂಪರ್ಕಿಸಿ:

9448664735(ನರಸಿಂಹಮೂರ್ತಿ) 9902356901(ಚಂದ್ರಶೇಖರ್)
ಅಥವಾ
Manju Shettar | Reporter
 

‍ಲೇಖಕರು G

20 December, 2013

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading