ಶನಿವಾರಕ್ಕೊಂದು ಮಕ್ಕಳ ಹಾಡು

ಕೃಷ್ಣಮೂರ್ತಿ ಬಿಳಿಗೆರೆ

ವೆರಿ ಗುಡ್ ವೆರಿ ಗುಡ್
ವೆರಿ ಗುಡ್ ವೆರಿ ಗುಡ್
ವೆರಿ ಗುಡ್ ನರಿ ಬಾಲ
ವೆರಿ ಬ್ಯಾಡ್ ವೆರಿ ಬ್ಯಾಡ್
ಬಾಲ ಉದುರಿದ ಕಾಲ // ಪಲ್ಲವಿ //
 
ಬೋಲೋ ಬೋಲೋ
ಬೋಲೋ ಬಾಲೆ
ಬೋಲೋ ಬೋಲೋ
ಬೋಲೋ ಬಾಲ // ಪಲ್ಲವಿ //

ಕೋತಿಗೆ ಐತೆ ಉದ್ದ ಬಾಲ
ಕುರಿಗೆ ಐತೆ ಮೋಟು ಬಾಲ
ಬಾಲದ ಜೊತೆಗೆ ಬಾಲ
ನಾಯಿಗೆ ಡೊಂಕು ಬಾಲ // ಪಲ್ಲವಿ //
 
ಹನುಮಂತನದು ಬೆಳೆದ ಬಾಲ
ಗಾಳಿಪಟದ್ದು ಕಟ್ಟಿದ ಬಾಲ
ಭೂಮಿ ಸೂರ್ಯನ ಸಾಲ
ಚಂದ್ರ ಭೂಮಿಯ ಬಾಲ // ಪಲ್ಲವಿ //
 
ಕೋಡು ಇಲ್ಲ ಕೋರೆ ಇಲ್ಲ
ಮನುಷರಿಗಿಲ್ಲ ಬಾಲ
ಅದಕ್ಕೆ ಅವರು ಹಿಡಿಯುತ್ತಾರೆ
ಗೆದ್ದ ಎತ್ತಿನ ಬಾಲ // ಪಲ್ಲವಿ //

‍ಲೇಖಕರು G

October 26, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. ಸಂತೋಷ ಗುಡ್ಡಿಯಂಗಡಿ

    ಚಂದ ಇದೆ ಸರ್ ಪದ್ಯ. ನೀವು ಅನುಮತಿ ನೀಡಿದರೆ ನಮ್ಮ ಶಾಲೆಯ ಪತ್ರಿಕೆ “ಅಳ್ಳೀಮರ”ದ ನವೆಂಬರ್ ಸಂಚಿಕೆಗೆ ಬಳಸಿಕೊಳ್ಳುವೆ. ನಮ್ಮ ಬ್ಲಾಗಿದೆ http://www.allimara.blogspot.com

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: